Hina Khan: ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರುವ ನಟಿ ಹಿನಾ ಖಾನ್ ಕೂದಲಿಗೆ ಕತ್ತರಿ, ವಿಡಿಯೋ ನೋಡಿ
ಮುಂಬೈ, ಜುಲೈ. 06: ಹಿಂದಿ ಕಿರುತೆರೆ ಮತ್ತು ಬಾಲಿವುಡ್ ನಟಿ ಹಿನಾ ಖಾನ್ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅವರೇ ಘೋಷಿಸಿದ್ದರು. ಚಿಕಿತ್ಸೆಗೆ ಒಳಗಾಗುತ್ತಿರುವ ಅವರು ತನ್ನ ಮೊದಲ ಕಿಮೋಥೆರಪಿ ಸೆಷನ್ ಮುಗಿಸಿ ತಮ್ಮ ಕೂದಲಿಗೆ ಕತ್ತರಿ ಹಾಕಿದ್ದಾರೆ.
ಎಲ್ಲಾ ಅಡೆತಡೆ ಮತ್ತು ಕಷ್ಟಗಳನ್ನು ದಾಟಿ ನಟಿ ಹಿನಾ ಖಾನ್ ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ ನಂತರ ನಟಿ ಇತ್ತೀಚೆಗೆ ತನ್ನ ಮೊದಲ ಕಿಮೋಥೆರಪಿ ಸೆಷನ್‌ಗೆ ಒಳಗಾಗಿದ್ದಾರೆ. ಇದಾದ ಬಳಿಕ ತಮ್ಮ ಸುಂದರ ಕೂದಲಿಗೆ ಕತ್ತರಿ ಹಾಕಿದ್ದು, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕೂದಲು ಉದುರಲು ಆರಂಭ, ಕತ್ತರಿ ಹಾಕಿದ ನಟಿ
ಮೊದಲ ಕಿಮೋಥೆರಪಿ ಸೆಷನ್‌ಗೆ ಒಳಗಾದ ಬಳಿಕ ಹಿನಾ ಖಾನ್ ತನ್ನ ಕೂದಲನ್ನು ಕತ್ತರಿಸಲು ನಿರ್ಧರಿಸಿದ್ದಾರೆ. ಹೊಸ ವೀಡಿಯೊದಲ್ಲಿ, ರೇಡಿಯೇಷನ್‌ನಿಂದ ಕೂದಲು ಉದುರಲು ಪ್ರಾರಂಭವಾಗುವ ಮೊದಲು ತನ್ನ ಕೂದಲನ್ನು ಕತ್ತರಿಸಲು ತಾನು ಹೇಗೆ ನಿರ್ಧರಿಸಿದ್ದೇನೆ ಎಂಬುದನ್ನು ನಟಿ ಹಂಚಿಕೊಂಡಿದ್ದಾರೆ.
ಕೂದಲು ಕತ್ತರಿಸುತ್ತಿರುವ ವೀಡಿಯೊವನ್ನು ಹಂಚಿಕೊಂಡಿರುವ ಅವರು, "ಕಾಶ್ಮೀರಿಯಲ್ಲಿ ನನ್ನ ತಾಯಿಯ ಅಳುವ ಧ್ವನಿಯನ್ನು ನೀವು ಕೇಳಬಹುದು. ಅವರು ಊಹಿಸಲು ಕೂಡ ಧೈರ್ಯವಿಲ್ಲದ ಘಟನೆಯನ್ನು ನೋಡಲು ತಮ್ಮನ್ನು ತಾವು ಸಿದ್ಧಪಡಿಸಿಕೊಂಡಿದ್ದಾರೆ. ಹೃದಯವಿದ್ರಾವಕ ಎಮೋಷನ್‌ಗಳನ್ನು ನಿರ್ವಹಿಸಲು ನಮ್ಮೆಲ್ಲರಿಗೂ ಒಂದೇ ರೀತಿಯ ಸಾಧನಗಳಿಲ್ಲ" ಎಂದಿದ್ದಾರೆ.

"ಎಲ್ಲಾ ಸುಂದರ ಜನರಿಗೆ, ವಿಶೇಷವಾಗಿ ಅದೇ ಯುದ್ಧದಲ್ಲಿ ಹೋರಾಡುತ್ತಿರುವ ಮಹಿಳೆಯರಿಗೆ, ಇದು ಕಷ್ಟ ಎಂದು ನನಗೆ ತಿಳಿದಿದೆ. ನಮ್ಮಲ್ಲಿ ಹೆಚ್ಚಿನವರಿಗೆ ಗೊತ್ತು, ನಮ್ಮ ಕೂದಲು ನಾವು ಎಂದಿಗೂ ತೆಗೆಯದ ಕಿರೀಟವಾಗಿದೆ. ಆದರೆ ನೀವು ನಿಮ್ಮ ಕೂದಲನ್ನು ಕಳೆದುಕೊಳ್ಳುವ ಕಠಿಣವಾದ ಪರಿಸ್ಥಿತಿಯಲ್ಲಿದ್ದರೇ, ನಿಮ್ಮ ಹೆಮ್ಮೆ, ನಿಮ್ಮ ಕಿರೀಟವನ್ನು ಕೂಡ ಕಳೆದುಕೊಳ್ಳಬೇಕಾಗುತ್ತದೆ. ನೀವು ಯುದ್ಧವನ್ನು ಗೆಲ್ಲಲು ಬಯಸಿದರೆ ನೀವು ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ" ಎಂದು ತಿಳಿಸಿದ್ದಾರೆ.
"ನಾನು ಯುದ್ಧವನ್ನು ಗೆಲ್ಲಲು ಆಯ್ಕೆ ಮಾಡುತ್ತೇನೆ. ಈ ಯುದ್ಧವನ್ನು ಗೆಲ್ಲಲು ಸಾಧ್ಯವಿರುವ ಎಲ್ಲ ಅವಕಾಶಗಳನ್ನು ನಾನು ಬಳಸಿಕೊಳ್ಳಲು ನಿರ್ಧರಿಸಿದೆ. ನನ್ನ ಸುಂದರವಾದ ಕೂದಲು ಉದುರಲು ಪ್ರಾರಂಭಿಸುವ ಮೊದಲು ಅದನ್ನು ಬಿಡಲು ನಾನು ಆರಿಸಿಕೊಳ್ಳುತ್ತೇನೆ. ಏಕೆಂದರೆ ನನ್ನ ನಿಜವಾದ ಕಿರೀಟ ನನ್ನ ಧೈರ್ಯ, ನನ್ನ ಶಕ್ತಿ ಮತ್ತು ನನ್ನ ಬಗ್ಗೆ ನಾನು ಹೊಂದಿರುವ ಪ್ರೀತಿ ಎಂದು ನಾನು ಅರಿತುಕೊಂಡೆ. ಮತ್ತೆ ಈ ಹಂತಕ್ಕೆ ಉತ್ತಮವಾದ ವಿಗ್ ಮಾಡಲು ನನ್ನ ಸ್ವಂತ ಕೂದಲನ್ನು ಬಳಸಲು ನಿರ್ಧರಿಸಿದ್ದೇನೆ. ಕೂದಲು ಮತ್ತೆ ಬೆಳೆಯುತ್ತದೆ, ಹುಬ್ಬುಗಳು ಹಿಂತಿರುಗುತ್ತವೆ, ಚರ್ಮವು ಮಸುಕಾಗುತ್ತದೆ, ಆದರೆ ಆತ್ಮ ಸಂಪೂರ್ಣವಾಗಿ ಉಳಿಯಬೇಕು" ಎಂದು ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ.












Click it and Unblock the Notifications