ದರ್ಶನ್ 'ಡೆವಿಲ್' ಸಿನಿಮಾದಲ್ಲಿ ನಾನು ನಟಿಸಬೇಕಿತ್ತು, ಆ ಕಾರಣಕ್ಕೆ ಒಪ್ಪಲಿಲ್ಲ: ರಾಗಿಣಿ ದ್ವಿವೇದಿ
'ತುಪ್ಪದ ಬೆಡಗಿ' ರಾಗಿಣಿ ದ್ವಿವೇದಿ ಅವರು ಕನ್ನಡ ಚಿತ್ರರಂಗದಲ್ಲಿ 15 ವರ್ಷಗಳನ್ನು ಪೂರೈಸಿದ್ದಾರೆ. ಇದೇ ಸಂಭ್ರಮದಲ್ಲಿ ಇತ್ತೀಚೆಗೆ ಅದ್ಧೂರಿ ಕಾರ್ಯಕ್ರಮವನ್ನೂ ಅವರು ಆಯೋಜಿಸಿದ್ದರು. ಈ ವೇಳೆ ಅವರು ತಮ್ಮ ಸಿನಿ ಪಯಣ, ಈಗಿನ ಸಿನಿಮಾಗಳು ಹಾಗೂ ಫ್ಯಾನ್ ವಾರ್ ಬಗ್ಗೆಯೂ ಮಾತನಾಡಿದ್ದಾರೆ. ಇನ್ನು ಇತ್ತೀಚೆಗೆ ತೆರೆಕಂಡ ನಟ ದರ್ಶನ್ ತೂಗುದೀಪ ಅಭಿನಯದ 'ಡೆವಿಲ್' ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುವ ಅವಕಾಶ ನನಗೆ ಸಿಕ್ಕಿತ್ತು. ಆದರೆ ಈ ಒಂದು ಕಾರಣಕ್ಕೆ ನಟಿಸಲ್ಲ ಎಂದು ಹೇಳಿದ್ದಾಗಿ ರಾಗಿಣಿ ಅಚ್ಚರಿ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
'ಒಂದು ಹಂತದವರೆಗೆ ಸಿಕ್ಕ ಪಾತ್ರಗಳಲ್ಲಿ ನಟಿಸಬೇಕು. ಆ ಹಂತ ದಾಟಿದ ಮೇಲೆ ಪಾತ್ರಗಳನ್ನು ನಾವು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಾವು ಎಲ್ಲ ಪಾತ್ರವನ್ನು ಒಪ್ಪಿಕೊಳ್ಳಲು ಆಗಲ್ಲ. ನಮಗೆ ತಕ್ಕಂತ ಪಾತ್ರವನ್ನಷ್ಟೇ ಮಾಡಬೇಕು. ಈಗ ಸಿನಿಮಾಗಳು ಬದಲಾಗುತ್ತಿವೆ. ಹಾಗಂತ ಯಾವುದೋ ಸಿಕ್ಕ ಪಾತ್ರಗಳನ್ನು ಮಾಡಲು ಆಗುವುದಿಲ್ಲ' ಎಂದು ರಾಗಿಣಿ ಅಭಿಪ್ರಾಯ ತಿಳಿಸಿದ್ದಾರೆ.

'ನಾನು ದರ್ಶನ್ ಅವರ "ಡೆವಿಲ್" ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ ಆ ಪಾತ್ರ ನನಗೆ ಬೇಕಾಗಿರಲಿಲ್ಲ, ಇಷ್ಟವೂ ಆಗಲಿಲ್ಲ. ಹಾಗಾಗಿ ಆ ಪಾತ್ರವನ್ನು ನಾನು ಒಪ್ಪಲಿಲ್ಲ. ಇದು ನನ್ನ ಆಯ್ಕೆಗೆ ಬಿಟ್ಟಿದ್ದು. ಡೆವಿಲ್ ಸಿನಿಮಾದ ಆ ಪಾತ್ರ ನನಗೆ ಇಷ್ಟವಾಗಿಲ್ಲ, ಅದಕ್ಕೇ ಮಾಡಲಿಲ್ಲ. ಯಾವ ಪಾತ್ರ ಎಂದು ನಾನು ಹೇಳಲ್ಲ' ಎಂದಿದ್ದಾರೆ ರಾಗಿಣಿ.
