40 ಅಭಿಮಾನಿಗಳ ಸಾವು ಕೇಸ್, ನಟ ವಿಜಯ್ ದಿಢೀರ್ ಅರೆಸ್ಟ್ ಸಾಧ್ಯತೆ ಅಂತಾ... Actor Vijay
ಸಿನಿಮಾ ಇಂಡಸ್ಟ್ರಿಯಲ್ಲಿ ನಟಿ & ನಟರಿಗೆ ಕೋಟಿ ಕೋಟಿ ಅಭಿಮಾನಿಗಳು ಇರುತ್ತಾರೆ. ಸಿನಿಮಾ ನಟ & ನಟಿಯರಿಗೆ ಜೀವ ಬೇಕಾದರೂ ಕೊಡ್ತೀವಿ ಅಂತಾರೆ ಅಭಿಮಾನಿಗಳು. ಅಲ್ಲದೆ ಸಿಕ್ಕಾಪಟ್ಟೆ ಬಣ್ಣದ ಬದುಕಿನಲ್ಲಿ ಜೀವನ ನಡೆಸುವ ಅವರಿಗೆ ದಿಢೀರ್ ದೊಡ್ಡ ಸಮಸ್ಯೆಗಳು ಎದುರಾಗಿ, ಜೈಲಿಗೂ ಹೋಗಿ ಬರ್ತಾರೆ. ಅದರಲ್ಲೂ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ನಟಿ & ನಟರು ಅರೆಸ್ಟ್ ಆಗಿದ್ದು ಜೈಲೂಟವನ್ನ ಕೂಡ ಮಾಡಿ ಬಂದಿದ್ದಾರೆ ಎಂಬ ಬೇಸರ ಅಭಿಮಾನಿಗಳಿಗೆ ಇದೆ. ಹೀಗಿದ್ದಾಗಲೇ, 40 ಅಭಿಮಾನಿಗಳ ಸಾವು ಕೇಸ್, ನಟ ವಿಜಯ್ ದಿಢೀರ್ ಅರೆಸ್ಟ್ ಸಾಧ್ಯತೆ ಅಂತಾ...
ಸಿನಿಮಾ ಅಂದ್ರೆ ಭಾರತದಲ್ಲಿ ಗಟ್ಟಿ ಭಾವನೆ ಇದ್ದು, ನಟ & ನಟಿಯರಿಗೆ ಭಾರಿ ಅಭಿಮಾನಿಗಳು ಇರ್ತಾರೆ. ಕನ್ನಡ ಸಿನಿಮಾ ರಂಗ 100 ವರ್ಷಗಳ ಇತಿಹಾಸ ಹೊಂದಿದ್ದು, ಕನ್ನಡ ಸಿನಿಮಾದಲ್ಲಿ ಈಗ ಸಾಲು ಸಾಲು ಸಾವಿನ ಸುದ್ದಿ ಕೇಳಿಬರುತ್ತಿದೆ. ಅದರಲ್ಲೂ ಕಳೆದ ಕೆಲವು ತಿಂಗಳಿಂದ ಕನ್ನಡ ಸಿನಿಮಾ ರಂಗದ ಹಲವು ನಟ & ನಟಿಯರು ಮೃತಪಟ್ಟಿದ್ದಾರೆ. ಹೀಗೆ ಸಿನಿಮಾ ರಂಗದಲ್ಲಿ ನೋವಿನ ಸುದ್ದಿ ಕೇಳಿ, ಕೇಳಿ ಅಭಿಮಾನಿಗಳು ಕೂಡ ಬೆಚ್ಚಿಬಿದ್ದಿದ್ದಾರೆ. ಆದರೆ ಇದು ಕನ್ನಡ ಸಿನಿಮಾ ರಂಗಕ್ಕೆ ಮಾತ್ರ ಸೀಮಿತವಾಗಿ ಇಲ್ಲ....

40 ಜನರ ಜೀವ ಹೋಯ್ತಾ?
