Sudeep: ಬಿಗ್‌ ಬಾಸ್‌ಗೆ ಸುದೀಪ್‌ ಗುಡ್‌ಬೈ: ಕೇಳಿ ಖುಷಿ ಆಯ್ತು ಎಂದ ನಟಿ

ಬಿಗ್‌ ಬಾಸ್‌ ಬಗ್ಗೆ ಸಾಮಾನ್ಯವಾಗಿ ನಮ್ಮ ಅಭಿಪ್ರಾಯ ಹೇಳಲು ಬರುವುದೇ ಇಲ್ಲ. ಯಾಕೆಂದರೆ ಕೆಲವರು ನೀವು ಹೋಗಿಲ್ಲ ಅಂತಾ ಹೊಟ್ಟೆ ಉರಿಗೆ ಅದರ ಬಗ್ಗೆ ಮಾತನಾಡುತ್ತೀರಿ ಎನ್ನುತ್ತಾರೆ. ಖಂಡಿತಾವಾಗಿಯೂ ನನಗೆ ಯಾವುದೇ ರೀತಿಯ ಹೊಟ್ಟೆ ಉರಿ ಇಲ್ಲ. ಹೋಗಿಲ್ಲ ಅಂತಾ ಹೊಟ್ಟೆ ಉರಿದುಕೊಳ್ಳುವಂತಹ ಕಾರ್ಯಕ್ರಮ ಅಲ್ಲಾ ಅದು ಎಂದು ಬಿಗ್‌ ಬಾಸ್‌ ಶೋ ಬಗ್ಗೆ ನಟಿ ಚಿತ್ರಾಲ್‌ ರಂಗಸ್ವಾಮಿ ನೇರವಾಗಿ ಮಾತನಾಡಿದ್ದಾರೆ.

ನ್ಯಾಷನಲ್ ಟಿವಿ ಸಂದರ್ಶನದಲ್ಲಿ ಮಾತನಾಡಿದ ಅವರು, ಜನ ಹೇಗೆ ಆಗಿದ್ದಾರೆ ಅಂದರೆ ಕರ್ನಾಟಕದಿಂದ ಒಲಿಂಪಿಕ್ಸ್‌ಗೆ ಯಾರು ಹೋಗಿದ್ದಾರೆ ಎನ್ನುವುದು ಗೊತ್ತಿಲ್ಲ. ಆದರೆ ಬಿಗ್‌ ಬಾಸ್‌ ಸ್ಪರ್ಧಿಗಳು ಯಾರು..? ವಲ್ಡ್‌ ಕಾರ್ಡ್‌ ಎಂಟ್ರಿ ಯಾರು ಹೋದರು ಅದೆಲ್ಲಾ ಗೊತ್ತಿದೆ. ಯುವ ಜನತೆ ಆ ರೀತಿ ಆಗಿದ್ದಾರೆ. ನನಗೆ ಅದನ್ನು ಮೀರಿದ ಮೆಚ್ಯುರಿಟಿ ಇದೆ. ಹೀಗಾಗಿ ನಾನು ಅದರ ಬಗ್ಗೆ ಮಾತನಾಡಲು ಇಷ್ಟಪಡಲ್ಲ ಎಂದರು.

Actress Chitral Rangaswamy Has Spoken About Kiccha Sudeep s Decision On Bigg Boss

ಬಿಗ್‌ ಬಾಸ್‌ಗೆ ನಾನು ಹೋಗದೇ ಇರುವುದೇ ಒಳ್ಳೆದಾಯಿತು. ಯಾಕೆಂದರೆ ಅಲ್ಲಿ ಸುಮ್ಮ ಸುಮ್ಮನೆ ಜಗಳ ಆಡುವವರು ಬೇಕು ಆದರೆ ನಾನು ರಿಯಲ್‌ ಆಗಿ ಇರುತ್ತೇನೆ. ನಾನು ಹೋಗದೇ ಇರುವುದೇ ಒಳ್ಳೆದಾಯಿತು ಯಾಕೆ ಎಂದರೆ ನನ್ನ ವ್ಯಕ್ತಿತ್ವವನ್ನು ಯಾರೋ ಎಡಿಟರ್‌ ಕೈಯಲ್ಲಿ ಕೊಟ್ಟುಬಿಟ್ಟು ಗೊಂಬೆಯಂತಾಗಲು ನನಗೆ ಇಷ್ಟ ಇಲ್ಲ ಎಂದರು.

Actress Chitral Rangaswamy Has Spoken About Kiccha Sudeep s Decision On Bigg Boss

ಇನ್ನು ನಟ ಕಿಚ್ಚ ಸುದೀಪ್‌ ಬಿಗ್‌ ಬಾಸ್‌ ಸೀಜನ್‌ ಹನ್ನೊಂದರ ನಂತರ ಮುಂದಿನ ಸೀಜನ್‌ಗಳನ್ನು ನಡೆಸಿಕೊಡುವುದಿಲ್ಲ ಎಂದು ನಿರ್ಧರಿಸಿರುವ ಬಗ್ಗೆ ಮಾತನಾಡಿದ ಚಿತ್ರಾಲ್‌, ನನಗೆ ಈ ವಿಷಯ ಕೇಳಿ ತುಂಬಾ ಖುಷಿಯಾಯಿತು. ಯಾಕೆಂದರೆ ಇಂತಹ ಒಂದು ರಿಯಾಲಿಟಿ ಇಲ್ಲದೇ ಇರುವ ಶೋವನ್ನು ಅಂತಹ ತೂಕ ಇರುವಂತಹ ವ್ಯಕ್ತಿ ಹೋಸ್ಟ್‌ ಮಾಡಬಾರದು. ಸಂಪೂರ್ಣ ಶೋ ಸುದೀಪ್ ಅವರನ್ನು ಅವಲಂಬಿಸಿದೆ. ಸುದೀಪ್‌ ಸರ್‌ಗಾಗಿಯೇ ಎಷ್ಟೋ ಜನ ಶೋ ನೋಡುತ್ತಿದ್ದಾರೆ.

Actress Chitral Rangaswamy Has Spoken About Kiccha Sudeep s Decision On Bigg Boss

ಸುದೀಪ್‌ ಸರ್‌ ಒಳ್ಳೆ ಶೋಗಳನ್ನು ಪ್ರಚಾರ ಮಾಡಬೇಕು. ಇದು ಕೆಟ್ಟ ಶೋ ಅಂತಾ ನಾನು ಹೇಳುತ್ತಿಲ್ಲ. ಆದರೆ ಮಾನಸಿಕವಾದ ಭಾವನೆಗಳ ಜೊತೆ ಆಟವಾಡುವ ಶೋ ಇದು. ಇಂತಹ ಒಂದು ಶೋ ಅವರಿಗೆ ಬೇಡ. ಹೀಗಾಗಿ ಅವರು ಮುಂದಿನ ಸೀಜನ್‌ಗಳನ್ನು ನಡೆಸಿಕೊಡುವುದಿಲ್ಲ ಅಂತಾ ಹೇಳಿರುವುದು ಕೇಳಿ ನನಗೆ ಖುಷಿ ಆಯ್ತು ಎಂದು ನಟಿ ಚಿತ್ರಾಲ್‌ ರಂಗಸ್ವಾಮಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+