National Film Awards: ಬಾಲಿವುಡ್ ಬೆಡಗಿ ಆಲಿಯಾ ಭಟ್‌ಗೆ ಲಾಟರಿ!
ಬಾಲಿವುಡ್ ನಟಿ ಆಲಿಯಾ ಭಟ್‌ಗೆ 2023 ಸಖತ್ ಲಕ್ಕಿ ಎನ್ನಬಹುದು. ಹೀಗೆ 2023ರಲ್ಲಿ ನಟಿ ಆಲಿಯಾಗೆ ಸಿಕ್ಕಾಪಟ್ಟೆ ಸರ್ಪ್ರೈಸ್‌ಗಳೇ ಸಿಕ್ಕಿವೆ. ಇಂದು ಮತ್ತೊಂದು ಉಡುಗೊರೆಯು ಸಿಕ್ಕಿದ್ದು, ಆಲಿಯಾ ಭಟ್ ಅಭಿನಯದ 2 ಸಿನಿಮಾಗಳು 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿಯಲ್ಲಿ ಅಬ್ಬರಿಸಿವೆ. ಹಾಗಾದರೆ ಆ ಸಿನಿಮಾಗಳು ಯಾವುವು? ಯಾವ ಯಾವ ವಿಭಾಗದಲ್ಲಿ ಪ್ರಶಸ್ತಿ ಒಲಿದಿದೆ? ಬನ್ನಿ ತಿಳಿಯೋಣ.
'ಗಂಗೂಬಾಯಿ ಕಥಿಯಾವಾಡಿ' ಸಿನಿಮಾ ಆಲಿಯಾ ಭಟ್ ಸಿನಿಮಾ ಕರಿಯರ್‌ಗೆ ದೊಡ್ಡ ತಿರುವು. ಸಂಪೂರ್ಣ ನಟನೆ ಮತ್ತು ಕಥೆಯನ್ನೇ ಆಧರಿಸಿದ್ದ ಈ ಸಿನಿಮಾ ನೋಡಿ ಜನರು ಗ್ರೇಟ್ ಗ್ರೇಟ್ ಎಂದಿದ್ದರು. ಅದ್ರಲ್ಲೂ ಆಲಿಯಾ ಭಟ್ ತಮ್ಮ ಸಿನಿಮಾ ಕರಿಯರ್‌ನಲ್ಲಿ ಈ ರೀತಿಯ ಸಿನಿಮಾ ಮಾಡಿರಲಿಲ್ಲ. ಹೀಗೆ ಎಲ್ಲಾ ವಿಭಾಗದಲ್ಲೂ ಗ್ರೇಟ್ ಎನಿಸಿಕೊಂಡಿತ್ತು 'ಗಂಗೂಬಾಯಿ ಕಥಿಯಾವಾಡಿ' ಸಿನಿಮಾ. ಇಂತಿಪ್ಪ 'ಗಂಗೂಬಾಯಿ ಕಥಿಯಾವಾಡಿ'ಗೆ ಈಗ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿಯಲ್ಲಿ ಪ್ರಶಸ್ತಿಗಳ ಸುರಿಮಳೆಯೇ ಸಿಕ್ಕಿದೆ.

ಆಲಿಯಾ ಭಟ್‌ಗೆ ಡಬಲ್ ಗಿಫ್ಟ್!
ಇದು ನಿಜವಾಗಿಯೂ ಲಾಟರಿ ಎನ್ನಬಹುದು, ಏಕೆಂದರೆ ಆಲಿಯಾ ಭಟ್ ಅಭಿನಯಿಸಿದ್ದ ಎರಡೆರಡು ಸಿನಿಮಾಗಳು 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿಯಲ್ಲಿ ಅಬ್ಬರಿಸಿವೆ. ಈ ಎರಡೂ ಚಿತ್ರಗಳು ದೊಡ್ಡ ಮಟ್ಟದಲ್ಲಿ ಜಗತ್ತಿನಾದ್ಯಂತ ರಿಲೀಸ್ ಆಗಿದ್ದವು. ಹೀಗಾಗಿ ಭಾರತ ಸೇರಿದಂತೆ ಜಗತ್ತಿನ ಮೂಲೆ ಮೂಲೆಗೂ ತಲುಪಿ ಅಭಿಮಾನಿಗಳಿಗೆ ಎರಡೂ ಚಿತ್ರ ಇಷ್ಟವಾಗಿದ್ದವು. ಒಂದ್ಕಡೆ ಗಂಗೂಬಾಯಿ ಕಥಿಯಾವಾಡಿ ಸೌಂಡ್ ಮಾಡಿದ್ರೆ, ಇನ್ನೊಂದು ಕಡೆ RRR ಸಿನಿಮಾಗೂ ಪ್ರಶಸ್ತಿಗಳ ಸುರಿಮಳೆ ಸುರಿದಿದೆ. ಗಂಗೂಬಾಯಿ ಕಥಿಯಾವಾಡಿಗೆ ಸಿಕ್ಕ ಪ್ರಶಸ್ತಿಗಳು ಎಷ್ಟು? ಮುಂದೆ ಓದಿ.
ಭಾರತದಲ್ಲಿ ಇತ್ತೀಚೆಗೆ ಬಯೋಪಿಕ್‌ಗಳ ಅಬ್ಬರ ಜೋರಾಗಿದೆ. ಇದೇ ರೀತಿ 'ಗಂಗೂಬಾಯಿ ಕಾಠಿಯಾವಾಡಿ' ಕೂಡ ಆತ್ಮಕಥೆ ಆಧರಿತ ಸಿನಿಮಾ ಆಗಿತ್ತು. ನಿಜಘಟನೆ ಸುತ್ತಲೂ ಕಥೆ ಹೆಣೆದು ಸಿನಿಮಾ ಮಾಡಲಾಗಿತ್ತು. ಗಲ್ಲಾ ಪೆಟ್ಟಿಗೆಯಲ್ಲಿ ಈ ಚಿತ್ರ ನಟಿ ಆಲಿಯಾ ಭಟ್‌ಗೆ ದೊಡ್ಡ ಗೆಲುವು ತಂದುಕೊಟ್ಟಿದೆ. ಇಷ್ಟು ಮಾತ್ರವಲ್ಲ ಆಲಿಯಾ ಅವರ ನಟನೆಯ ಕುರಿತು ಸಾಕಷ್ಟು ಪ್ರಶಂಸೆ ವ್ಯಕ್ತವಾಗಿತ್ತು. ಹೀಗಾಗಿ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾ 4 ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದೆ. ಅತ್ಯುತ್ತಮ ನಟಿಯಾಗಿ ಆಲಿಯಾ ಭಟ್ ಪ್ರಶಸ್ತಿ ಪಡೆದಿದ್ದಾರೆ. ಅತ್ಯುತ್ತಮ ಚಿತ್ರಕತೆ & ಎಡಿಟಿಂಗ್ ವಿಭಾಗದಲ್ಲಿ ಸಂಜಯ್ ಲೀಲಾ ಬನ್ಸಾಲಿ ಪ್ರಶಸ್ತಿ ಗೆದ್ದಿದ್ದಾರೆ. ಜೊತೆಗೆ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾದ ಮೇಕಪ್ ಕಲಾವಿದರು, ಅತ್ಯುತ್ತಮ ಮೇಕಪ್ ವಿಭಾಗದಲ್ಲಿ ಪ್ರಶಸ್ತಿ ಪಡೆದು ಇತಿಹಾಸ ನಿರ್ಮಿಸಿದ್ದಾರೆ.

