Shivarajkumar Birthday: ನಟ ಗಣೇಶ್ ಜತೆ ಶಿವಣ್ಣ ಹೊಸ ಸಿನಿಮಾ ಅನೌನ್ಸ್, ಪೋಸ್ಟರ್ ಸಖತ್ ವೈರಲ್
ಬೆಂಗಳೂರು, ಜುಲೈ 11: ವರನಟ ಡಾ.ರಾಜಕುಮಾರ್ ಹಿರಿಯ ಪುತ್ರ, ಸೆಂಚುರಿ ಸ್ಟಾರ್ ಶಿವರಾಜ ಕುಮಾರ್ ಅವರು ನವವಸಂತಕ್ಕೆ ಕಾಲಿಡುತ್ತಿದ್ದಾರೆ. ನಾಳೆ ಜುಲೈ 12ರಂದು ದೊಡ್ಮನೆಯ ಕುಡಿಯ ಹುಟ್ಟಿದ ಹಬ್ಬ. ಅಭಿಮಾನಿಗಳಲ್ಲಿ ಸಂಭ್ರಮಾಚರಣೆ ಜೋರಾಗಿದೆ. ಈ ವೇಳೆ ಶಿವಣ್ಣ ಅವರ ಹೊಸ ಸಿನಿಮಾ ಪ್ರಾಜೆಕ್ಟ್‌ಗಳು ಒಂದೊಂದಾಗಿ ಅನೌನ್ಸ್ ಆಗುತ್ತಿವೆ.
62 ವರ್ಷದಲ್ಲೂ ನಟ ಶಿವಣ್ಣ ಯುವ ನಟರನ್ನು ನಾಚಿಸುವಂತೆ ನಟನೆ, ಡಾನ್ಸ್ ಮೂಲಕ ಗಮನಸೆಳೆಯುತ್ತಾರೆ. ಸಾಲು ಸಾಲು ಸಿನಿಮಾಗಳಲ್ಲಿ ಅವರು ಬ್ಯೂಸಿ ಇದ್ದಾರೆ. ಇದರ ನಡುವೆ ಶಿವಣ್ಣ ಹುಟ್ಟಿದ ದಿನ ಹೊಸ ಸಿನಿಮಾಗಳು ಸೆಟ್ಟೆರಲು ಸಜ್ಜಾಗಿವೆ. ಪೂರ್ವ ತಯಾರಿಯಲ್ಲಿದ್ದ ಮಾಡಿಕೊಂಡಿರುವ ಕೆಲ ಸಿನಿಮಾಗಳು ಅಧಿಕೃತ ಘೋಷಣೆಗೆ ಆಗಲಿವೆ.

ಈ ಭಾರಿ ಶಿವಣ್ಣ ಹುಟ್ಟು ಹಬ್ಬ ದಿನ ಗೋಲ್ಡನ್ ಸ್ಟಾರ್ ಗಣೇಶ್ ಅಭಿಮಾನಿಗಳಿಗೂ ಸಂತಸದ ಸುದ್ದಿಯೊಂದು ಹೊರ ಬಿದ್ದಿದೆ. ಒಂದು ವಾರದ ಹಿಂದಷ್ಟೆ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ತಮ್ಮ ಜನ್ಮದಿನ ಆಚರಿಸಿಕೊಂಡಿದ್ದಾರೆ.
ನಾಳೆ ಶುಕ್ರವಾರ ಶಿವರಾಜ್ ಕುಮಾರ್ ಹುಟುಹಬ್ಬದ ಪ್ರಯುಕ್ತ 'ಶಿವಗಣ' ಸಿನಿಮಾ ಅಧಿಕೃತವಾಗಿ ಘೋಷಣೆ ಆಗಲಿದೆ. ಈಗಾಗಲೇ ಈ ಕುರಿತ ಪೋಸ್ಟರ್ ಸಖತ್ ವೈರಲ್ ಆಗುತ್ತಿದೆ.
ಶಿವಣ್ಣ ಜತೆ ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾ
ಹೌದು, 'ಶಿವಗಣ' ಎಂಬ ಶಿರ್ಷಿಕೆಯೇ ಹೇಳುವಂತೆ 'ಶಿವರಾಜ ಕುಮಾರ್' ಮತ್ತು 'ಗಣೇಶ್' ಒಂದಾಗಿ ನಟಿಸುತ್ತಿರುವ ಸಿನಿಮಾ ಇದಾಗಿದೆ. ಈ ಹಿಂದೆ ಕಳೆದ ವರ್ಷ ನವೆಂಬರ್ ನಲ್ಲಿ ತೆರೆಕಂಡ ನಿರ್ದೇಶಕ ಬೀರಬಲ್ ಖ್ಯಾತಿಯ ಎಂಜಿ ಶ್ರೀನಿವಾಸ್ ನಿರ್ದೇಶನದ 'ಘೋಸ್ಟ್' ಸಿನಿಮಾ ಬಿಡುಗಡೆ ಮುನ್ನ ನಟ ಗೋಲ್ಡನ್ ಸ್ಟಾರ್ ಗಣೇಶ್ ಜತೆ ಸಿನಿಮಾ ಅನೌನ್ಸ್ ಆಗುವುದಿದೆ. ಆದರೆ ಇನ್ನೂ ಯಾವುದು ಫೈನಲ್ ಆಗಿಲ್ಲ ಎಂದು ಅಂದೆ ನಟ ಶಿವಣ್ಣ ಸುಳಿವು ಕೊಟ್ಟಿದ್ದರು.

