ಸಂಜು ವೆಡ್ಸ್​ ಗೀತಾ 2 ಚಿತ್ರದಲ್ಲಿ ರಚಿತಾ ರಾಮ್‌ ಪಾತ್ರವೇನು?: ಡಿಂಪಲ್‌ ಕ್ವೀನ್ ಏನಂದ್ರು..?

ಬೆಂಗಳೂರು, ಆಗಸ್ಟ್‌ 20: ಡಿಂಪಲ್‌ ಕ್ವೀನ್ ರಚಿತಾ ರಾಮ್​ ಹಾಗೂ ಶ್ರೀನಗರ ಕಿಟ್ಟಿ ಅಭಿನಯದ 'ಸಂಜು ವೆಡ್ಸ್​ ಗೀತಾ 2' ಚಿತ್ರದ ಚಿತ್ರೀಕರಣ ಸದ್ಯ ಮುಕ್ತಾಯವಾಗಿದೆ. ನಾಗಶೇಖರ್​ ನಿರ್ದೇಶನದ ಈ ಚಿತ್ರವನ್ನು ಬೆಂಗಳೂರು ಸೇರಿದಂತೆ ದೇಶದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿಯೂ ಚಿತ್ರೀಕರಣ ಮಾಡಲಾಗಿದೆ. 'ಸಂಜು ವೆಡ್ಸ್​ ಗೀತಾ 2' ಬಗ್ಗೆ ಪ್ರೇಕ್ಷಕರಿಗೆ ಬಹಳಷ್ಟು ನಿರೀಕ್ಷೆಯಿದ್ದು, ಚಿತ್ರ ಬಿಡುಗಡೆಗಾಗಿ ಕಾತುರರಾಗಿದ್ದಾರೆ. ಚಿತ್ರೀಕರಣ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ 'ಸಂಜು ವೆಡ್ಸ್​ ಗೀತಾ 2' ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.

'ಸಂಜು ವೆಡ್ಸ್​ ಗೀತಾ 2' ಸಿನಿಮಾದ ಬಗ್ಗೆ ನಟಿ ರಚಿತಾ ರಾಮ್‌ ಮಾತನಾಡಿದ್ದು, 'ಈ ಚಿತ್ರದ ಚಿತ್ರೀಕರಣದ ಪಯಣ ತುಂಬಾ ಚೆನ್ನಾಗಿತ್ತು. ಸ್ವಿಜ್ಜರ್‌ಲ್ಯಾಂಡ್‌ನಲ್ಲಿ ಶೂಟಿಂಗ್‌ ಮಾಡಿರುವಂತಹದ್ದು, ಹಾಗೇ ಶೀಡ್ಲಘಟದ ಚಿತ್ರೀಕರಣ ಆಗಿರಬಹುದು. ಬೆಂಗಳೂರಿನ ಸುತ್ತಮುತ್ತ ಎಲ್ಲಾ ಕಡೆಗಳಲ್ಲಿ ಶೂಟಿಂಗ್‌ ಮಾಡಿದ್ದೇವೆ. 'ಸಂಜು ವೆಡ್ಸ್​ ಗೀತಾ 2' ಚಿತ್ರತಂಡದೊಂದಿಗೆ ನನ್ನ ಪಯಣ ತುಂಬಾ ಚೆನ್ನಾಗಿತ್ತು. ಈ ತಂಡದೊಂದಿಗೆ ಮೊದಲ ಬಾರಿಗೆ ನಾನು ಕೆಲಸ ಮಾಡಿದ್ದು, ಇದು ತುಂಬಾ ಒಳ್ಳೆ ತಂಡ ಅಂತಾ ಹೇಳಲು ಇಷ್ಟಪಡುತ್ತೇನೆ' ಎಂದರು.

Actress Rachita Ram Shared Sanju Weds Geetha-2 Movie Shooting Experience

'ಸಿನಿಮಾ ಬಗ್ಗೆ ಹೆಚ್ಚಿಗೆ ಹೇಳಲು ಅವಕಾಶ ಇಲ್ಲ. ಸಿನಿಮಾ ಚಿತ್ರೀಕರಣ ಹೇಗೆ ಬಂದಿದೆ ಅಂತಾ ಇನ್ನೂ ನೋಡಿಲ್ಲ. ಯಾಕೆಂದರೆ ನನ್ನ ಭಾಗದ ಡಬ್ಬಿಂಗ್‌ ಇನ್ನೇನು ಶುರುವಾಗಬೇಕು. ಬಹುಶಃ ಮುಂದಿನ ವಾರದಿಂದ ನಾನು ಡಬ್ಬಂಗ್‌ ಶುರು ಮಾಡುತ್ತೇನೆ. ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ ಅಂತೆ. ಚೆನ್ನಾಗಿ ಬರಲಿ ಅಂತಾ ನಾನು ಕೂಡ ಪ್ರಾರ್ಥನೆ ಮಾಡುತ್ತೇನೆ' ಎಂದು ಹೇಳಿದರು.

