ಮದುವೆಯಾಗದೆ ಇಬ್ಬರು ಮಕ್ಕಳಿಗೆ ತಾಯಿಯಾದ ನಟಿ ಭಾವನಾ: ಕನ್ನಡಿಗರು ಹೇಳಿದ್ದೇನು ?
ಕನ್ನಡದ ನಟಿ ಹಾಗೂ ರಾಜಕಾರಣ ನಟಿ ಭಾವನಾ ರಾಮಣ್ಣ ಅವರು ಮದುವೆಯಾಗದೆ ತಾಯಿಯಾಗುತ್ತಿದ್ದಾರೆ. ಐವಿಎಫ್ ತಂತ್ರಜ್ಞಾನದ ಮೂಲಕ ಅವರು ಅವಳಿ ಮಕ್ಕಳಿಗೆ ತಾಯಿಯಾಗಿದ್ದಾರೆ. ಅವರಿಗ 6 ತಿಂಗಳ ಗರ್ಭಿಣಿ. ಈ ವಿಷಯವನ್ನು ಅವರೇ ಅವರ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಸುದೀರ್ಘವಾಗಿ ಈ ವಿಚಾರದ ಬಗ್ಗೆ ಬರೆದುಕೊಂಡಿದ್ದಾರೆ. ಒಂದು ಹೊಸ ಅಧ್ಯಾಯ, ಒಂದು ಹೊಸ ಲಯ ಎಂದು ಅವರು ಬರೆದುಕೊಂಡಿದ್ದಾರೆ. ಭಾವನಾ ಅವರ ನಿರ್ಧಾರವನ್ನು ವಿಶಾಲ ಹೃದಯದ ಕನ್ನಡಿಗರು ಸ್ವಾಗತಿಸಿದ್ದಾರೆ. ಇದರೊಂದಿಗೆ ಸಹಜವಾಗಿಯೇ ಪರ - ವಿರೋಧ, ವಿಮರ್ಶೆಯೂ ವ್ಯಕ್ತವಾಗಿದೆ. ಈ ವಿಚಾರವನ್ನು ಹಂಚಿಕೊಳ್ಳುವಾಗ ಭಾವನಾ ಅವರು ನಾನು ಯಾರಿಗೂ ಹೆದರಬೇಕಾಗಿಲ್ಲ. ಇದನ್ನು ಮುಚ್ಚಿಡುವ ಅವಶ್ಯಕತೆ ಇಲ್ಲ. ನನ್ನ ಅಭಿಮಾನಿಗಳಿಗೆ ನಾನು Loyal ಆಗಿರಬೇಕು ಎಂದಿದ್ದಾರೆ.
ಐವಿಎಫ್ ನ ಮೂಲಕ ನಟಿ ಭಾವನಾ ಅವರು ಗರ್ಭಧರಿಸಿದ್ದಾರೆ. IVF ಚಿಕಿತ್ಸೆ ಎನ್ನುವುದು ಇತ್ತೀಚಿನ ವರ್ಷಗಳಲ್ಲಿ ವೈದ್ಯಕೀಯ ಲೋಕದಲ್ಲಿ ಆಗಿರುವ ಬಹು ಮಹತ್ವದ ಬೆಳವಣಿಗೆಗಳಲ್ಲಿ ಒಂದಾಗಿದೆ. ಈ ಚಿಕಿತ್ಸೆ ಮಕ್ಕಳಿಲ್ಲ ಎನ್ನುವ ಕೊರಗು ಮತ್ತು ನೋವನ್ನು ಅನುಭವಿಸುತ್ತಿರುವ ಲಕ್ಷಾಂತರ ಜನ ದಂಪತಿಗಳ ಬಾಳಲ್ಲಿ ಹೊಸ ಆಶಾಕಿರಣವನ್ನೇ ಮೂಡಿಸಿದೆ. ಇದೇ ಚಿಕಿತ್ಸೆಯನ್ನು ಭಾವನಾ ಅವರು ಪಡೆದುಕೊಂಡಿದ್ದಾರೆ.

IVF ಎಂದರೆ ವೈದ್ಯಕೀಯ ಪರಿಭಾಷೆಯಲ್ಲಿ ಇನ್ ವಿಟ್ರೊ ಫಲೀಕರಣ. ಇದು ಫಲವತ್ತತೆ ಚಿಕಿತ್ಸೆಯಾಗಿದೆ. ಈ ಚಿಕಿತ್ಸೆಯಲ್ಲಿ ಪ್ರಯೋಗಾಲಯದಲ್ಲಿ ವ್ಯಕ್ತಿಯ ವೀರ್ಯದಿಂದ ಮೊಟ್ಟೆಗಳನ್ನು ಫಲವತ್ತಾಗಿಸಲಾಗುತ್ತದೆ ಮತ್ತು ನಂತರ ಫಲವತ್ತಾದ ಮೊಟ್ಟೆಯನ್ನು (ಭ್ರೂಣ) ಮಹಿಳೆಯ ಗರ್ಭಾಶಯಕ್ಕೆ ವರ್ಗಾಯಿಸಿ ಗರ್ಭಧಾರಣೆಯನ್ನು ಸಾಧಿಸಲಾಗುತ್ತದೆ. ನೈಸರ್ಗಿಕ ಗರ್ಭಧಾರಣೆಯು ಕಷ್ಟಕರವಾದಾಗ ಅಥವಾ ಅಸಾಧ್ಯವಾದಾಗ ಈ ಪ್ರಕ್ರಿಯೆಯನ್ನು ಹೆಚ್ಚಾಗಿ ಬಳಸಲಾಗುತ್ತದೆ.
