Actor Yash: ಅರೆಸ್ಟ್ ಆಗ್ತಾರಾ ಕೆಜಿಎಫ್ ಸ್ಟಾರ್ ನಟ ಯಶ್.?

Actor Yash: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣಟದಲ್ಲಿ ಜೈಲು ಸೇರಿದ್ದ ನಟ ದರ್ಶನ್‌ಗೆ ಇಂದು (ಅಕ್ಟೋಬರ್‌ 30) ಹೈಕೋರ್ಟ್‌ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಇದರ ಬೆನ್ನಲ್ಲೇ ಕೆಜಿಎಪ್‌ ಸ್ಟಾರ್‌, ರಾಕಿಂಗ್‌ ಸ್ಟಾರ್‌ ನಟ ಯಶ್‌ಗೆ ಕೇಸ್‌ ದಾಖಲಾಗುವ ಸಂಕಷ್ಟವೊಂದು ಎದುರಾಗಿದೆ. ಹಾಗಾದರೆ ಯಾವ ಪ್ರಕರಣದಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಈಗಾಗಲೇ ಕೆಜಿಎಫ್, ಕೆಜಿಎಫ್-2 ಭಾರೀ ಮಿಂಚಿದ ಯಶ್ ದೀಗ ಟಾಕ್ಸಿಕ್ ಮೂವಿ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯುವುದಕ್ಕೆ ಸಿದ್ದರಾಗಿದ್ದಾರೆ. ಆದರೆ, ಇಂತಹ ಒಳ್ಳೇ ಗಳಿಗೆಯಲ್ಲೇ ಯಶ್ ಅಭಿನಯಿಸುತ್ತಿರುವ ಟಾಕ್ಸಿಕ್ ಚಿತ್ರಕ್ಕೆ ಸಂಕಷ್ಟವೊಂದು ತಲೆದೂರಿದೆ.

Actor Yash s This movie lands in controversy over felling of trees

ಟಾಕ್ಸಿಕ್ ಚಿತ್ರದ ಸೆಟ್‌ಗಾಗಿ ನೂರಕ್ಕೂ ಹೆಚ್ಚು ಮರಗಳಿಗೆ ಕೊಡಲಿ ಹಾಕಿರುವ ಆರೋಪ ಕೇಳಿಬಂದಿದೆ. ಯಶ್ ಅಭಿನಯದ ಟಾಕ್ಸಿಕ್ ಚಿತ್ರದ ಶೂಟಿಂಗ್‌ಗಾಗಿ ಎಚ್‌ಎಂಟಿ ಪ್ರದೇಶದಲ್ಲಿ ಬೃಹತ್ ಸೆಟ್ ಅನ್ನು ಹಾಕಿ ಚಿತ್ರೀಕರಣ ಮಾಡಲಾಗಿದ್ದು, ವೇಳೆ ಅಲ್ಲಿನ ನೂರಾರು ಮರಗಳನ್ನು ಅಕ್ರಮವಾಗಿ ಕಡಿದು ಸೆಟ್ ನಿರ್ಮಾಣ ಮಾಡಿರುವ ಬಗ್ಗೆ ಗಂಭೀರ ಆರೋಪ ಕೇಳಿಬಂದಿದೆ.

ಈ ಸಂಬಂಧ ಸ್ಯಾಟ್‌ಲೈಟ್ ಇಮೇಜ್ ಪಡೆದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಪರಿಶೀಲನೆ ನಡೆಸಿದ್ದಾರೆ. ಸ್ಯಾಟಲೈಟ್ ಇಮೇಜ್ ಪಡೆಯುವ ವೇಳೆ ನೂರಾರು ಮರಗಳು ನೆಲಸಮ ಆಗಿರುವುದು ಪತ್ತೆಯಾಗಿದೆ. ಈ ಹಿನ್ನಲೆ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲು ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ.

ಅಷ್ಟೇ ಅಲ್ಲದೆ, ಸೆಟ್ ಹಾಕಿರುವ ಸ್ಥಳಕ್ಕೂ ಅರಣ್ಯ ಸಚಿವ ಖಂಡ್ರೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಕೇಸ್ ದಾಖಲಾದ ಹಿನ್ನೆಲೆ ನಟ ಯಶ್ ಮತ್ತು ಟಾಕ್ಸಿಕ್ ತಂಡ ಬಂಧನದ ಭೀತಿಯಲ್ಲಿದೆ.

ನಿಯಮದ ಪ್ರಕಾರ, ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಯಾವುದೇ ಮರಗಳನ್ನು ಯಾರೂ ಕಡಿಯುವಂತಿಲ್ಲ. ಒಂದು ವೇಳೆ ನಿಯಮ ಮೀರಿ ಈ ಕೆಲಸ ಮಾಡಿದರೆ, ಅಂತಹರ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎನ್ನುವುದು ಕಾನೂನಿನ ಅಡಿಯಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+