RRR ಸಿನಿಮಾಗೂ ಭರ್ಜರಿ ಪ್ರಶಸ್ತಿ!
ಅತ್ತ 'ಗಂಗೂಬಾಯಿ ಕಾಠಿಯಾವಾಡಿ' ಚಿತ್ರದಲ್ಲಿ ಆಲಿಯಾ ಲೀಡ್ ರೋಲ್‌ನಲ್ಲಿ ಕಮಾಲ್ ಮಾಡಿದ್ದರು. ಹೀಗೆ RRR ಸಿನಿಮಾದಲ್ಲೂ ಆಲಿಯಾ ಭಟ್ ಮುಖ್ಯಪಾತ್ರ ನಿರ್ವಹಿಸಿದ್ದರು. RRR ಸಿನಿಮಾ ಬಹುತೇಕ ಎಲ್ಲಾ ವಿಭಾಗದಲ್ಲೂ ತನ್ನ ತಾಕತ್ ತೋರಿಸಿದೆ. ಆಸ್ಕರ್ ರೀತಿಯೇ ದೇಶದ ಪ್ರಮುಖ ಸಿನಿಮಾ ಪ್ರಶಸ್ತಿ ವಿಭಾಗದಲ್ಲೂ RRR ಸದ್ದು ಮಾಡಿದೆ. ಅತ್ಯುತ್ತಮ ಸಾಹಸ ಸಂಯೋಜನೆ ವಿಭಾಗದಲ್ಲಿ RRR ಪ್ರಶಸ್ತಿ ಪಡೆದಿದೆ, ಹಾಗೇ ಅತ್ಯುತ್ತಮ ನೃತ್ಯ ನಿರ್ದೇಶನ & ಸ್ಪೆಷಲ್ ಎಫೆಕ್ಟ್, ಅತ್ಯುತ್ತಮ ಹಿನ್ನೆಲೆ ಸಂಗೀತ ಸೇರಿದಂತೆ ಅತ್ಯುತ್ತಮ ಜನಪ್ರಿಯ ಚಿತ್ರವೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಹೀಗೆ ಆಲಿಯಾ ಭಟ್‌ಗೆ ಡಬಲ್ ಗಿಫ್ಟ್ ಸಿಕ್ಕಂತಾಗಿದೆ.

ಒಟ್ನಲ್ಲಿ ಆಲಿಯಾ ಭಟ್ ಅವರಿಗೆ ಇವತ್ತು ಎರಡೆರಡು ಸಂಭ್ರಮ. ಅತ್ತ ಅವರಿಗೆ ಉತ್ತಮ ನಟಿ ಪ್ರಶಸ್ತಿ ಸಿಕ್ಕಿದ್ದರೆ, ಮತ್ತೊಂದ್ಕಡೆ ಆಲಿಯಾ ಭಟ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಎರಡೆರಡು ಚಿತ್ರಗಳಿಗೆ ಭರ್ಜರಿ ಪ್ರಶಸ್ತಿ ಸಿಕ್ಕಿದೆ. ಈ ಮೂಲಕ ತಮ್ಮ ಸಿನಿಮಾ ಭವಿಷ್ಯದ ಬಗ್ಗೆ ಆಲಿಯಾ ಮತ್ತಷ್ಟು ಸಿದ್ಧತೆ ನಡೆಸಲು ಈ ಗೆಲುವು ಹುಮ್ಮಸ್ಸು ನೀಡಲಿದೆ. ಹಾಗೇ ದಕ್ಷಿಣ ಭಾರತದ ಚಿತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದ ನಟಿ ಆಲಿಯಾ ಭಟ್‌ಗೆ, RRR ಸಿನಿಮಾ ಸಖತ್ ಖುಷಿ ಕೊಟ್ಟಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications