ಟ್ರೋಲಿಗರಿಗೆ ಎಚ್ಚರಿಕೆ ಸಂದೇಶ ಕೊಟ್ಟ ಚಂದದ ಗೊಂಬೆ ನಿವೇದಿತಾ ಗೌಡ
ಬಿಗ್‌ಬಾಸ್ ಮನೆಯಲ್ಲಿ ಚಂದದ ಗೊಂಬೆ ಅಂತಲೇ ಹೆಸರಾದ ನಿವೇದಿತಾ ಗೌಡ ರೀಲ್ಸ್ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿದ್ದಾರೆ. ತಮ್ಮ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುವ ನಿವೇದಿತಾ ಯಾರ ಕಾಮೆಂಟ್‌ಗೂ ತಲೆ ಕೆಡಸಿಕೊಳ್ಳುವುದಿಲ್ಲ. ಇನ್ನೂ ಅವರ ಪೋಟೋ ಹಾಗೂ ವಿಡಿಯೋಗಳನ್ನು ನೋಡಿ ಜನ ಹೇಗೇ ರಿಯಾಕ್ಟ್ ಮಾಡಿದರೂ ಕೂಡ ನಿವೇದಿತಾ ಡೋಂಟ್ ಕೇರ್ ಅಂತಿರುತ್ತಾರೆ. ಇದೀಗ ನಿವೇದಿತಾ ಕಾಮೆಂಟ್‌ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಹೌದು ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡುವವರ ಕಾಲೆಳೆಯುವುದು ಅಂದರೆ ಕೆಲವರಿಗೆ ಅದೆನೋ ಖುಷಿ. ಹೀಗಾಗಿ ಸೆಲೆಬ್ರಿಟಿಗಳು ಯಾವುದೇ ಫೋಟೋ ವಿಡಿಯೋ ಹಂಚಿಕೊಂಡರೂ ಕೂಡ ಅದಕ್ಕೆ ಏನಾದ್ರೂ ಒಂದು ಕಾಮೆಂಟ್ ಮಾಡುತ್ತಲೇ ಇರುತ್ತಾರೆ. ಈ ಸಾಲಿನಲ್ಲಿ ನಿವೇದಿತಾ ಗೌಡ ಕೂಡ ಒಬ್ಬರು.

ನಿವೇದಿತಾ ಗೌಡ ಬಿಗ್‌ಬಾಸ್ ಮನೆಗೆ ಹೋಗುವ ಮುನ್ನ ಅಷ್ಟಾಗಿ ಯಾರಿಗೂ ಕೂಡ ಪರಿಚಯ ಇರಲಿಲ್ಲ. ಬಿಗ್‌ಬಾಸ್ ಮನೆಗೆ ಹೋದ ನಂತರ ಅವರು ಚಂದನ್ ಶೆಟ್ಟಿ ಅವರೊಂದಿಗಿನ ಸ್ನೇಹ ಪ್ರೀತಿಯಾಗಿ ಬದಲಾಯಿತು. ನಂತರ ಏನಾಯ್ತು ಅನ್ನೋದು ಎಲ್ಲರಿಗೂ ತಿಳಿದೇ ಇದೆ. ಚಂದನ್ ಹಾಗೂ ನಿವೇದಿತಾ ಪ್ರೀತಿಸಿ ಮದುವೆಯಾಗಿ ಕೆಲವೇ ವರ್ಷದಲ್ಲಿ ವಿಚ್ಚೇದನ ಕೂಡ ಪಡೆದುಕೊಂಡರು. ಇದೀಗ ಸಿಂಗಲ್ ಆಗಿರುವ ನಿವೇದಿತಾ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿಡಿಯೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.
ಕೇವಲ ರೀಲ್ಸ್ ಮಾತ್ರವಲ್ಲದೇ ಮುದ್ದು ರಾಕ್ಷಕಿ ಸಿನಿಮಾದಲ್ಲೂ ನಿವೇದಿತಾ ಕಾಣಿಸಿಕೊಳ್ಳಲಿದ್ದಾರೆ. ಇದರೊಂದಿಗೆ ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋನಲ್ಲೂ ನಿವೇದಿತಾ ಭಾಗವಹಿಸುತ್ತಾರೆ. ಹೀಗೆ ತಮ್ಮ ವೃತ್ತಿ ಜೀವನದಲ್ಲಿ ಬ್ಯೂಸಿ ಆಗಿರುವ ನಿವೇದಿತಾ ಬಿಡುವು ಸಿಕ್ಕಾಗಲೆಲ್ಲಾ ಪ್ರವಾಸಕ್ಕೂ ತೆರಳುತ್ತಿರುತ್ತಾರೆ.
