'ರಿಯಲ್ ಆಗಿರೋರನ್ನು ನೆಗೆಟಿವ್ ಆಗಿ ತೋರಿಸ್ತಾರೆ, ರಜತ್ ಬಿಗ್ ಬಾಸ್‌ಗೆ ಹೋಗಬಾರದಿತ್ತು'
ಬಿಗ್ ಬಾಸ್ ಕನ್ನಡ ಸೀಜನ್ 11 ಮನೆಗೆ ಕನ್ನಡ ಕಿರುತೆರೆಯ ರಿಯಾಲಿಟಿ ಶೋಗಳ ಮೂಲಕ ಜನಪ್ರಿಯತೆ ಪಡೆದಿರುವ ರಜತ್ ಬುಜ್ಜಿ ವಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದಿದ್ದಾರೆ. ಕಳೆದ ವಾರ ಅಗ್ರೇಸಿವ್ ಆಗಿ ಆಟವಾಡಿದ ರಜತ್ ಆಟಗಳ ಮಧ್ಯ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಪ್ರತಿಯೊಂದು ವಿಚಾರಕ್ಕೂ ಮನೆಯ ಇತರ ಸ್ಪರ್ಧಿಗಳ ಜೊತೆ ಜಗಳವಾಡಿದ್ದಾರೆ. ಆದರೆ ವೀಕೆಂಡ್ ಸಂಚಿಕೆಯ ಬಳಿಕ ಕೊಂಚ ಈ ರೀತಿಯ ವರ್ತನೆಯನ್ನು ಕಡಿಮೆ ಮಾಡಿದ್ದಾರೆ.
ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ಒಂದು ವಾರ ಕಳೆದಿರುವ ರಜತ್ ಆ ಮನೆಯಲ್ಲಿ ರಿಯಲ್ ಆಗಿದ್ದಾರಾ..? ಇಲ್ಲ ಮುಖವಾಡ ಧರಿಸಿದ್ದಾರಾ..? ಎನ್ನುವ ಪ್ರಶ್ನೆ ಪ್ರೇಕ್ಷಕರಲ್ಲಿದೆ ಈ ಪ್ರಶ್ನೆಗೆ ರಜತ್ ಆಪ್ತ ವಲಯದ ನಟಿ ಚಿತ್ರಾಲ್ ರಂಗಸ್ವಾಮಿ ಮಾತನಾಡಿದ್ದಾರೆ.

ನ್ಯಾಷನಲ್ ಟಿವಿ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿದ ಅವರು, 'ನೋಡಿದವರೆಲ್ಲರೂ ರಜತ್ ಜೋರಾಗಿ ಮಾತನಾಡುತ್ತಾರೆ ಎಂದುಕೊಳ್ಳುತ್ತಿದ್ದಾರೆ. ನನಗೆ ಜನರ ಆಲೋಚನೆಯೇ ಅರ್ಥ ಆಗುತ್ತಿಲ್ಲ, ಬಿಗ್ ಬಾಸ್ ಒಂದು ರಿಯಾಲಿಟಿ ಶೋ, ಸ್ಪರ್ಧಿಗಳು ಹೊರಗಿರುವಂತೆ ಒಳಗಿದ್ದರೆ ನೆಗೆಟಿವ್ ಆಗಿ ತಗೊಳ್ಳುತ್ತಿದ್ದಾರೆ ಯಾಕೆ. ರಜತ್ ಹೊರಗಡೆನೂ ಹಾಗೆ ಇರುವುದು. ಅವರ ಮಾತಿನ ಶೈಲಿಯೇ ಹಾಗೆ, ಕಠಿಣವಾಗಿಯೇ ಮಾತನಾಡುತ್ತಾರೆ' ಎಂದರು.
'ರಿಯಾಲಿಟಿ ಶೋನಲ್ಲಿ ರಿಯಲ್ ಆಗಿರುವವರನ್ನು ಯಾಕೆ ನೆಗೆಟಿವ್ ಆಗಿ ತೆಗೆದುಕೊಳ್ಳುತ್ತೀರಾ..? ಜನರು ನೆಗೆಟಿವ್ ಆಗಿ ತೆಗೆದುಕೊಂಡಾಗ ಗೆಲ್ಲಿಸುವುದೂ ಇಲ್ಲ. ಫೇಕ್ ಆಗಿ ಇರುವವರು ಯಾರನ್ನೋ ಗೆಲ್ಲಿಸುತ್ತಾರೆ. ಹೀಗಾದರೆ ಅದು ರಿಯಾಲಿಟಿ ಶೋ ಹೇಗಾಗುತ್ತದೆ' ಎಂದು ನಟಿ ಚಿತ್ರಾಲ್ ರಂಗಸ್ವಾಮಿ ಪ್ರಶ್ನಿಸಿದ್ದಾರೆ.

