Bigg Boss: 'ಬಿಗ್ ಬಾಸ್ ಕನ್ನಡ ಕಾರ್ಯಕ್ರಮದ ಬಂಡವಾಳವೇ ಇದು'
ಬಿಗ್ ಬಾಸ್ ಶೋನಲ್ಲಿ ಎಲ್ಲವನ್ನೂ ಎಡಿಟಿಂಗ್ ಮಾಡಿ ತೋರಿಸುತ್ತಾರೆ. ಜನರ ದುರ್ಬಲ ಮನಸ್ಸುಅನ್ನು ಅವರು ಅವರ ಟಿಆರ್‌ಪಿಗಾಗಿ ಬಳಸಿಕೊಳ್ಳುತ್ತಿದ್ದಾರೆ. ಜೊತೆಗೆ ಒಳಗೆ ಇರುವವರ ಭಾವನೆಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಒಳಗೆ ಇರುವವರು ಹೇಗೆ ಇರುತ್ತಾರೆ ಹಾಗೇ ಇರುತ್ತಾರೆ. ಆದರೆ ಇವರು ತೋರಿಸುವ ರೀತಿ ಈ ರೀತಿಯಾಗಿರುತ್ತದೆ ಎಂದು ನಟಿ ಚಿತ್ರಾಲ್ ರಂಗಸ್ವಾಮಿ ಬಿಗ್ ಬಾಸ್ ಕನ್ನಡ ಕಾರ್ಯಕ್ರಮದ ಅಸಲಿ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.
ನ್ಯಾಷನಲ್ ಟಿವಿ ಜೊತೆ ಮಾತನಾಡಿದ ಅವರು, ಬೆಳ್ಳಗೆಯಿಂದ ಸಂಜೆ ತನಕ ಒಂದು ಮನುಷ್ಯ ಹೇಗೆ ಇರುತ್ತಾನೋ ಹಾಗೇ ಇರುತ್ತಾನಾ..? ಸಂಜೆ ಅಷ್ಟರಲ್ಲಿ ಸುಸ್ತಾಗಿರುತ್ತದೆ, ಒತ್ತಡ ಆಗುತ್ತಿರುತ್ತದೆ ಹೀಗಾಗಿ ಸಿಟ್ಟಲ್ಲಿ ಮಾತನಾಡಬಹುದು. ಬರೀ ಸಿಟ್ಟಲ್ಲಿ ಮಾತನಾಡಿರುವುದನ್ನು ಮಾತ್ರ ತೋರಿಸಿ, ಒಳ್ಳೆ ರೀತಿ ಇರುವುದನ್ನು ತೀರಿಸದೇ ಇದ್ದಾಗ ಜನ ಕೆಟ್ಟವರು ಎಂದುಕೊಳ್ಳುತ್ತಾರೆ. ಜನರ ವೀಕ್ ಮೈಂಡ್ ಸೆಟ್‌ಯೇ ಬಿಗ್ ಬಾಸ್‌ಗೆ ಬಂಡವಾಳ ಎಂದು ಆರೋಪಿಸಿದ್ದಾರೆ.

