ಆನೆಗೊಂದಿ ಉತ್ಸವದಲ್ಲಿ ‘ರೋರಿಂಗ್ ಸ್ಟಾರ್’ ಘರ್ಜನೆ!
ಗಂಗಾವತಿ ಶಾಸಕ ಜನಾರ್ಧನ ರೆಡ್ಡಿ ಅವರ ಸಾರಥ್ಯದಲ್ಲಿ ನಡೆದ ಐತಿಹಾಸಿಕ 'ಆನೆಗೊಂದಿ ಉತ್ಸವ' ಅದ್ಧೂರಿಯಾಗಿ ಸಮಾರೋಪಗೊಂಡಿದೆ. 2 ದಿನಗಳ ಕಾಲ ಕೊಪ್ಪಳದಲ್ಲಿ ಐತಿಹಾಸಿಕ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಸಂಭ್ರಮವನ್ನು ಈ ಉತ್ಸವ, ಜನರ ಎದುರು ಕಟ್ಟಿ ಕೊಟ್ಟಿದೆ. ಹೀಗಿದ್ದಾಗ 'ಆನೆಗೊಂದಿ ಉತ್ಸವ'ದಲ್ಲಿ ಕನ್ನಡ ಸಿನಿಮಾ ರಂಗದ ದೊಡ್ಡ ದೊಡ್ಡ ನಟರು ಭಾಗವಹಿಸಿದ್ದರು. ಅದೇ ರೀತಿ 'ರೋರಿಂಗ್ ಸ್ಟಾರ್' ಶ್ರೀಮುರಳಿ ಕೂಡ ಘರ್ಜಿಸಿದ್ದಾರೆ.
ಹೌದು 'ಆನೆಗೊಂದಿ ಉತ್ಸವ'ದಲ್ಲಿ ಭರ್ಜರಿಯಾಗಿ ಸಾಂಸ್ಕೃತಿಕ ವೈಭವ ಮೆರೆಯಿತು. ಈ ಸಮಯದಲ್ಲಿ ನಟ ಶ್ರೀಮುರಳಿ ಅವರು ಕೂಡ ಉತ್ಸವದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಗಂಗಾವತಿ ಶಾಸಕರಾದ ಜನಾರ್ಧನ ರೆಡ್ಡಿ ಅವರನ್ನು ನಟ ಶ್ರೀಮುರಳಿ ಅಭಿನಂದಿಸಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ತಮ್ಮ ಮುಂದಿನ ಸಿನಿಮಾ ಬಗ್ಗೆ 'ರೋರಿಂಗ್ ಸ್ಟಾರ್' ಶ್ರೀಮುರಳಿ ಮಹತ್ವದ ಮಾಹಿತಿ ನೀಡಿದರು. ಹಾಗಾದರೆ 'ಬಘೀರ'ನ ಬಗ್ಗೆ ಶ್ರೀಮುರಳಿ ಹೇಳಿದ್ದು ಏನು? ಬನ್ನಿ ತಿಳಿಯೋಣ.