ಹೌದು, ಕನ್ನಡ ನಾಡಿನ ನೆರೆಯ ರಾಜ್ಯ ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ಇದೀಗ ಭಾರಿ ದೊಡ್ಡದಾದ ಸಂಚಲನ ಸೃಷ್ಟಿಯಾಗಿ ಬಿರುಗಾಳಿ ಎದ್ದಿದೆ. ನಟ ವಿಜಯ್ ಅವರು ಯಾವಾಗ ರಾಜಕೀಯ ಪ್ರವೇಶ ಮಾಡಿದರೋ ಆಗಲೇ ನೋಡಿ ಹೊಸ ಬಿರುಗಾಳಿ ಎದ್ದಿದ್ದು. ಆದರೆ ಈಗ ಅದೇ ಬಿರುಗಾಳಿ ಅಡ್ಡದಾರಿ ಹಿಡಿದಿದೆಯಾ? ಅನ್ನೋ ಅನುಮಾನ ಕೂಡ ಮೂಡಿದೆ. ಯಾಕಂದ್ರೆ ನಟ ವಿಜಯ್ ಅವರು ನಡೆಸಿದ ರಾಜಕೀಯ ಸಮಾವೇಷ 40 ಜನರ ಜೀವ ತೆಗೆದಿರುವ ಆರೋಪ ಕೇಳಿಬಂದಿದೆ. ಹೀಗಾಗಿ ತಮಿಳು ನಟ ದೊಡ್ಡ ಸಮಸ್ಯೆ ಸುಳಿಯಲ್ಲಿ ಸಿಲುಕಿದ್ದಾರೆ...
ತಮಿಳು ನಟ ವಿಜಯ್ ಅರೆಸ್ಟ್ ಆಗ್ತಾರಾ?
ನಟ ವಿಜಯ್ ತಮಿಳುನಾಡಿನ ಕರೂರಿನಲ್ಲಿ ತಮಿಳಗ ವೆಟ್ರಿ ಕಳಗಂ ವತಿಯಿಂದ ಬೃಹತ್ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಲಕ್ಷಾಂತರ ಜನರು ಈ ಕಾರ್ಯಕ್ರಮವನ್ನ ನೋಡಲು ಬಂದಿದ್ದು, ಜನರನ್ನು ನಿಯಂತ್ರಿಸುವುದು ಪೊಲೀಸರಿಗೆ ತಲೆನೋವಾಗಿತ್ತು. ಹೀಗೆ ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದ್ದರು. ಇಷ್ಟೆಲ್ಲಾ ಮುಂಜಾಗ್ರತಾ ಕ್ರಮ ಕೈಗೊಂಡರೂ ದೊಡ್ಡ ದುರಂತವೇ ನಡೆದು ಹೋಗಿದೆ. ತಮಿಳಗ ವೆಟ್ರಿ ಕಳಗಂ ಪಕ್ಷದ ರ್ಯಾಲಿ ವೇಳೆ ಕಾಲ್ತುಳಿತ ಸಂಭವಿಸಿ 40ಕ್ಕೂ ಹೆಚ್ಚು ಜನರ ಸಾವು? ಎಂಬ ಸುದ್ದಿಯು ತಲ್ಲಣ ಎಬ್ಬಿಸಿದೆ. ಮತ್ತೊಂದು ಕಡೆ ನಟ ವಿಜಯ್ ಅರೆಸ್ಟ್ ಆಗಬೇಕು ಅನ್ನೋ ಒತ್ತಡ ಕೂಡ ಈಗ ಜಾಸ್ತಿ ಆಗುತ್ತಿದ್ದು, ಇನ್ನೊಂದು ಕಡೆ ನಟ ವಿಜಯ್ ಬೆನ್ನಿಗೆ ಕೂಡ ಅಭಿಮಾನಿಗಳು ನಿಲ್ಲುತ್ತಿದ್ದಾರೆ...












Click it and Unblock the Notifications