Deepika Padukone: ಗರ್ಭಿಣಿ ದೀಪಿಕಾ ಪಡುಕೋಣೆ ಧರಿಸಿದ್ದ ಡ್ರೆಸ್ ಮಾರಾಟವಾಗಿದ್ದು ಹತ್ತು, ಇಪ್ಪತ್ತು ಸಾವಿರಕ್ಕಲ್ಲ!
ಕನ್ನಡ ಸಿನಿಮಾದಿಂದ ತಮ್ಮ ವೃತ್ತಿಜೀವನ ಆರಂಭಿಸಿ ಇಂದು ಬಾಲಿವುಡ್, ಹಾಲಿವುಡ್‌ನಲ್ಲಿ ಮಿಂಚುತ್ತಿರುವ ನಟಿ ದೀಪಿಕಾ ಪಡುಕೋಣೆ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ನಟ, ಪತಿ ರಣವೀರ್ ಸಿಂಗ್ ಅವರೊಂದಿಗೆ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಬಂದಾಗ ಅವರ ಬೇಬಿ ಬಂಪ್ ಪೋಟೋ ವೈರಲ್ ಆಗಿತ್ತು.
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಬಗ್ಗೆ ಫೆಬ್ರವರಿಯಲ್ಲಿ ಘೋಷಿಸಿದ್ದರು. ತಾವು ಸೆಪ್ಟೆಂಬರ್‌ಗೆ ತಂದೆ- ತಾಯಿ ಆಗುವುದಾಗಿ ತಿಳಿಸಿದ್ದರು. ಇದಾದ ನಂತರ ದೀಪಿಕಾ ಪಡುಕೋಣೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ಇದನ್ನು ಕಂಡು ಹಲವು ಮಂದಿ ಅವರು ಬಾಡಿಗೆ ತಾಯ್ತನದ ಮೂಲಕ ಪೋಸಕರಾಗುತ್ತಿದ್ದಾರೆ ಎಂದು ಸುದ್ದಿ ಹಬ್ಬಿಸಿದ್ದರು. ಇದಕ್ಕೆ ನಟಿ ಮುಂಬೈ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡು ಉತ್ತರ ನೀಡಿದ್ದಾರೆ.

ತಾನು ಧರಿಸಿದ್ದ ಡ್ರೆಸ್ ಮಾರಾಟ ಮಾಡಿದ ದೀಪಿಕಾ
ಇತ್ತೀಚೆಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮುಂಬೈನಲ್ಲಿ ತಮ್ಮ ಸ್ಕಿನ್‌ಕೇರ್ ಬ್ರ್ಯಾಂಡ್ 82°E ಕಾರ್ಯಕ್ರಮದಲ್ಲಿ ಸುಂದರವಾದ ಹಳದಿ ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದರು. ಗರ್ಭಿಣಿಯರು ಧರಿಸಬಹುದಾದ ಸಡಿಲ ಮತ್ತು ಕಂಫರ್ಟಬಲ್ ಡ್ರೆಸ್ ಇದಾಗಿತ್ತು. ಇದರಲ್ಲಿ ತುಂಬಾ ಸುಂದರವಾಗಿ ಕಾಣಿಸುತ್ತಿದ್ದರು ದೀಪಿಕಾ.
ನಟಿ ದೀಪಿಕಾ ಪಡುಕೋಣೆ ಧರಿಸಿದ್ದ ಹಳದಿ ಬಣ್ಣದ ಗೌನ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಮಾರಾಟಕ್ಕೆ ಇಟ್ಟಿದ್ದರು. ಈ ಬಟ್ಟೆ ಮಾರಾಟದಿಂದ ಹಣವನ್ನು ಚಾರಿಟಿಗೆ ನೀಡುವುದಾಗಿ ತಿಳಿಸಿದ್ದರು. ಅವರು ಹಾಗೆ ಘೋಷಿಸಿದ ಕೆಲವೆ ನಿಮಿಷಗಳಲ್ಲಿ ಈ ಬಟ್ಟೆ ಮಾರಾಟವಾಗಿದೆ. ಅದು ಕೂಡ ಹತ್ತು, ಇಪ್ಪತ್ತು ಸಾವಿರಕ್ಕಲ್ಲ ಬರೋಬ್ಬರಿ 34,000 ರೂಪಾಯಿಗೆ ಮಾರಾಟ ಮಾಡಿದ್ದಾರೆ.
ದೀಪಿಕಾ ಪಡುಕೋಣೆ ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಗೌನ್ ಮಾರಾಟವಾಗಿರುವ ಬಗ್ಗೆ ರೀಲ್ ಅನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಬಟ್ಟೆ ತೆಗೆದುಕೊಳ್ಳಲು 'ಕ್ಲೋಸೆಟ್' ಗೆ ಲಿಂಕ್ ಅನ್ನು ಶೇರ್ ಮಾಡಿದ್ದಾರೆ. ಅಲ್ಲಿ ಉಡುಪಿನ ಬೆಲೆಯನ್ನು ಕಾಣಬಹುದು. 20 ನಿಮಿಷಗಳಲ್ಲಿ ಗೌನ್ ಮಾರಾಟವಾಗಿದೆ ಎಂದು ಆಕೆಯ ತಂಡ ಹೇಳಿಕೊಂಡಿದೆ.
ಟ್ರೋಲ್‌ಗಳ ಬಾಯಿ ಮುಚ್ಚಿಸಿದ ರಣವೀರ್ ಸಿಂಗ್
ಕೇವಲ ಅಭಿಮಾನಿಗಳಷ್ಟೇ ಅಲ್ಲ, ರಣವೀರ್ ಸಿಂಗ್ ಕೂಡ ದೀಪಿಕಾ ಪಡುಕೋಣೆ ಅವರನ್ನು ಈ ಡ್ರೆಸ್‌ನಲ್ಲಿ ಮೆಚ್ಚಿಕೊಂಡಿದ್ದಾರೆ. ಜೊತೆಗೆ ಕಾಮೆಂಟ್ ಮಾಡುವ ಮೂಲಕ ದೀಪಿಕಾ ಪಡುಕೋಣೆ ಅವರ ಪ್ರೆಗ್ನೆನ್ಸಿ ಬಗ್ಗೆ ಟ್ರೋಲ್ ಮಾಡುತ್ತಿದ್ದವರ ಬಾಯಿ ಮುಚ್ಚಿಸಿದ್ದಾರೆ. ಬುರಿ ನಜರ್ ವಾಲೆ, ತೇರಾ ಮೂನ್ಹ್ ಕಾಲಾ ಎಂದು ಹಿಂದಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
ಇನ್ನು, ದೀಪಿಕಾ ಪಡುಕೋಣೆ ಅವರು ಈಗಾಗಲೇ ಪ್ರಭಾಸ್ ಜೊತೆ ತೆರೆ ಹಂಚಿಕೊಂಡಿರುವ 'ಕಲ್ಕಿ 2898 ಎಡಿ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಜೂನ್ 27ರಂದು ಈ ಚಿತ್ರ ರಿಲೀಸ್ ಆಗಲಿದೆ. ಅದಲ್ಲದೇ, 'ಸಿಂಗಂ ಅಗೇನ್'' ಸಿನಿಮಾದಲ್ಲಿ ಲೇಡಿ ಸಿಂಗಂ ಆಗಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ.












Click it and Unblock the Notifications