ಉಪ್ಪಿಗೆ ನಾಯಕಿಯಾಗಿ ಸೀರಿಯಲ್ ನಟಿಗೆ ಸಿಕ್ತು ಬಿಗ್ ಚಾನ್ಸ್
ನಟ ರಿಯಲ್ ಸ್ಟಾರ್ ಉಪೇಂದ್ರ ಅವರು ತಮ್ಮ ಸಿನಿಮಾಗಳ ಮೂಲಕ ಹೊಸ ಪ್ರತಿಭೆಗಳನ್ನು ಬೆಳಕಿಗೆ ತಂದವರು. ಇವರ ಸಿನಿಮಾಗಳಲ್ಲಿ ನಟಿಸಿರುವ ಅನೇಕರು ಚಿತ್ರರಂಗದಲ್ಲಿ ದೊಡ್ಡಮಟ್ಟಕ್ಕೆ ಬೆಳೆದಿರುವ ನಿದರ್ಶನಗಳಿವೆ. ಅವರ ಸಿನಿಮಾಗಳೆಂದರೆ ಜನ ಹುಚ್ಚೆದ್ದು ನೋಡುತ್ತಾರೆ. ಈ ಕಾರಣದಿಂದ ಅವರ ಉಪ್ಪಿ ಸಿನಿಮಾಗಳಿಗೆ ದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ. ಉಪೇಂದ್ರ ಅವರ ಮುಂದಿನ ಸಿನಿಮಾಗೆ ನಾಯಕಿ ಆಯ್ಕೆಯಾಗಿದ್ದು, ಈ ಬಾರಿ ಉಪ್ಪಿ ಜೊತೆ ನಾಯಕಿಯಾಗಿ ನಟಿಸಲು ಕನ್ನಡದ ಖ್ಯಾತ ಕಿರುತೆರೆ ನಟಿಗೆ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
"ನಮ್ಮನೆ ಯುವರಾಣಿ" ಸೀರಿಯಲ್ ಮೂಲಕ ಕನ್ನಡ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದ್ದ ಅಂಕಿತಾ ಅಮರ್ ಇದೀಗ ಉಪೇಂದ್ರ ಅವರಿಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಮೊದಲಿಗೆ ಸೀರಿಯಲ್‌ನಲ್ಲಿ ಮೋಡಿ ಮಾಡಿದ ಅವರು ನಿರೂಪಣೆಯಲ್ಲೂ ಸೈ ಎನಿಸಿಕೊಂಡರು. ಇದಾದ ಬಳಿಕ "ಇಬ್ಬನಿ ತಬ್ಬಿದ ಇಳೆಯಲಿ" ಸಿನಿಮಾ ಕೂಡ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಸದ್ಯ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವಾಗಲೇ ಅಂಕಿತಾ ಅವರಿಗೆ ಉಪ್ಪಿಯಂತಹ ದೊಡ್ಡ ಸ್ಟಾರ್ ನಟನೊಂದಿಗೆ ನಾಯಕಿಯಾಗಿ ನಟಿಸುವ ಅದೃಷ್ಟ ಒಲಿದಿದೆ.

