ಮಗ ಬೇಕಾ? ಮಗಳು ಬೇಕಾ? ಸಿದ್ದು ಮೂಲಿಮನಿ ಹೇಳಿದ್ದೇನು?
ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ನಟಿ ಪ್ರಿಯಾ ಜೆ ಆಚಾರ್ ಹಾಗೂ ಪಾರು ಧಾರಾವಾಹಿ ಖ್ಯಾತಿಯ ನಟ ಸಿದ್ದು ಮೂಲಿಮನಿ 2023ರ ಫೆಬ್ರವರಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸದ್ಯ ಇಬ್ಬರೂ ತಮ್ಮ ತಮ್ಮ ಹೊಸ ಪ್ರಾಜೆಕ್ಟ್‌ಗಳಲ್ಲಿ ಬ್ಯೂಸಿಯಾಗಿದ್ದು, ಸಿದ್ದು ಮೂಲಿಮನಿ ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಈ ಮಧ್ಯೆ ಇತ್ತೀಚಿನ ಸಂದರ್ಶನದಲ್ಲಿ ಸಿದ್ದು ತಮ್ಮ ಖಾಸಗಿ ವಿಚಾರಗಳ ಬಗ್ಗೆ ಹಂಚಿಕೊಂಡಿದ್ದಾರೆ.
ಬಾಸ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, 'ನಾನು ಪ್ರಿಯಾ ಇಬ್ಬರೂ ಸರಳವಾಗಿ ಇರಲು ಇಷ್ಟಪಡುತ್ತೇವೆ. ಜೊತೆಯಾಗಿ ಸಿನಿಮಾಗೆ ಹೋಗುತ್ತೇವೆ. ಇಬ್ಬರು ಜೊತೆಯಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತೇವೆ. ಹೀಗೆ ಇಬ್ಬರು ಜೊತೆಯಲ್ಲಿ ಸಮಯ ಕಳೆಯುತ್ತಲೇ ಇರುತ್ತೇವೆ. ಆದರೆ ಅದು ನೋಡುವವರಿಗೆ ಗೊತ್ತಾಗಲ್ಲ ಅಷ್ಟೇ. ಗೊತ್ತಾಗಬಾರದು ಎಂದು ಮಾಸ್ಕ್ ಹಾಕಿಕೊಂಡು ಓಡಾಡುತ್ತೇವೆ'.

'ಜನಗಳ ಮಧ್ಯೆ ಇದ್ದಾಗಲೇ ಜೀವನ ನೋಡಲು ಸಾಧ್ಯ ಹೀಗಾಗಿ ಜನರ ಮಧ್ಯೆ ಇಬ್ಬರು ಹೋಗುತ್ತೇವೆ. ನಾವು ಜನರನ್ನು ಬಿಟ್ಟು ಬದುಕುತ್ತೇವೆ. ಪ್ರಪಂಚವನ್ನು ಬಿಟ್ಟು ಬದುಕುತ್ತೇವೆ ಅಂದರೆ ಆಗುವುದಿಲ್ಲ. ನಟನಾಗಿ ನಾವು ಜೀವನ ನೋಡುವುದೇ ಜನರ ಮಧ್ಯೆ. ಹೀಗಾಗಿ ನನಗೆ ಜನರ ಮಧ್ಯೆಯೇ ಇರಲು ನನಗೆ ಇಷ್ಟ. ನನಗೆ ಜನಸಂದಣಿ ಅಂದರೆ ತುಂಬಾ ಇಷ್ಟ. ಆದರೆ ಗೊತ್ತಾಗದ ರೀತಿ ಹೋಗುತ್ತೇವೆ. ನಾವಿಬ್ಬರು ಜೊತೆಯಾಗಿ ಜಾತ್ರೆಗಳಿಗೆ ಸಹ ಹೋಗುತ್ತೇವೆ ಆದರೆ ಯಾರಿಗೂ ಗೊತ್ತಾಗಲ್ಲ ಅಷ್ಟೇ' ಎಂದರು.
