ಶೂಟಿಂಗ್‌ ವೇಳೆ ಮಡೆನೂರು ಮನು ನಡವಳಿಕೆ ಬಗ್ಗೆ ನಟಿ ಮೌನ ಗುಡ್ಡೇಮನೆ ಹೇಳಿದ್ದೇನು?

ಕಾಮಿಡಿ ಕಿಲಾಡಿಗಳು ವಿನ್ನರ್‌ ಹಾಗೂ ಹಾಸ್ಯ ನಟ ಮಡೆನೂರು ಮನು ಅವರು ಕಿರುತೆರೆ ನಟಿಗೆ ಕಿರುಕುಳ, ಅತ್ಯಾಚಾರ ಮಾಡಿರುವ ಆರೋಪದಲ್ಲಿ ಪೊಲೀಸರ ಬಂಧನಕ್ಕೆ ಒಳಗಾಗಿದ್ದಾರೆ. ಸಂತ್ರಸ್ತ ನಟಿ ಮನು ಅವರ ಮೇಲೆ ಸಾಲು ಸಾಲು ಆರೋಪಗಳನ್ನು ಮಾಡಿದ್ದಾರೆ. ಮತ್ತೊಂದೆಡೆ ಮನು ನಾಯಕನಾಗಿ ನಟಿಸಿರುವ ಚೊಚ್ಚಲ ಸಿನಿಮಾ ಕುಲದಲ್ಲಿ ಕೀಳ್ಯಾವುದೋ ಕೂಡ ರಿಲೀಸ್‌ ಆಗಿದೆ. ಈ ಸಿನಿಮಾದಲ್ಲಿ ಮನುಗೆ ನಾಯಕಿನಾಗಿ ನಟಿ ಮೌನ ಗುಡ್ಡೇಮನೆ ಅವರು ನಟಿಸಿದ್ದು, ಈ ಮನು ನಡವಳಿಕೆ ಬಗ್ಗೆ ಮಾತನಾಡಿದ್ದಾರೆ.

ಮನು ನಟನೆಯ ʼಕುಲದಲ್ಲಿ ಕೀಳ್ಯಾವುದೋʼ ಸಿನಿಮಾ ಪ್ರಚಾರದ ಗಿಮಿಕ್‌ಗೆ ಈಗೆಲ್ಲ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಈ ಬಗ್ಗೆಯೂ ಸ್ಪಷ್ಟನೆ ನೀಡಿರುವ ನಟಿ ಮೌನ ಗುಡ್ಡೇಮನೆ, ʼಸಿನಿಮಾ ಗಿಮಿಕ್‌ಗಾಗಿ ಯಾರೂ ತಮ್ಮ ಹೆಸರನ್ನು ಹಾಳು ಮಾಡಿಕೊಳ್ಳಲ್ಲ. ಗಿಮಿಕ್‌ ಅಂದ್ರೆ ಒಳ್ಳೆ ರೀತಿಯಲ್ಲೂ ಮಾಡಬಹುದು. ಆದರೆ ಈ ರೀತಿ ರಿಲೀಸ್‌ ಹೊತ್ತಲ್ಲೇ ಯಾರೂ ಮಾಡಲ್ಲʼ ಎಂದು ಹೇಳಿದ್ದಾರೆ.

Actress Mouna Guddemane Reveals Madenur Manu Behavior During Shooting

ʼಮಡೆನೂರು ಮನು ಅವರ ಪರ್ಸನಲ್‌ ವಿಷಯಗಳ ಬಗ್ಗೆ ನನಗೆ ಯಾವುದೇ ಐಡಿಯಾ ಇಲ್ಲ. ಆದರೆ ಈ ರೀತಿ ಆಗಬಾರದಿತ್ತು. ಅವರ ಫಸ್ಟ್ ಸಿನಿಮಾ, ಫಸ್ಟ್ ಡೇ, ಫಸ್ಟ್ ಶೋಗೆ ಮನು ಅವರು ಥಿಯೇಟರ್‌ನಲ್ಲಿ ಇರಬೇಕಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾದಲ್ಲಿ ಮನು ತುಂಬಾ ಚೆನ್ನಾಗಿ ನಟನೆ ಮಾಡಿದ್ದಾರೆ. ಸಾಕಷ್ಟು ಎಫರ್ಟ್ಸ್ ಹಾಕಿದ್ದಾರೆ, ತುಂಬಾ ಕಷ್ಟ ಪಟ್ಟಿದ್ದಾರೆ. ಹೀರೋ ಆಗಬೇಕು ಎಂದು ಬಂದವರು ಮನು, ಏನೇ ಆದರೂ ಅವರಿಗೆ ಒಳ್ಳೆಯದಾಗಲಿʼ ಎಂದಿದ್ದಾರೆ.