ಉಪೇಂದ್ರ ಅವರು ನಟಿಸುತ್ತಿರುವ ಹೊಸ ಚಿತ್ರ 'ಭಾರ್ಗವ' ಸಿನಿಮಾದ ನಾಯಕಿಯಾಗಿ ಅಂಕಿತಾ ಫೈನಲ್ ಆಗಿದ್ದಾರೆ. ಈ ಸಿನಿಮಾವನ್ನು ನಾಗಣ್ಣ ನಿರ್ದೇಶಿಸುತ್ತಿದ್ದು, ಸೂರಪ್ಪ ಬಾಬು ನಿರ್ಮಾಣ ಮಾಡುತ್ತಿದ್ದಾರೆ. ಹೀಗಾಗಿ ಅಂಕಿತಾ ಅವರ ಸಿನಿ ಕೆರಿಯರ್‌ಗೆ ಇದೊಂದು ದೊಡ್ಡ ತಿರುವು ನೀಡಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅಲ್ಲದೆ ಉಪೇಂದ್ರ ಅವರು "ಇಬ್ಬನಿ ತಬ್ಬಿದ ಇಳೆಯಲಿ" ಸಿನಿಮಾದಲ್ಲಿ ಅಂಕಿತಾ ಅವರ ನಟನೆ ನೋಡಿ ಮೆಚ್ಚಿದ್ದರು. ಹಾಗಾಗಿ ಭಾರ್ಗವ ಸಿನಿಮಾದ ನಾಯಕಿ ಪಾತ್ರಕ್ಕೆ ಅವರೇ ಸೂಕ್ತ ಎಂದು ಸೂಚಿಸಿದ್ದರು. ಈ ಹಿನ್ನೆಲೆ ಅಂಕಿತಾ ಅವರು ಉಪೇಂದ್ರ ಜೊತೆ ತೆರೆ ಮೇಲೆ ಮಿಂಚುವ ಅವಕಾಶ ಪಡೆದುಕೊಂಡಿದ್ದಾರೆ.
ಸದ್ಯ ಅಂಕಿತಾ ಅವರು ಶೈನ್ ಶೆಟ್ಟಿ ಅವರ "ಜಸ್ಟ್ ಮ್ಯಾರೀಡ್" ಹಾಗೂ ಪೃಥ್ವಿ ಅಂಬರ್ ಜೊತೆ "ಅಬ ಜಬ ದಬ" ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕಳೆದ ವರ್ಷ ರಕ್ಷಿತ್ ಶೆಟ್ಟಿ ನಿರ್ಮಾಣದ "ಇಬ್ಬನಿ ತಬ್ಬಿದ ಇಳೆಯಲಿ" ಚಿತ್ರದಲ್ಲಿ ವಿಹಾನ್‌ಗೆ ಅಂಕಿತಾ ನಾಯಕಿಯಾಗಿದ್ದರು. ಅಲ್ಲದೆ ರಿಯಾಲಿಟಿ ಶೋಗಳಲ್ಲೂ ಅಂಕಿತಾ ಛಾಪು ಮೂಡಿಸಿದ್ದಾರೆ.

ಅಂಕಿತಾ ಅಮರ್ ಅವರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿಯಾಗಿದ್ದಾರೆ. ಇವರು ಗಾಯಕಿ ಹಾಗೂ ಭರತನಾಟ್ಯ ಕಲಾವಿದೆಯೂ ಹೌದು. ಅಯೋಧ್ಯೆ ರಾಮಮಂದಿರಲ್ಲಿ ಭರತನಾಟ್ಯ ಪ್ರದರ್ಶಿಸುವ ಮೂಲಕ ಅಂಕಿತಾ ಗಮನ ಸೆಳೆದಿದ್ದರು. ಮೊದಲಿಗೆ ಪುಟ್ಟಗೌರಿ ಮದುವೆ ಸೀರಿಯಲ್‌ನಲ್ಲಿ ಚಿಕ್ಕ ಪಾತ್ರದಲ್ಲಿ ನಟಿಸಿದ್ದ ಅಂಕಿತಾ ಅವರು ನಮ್ಮನೆ ಯುವರಾಣಿ ಸೀರಿಯಲ್ ಮೂಲಕ ಜನಪ್ರಿಯರಾದರು. ಸೀರಿಯಲ್ ಜೊತೆ ಜೊತೆಗೆ ಅವರು ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದು, ಇದೀಗ ಅವಕಾಶಹಳು ಅರಸಿ ಬರುತ್ತಿವೆ. ಬಯೋ ಕೆಮಿಸ್ಟ್ರಿಯಲ್ಲಿ ಎಂಎಸ್‌ಸಿ ಮಾಡಿರುವ ಅವರು ಕೆಲವು ಗೀತೆಗಳಿಗೆ ಧ್ವನಿಯಾಗಿ ಶಾಸ್ತ್ರೀಯ ಸಂಗೀತ ಮತ್ತು ಭರತನಾಟ್ಯ ಅಧ್ಯಯನ ಮಾಡಿದ್ದಾರೆ.












Click it and Unblock the Notifications