Rakshitha: ರಮ್ಯಾ vs ಡಿಬಾಸ್‌ ಫ್ಯಾನ್ಸ್‌ ವಾರ್‌ಗೆ ನಟಿ ರಕ್ಷಿತಾ ಎಂಟ್ರಿ, ಸಪೋರ್ಟ್‌ ಮಾಡಿದ್ದು ಯಾರಿಗೆ?

ಸ್ಯಾಂಡಲ್‌ವುಡ್‌ನ ಮೋಹಕತಾರೆ ನಟಿ ರಮ್ಯಾ ಹಾಗೂ ದರ್ಶನ್‌ ಅಭಿಮಾನಿಗಳು ನಡುವಿನ ಸೋಷಿಯಲ್‌ ಮೀಡಿಯಾ ವಾರ್‌ ಜೋರಾಗಿದೆ. ಆರಂಭದಲ್ಲಿ ಕಾಮೆಂಟ್‌ಗಳಿಗೆ ಸೀಮಿತವಾಗಿದ್ದ ಈ ಬೆಳವಣಿಗೆ ಇದೀಗ ಇಡೀ ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಕೊಲೆಯಾದ ರೇಣುಕಾಸ್ವಾಮಿಗೆ ನ್ಯಾಯ ಸಿಗಬೇಕು ಎಂದು ಧ್ವನಿ ಎತ್ತಿದ್ದಕ್ಕೆ ಡಿಬಾಸ್‌ ಫ್ಯಾನ್ಸ್‌ ರಮ್ಯಾ ವಿರುದ್ಧ ಹಗೆ ಸಾಧಿಸುತ್ತಿದ್ದಾರೆ. ಅಭಿಮಾನದ ಹೆಸರಿನಲ್ಲಿ ರಮ್ಯಾ ಅವರ ಬಗ್ಗೆ ಕೆಟ್ಟ ಕೆಟ್ಟದಾಗಿ ಕಾಮೆಂಟ್‌ ಹಾಕಿ ಎಗರಾಡುತ್ತಿದ್ದಾರೆ. ಇದೀಗ ಈ ಜಗಳಕ್ಕೆ ಕ್ರೇಜಿ ಕ್ವೀನ್‌ ನಟಿ ರಕ್ಷಿತಾ ಪ್ರೇಮ್‌ ಕೂಡ ಎಂಟ್ರಿ ಕೊಟ್ಟಿದ್ದಾರೆ. ರಕ್ಷಿತಾ ಸಪೋರ್ಟ್‌ ಮಾಡಿದ್ದು ರಮ್ಯಾ ಅವರಿಗೋ? ಅಥವಾ ದರ್ಶನ್‌ ಹಾಗೂ ಅವರ ಅಭಿಮಾನಿಗಳಿಗೋ? ಎನ್ನುವುದೇ ಇಲ್ಲಿರುವ ಕುತೂಹಲ.

ನಟಿ ರಮ್ಯಾ ಹಾಗೂ ನಟಿ ರಕ್ಷಿತಾ ಅವರು ಒಳ್ಳೆಯ ಸ್ನೇಹಿತರು, ಒಂದೇ ಸಮಯದಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿದ್ದವರು. ಆಗಿನ ಕಾಲಕ್ಕೆ ಇಬ್ಬರೂ ಟಾಪ್‌ ನಟಿಯರಾಗಿದ್ದರು. ಅಚ್ಚರಿ ಎಂದರೆ ರಮ್ಯಾ ಹಾಗೂ ರಕ್ಷಿತಾ ಇಬ್ಬರೂ ದರ್ಶನ್‌ ಅವರೊಂದಿಗೆ ತುಂಬಾ ಒಳ್ಳೆಯ ಸ್ನೇಹಿತೆಯರಾಗಿದ್ದವರು. ಆದರೆ ರೇಣುಕಾಸ್ವಾಮಿ ಕೊಲೆ ಕೇಸ್‌ ಹೊರಬಂದ ನಂತರ ರಮ್ಯಾ ಅವರು ದರ್ಶನ್‌ ವಿರುದ್ಧ ತಿರುಗಿಬಿದ್ದಿದ್ದರು. ತಪ್ಪು ಯಾರದ್ದೇ ಆಗಿರಲಿ ಶಿಕ್ಷೆ ಆಗಬೇಕು ಎಂದು ಅಚ್ಚರಿ ನಡೆಗೆ ಸಾಕ್ಷಿಯಾಗಿದ್ದರು. ಇನ್ನು ದರ್ಶನ್‌ ಈ ಕೇಸ್‌ನಲ್ಲಿ ಜೈಲು ಸೇರಿದಾಗಲೂ ರಕ್ಷಿತಾ ಅವರು ದರ್ಶನ್‌ ಅವರ ಬೆಂಬಲಕ್ಕೆ ನಿಂತಿದ್ದರು. ಜೈಲಿಗೆ ಹೋಗಿ ದರ್ಶನ್‌ ಅವರನ್ನು ಭೇಟಿಯಾಗಿ ಬಂದಿದ್ದರು.

