RCB: ಆರ್‌ಸಿಬಿ ಯಾವತ್ತಿದ್ರು ನಮ್ದು, ಕೆಎಲ್‌ ರಾಹುಲ್‌ ನಮ್ಮವ್ರು & ಈ ಸಲ ಕಪ್‌ ಯಾರದ್ದು ಎಂದು ಹೇಳಿ ದೊಡ್ಡತನ ಮೆರೆದ ನಟ ಶಿವಣ್ಣ

ಐಪಿಎಲ್‌ನಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ ಅಂದ್ರೆ ಆರ್‌ಸಿಬಿ ಮಾತ್ರ. ಎಷ್ಟು ಬಾರಿ ಸೋತರೂ ಇದೇ ನಮ್ಮ ಮೆಚ್ಚಿನ ತಂಡ ಎಂದು ಧೈರ್ಯವಾಗಿ ಎದೆ ತಟ್ಟಿಕೊಂಡು ಹೇಳುವ ಅಪ್ಪಟ ರಾಯಲ್‌ ಅಭಿಮಾನಿಗಳನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹೊಂದಿದೆ. ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿರುವ ನಟ ಶಿವಣ್ಣ ಏನು ಹೇಳಿದ್ದಾರೆ ಎಂದು ಇಲ್ಲಿ ತಿಳಿಯೋಣ ಬನ್ನಿ.

ಆರ್‌ಸಿಬಿ ಇದುವರೆಗೂ ಆಡಿರುವ 17 ಸೀಸನ್‌ಗಳಲ್ಲೂ ಒಂದು ಟ್ರೋಫಿಯನ್ನು ಗೆದ್ದಿಲ್ಲ. ಹಾಗಂತ ಅಭಿಮಾನಿಗಳೇನು ಕಡಿಮೆಯಾಗಿಲ್ಲ. ಬದಲಾಗಿ ಹೆಚ್ಚಾಗುತ್ತಲೇ ಇದ್ದಾರೆ. ಈ ಸೀಸನ್‌ನಲ್ಲಾದರೂ ಆರ್‌ಸಿಬಿ ಕಪ್‌ ಹೊಡೆಯುವ ಭರವಸೆಯನ್ನು ಅಭಿಮಾನಿಗಳು ಇಟ್ಟುಕೊಂಡಿದ್ದಾರೆ.

ನಿಮ್‌ ಟೀಂ ಇದುವರೆಗೂ ಒಂದು ಕಪ್ ಗೆದ್ದಿಲ್ಲ, ಯಾಕೆ ಇಷ್ಟೊಂದು ಅಭಿಮಾನ ಎಂದು ಕೇಳುವವರಿಗೆ ಮುಟ್ಟಿ ನೋಡಿಕೊಳ್ಳುವ ಹಾಗೆ ಉತ್ತರವನ್ನೂ ಕೂಡ ನೀಡುತ್ತಿದ್ದಾರೆ. ಅಲ್ಲದೆ, ಉರಿಸೋಕೆ ಬಂದೋರಿಗೆ ವಾಪಾಸ್‌ ಮಾತಿನಲ್ಲೇ ತಿರುಗೇಟು ಕೊಟ್ಟು ಕಳುಹಿಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಲೇ ಇವೆ.

ಆರ್‌ಸಿಬಿ ನಮ್ದು: ಮತ್ತೊಂದೆಡೆ ಆರ್‌ಸಿಬಿ ಮೇಲಿರುವ ಪ್ರೀತಿ ಬಗ್ಗೆ ಸುದ್ದಿಗಾರರೊಂದಿಗೆ ನಟ ಶಿವಣ್ಣ ಮಾತನಾಡಿದ್ದಾರೆ. ಯಾವಾಗಲೂ ಆರ್‌ಸಿಬಿ ಮೇಲೆ ಪ್ರೀತಿ ಇದ್ದೇ ಇರುತ್ತದೆ. ಗೆಲವು ಸಾಧಿಸಬೇಕಂತಲೂ ಎಲ್ಲಾರಿಗೂ ಆಸೆ ಇರುತ್ತದೆ. ಆದರೆ ಆಟದಲ್ಲಿ ಯಾರು ವಿನ್‌ ಆಗುತ್ತಾರೆ ಅಂತಾ ಹೇಳುವುದಕ್ಕೆ ಆಗುವುದಿಲ್ಲ. ಸೋಲು, ಗೆಲುವು ಸಾಮಾನ್ಯವಾಗಿರುತ್ತದೆ. ಅಭಿಮಾನ ಅಂತೂ ಯಾವಾಗಲೂ ಆರ್‌ಸಿಬಿ ಟೀಂ ಮೇಲೆ ಇದ್ದೇ ಇರುತ್ತದೆ. ಅದು ಆರ್‌ಸಿಬಿ ಪವರ್ ಅಷ್ಟೇ ಎಂದು ಹೇಳಿ ಗಮನ ಸೆಳೆದರು.

