Milana Nagaraj: ತಾಯ್ತನ..ಸಿನಿಮಾ ಎರಡೂ ಸಮಾನ ನನಗೆ- ನಟಿ ಮಿಲನಾ ನಾಗರಾಜ್‌

ಜೀವನದಲ್ಲಿ ಪ್ರಾಮುಖ್ಯತೆಗಳು ಎನ್ನುವುದು ಇರುತ್ತದೆ. ಏನಾದರೂ ಒಂದು ಕೆಲಸ ಮಾಡಿದರೆ ಅದಕ್ಕೆ ನೂರಕ್ಕೆ ನೂರು ಶ್ರದ್ಧೆ ಸಮಯ ಎಲ್ಲವನ್ನೂ ಕೊಡಬೇಕು ಎಂದು ನಾನು ನಂಬುತ್ತೇನೆ. ತಾಯ್ತನವನ್ನು ನಾನು ಎಷ್ಟರ ಮಟ್ಟಿಗೆ ಅನುಭವಿಸುತ್ತಿದ್ದೇನೆ, ಅದೇ ರೀತಿ ನನ್ನ ಸಿನಿಮಾ ಕೂಡ ಸಮಾನವಾಗಿರುತ್ತದೆ. ಇದು ಎಷ್ಟರ ಮಟ್ಟಿಗೆ ಸರಿ ಅನಿಸುತ್ತದೆ ನನಗೆ ಗೊತ್ತಿಲ್ಲ ಎಂದು ನಟಿ ಮಿಲನಾ ನಾಗರಾಜ್‌ ಹೇಳಿದ್ದಾರೆ.

ಅರಾಮ್ ಅರವಿಂದ ಸ್ವಾಮಿ ಚಿತ್ರದ ಪ್ರೋಮೋಷನ್‌ನಲ್ಲಿ ಬ್ಯೂಸಿಯಾಗಿರುವ ಅವರು, ರ್ಯಾಪಿಡ್‌ ರಶ್ಮಿ ಸಂದರ್ಶನದಲ್ಲಿ ಈ ಬಗ್ಗೆ ಸವಿವರವಾಗಿ ಮಾತನಾಡಿದ್ದಾರೆ. ನನ್ನ ಜೀವನದಲ್ಲಿ ಎಲ್ಲವೂ ನನಗೆ ಮುಖ್ಯ. ನಾನೀಗ ತಾಯ್ತನದಲ್ಲಿದ್ದೇನೆ..ಹೀಗಾಗಿ ಇದನ್ನು ಬಿಟ್ಟು ಬೇರೆ ಇಲ್ಲ..ಅಥವಾ ಸಿನಿಮಾ ಮಾಡುತ್ತಿದ್ದೇನೆ ಅದನ್ನು ಬಿಟ್ಟು ಬೇರೆ ಇಲ್ಲ ಎಂದು ನಾನು ಯಾವತ್ತೂ ಅಂದುಕೊಳ್ಳುವುದಿಲ್ಲ ಎಂದರು.

Actress Milana Nagaraj Has Spoken About How She Balanced Motherhood And Career

ನನಗೆ ಯಾವತ್ತೂ ನನ್ನ ಸಿನಿಮಾದಿಂದ ಬ್ರೇಕ್‌ ತೆಗೆದುಕೊಳ್ಳಬೇಕು, ನನಗೆ ಸಾಕಪ್ಪ, ನಾನು ಈಗ ಎಲ್ಲಾ ಮುಗಿಸಿ ಮತ್ತೆ ವಾಪಸ್‌ ಬರಬೇಕು ಅಂತಾ ಎಂದುಕೊಂಡಿಲ್ಲ. ಮೊದಲ ಮೂರು ತಿಂಗಳಲ್ಲಿ ನನ್ನ ಸಿನಿಮಾವೊಂದು ಬಿಡುಗಡೆ ಆಗಬೇಕಿತ್ತು. ಆ ಸಮಯದಲ್ಲಿ ಪ್ರೋಮೋಷನ್‌ಗೆ ನಾನು ಹೋಗಲೇ ಬೇಕಿತ್ತು. ಸಿನಿಮಾವನ್ನು ಪ್ರಮೋಟ್‌ ಮಾಡುವುದು ನನ್ನ ಜವಾಬ್ದಾರಿಯಾಗಿತ್ತು. ಸಿನಿಮಾ ಒಂದು ಬ್ಯುಸಿನೆಸ್‌ ಕೂಡ ಆಗಿರುವುದರಿಂದ ನಮ್ಮ ಕೈಯಲ್ಲಿ ಆದಷ್ಟು ಸಿನಿಮಾವನ್ನು ಜನರಿಗೆ ತಲುಪಿಸಬೇಕು.