ಜೂನಿಯರ್ ಸಿದ್ದು ಅಥವಾ ಜೂನಿಯರ್ ಪ್ರಿಯಾ ಯಾವಾಗ ಬರುತ್ತಾರೆ ಎಂದು ನಿರೀಕ್ಷೆ ಮಾಡಬಹುದು ಎನ್ನುವ ಪ್ರಶ್ನೆಗೆ ನಾಚಿಕೊಂಡೇ ಉತ್ತರಿಸಿದ ಸಿದ್ದು ಮೂಲಿಮನಿ, 'ನನ್ನ ಪ್ರಕಾರ ಪ್ರಿಯಾ ಕೂಡ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಮಾಡಿರುವ ನಟಿ. ಅವಳಿಗೆ ಅವಳದೇ ಆದ ಒಂದು ಜೀವನ ಇದೆ. ಒಂದು ಸ್ವಾತಂತ್ರ್ಯ ಇದೆ. ಹೀಗಾಗಿ ಅವಳು ಈಗ ಕೆಲಸ ಮಾಡಲಿ. ಒಬ್ಬ ಮನುಷ್ಯನಾಗಿ ನನಗೆ ಏನು ಅನಿಸುತ್ತದೆ ಅಂದರೆ ಇಂತಹ ನಿರ್ಧಾರದಲ್ಲಿ ಪುರುಷನಿಗೆ ಎಷ್ಟು ಹಕ್ಕು ಇರುತ್ತದೆಯೇ ಮಹಿಳೆಗೂ ಕೂಡ ಅಷ್ಟೇ ಹಕ್ಕು ಇರುತ್ತದೆ. ಯಾಕೆಂದರೆ ಅವಳ ದೇಹ ಅದು. ಅವರೇ ಅದನ್ನು ನಿರ್ಧರಿಸಲಿ ಎನ್ನುವುದು ನನ್ನ ಅಭಿಪ್ರಾಯ' ಎಂದು ಹೇಳಿದರು.
'ಇನ್ನು ಒಳ್ಳೆಯ ಸಿನಿಮಾಗಳು ಮಾಡಬೇಕು ಎನ್ನುವುದೇ ನಮ್ಮ ಈಗಿನ ಗುರಿ. ಜನರನ್ನು ಮನೋರಂಜಿಸ ಬೇಕು. ಇಬ್ಬರು ಒಟ್ಟಿಗೆ ಕೆಲಸ ಮಾಡಬೇಕು ಎನ್ನುವ ಲೆಕ್ಕಾಚಾರ ಇದೆ. ನಟ ನಟಿಯಾದ ಮೇಲೆ ಅದು ನಮ್ಮ ಜವಾಬ್ದಾರಿ. ಸದ್ಯಕ್ಕೆ ನಮ್ಮ ಮನೆಯಲ್ಲಿ ಪುಟ್ಟ ನಾಯಿ ಮರಿ ಇದೆ. ಸದ್ಯಕ್ಕೆ ಅವನೇ ನಮ್ಮ ಪ್ರೀತಿಯ ಮಗು. ಅವನನ್ನೇ ಆಟವಾಡಿಸಿಕೊಂಡು ಚೆನ್ನಾಗಿದ್ದೇವೆ' ಎಂದರು.
ಇಬ್ಬರು ಜೊತೆಯಾಗಿ ಸಿನಿಮಾ ಮಾಡುತ್ತೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಿದ್ದು, 'ತುಂಬಾ ಕಥೆಗಳು ಬಂದಿವೆ. ಆದರೆ ನಾನು ಪ್ರಿಯ ಒಟ್ಟಿಗೆ ಸಿನಿಮಾ ಮಾಡುತ್ತೇವೆ ಅಂದಾಗ ಜನರಿಗೆ ಒಂದು ನಿರೀಕ್ಷೆ ಇರುತ್ತದೆ. ಕಥೆ ತುಂಬಾ ಮುದ್ದಾಗಿ ಇರಬೇಕು. ಹೆಚ್ಚು ಡಾನ್ಸ್ ಇರಬೇಕು. ಈ ರೀತಿ ಕಥೆ ಬಂದರೆ ಖಂಡಿತಾ ಮಾಡುತ್ತೇವೆ' ಎಂದು ಹೇಳಿದರು.












Click it and Unblock the Notifications