Actress Rakshitha Reacts To Ramya vs Darshan Fans Clash Shares Two Strong Posts

ಈಗಲೂ ರಕ್ಷಿತಾ ಹಾಗೂ ದರ್ಶನ್‌ ಅವರ ಸ್ನೇಹ ಗಟ್ಟಿಯಾಗಿ ಮುಂದುವರಿದಿದೆ. ದರ್ಶನ್‌ ಜಾಮೀನು ಪಡೆದು ಹೊರಬಂದ ನಂತರ ಹಂಚಿಕೊಂಡಿದ್ದ ವಿಶೇಷ ವಿಡಿಯೋದಲ್ಲೂ ಕೆಲವೇ ಮಂದಿಗೆ ಹೆಸರು ಉಲ್ಲೇಖಿಸಿ, ಧನ್ಯವಾದ ತಿಳಿಸಿದ್ದರು. ಇದರಲ್ಲಿ ನಟಿ ರಕ್ಷಿತಾ ಕೂಡ ಒಬ್ಬರು. ಹೀಗಾಗಿ ದರ್ಶನ್‌ ಹಾಗೂ ರಕ್ಷಿತಾ ನಡುವೆ ಸ್ನೇಹ ಗಟ್ಟಿಯಾಗಿದೆ. ಇನ್ನು ರೇಣುಕಾಸ್ವಾಮಿ ಕೇಸ್‌ ವಿಚಾರದಲ್ಲಿಯೂ ರಕ್ಷಿತಾ ಅವರು ದರ್ಶನ್‌ ಪರವೇ ಇದ್ದರು. ಇದೀಗ ರಮ್ಯಾ ಹಾಗೂ ಡಿಬಾಸ್‌ ಅಭಿಮಾನಿಗಳ ಗಲಾಟೆಗೆ ರಕ್ಷಿತಾ ಮಧ್ಯಪ್ರವೇಶಿಸಿ, ಪೋಸ್ಟ್‌ ಮಾಡಿರುವುದು ಅಚ್ಚರಿ ಮೂಡಿಸಿದೆ.

ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ರಕ್ಷಿತಾ ಹೇಳಿದ್ದೇನು?

ನಟಿ ರಕ್ಷಿತಾ ಅವರು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಎರಡು ಪೋಸ್ಟ್‌ ಹಂಚಿಕೊಂಡಿದ್ದಾರೆ. ಮೊದಲನೆಯ ಪೋಸ್ಟ್‌ನಲ್ಲಿ, "ನೀವು ಜನರ ಮಾನಸಿಕ ಆರೋಗ್ಯ ನೋಡಲು ಸಾಧ್ಯವಿಲ್ಲ. ದಯವಿಟ್ಟು ಯಾವಾಗಲೂ ದಯೆಯಿಂದ ಇರಿ" ಅಂತ ಬರೆದಿದ್ದಾರೆ. ಇನ್ನೊಂದು ಪೋಸ್ಟ್‌ನಲ್ಲಿ "ನಾನು ನಿಜವಾಗಿ ಏನು ವೈರಲ್‌ ಆಗೋದನ್ನ ನೋಡಲು ಬಯಸುತ್ತಿದ್ದೇನೆ ಗೊತ್ತಾ? ಬೇಸಿಕ್‌ ಹ್ಯೂಮನ್‌ ಡೀಸೆನ್ಸಿ" (ಮೂಲಭೂತ ಮಾನವ ಸಭ್ಯತೆ) ಎಂದು ರಕ್ಷಿತಾ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಆದರೆ ಈ ಎರಡೂ ಪೋಸ್ಟ್‌ಗಳು ನಟಿ ರಮ್ಯಾ ಅವರಿಗೆ ಟಾಂಗ್‌ ನೀಡುವಂತಿವೆ ಎಂದು ಹೇಳಲಾಗುತ್ತಿದೆ. ರಮ್ಯಾ ಅವರ ಹೆಸರು ಉಲ್ಲೇಖಿಸದೆ ಪರೋಕ್ಷವಾಗಿ ಈ ಸಂದೇಶ ರವಾನಿಸಿದ್ದಾರೆ, ಇಲ್ಲಿಯೂ ರಕ್ಷಿತಾ ದರ್ಶನ್‌ ಪರವೇ ಬ್ಯಾಟಿಂಗ್‌ ಮಾಡಿದ್ದಾರೆ ಎನ್ನಲಾಗಿದೆ. ಇನ್ನೂ ಕೆಲವರು ರಕ್ಷಿತಾ ಇಬ್ಬರಿಗೂ ಅನ್ವಯವಾಗುವಂತೆ ಪೋಸ್ಟ್‌ ಹಂಚಿಕೊಂಡಿದ್ದಾರೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+