ವೈಭವ್ ಪ್ರಶಾಂತ್ ಎನ್ನುವವರು, ಮಕ್ಕಳು ಬೇಡ ಅಂತ ಹೇಳ್ತಿರೋ ಈ ಕಾಲದಲ್ಲಿ ಅಮ್ಮ ಅಂತ ಕರೆಯೋಕೆ ಯಾರು ಇಲ್ಲ ಎಂದು ಇಷ್ಟು ಕಷ್ಟ ಪಟ್ಟು ತಾಯಿ ಆಗ್ತಾ ಇರೋ ನಿಮಗೆ ಅಭಿನಂದನೆಗಳು ಮೇಡಂ ಎಂದಿದ್ದಾರೆ. ಬಹಳಷ್ಟು ಜನ ಭಾವನಾ ಅವರ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಅಭಿನಂದನೆಗಳನ್ನೂ ತಿಳಿಸಿದ್ದಾರೆ. ಆದರೆ ಕೆಲವರು ಕಾನೂನು ಹಾಗೂ ಸಂಪ್ರದಾಯ ಮತ್ತು ಮಕ್ಕಳ ಮುಂದಿನ ಭವಿಷ್ಯದ ಬಗ್ಗೆ ಪ್ರಶ್ನೆ ಮಾಡಿದ್ದಾರೆ.
ಸುದರ್ಶನ್ ಕುಮಾರ್ ಎನ್ನುವವರು, ನೀವು ಮದುವೆಯಾಗದೆ ತಾಯಿಯಾಗುತ್ತಿರುವುದು ನಿಮಗೆ ತಾಯ್ತನದ ಅನುಭವದ ಆಸೆಯಿಂದಿರಬಹುದು. ಆದರೆ ಆ ಮಗು ತನಗೆ ಎಲ್ಲರಂತೆ ತಂದೆಯಿಲ್ಲ, ತಂದೆಯ ಹೆಸರು ಇಲ್ಲ ತುಂಬಾ ನೋವು, ಸಂಕಟ ತರಬಹುದು. ಡೈವರ್ಸ್ ಆದ ಅನೇಕ ಮಹಿಳೆಯರು ಸಿಂಗಲ್ ಪೇರೆಂಟ್ ಆಗಿದ್ದಾರೆ ನಿಜ. ಆದರೆ ಒಬ್ಬ ಮಕ್ಕಳಿಗೆ ತನ್ನ ತಂದೆ ಯಾರು,ಹೆಸರು ಗೊತ್ತಿರುತ್ತೆ. ನಿಮ್ಮದು ಹಾಗಲ್ಲ. ಸಮಾಜದಲ್ಲಿ ನಿಮ್ಮ ಮಗು ಅನುಭವಿಸಬೇಕಾದ ಸವಾಲುಗಳು, ಅವಮಾನ, ಮುಜುಗರದ ಬಗ್ಗೆ ಯೋಚಿಸಬೇಕಿತ್ತು. ನಿಮಗೆ ಇಷ್ಟ ಬಂದ ಬದುಕುವ ಹಕ್ಕಿದೆ, ಆದರೆ ನಿಮ್ಮ ಇಷ್ಟಕ್ಕೆ ನಿಮ್ಮಿಂದ ಹುಟ್ಟಲಿರುವ ಮಗುವಿಗೆ ಸಮಸ್ಯೆಯಾಗುವುದು ಖಂಡಿತ ಸಹ್ಯವಲ್ಲ. ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್‌ಡಿ ತಿವಾರಿ ರಹಸ್ಯ ಎರಡನೆಯ ಸಂಬಂಧದ ಪುತ್ರ ಕೋರ್ಟ್‌ಗೆ ಹೋಗಿ ತಾನು ಎನ್‌ಡಿ ತಿವಾರಿ ಅವರ ಪುತ್ರ ಎಂದು ಪರೀಕ್ಷಿಸಿದ್ದನ್ನು ಗಮನಿಸಬೇಕು ಎಂದಿದ್ದಾರೆ.
ಈ ಕಮೆಂಟ್‌ಗೆ ಪರ - ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ಗೋಪಿ ಎನ್ನುವವರು ತಾಯ್ತನ ಹೆಣ್ಣಿನ ಹಕ್ಕು- ದಿಟ್ಟೆ ಕಲಾವಿದೆ ಭಾವನಾ ಅವರು ಎಂದಿದ್ದರೆ, ಉಷಾ ಕಟ್ಟೆಮನೆ ಎನ್ನುವವರು ತಾಯ್ತನಕ್ಕೆ ಹೊಸ ಭಾಷ್ಯ ಬರೆಯಿರಿ. ಶುಭವಾಗಲಿ💐❤️ ಎಂದು ಶುಭಕೋರಿದ್ದಾರೆ.












Click it and Unblock the Notifications