ʼನಾನು ತುಂಬಾ ರಿಸರ್ವ್ಡ್‌ ಪರ್ಸನ್‌, ನಾವು ಈ ಸಿನಿಮಾ ಶೂಟಿಂಗ್‌ ವೇಳೆ ಊಟ ಮಾಡುವಾಗ ಬಿಟ್ಟರೆ ಆಕ್ಷನ್‌ ಹೇಳುವಾಗ ಮಾತ್ರವೇ ಜೊತೆಯಾಗುತ್ತಿದ್ವಿ. ನನಗೆ ಮನು ಅವರ ಬಗ್ಗೆ ಅಷ್ಟೊಂದು ಐಡಿಯಾ ಇಲ್ಲ. ಆದರೆ ನಮ್ಮ ಜೊತೆ ಇದ್ದಾಗ ಮನು ಅವರ ನಡವಳಿಕೆ ಒಳ್ಳೆಯ ರೀತಿಯಲ್ಲಿತ್ತು. ನಾನು ನೋಡಿರುವ ಪ್ರಕಾರ ಮನು ತುಂಬಾ ಒಳ್ಳೆಯ ವ್ಯಕ್ತಿ. ತುಂಬಾ ಕಷ್ಟಪಟ್ಟು ಮೇಲೆ ಬಂದಿರುವ ವ್ಯಕ್ತಿ. ಅವರಿಗೂ ಫ್ಯಾಮಿಲಿ ಇದೆ. ಚಿಕ್ಕ ಮಗು ಇದೆʼ ಎಂದು ನಟಿ ಮೌನ ಹೇಳಿದ್ದಾರೆ.

Actress Mouna Guddemane Reveals Madenur Manu Behavior During Shooting

ʼಮಡೆನೂರು ಮನು ಅವರ ಬಗ್ಗೆ ಈ ವಿಷಯ ಗೊತ್ತಾದಾಗ ನನಗೆ ತುಂಬಾ ಟೆನ್ಷನ್ ಆಗಿತ್ತು. ನಾಳೆಯೇ ಸಿನಿಮಾ ರಿಲೀಸ್‌ ಇರುವಾಗ ಈ ರೀತಿಯಾಗಿದ್ದು ನಿಜಕ್ಕೂ ಬೇಸರ ತರಿಸಿತು. ಆದರೆ ದೇವರ ದಯೆಯಿಂದ ಯಾವುದೇ ಸಮಸ್ಯೆ ಇಲ್ಲದೆ ಸಿನಿಮಾ ರಿಲೀಸ್‌ ಆಗಿದೆ. ಪ್ರೇಕ್ಷಕರ ಪ್ರತಿಕ್ರಿಯೆ ಕೂಡ ಚೆನ್ನಾಗಿದೆ. ಆದರೆ ಇಷ್ಟು ದಿನ ಕಷ್ಟಪಟ್ಟು ಹೀರೋ ಆಗಿರುವ ಮಡೆನೂರು ಮನು ತಮ್ಮ ಮೊದಲ ಸಿನಿಮಾದ ಮೊದಲ ಶೋ ನೋಡಲಿಲ್ಲವಲ್ಲ ಎನ್ನುವ ಬೇಸರವಿದೆʼ ಎಂದಿದ್ದಾರೆ. ಸದ್ಯ ಸಂತ್ರಸ್ತ ನಟಿ ದಾಖಲಿಸಿರುವ ಕೇಸ್‌ನಲ್ಲಿ ನಟ ಮನು ಪೊಲೀಸ್‌ ಕಸ್ಟಡಿಯಲ್ಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+