ಇನ್ನು ಕಳೆದ ಸೀಜನ್ ಬಿಗ್ ಬಾಸ್‌ನಲ್ಲಿ ಚಿತ್ರಾಲ್ ಅವರನ್ನು ಗ್ರಾಂಡ್ ಓಪನಿಂಗ್‌ಗೆ ಕರೆದು ವಾಪಸ್ ಕಳುಹಿಸಲಾಗಿತ್ತು. ಹೀಗಾಗಿ ಈ ಬಾರಿ ಮತ್ತೆ ಕರೆಯಬಹುದಿತ್ತಲ್ಲಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಚಿತ್ರಾಲ್, ಅದರ ಒಳಗಿರುವ ತಿರುಳೆಲ್ಲಾ ಗೊತ್ತಾದ ಮೇಲೆ ಸ್ವಲ್ಪ ಜಾಸ್ತಿ ಪ್ರಬುದ್ಧತೆ ಬಂದಿದೆ ನನಗೆ. ಅಲ್ಲಿಗೆ ನಾವು ಸೂಕ್ತರಲ್ಲ. ಬಿಗ್ ಬಾಸ್ ಎನ್ನುವ ವೇದಿಕೆಗೆ ನಾನು ಸೂಕ್ತಅಲ್ಲ. ಯಾಕೆಂದರೆ ಅಲ್ಲಿಗೆ ಜಾಸ್ತಿ ಗಿಮಿಕ್ ಮಾಡವವರು ಬೇಕು. ತುಂಬಾ ನಾಟಕ ಆಡುವವರು ಬೇಕು. ಜೊತೆಗೆ ಜೋಪಾನವಾಗಿ ಆಡುವವರು ಬೇಕು ಎಂದರು.
ರಿಯಲ್ ಆಗಿ ಮಾತನಾಡುವವರು ಅದರ ಜೊಳಗೆ ಹೋದರೆ ಅಲ್ಲಿ ಗೊಂಬೆಗಳಾಗುತ್ತಾರೆ. ನಾನು ಹೋಗಿದ್ದರೂ ಕೂಡ ಅದೇ ಆಗುತ್ತಿತ್ತು. ಎಷ್ಟೋ ಜನ ಕಮೆಂಟ್ ಅಲ್ಲಿ ಹಾಕುತ್ತಾರೆ ನೀವು ಹೋಗಲಿಲ್ಲ ಅಂತಾ ಹೊಟ್ಟೆ ಉರಿ ಎಂದು. ನನಗೆ ಖಂಡಿತಾ ಯಾವುದೇ ಹೊಟ್ಟೆಉರಿ ಇಲ್ಲ. ಹೊಟ್ಟೆಉರಿ ಪಟ್ಟುಕೊಳ್ಳುವಂತಹ ಶೋ ಅಲ್ಲ ಅದು. ಒಲಿಂಪಿಕ್ಸ್ ಅಂತೂ ಅಲ್ಲ ಎಂದು ಬಿಗ್ ಬಾಸ್‌ಗೆ ಹೋಗುವುದೇ ದೊಡ್ಡ ಸಾಧನೆ ಅಲ್ಲ ಎಂದು ಪರೋಕ್ಷವಾಗಿ ಹೇಳಿದರು.

ಇನ್ನು ನಟ ಕಿಚ್ಚ ಸುದೀಪ್ ಬಿಗ್ ಬಾಸ್ ಸೀಜನ್ ಹನ್ನೊಂದರ ನಂತರ ಮುಂದಿನ ಸೀಜನ್‌ಗಳನ್ನು ನಡೆಸಿಕೊಡುವುದಿಲ್ಲ ಎಂದು ನಿರ್ಧರಿಸಿರುವ ಬಗ್ಗೆ ಮಾತನಾಡಿದ ಚಿತ್ರಾಲ್, ನನಗೆ ಈ ವಿಷಯ ಕೇಳಿ ತುಂಬಾ ಖುಷಿಯಾಯಿತು. ಯಾಕೆಂದರೆ ಇಂತಹ ಒಂದು ರಿಯಾಲಿಟಿ ಇಲ್ಲದೇ ಇರುವ ಶೋವನ್ನು ಅಂತಹ ತೂಕ ಇರುವಂತಹ ವ್ಯಕ್ತಿ ಹೋಸ್ಟ್ ಮಾಡಬಾರದು. ಸಂಪೂರ್ಣ ಶೋ ಸುದೀಪ್ ಅವರನ್ನು ಅವಲಂಬಿಸಿದೆ. ಸುದೀಪ್ ಸರ್‌ಗಾಗಿಯೇ ಎಷ್ಟೋ ಜನ ಶೋ ನೋಡುತ್ತಿದ್ದಾರೆ. ಸುದೀಪ್ ಸರ್ ಒಳ್ಳೆ ಶೋಗಳನ್ನು ಪ್ರಚಾರ ಮಾಡಬೇಕು. ಇದು ಕೆಟ್ಟ ಶೋ ಅಂತಾ ನಾನು ಹೇಳುತ್ತಿಲ್ಲ. ಆದರೆ ಮಾನಸಿಕವಾದ ಭಾವನೆಗಳ ಜೊತೆ ಆಟವಾಡುವ ಶೋ ಇದು. ಇಂತಹ ಒಂದು ಶೋ ಅವರಿಗೆ ಬೇಡ. ಹೀಗಾಗಿ ಅವರು ಮುಂದಿನ ಸೀಜನ್‌ಗಳನ್ನು ನಡೆಸಿಕೊಡುವುದಿಲ್ಲ ಅಂತಾ ಹೇಳಿರುವುದು ಕೇಳಿ ನನಗೆ ಖುಷಿ ಆಯ್ತು ಎಂದರು.












Click it and Unblock the Notifications