ಅದೇ ಸಂದರ್ಭ ಈಗ ಬಂದಿದೆ ಆರಾಮ್‌ ಅರವಿಂದ ಸ್ವಾಮಿ ನಾನು ಗರ್ಭಿಣಿ ಇರುವಾಗಲೇ ಬಿಡುಗಡೆ ಆಗುತ್ತದೆ ಎಂದುಕೊಂಡಿದ್ದೆ. ಆದರೆ ಈಗ ಆಗುತ್ತದೆ. ಜೊತೆಗೆ ಮಗುಗೆ ಐವತ್ತು ದಿನ ಆಗುತ್ತಿದೆ ಹೀಗಾಗಿ ಮನೆಯಿಂದ ಆಚೆ ಹೋಗುತ್ತೀಯಾ ಎನ್ನುವ ಮಾತುಗಳನ್ನು ನಾನು ಬಹಳಷ್ಟು ಕೇಳಿದ್ದೇನೆ. ನನ್ನ ಪ್ರಕಾರ ನಾನೀಗ ಸಿನಿಮಾ ಪ್ರೋಮೋಷನ್‌ಗೆ ಬಂದಿರುವುದು ನನ್ನ ಜವಾಬ್ದಾರಿ, ನನ್ನ ಕೆಲಸ. ನಾನು ಯಾವತ್ತೂ ಕೆಲಸದ ವಿಚಾರದಲ್ಲಿ ಕಾರಣ ಹುಡುಕುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

Actress Milana Nagaraj Has Spoken About How She Balanced Motherhood And Career

ಇನ್ನು ನನ್ನ ಪಾರ್ಟ್ನರ್‌ ಕೃಷ್ಣ ಅವರು ನನ್ನ ಬೆಂಬಲಕ್ಕಿದ್ದಾರೆ. ಈ ಬಗ್ಗೆ ನಾನೇನಾದರೂ ಉತ್ತರ ಕೊಡಬೇಕು ಎನ್ನುವುದಿದ್ದಂರೆ ಕೃಷ್ಣ ಅವರಿಗೆ ಕೊಡಬೇಕು ಜೊತೆಗೆ ನಮ್ಮ ತಂದೆ-ತಾಯಿಗೆ ಉತ್ತರ ಕೊಡಬೇಕು. ಅಂತಿಮವಾಗಿ ಅವರೇ ನನ್ನನ್ನು ಅರ್ಥ ಮಾಡಿಕೊಳ್ಳುತ್ತಿರುವಾಗ..ನಾನು ಇಂತಹ ವಿಚಾರಗಳಿಗೆ ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ ಎಂದು ನಟಿ ಮಿಲನಾ ನಾಗರಾಜ್‌ ಹೇಳಿದ್ದಾರೆ.

ಇನ್ನು ನಟ ಅನೀಶ್ ತೇಜೇಶ್ವರ್ ಹಾಗೂ ಮಿಲನಾ ನಾಗರಾಜ್‌ ನಟನೆಯ ಆರಾಮ್ ಅರವಿಂದ ಸ್ವಾಮಿ ಸಿನಿಮಾ ನಿನ್ನೆ ಅಂದರೆ ನವೆಂಬರ್‌ 22ಕ್ಕೆ ರಾಜ್ಯಾದ್ಯಂತ ಬಿಡುಗಡೆ ಆಗಿದ್ದು ಪ್ರದರ್ಶನ ಕಾಣುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+