ತಾವು ಹೋಗಿ ಬಂದ ಕಡೆಗಳೆಲ್ಲಾ ನಿವೇದಿತಾ ವಿಡಿಯೋ ಮಾಡಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಅವರು ಬಾತ್‌ರೂಮ್‌ನಲ್ಲಿ ಕಿಚ್ಚ ಸುದೀಪ್ ಹಾಡಿಗೆ ಡ್ಯಾನ್ಸ್ ಮಾಡುತ್ತಾ ವಿಡಿಯೋವನ್ನು ಶೇರ್ ಮಾಡಿದ್ದರು. ಇದಕ್ಕೆ ಸಾಕಷ್ಟು ಕಾಮೆಂಟ್‌ಗಳು ಬಂದಿರುವುದು ಇದೆ.
ಕೆಲ ಜನ ಇದಕ್ಕೆ ಕೆಟ್ಟದಾಗಿಯೂ ಕೂಡ ಕಾಮೆಂಟ್ ಮಾಡಿದ್ದರು. ಆದರೆ ಇದಕ್ಕೆ ನಿವೇದಿತಾ ತಲೆಕೆಡಿಸಿಕೊಂಡಿರಲಿಲ್ಲ. ಇದೀಗ ಪ್ರತಿಕ್ರಿಯೆ ನೀಡಿದ್ದಾರೆ. ಕಳೆದ ಬಾರಿ ಕಿಚ್ಚ ಸುದೀಪ್ ಹಾಡಿಗೆ ಬಾತ್‌ರೂಮ್‌ನಲ್ಲಿ ನೃತ್ಯ ಮಾಡಿದ್ದ ನಿವೇದಿತಾ ಇದೀಗ ಮತ್ತೆ ಬಾತ್‌ರೂಮ್ ಅಲ್ಲಿ ಸ್ಟೈಲ್ ಆಗಿ ನಿಂತು ತಮ್ಮ ದೇಹಸಿರಿಯನ್ನು ಪ್ರದರ್ಶಿಸಿ ಆ ಫೋಟೋವನ್ನು ಶೇರ್ ಮಾಡಿ, ಟ್ರೋಲ್ ಮಾಡೋರಿಗೆ ಆಹಾರ ಆಗಿದ್ದಾರೆ.
ಆದರೆ ಹೀಗೆ ಟ್ರೋಲ್ ಮಾಡೋರಿಗೆ ನಿವೇದಿತಾ ಈಗ ಎಚ್ಚರಿಕೆ ಸಂದೇಶವನ್ನು ಕೊಟ್ಟಿದ್ದಾರೆ. ನಾನು ನನ್ನ ಕೆಲಸ ಮಾಡುತ್ತಿದ್ದೇನೆ. ನಿಮ್ಮ ಕೆಲಸ ನೀವು ಮಾಡಿ ಎಂಬರ್ಥದಲ್ಲಿ ಸಂದೇಶವನ್ನು ಕಳುಹಿಸಿದ್ದಾರೆ. ಈ ಮೂಲಕ ನನ್ನ ಬದುಕು ನನ್ನದು ನಿಮ್ಮ ಬದುಕು ನಿಮ್ಮದು ಎಂದು ನಿವೇದಿತಾ ಗೌಡ ಹೇಳಿದ್ದಾರೆ.
ಹಾಗಂತ ಟ್ರೋಲಿಗರು ಸುಮ್ಮನಾಗಿಲ್ಲ. ಮತ್ತದೇ ಕಾಮೆಂಟ್‌ಗಳನ್ನು ಪಾಸ್ ಮಾಡುತ್ತಾ, ಬಾತ್‌ರೂಮ್ ಬೆಗರ್ಸ್ ಎಂದು ಕಾಮೆಂಟ್ ಮಾಡಿದ್ದಾರೆ. ಹೀಗೆ ಕಾಮೆಂಟ್‌ಗಳ ಸುರಿಮಳೆಯೇ ಬರುತ್ತಿದೆ. ಒಟ್ಟಿನಲ್ಲಿ ನಿವೇದಿತಾ ಏನೇ ಹೇಳಿದರೂ, ಅವರ ಫೋಟೋ ಹಾಗೂ ವಿಡಿಯೋಗಳನ್ನು ಟ್ರೋಲ್ ಮಾಡುವುದನ್ನು ಜನ ನಿಲ್ಲಿಸುವಂತೆ ಕಾಣಿಸುತ್ತಿಲ್ಲ.
ಇದು ನಿವೇದಿತಾ ಗೌಡ ಸುದ್ದಿ ಆದರೆ ಅತ್ತ ಗಾಯಕ ಚಂದನ್ ಶೆಟ್ಟಿ ಎರಡನೇ ಮದುವೆ ಮಾಡಿಕೊಳ್ಳಲಿದ್ದಾರೆ ಎನ್ನುವ ಸುದ್ದಿಗಳು ವೈರಲ್ ಆಗಿವೆ. ಚಂದನ್ ಶೆಟ್ಟಿ ಈ ಬಗ್ಗೆ ಸ್ಪಷ್ಟನೆ ನೀಡಿದರೂ ಕೂಡ ಅವರ ಎರಡನೇ ಮದುವೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗಳು ಹರಿದಾಡುತ್ತಲೇ ಇರುವುದು ಮಾತ್ರ ಸುಳ್ಳಲ್ಲ.












Click it and Unblock the Notifications