ಅದರಂತೆ ಶಿವಣ್ಣ ಹುಟ್ಟು ಹಬ್ಬದಂದೆ ನಟ ಗೋಲ್ಡನ್ ಸ್ಟಾರ್ ಗಣೇಶ್ ಶಿವಣ್ಣ ಅವರ ಜೊತೆಗಿನ ಪೋಸ್ಟರ್ ಬಿಡುಗಡೆ ಆಗಿದೆ. ಶಿವಣ್ಣನಿಗೆ 'ಶಿವಗಣ' ಚಿತ್ರತಂಡವು ಜನುಮ ದಿನದ ಶುಭಾಶಯ ಕೋರಿದೆ.
New movie update #ShivaGana#Shivanna #Shivarajkumar #KingShivanna #DrShivarajkumar #goldenstarganesh #Ganesh #DrShivarajkumarUpdates pic.twitter.com/M7zv2pY08l
— Dr Shivarajkumar updates ™ (@shivannaupdates) July 11, 2024
ಇಬ್ಬರು ಸ್ಟಾರ್ ನಟರ ಫ್ಯಾನ್‌ಗೆ ಕುತೂಹಲ
ರಾಮ್ ಬಾಬು ಪ್ರೊಡಕ್ಷನ್ ನಲ್ಲಿ ಈ ಹೊಸ ಸಿನಿಮಾ ಸೆಟ್ಟೆರಲಿದೆ. ನಿರ್ದೇಶಕ ನಂದ ಕಿಶೋರ್ ಈ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ ಎನ್ನಲಾಗುತ್ತಿದೆ. ಸದ್ಯಕ್ಕೆ ಇಷ್ಟೇ ಗುಟ್ಟು ಬಿಟ್ಟುಕೊಡುವ ಮೂಲಕ ಚಿತ್ರತಂಡ ಇಬ್ಬರು ಸ್ಟಾರ್ ನಟರ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗುವಂತೆ ಮಾಡಿದೆ.
ಪೋಸ್ಟ್‌ರ್ ಪ್ರಕಾರ, ಶಿವಣ್ಣ ಮಾಸ್ ಲುಕ್‌ನಲ್ಲಿ ಕಾಣಸಿಕೊಂಡರೆ, ನಟ ಗಣೇಶ್ ಗಂಭೀರ ಪಾತ್ರ ನಿರ್ವಹಿಸುವಂತೆ ಕಾಣುವ ಪೋಸ್ಟರ್ ಇದಾಗಿದೆ. ಈ ಬಾರಿ ಗಣೇಶ್ ಅವರು ತಮ್ಮ ಹಳೆಯ ಲವ್ಲಿ, ಕಾಮಿಡಿ ಪಾತ್ರಕ್ಕಿಂತಲೂ ಇಲ್ಲಿ ವಿಭಿನ್ನವಾಗಿ ಕಾಣುವ ಸಾಧ್ಯತೆ ಇದೆ ಎನ್ನಲಾಗಿದೆ.
ಅಭಿಮಾನಿಗಳಿಗೆ ಶಿವಣ್ಣ ಸಂದೇಶ
ಅಭಿಮಾನಿಗಳ ಜೊತೆಗೆ ಕಳೆದಾಗಲೇ ನನ್ನ ಹುಟ್ಟುಹಬ್ಬ ದೊಡ್ಡ ಹಬ್ಬ ಆಗುತ್ತದೆ. ನೀವು ಅಕ್ಕರೆಯಿಂದ ಕೊಡುವ ಅಪ್ಪುಗೆ, ಶುಭಾಶಯಗಳು, ಆಶೀರ್ವಾದ ನನಗೆ ಶ್ರೀರಕ್ಷೆ. ಆದರೆ ಈ ವರ್ಷ ಕಾರಣಾಂತರಗಳಿಂದ ನಾನು ನಿಮ್ಮ ಜೊತೆಗೆ ಇರಲು ಆಗುವುದಿಲ್ಲ. ಆದರೆ ವರ್ಷವಿಡೀ ಒಟ್ಟಿಗೆ ಪ್ರತಿ ದಿನ ಸೆಲೆಬ್ರೆಟ್ ಮಾಡೋಣ. ನಾನು ಬರ್ತಡೆಗೆ ಇಲ್ಲದಿದ್ದರೆ ನಿಮ್ಮೊಂದಿಗೆ ರಣಗಲ್ ಇರ್ತಾನೆ ಎಂದು ಶಿವಣ್ಣ ತಿಳಿಸಿದ್ದಾರೆ.












Click it and Unblock the Notifications