ಮದ್ಯಪ್ರಿಯರಿಗೆ ಗುಡ್‌ ನ್ಯೂಸ್‌: ಕರ್ನಾಟಕದಲ್ಲಿ ದುಬಾರಿ ಮದ್ಯದ ಬೆಲೆ ಇಳಿಕೆ?

ಈ ಚಿತ್ರದ ಮೊದಲ ಹಾಗೂ ಎರಡನೇ ಭಾಗದ ವ್ಯತ್ಯಾಸದ ಬಗ್ಗೆ ಮಾತನಾಡಿದ ಅವರು, 'ಸಂಜು ವೆಡ್ಸ್​ ಗೀತಾ ಎನ್ನುವ ಹೆಸರು ಒಂದೇ ಇರಬಹುದು ಆದರೆ ಕಥೆ ಬೇರೆ. ನಾನು ಮೊದಲ ಭಾಗ ನೋಡಿದ್ದೇನೆ. ನನಗೆ ತುಂಬಾ ಇಷ್ಟ ಆಗಿತ್ತು. ಈ ಸಿನಿಮಾದ ಶೂಟಿಂಗ್‌ ಆಗುವಾಗಲೂ ನಾನು ಆ ಸಿನಿಮಾದ ಹಾಡುಗಳನ್ನು ಹಾಡುತ್ತಿದೆ. ಬ್ಯೂಟಿ...ಹಾಗೂ ಸಂಜು ಐಲವ್‌ಯೂ ಎರಡು ಡೈಲಾಗ್‌ಗಳು ಈ ಸಿನಿಮಾದಲ್ಲಿ ಕ್ಯಾರಿ ಆಗಿದೆ' ಎಂದರು.

'ಸ್ವಿಜ್ಜರ್‌ಲ್ಯಾಂಡ್‌ನಲ್ಲಿ ಶೂಟಿಂಗ್‌ ಮಾಡಿದ್ದು ನಮಗೆ ತುಂಬಾ ಚಾಲೆಂಜಿಂಗ್‌ ಆಗಿತ್ತು. ಸಿನಿಮಾ ಮಾಡಲು ಸ್ವಿಜ್ಜರ್‌ಲ್ಯಾಂಡ್‌ನ ಉತ್ತಮ ಸ್ಥಳ ಯಾಕೆಂದರೆ ನೋಡಲು ಅಷ್ಟು ಚೆನ್ನಾಗಿ ಬರುತ್ತದೆ. ನಾವು ಅಲ್ಲಿ ಪ್ರತಿ ದಿನ ಎಂಟು ಗಂಟೆಗಳ ಕಾಲ ಟ್ರಾವೆಲ್ ಮಾಡಿ ಸಿನಿಮಾ ಶೂಟಿಂಗ್‌ ಮಾಡುತ್ತಿದ್ದೇವು. ಅನುಭವ ತುಂಬಾ ಚೆನ್ನಾಗಿತ್ತು. ಹಾಗೂ ವಿಜ್ಯೂವಲ್‌ ಕೂಡ ತುಂಬಾ ಚೆನ್ನಾಗಿ ಬಂದಿದೆ'.

Actress Rachita Ram Shared Sanju Weds Geetha-2 Movie Shooting Experience

'ಈ ಚಿತ್ರದಲ್ಲಿ ಹೆಚ್ಚಿನ ದೃಶ್ಯಗಳು ಮಳೆಯಲ್ಲೇ ಇರುವುದು. ಹೀಗಾಗಿ ಒಂದು ಸಂಪೂರ್ಣ ದಿನ ಮಳೆಯಲ್ಲೇ ನೆನೆದಿದ್ದೇವೆ. ನಾನೇ ಸಾಕು ಸಾಕು ಅಂತಾ ನಿರ್ದೇಶಕರ ಬಳಿ ಮನವಿ ಮಾಡುತ್ತಿದೆ. ಇನ್ನು ಕೆಲವು ಭಾಗದಲ್ಲಿ ಬಿಸಿಲೂ ಕೂಡ ಹೆಚ್ಚಾಗಿ ಇತ್ತು. ಅದೆಲ್ಲಾ ನಮಗೆ ಒಂಥರಾ ಟಾಸ್ಕ್‌. ಈ ಸಿನಿಮಾದಲ್ಲಿ ತುಂಬಾ ಮಳೆ ತುಂಬಾ ಬಿಸಿಲು ಎರಡನ್ನೂ ಕೂಡ ನೋಡಿದ್ದೇನೆ' ಎಂದು ನಟಿ ರಚಿತಾ ರಾಮ್‌ 'ಸಂಜು ವೆಡ್ಸ್​ ಗೀತಾ 2' ಸಿನಿಮಾದ ಚಿತ್ರೀಕರಣದಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+