'ರಜತ್ ಹಾಗೇ ಇರದೇ ನಾಟಕ ಮಾಡಿಕೊಂಡು ನಯ, ವಿನಯದಿಂದ ಮುಖವಾಡ ಹಾಕಿಕೊಂಡು ಮಾತನಾಡಬಹುದಲ್ಲಾ? ಅಂದಹಾಗೆ ವಿನಯ್‌ಗೂ ಹಾಗೇ ಆಯ್ತು. ವಿನಯ್ ಅವರನ್ನು ತುಂಬಾ ನೆಗೆಟಿವ್ ಆಗಿ ತೋರಿಸಿದರು. ನಾನು ನೋಡಿರುವ ಪ್ರಕಾರ ಆ ಶೋನಲ್ಲಿ ನೇರವಾಗಿ ಯಾರು ಮಾತನಾಡುತ್ತಾರೆ. ರಿಯಲ್ ಆಗಿ ಯಾರು ಇರುತ್ತಾರೆ ಅವರನ್ನು ನೆಗೆಟಿವ್ ಆಗಿ ಬಿಂಬಿಸುತ್ತಾರೆ. ಅವರು ಹೇಗೆ ತೋರಿಸುತ್ತಾರೆ ಅಂದರೆ ಜನರ ತಲೆಯಲ್ಲಿ ಹಾಗೇ ಕುಳಿತುಕೊಳ್ಳುತ್ತದೆ' ಎಂದರು.
'ರಜತ್ ಆ ರೀತಿ ಮಾತನಾಡುತ್ತಾನೆ ಅಂದರೆ ರಿಯಲ್ ಆಗಿ ಇದ್ದಾನೆ ಅಂತಾ ಅರ್ಥ. ನೀವು ಖುಷಿ ಪಡಬೇಕು ರಿಯಾಲಿಟಿ ಶೋನಲ್ಲಿ ಒಬ್ಬ ಸ್ಪರ್ಧಿ ರಿಯಲ್ ಆಗಿ ಇದ್ದಾನೆ ಅಂತಾ. ಹಾಗಿದ್ದರೆ ಮುಖವಾಡ ಹಾಕಿಕೊಂಡು ಇರಬೇಕಾ ಗೊತ್ತಾಗುತ್ತಿಲ್ಲ. ರಜತ್ ಬುಜ್ಜಿ ಹೋಗಿರುವುದು ನನಗೆ ಹೇಗೆ ಅನಿಸಿತು ಅಂದರೆ ವೈಲ್ಡ್ ಕಾರ್ಡ್ ಹೋದವರು ಇತಿಹಾಸನೇ ಇಲ್ಲ ನಮ್ಮ ಕನ್ನಡದಲ್ಲಿ ಹೀಗಾಗಿ ರಜತ್ ಬುಜ್ಜಿ ಹೋಗ ಬಾರದಿತ್ತು ಎನ್ನುವುದು ನನ್ನ ಒಂದು ಅನಿಸಿಕೆ' ಎಂದು ಚಿತ್ರಾಲ್ ರಂಗಸ್ವಾಮಿ ಹೇಳಿದ್ದಾರೆ.












Click it and Unblock the Notifications