ಐಪಿಎಲ್‌ 2025ರ 14ನೇ ಪಂದ್ಯದಲ್ಲಿ ಕೆಎಲ್‌ ರಾಹುಲ್‌ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿರುದ್ಧ ಅಬ್ಬರದ ಬ್ಯಾಟಿಂಗ್‌ ಮಾಡಿ ಡೆಲ್ಲಿ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಅವರು ಕರ್ನಾಟಕದ ಆಟಗಾರ ಆಗಿದ್ದು, ಈ ಬಾರಿ ಅವರನ್ನು ಡೆಲ್ಲಿ ಬಿಡ್‌ ಮಾಡಿದೆ. ಡೆಲ್ಲಿ ಪರ ಅಬ್ಬರದ ಬ್ಯಾಟಿಂಗ್‌ ಪ್ರದರ್ಶನ ತೋರಿ ಆರ್‌ಸಿಬಿಯನ್ನು ಕೊನೆಗೂ ಸೋಲಿನ ದಡ ಸೇರಿಸಿದರು. ಬಳಿಕ ಇದು ನನ್ನ ಹೋಂ ಗ್ರೌಂಡ್ ಎಂಬ ಸಹ್ನೆ ಮಾಡುತ್ತಾರೆ. ಈ ಬಗ್ಗೆ ಶಿವಣ್ಣ ಪ್ರತಿಕ್ರಿಯಿಸಿದ್ದಾರೆ.

ಕೆಎಲ್‌ ರಾಹುಲ್‌ ಬಗ್ಗೆ ಶಿವಣ್ಣ ಹೇಳಿದ್ದೇನು?: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿರುದ್ಧ ಗೆದ್ದ ಬಳಿಕ ಡೆಲ್ಲಿ ಪರ ಆಡಿದ ಕನ್ನಡಿದ ಕೆಎಲ್‌ ರಾಹುಲ್‌, ಇದು ನನ್ನ ಹೋಂ ಗ್ರೌಂಡ್‌ ಎಂದು ಸಹ್ನೆ ಮಾಡಿ ತೋರಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ನಟ ಶಿವರಾಜ್‌ಕುಮಾರ್‌ ಅವರು, ಕೆಎಲ್‌ ರಾಹುಲ್‌ ಯಾವ ತಂಡದಲ್ಲಿ ಆಡಿದರೂ ಅವರು ನಮ್ಮ ಕರ್ನಾಟಕದವರು ಎಂದು ಎಂದು ಹೇಳಿದರು.

ಕೆಎಲ್‌ ರಾಹುಲ್‌ ಬ್ಯಾಟಿಂಗ್‌ ಬಗ್ಗೆ ಮಾತನಾಡಿದ ಶಿವಣ್ಣ, ರಾಹುಲ್‌ ಅವರ ಬ್ಯಾಟಿಂಗ್‌ ಅಂದ್ರೆ ನಂಗೆ ತುಂಬಾ ಇಷ್ಟ. ಯಾವಾಗಲೂ ನೋಡುವಾಗ ರಾಹುಲ್ ಯಾರ ವಿರುದ್ಧ ಆಡಿದರೂ ಕೂಡ ಅವರು ಔಟ್‌ ಆಗಬಾರದು ಅಂದುಕೊಳ್ಳುತ್ತೇನೆ. ಅವರ ಬ್ಯಾಟಿಂಗ್‌ ಸ್ಟೈಲ್‌ ತುಂಬಾ ಚೆನ್ನಾಗಿದೆ. ವಿರಾಟ್‌ ಕೊಹ್ಲಿಯಷ್ಟೇ ಚೆನ್ನಾಗಿ ಬ್ಯಾಟಿಂಗ್‌ ಆಡುತ್ತಾರೆ ಎಂದು ಹೇಳಿದರು.

Actor Shivarajkumar Reacts to RCB Team KL Rahul and IPL 2025 Trophy

ಟ್ರೋಫಿ ಗೆಲ್ಲುವ ಟೀಂ ಯಾವುದು?: ಕಪ್‌ ಯಾವ ಟೀಂ ಗೆಲ್ಲುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಣ್ಣ, "ಕಪ್‌ ಇಂಡಿಯಾದಲ್ಲೇ ಇರುತ್ತದೆ," ಎಂದು ಉತ್ತರ ನೀಡುವ ಮೂಲಕ ದೊಡ್ಡತನವನ್ನ ಮೆರೆದಿದ್ದಾರೆ. ಅಲ್ಲದೆ, ಆರ್‌ಸಿಬಿ ಮಾತ್ರ ಯಾವಾಗಲೂ ನಮ್ಮ ಫೇವರಿಟ್ ಟೀಂ, ಆರ್‌ಸಿಬಿ ಅಂದ್ರೇನೇ ಒಂದು ಪವರ್ ಎಂದು ಹೇಳುವ ಮೂಲಕ ಗಮನ ಸೆಳೆದರು. ಒಟ್ಟಿನಲ್ಲಿ ಆರ್‌ಸಿಬಿ ಹಾಗೂ ಬೇರೆ ತಂಡದಲ್ಲಿನ ಕರ್ನಾಟಕದ ಆಟಗಾರರ ಬಗ್ಗೆ ಇರುವ ತಮ್ಮ ಪ್ರೀತಿ ಎಂಥಹದ್ದು ಎಂದು ಶಿವಣ್ಣ ಬಿಚ್ಚಿಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+