'ಉಗ್ರಂ' ಶ್ರೀಮುರಳಿ ಹವಾ ಜೋರು
ನಟ ಶ್ರೀಮುರಳಿ ಅಂದ್ರೆ ಕಳೆದ 25 ವರ್ಷಗಳಿಂದ, ಕನ್ನಡ ಸಿನಿಮಾ ಪ್ರಿಯರಿಗೆ ಚಿರಪರಿಚಿತ ಹೆಸರು. ಯಾಕಂದ್ರೆ ನಟ ಶ್ರೀಮುರಳಿ ಅಂತಹ ಸಿನಿಮಾಗಳನ್ನ ನೀಡಿದ್ದಾರೆ. ಆದರೆ ಅವರ ಬಾಳಿಗೆ ದೊಡ್ಡ ತಿರುವು ನೀಡಿದ್ದು 2014ರಲ್ಲಿ ರಿಲೀಸ್ ಆಗಿದ್ದ 'ಉಗ್ರಂ' ಸಿನಿಮಾ. ಹೀಗೆ ನಟ ಶ್ರೀಮುರಳಿ 'ಉಗ್ರಂ' ನಂತರ ಸಾಲು ಸಾಲು ಹಿಟ್ ಸಿನಿಮಾ ನೀಡಿ ಮಿಂಚುತ್ತಿದ್ದಾರೆ. ಹೀಗಿದ್ದಾಗ 'ಆನೆಗೊಂದಿ ಉತ್ಸವ'ದಲ್ಲಿ ತಮ್ಮ 'ಬಘೀರ' ಸಿನಿಮಾ ಬಗ್ಗೆ ಶ್ರೀಮುರಳಿ ಅವರು ಮನಸ್ಸು ತುಂಬಿ ಮಾತನಾಡಿದ್ದಾರೆ. ಹಾಗಾದರೆ ನಟ ಶ್ರೀಮುರಳಿ ಅವರು ಹೇಳಿದ್ದೇನು?
'ಹೊಂಬಾಳೆ' ಸಂಸ್ಥೆಯ ಸಿನಿಮಾ
ಕನ್ನಡ ಸಿನಿಮಾ ರಂಗದಲ್ಲಿ ಹೊಂಬಾಳೆ ಫಿಲ್ಮ್ಸ್ ದೊಡ್ಡ ಇತಿಹಾಸ ನಿರ್ಮಾಣ ಮಾಡಿದೆ. ಕನ್ನಡದಲ್ಲಿ ರಾಜಕುಮಾರ ಸಿನಿಮಾದಿಂದ ಹಿಡಿದು ಕೆಜಿಎಫ್ ತನಕ ದೊಡ್ಡ ದೊಡ್ಡ ಚಿತ್ರ ನಿರ್ಮಾಣ ಮಾಡಿದೆ ಕನ್ನಡಿಗರ ಹೆಮ್ಮೆಯ 'ಹೊಂಬಾಳೆ ಫಿಲ್ಮ್ಸ್'. ಇಂತಹ ದೊಡ್ಡ ಸಂಸ್ಥೆ ಈಗ ಮತ್ತೊಂದು ದೊಡ್ಡ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದು, ಶ್ರೀಮುರಳಿ ಅವರು ನಟಿಸುತ್ತಿರುವ 'ಬಘೀರ' ಸಿನಿಮಾಗೆ ಕೂಡ ಹಣ ಹಾಕಿದೆ. ಹೀಗಿದ್ದಾಗ 'ಬಘೀರ' ಸಿನಿಮಾದ ಕುರಿತಾಗಿ, ಕನ್ನಡ ನಾಡಿನ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಾಗಿತ್ತು. ಆ ನಿರೀಕ್ಷೆಗಳಿಗೆ ಈಗ ಶ್ರೀಮುರಳಿ ಅವರೇ ಉತ್ತರ ನೀಡಿದ್ದು, ಇನ್ನೇನು ತಮ್ಮ ಸಿನಿಮಾ ರಿಲೀಸ್ ಆಗಲಿದೆ ತಪ್ಪದೆ ಸಿನಿಮಾಗೆ ಬನ್ನಿ ಅಂತಾ ತಮ್ಮ ಅಭಿಮಾನಿಗಳ ಬಳಿ ಬೇಡಿಕೆ ಮುಂದಿಟ್ಟಿದ್ದಾರೆ.
ಶ್ರೀಮುರಳಿಗೆ ಶಾಸಕ ಜನಾರ್ಧನ ರೆಡ್ಡಿ ಬೆಂಬಲ
ಇನ್ನು ಈ ವೇಳೆ, ಸ್ಥಳೀಯ ಶಾಸಕರಾದ ಜನಾರ್ಧನ ರೆಡ್ಡಿ ಅವರು ಶ್ರೀಮುರಳಿ ನಟನೆಯ ಸಿನಿಮಾ 'ಬಘೀರ' ಬಗ್ಗೆ ಖುಷಿಯಿಂದ ಮಾತನಾಡಿದರು. ಅಲ್ಲದೆ ಶ್ರೀಮುರಳಿ ಅವರು ಈ ಹಿಂದೆ ನಟಿಸಿದ್ದ ಮಫ್ತಿ ಸಿನಿಮಾ ಬಗ್ಗೆಯೂ ಹೆಮ್ಮೆ ವ್ಯಕ್ತಪಡಿಸಿದರು. ಹಾಗೇ, ಶ್ರೀಮುರಳಿ ಅವರ ಭವಿಷ್ಯಕ್ಕೆ ಶುಭ ಹಾರೈಸಿದ ಶಾಸಕರು, ರೋರಿಂಗ್ ಸ್ಟಾರ್ ಬೆನ್ನುತಟ್ಟಿದ್ದಾರೆ.

'ಆನೆಗೊಂದಿ ಉತ್ಸವ'ದಲ್ಲಿ ಗಂಗಾವತಿ ಶಾಸಕರಾದ ಗಾಲಿ ಜನಾರ್ಧನ ರೆಡ್ಡಿ ಅವರ ಜೊತೆಗೆ ವೇದಿಕೆಗೆ ಬಂದ ನಟ ಶ್ರೀಮುರಳಿ ಅವರು, ತಮ್ಮ ಮುಂದಿನ ಸಿನಿಮಾ 'ಬಘೀರ' ಕುರಿತು ಮಾತನಾಡಿದರು. ಈ ವೇಳೆ ಉತ್ಸವದಲ್ಲಿ ನೆರೆದಿದ್ದ ಅಭಿಮಾನಿಗಳು ನಟ ಶ್ರೀಮುರಳಿ ಅವರ ಮಾತಿಗೆ ಶಿಳ್ಳೆ & ಚಪ್ಪಾಳೆ ತಟ್ಟಿ ಸ್ವಾಗತಿಸಿದ್ದಾರೆ. ಹಾಗೇ, ಇನ್ನೇನು ಕೆಲವೇ ದಿನದಲ್ಲಿ ಈ ಮೂಲಕ ಶ್ರೀಮುರಳಿ ಅವರ ಅಭಿಮಾನಿಗಳಿಗೆ ಭರ್ಜರಿ ಸುದ್ದಿ ಸಿಗಲಿದೆ.












Click it and Unblock the Notifications