'ಫ್ಯಾನ್ ವಾರ್ ಎಲ್ಲ ಇಂಡಸ್ಟ್ರಿಯಲ್ಲಿದೆ'
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ದರ್ಶನ್-ಸುದೀಪ್ ಅಭಿಮಾನಿಗಳ ನಡುವಿನ ಫ್ಯಾನ್ ವಾರ್ ಬಗ್ಗೆಯೂ ರಾಗಿಣಿ ಮಾತನಾಡಿದ್ದಾರೆ. 'ಫ್ಯಾನ್ ವಾರ್ ಅನ್ನೋದು ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ, ಎಲ್ಲ ಚಿತ್ರರಂಗದಲ್ಲೂ ಇದೆ. ಸ್ಟಾರ್ ಇದ್ದ ಮೇಲೆ ಫ್ಯಾನ್ ಇದ್ದೇ ಇರ್ತಾರೆ. ಪ್ರತಿಯೊಬ್ಬ ನಟರ ಫ್ಯಾನ್ ಬೇಸ್ ಇದ್ದೇ ಇರುತ್ತೆ, ತಮ್ಮ ನೆಚ್ಚಿನ ನಟನಿಗಾಗಿ ಏನು ಮಾಡಬೇಕೋ ಮಾಡ್ತಾರೆ' ಎಂದಿದ್ದಾರೆ.
'ಯಾರ ಯೋಚನೆ ಯಾವ ತರ ಇರುತ್ತೋ ಗೊತ್ತಿಲ್ಲ. ನಾನು ಅದರ ಬಗ್ಗೆ ಕಾಮೆಂಟ್ ಮಾಡಲ್ಲ. ಫ್ಯಾನ್ ವಾರ್ ಆಗಾಗ ಆಗ್ತಿರುತ್ತೆ, ಅದನ್ನ ಜಾಸ್ತಿ ತಲೆಗೆ ಹಾಕಿಕೊಳ್ಳದೆ ಮುಂದೆ ಹೋಗುತ್ತಿರಬೇಕಷ್ಟೇ. ಈಗ ಸುದೀಪ್-ದರ್ಶನ್ ಫ್ಯಾನ್ಸ್ ನಡುವೆ ಫ್ಯಾನ್ ವಾರ್ ನಡೆಯುತ್ತಿರುವ ಬಗ್ಗೆ ನನಗೆ ಮಾಹಿತಿ ಇಲ್ಲ, ನಾನು ನನ್ನ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದೀನಿ'.
'ನನ್ನ ಪ್ರಕಾರ ಸುದೀಪ್ ಅವರು ವೈಯಕ್ತಿಕವಾಗಿ ಏನೂ ಮಾತನಾಡಿರಲ್ಲ, ಅವರೊಬ್ಬ ಮಾಸ್ ಹೀರೋ, ಅವರು ಏನು ಮಾತನಾಡಿದ್ದಾರೋ ನನಗೆ ಗೊತ್ತಿಲ್ಲ. ಎಲ್ಲ ನಟರಿಗೂ ತಮ್ಮ ಫ್ಯಾನ್ಸ್ ಬಗ್ಗೆ ಮಾತನಾಡುತ್ತಾರೆ. ಅವರು ಆಡಿರುವ ಮಾತುಗಳು ಅವರ ಸಿನಿಮಾದ ಡೈಲಾಗ್ ಕೂಡ ಆಗಿರಬಹುದು' ಎಂದಿದ್ದಾರೆ.
'45 ಹಾಗೂ ಮಾರ್ಕ್ ಸಿನಿಮಾ ಒಂದೇ ದಿನ ರಿಲೀಸ್ ಆಗ್ತಿದೆ, ಎರಡೂ ಸಿನಿಮಾ ಚೆನ್ನಾಗಿ ಪ್ರದರ್ಶನ ಕಾಣುತ್ತೆ. ಸಾಲು ಸಾಲು ರಜೆಗಳು ಇರುವುದರಿಂದ ಸ್ಯಾಂಡಲ್ವುಡ್ಗೆ ವರದಾನ ಅಂತಲೇ ಹೇಳಬಹುದು. ಈ ಎರಡೂ ಸಿನಿಮಾವನ್ನು ಜನ ಹೋಗಿ ನೋಡ್ತಾರೆ, ತುಂಬಾ ದೊಡ್ಡ ಮಟ್ಟದ ಹಿಟ್ ಆಗುತ್ತೆ' ಎಂದು ರಾಗಿಣಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications