ಮಿಸ್ ಯು ಮಗನೇ.. ರಾಕೇಶ್ ಪೂಜಾರಿ ನಿಧನಕ್ಕೆ ನಟಿ ರಕ್ಷಿತಾ ಪ್ರೇಮ್ ಭಾವುಕ; ಏನಂದ್ರು?
ಬೆಂಗಳೂರು, ಮೇ 12: ಹಾಸ್ಯದ ಮೂಲಕ ಜನರನ್ನು ನಕ್ಕು ನಲಿಸುತ್ತಿದ್ದ 'ಕಾಮಿಡಿ ಕಿಲಾಡಿಗಳು' ಖ್ಯಾತಿಯ ನಟ ರಾಕೇಶ್ ಪೂಜಾರಿ ನಿಧನದ ಸುದ್ದಿ ಕೇಳಿ ಚಿತ್ರರಂಗವೇ ಬೆಚ್ಚಿಬಿದ್ದಿದೆ. ಇದೀಗ ಕಾಂತಾರ ಚಾಪ್ಟರ್ 1 ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಾಕೇಶ್ ಪೂಜಾರಿ ನಿಧನರಾಗಿದ್ದು, ಅಭಿಮಾನಿಗಳಿಗೆ ಹಾಗೂ ಚಿತ್ರತಂಡಕ್ಕೆ ನಂಬಲು ಸಾಧ್ಯವಾಗುತ್ತಿಲ್ಲ. ಮೇ 11ರ ಬೆಳಗ್ಗೆ 'ಕಾಂತಾರ ಚಾಪ್ಟರ್ 1'ರ ಶೂಟ್ನಲ್ಲಿ ರಾಕೇಶ್ ಭಾಗಿಯಾಗಿದ್ದರು. ಮಧ್ಯರಾತ್ರಿ ಅವರಿಗೆ ಸಾವು ಸಂಭವಿಸಿದೆ.
ರಿಷಬ್ ಶೆಟ್ಟಿಯ ಕಾಂತಾರ ಚಾಪ್ಟರ್ 1 ಚಿತ್ರದಲ್ಲೂ ರಾಕೇಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ರು. ರಾಕೇಶ್ ಪೂಜಾರಿ ಅವರೂ ನಿನ್ನೆವರೆಗೂ ಆರೋಗ್ಯವಾಗಿಯೇ ಇದ್ದ ನಟ ರಾಕೇಶ್ ಪೂಜಾರಿ ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸ್ನೇಹಿತರ ಮೆಹಂದಿ ಕಾರ್ಯಕ್ರಮದಲ್ಲಿ ನಟ ರಾಕೇಶ್ಗೆ ದಿಢೀರ್ ಬಿಪಿ ಲೋ ಆಗಿ ಕುಸಿದು ಬಿದ್ದಿದ್ದಾರೆ. ಆ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ರಾಕೇಶ್ ಚಿಕಿತ್ಸೆಗೆ ಸ್ಪಂದಿಸದೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇನ್ನೂ 'ಕಾಮಿಡಿ ಕಿಲಾಡಿಗಳು' ಖ್ಯಾತಿಯ ನಟ ರಾಕೇಶ್ ಪೂಜಾರಿ ನಿಧನದ ಸುದ್ದಿ ಕೇಳಿ ಚಿತ್ರತಂಡ ಕಂಬನಿ ಮಿಡಿದಿದೆ.

ಕಾಮಿಡಿ ಕಿಲಾಡಿಗಳು' ಖ್ಯಾತಿಯ ನಟ ರಾಕೇಶ್ ಪೂಜಾರಿ ಸಾವಿಗೆ ನಟಿ ರಕ್ಷಿತಾ, ನಟ ಶಿವರಾಜ್ ಕುಮಾರ್, ಶಿವರಾಜ್ ಕೆ ಆರ್ ಪೇಟೆ ಸೇರಿದಂತೆ ಸಾಕಷ್ಟು ನಟ ನಟಿಯರು ಸಂತಾಪ ಸೂಚಿಸಿದ್ದಾರೆ. ರಾಕೇಶ್ ಅನಿರೀಕ್ಷಿತ ಸಾವಿನಿಂದ ಕಿರುತೆರೆ ಇಂಡಸ್ಟ್ರಿ ಆಘಾತಕ್ಕೆ ಒಳಗಾಗಿದ್ದು, ಸ್ಯಾಂಡಲ್ವುಡ್ ಸ್ಟಾರ್ ನಟಿ ರಕ್ಷಿತಾ ಪ್ರೇಮ್ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಭಾವುಕರಾಗಿ ಬರೆದುಕೊಂಡಿದ್ದಾರೆ.
ನಟಿ ರಕ್ಷಿತಾ ಪ್ರೇಮ್ ಹೇಳಿದ್ದೇನು?
ಮಿಸ್ ಯು ಮನಗೇ .. ಎಂದು ನಟಿ ರಕ್ಷಿತಾ ಅವರು ರಾಕೇಶ್ ಪೂಜಾರಿ ಜೊತೆಗಿನ ಫೋಟೋವನ್ನ ಹಂಚಿಕೊಂಡಿದ್ದಾರೆ. ರಾಕೇಶ ಜೊತೆ ಇನ್ನು ಮುಂದೆ ಮಾತನಾಡಲು ಸಾಧ್ಯವಿಲ್ಲ ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಸ್ಯ ಕಿಲಾಡಿಗಳು ಕಾರ್ಯಕ್ರಮದಲ್ಲಿ ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದ್ದು ರಾಕೇಶ. ಅತ್ಯಂತ ಸುಂದರವಾದ ವ್ಯಕ್ತಿ. ಕ್ಯಾಮೆರಾದ ಹೊರತಾಗಿಯೋ ಅದ್ಭುತ ಪ್ರತಿಭೆ. ನನಗೆ ತಿಳಿದಿರುವ ಅತ್ಯಂತ ಪರಿಪೂರ್ಣ ವ್ಯಕ್ತಿ. ರಾಕೇಶ ನೀವು ಯಾವಾಗಲೂ ನಮ್ಮ ಹೃದಯದಲ್ಲಿ ಇರುತ್ತೀರಿ. ನಿನ್ನನ್ನು ಮಿಸ್ ಮಾಡಿಕೊಳ್ಳುತ್ತೀರಿ.. ನಿಮ್ಮ ನಗು, ಕಿಡಿಗೇಡಿತನ ಮತ್ತು ಮುಖ್ಯವಾಗಿ ನಮ್ಮೆಲ್ಲರ ಜೀವನದಲ್ಲಿ ನೀವು ತಂದ ಸಂತೋಷ ಅಂತ ಭಾವುಕರಾಗಿ ರಕ್ಷಿತಾ ಪ್ರೇಮ್ ಅವರು ಬರೆದುಕೊಂಡಿದ್ದಾರೆ
ಇನ್ನೂ, ರಾಕೇಶ್ ಪೂಜಾರಿ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ನಟಿ ರಕ್ಷಿತಾ ಅವರ ಜೊತೆಗೆ ಇರೋ ಫೋಟೋವನ್ನು ಪಿನ್ ಮಾಡಿದ್ದಾರೆ. ಆ ಫೋಟೋ ಜೊತೆಗೆ ಮುದ್ದು ಮನದ ಕ್ವೀನ್.. ಸದಾ ಬೆಂಬಲಿಸೋ ಹೀರೋಯಿನ್.. ಇವರ ಮಾತು ಪವರ್ ಆನ್.. ಇವರ ನಗು ಎವರ್ಗ್ರೀನ್.. ಇವರೇ ನಮ್ಮ ಕ್ರೇಜಿ ಕ್ವೀನ್ ಅಂತ ಬರ್ತ್ ಡೇಗೆ ಕ್ಯೂಟ್ ಆಗಿ ವಿಶ್ ಮಾಡಿದ್ದಾರೆ. ಇನ್ನೂ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅವರು ಸಹ ರಾಕೇಶ್ ಪೂಜಾರಿ ಅವರ ಫೋಟೋವನ್ನ ಹಂಚಿಕೊಂಡು ಮಿಸ್ ಯು ಎಂದು ಬರೆದುಕೊಂಡಿದ್ದಾರೆ.












Click it and Unblock the Notifications