ಜೈಲಿನಲ್ಲಿರುವ ಸೋನು ಭೇಟಿಯಾದ ರಾಕೇಶ್‌ ಅಡಿಗ : ಗೆಳೆಯನ ಬಳಿ ಆಕೆ ಹೇಳಿಕೊಂಡಿದ್ದೇನು..?

ಬೆಂಗಳೂರು, ಏಪ್ರಿಲ್‌ 02: ಬಾಲಕಿಯನ್ನು ಅಕ್ರಮವಾಗಿ ದತ್ತು ಪಡೆದ ಆರೋಪದ ಮೇಲೆ ಬಿಗ್‌ಬಾಸ್‌ ಓಟಿಟಿ ಸ್ಪರ್ಧಿ, ರೀಲ್ಸ್‌ ಸ್ಟಾರ್‌ ಸೋನು ಶ್ರೀನಿವಾಸ್ ಗೌಡ ಜೈಲು ಸೇರಿ 12 ದಿನಗಳು ಕಳೆಯುತ್ತಿದೆ. ಆದರೆ ಆಕೆಗೆ ಈವರೆಗೂ ಬಿಡುಗಡೆ ಭಾಗ್ಯ ಬಂದಿಲ್ಲ. ಸದ್ಯ ಜೈಲಿನಲ್ಲಿರುವ ಸೋನು ಶ್ರೀನಿವಾಸ್ ಗೌಡರನ್ನು ಬಿಗ್‌ಬಾಸ್‌ ಸ್ಪರ್ಧಿ ನಟ ರಾಕೇಶ್‌ ಅಡಿಗ ಭೇಟಿಯಾಗಿದ್ದಾರೆ.

ಸೋನು ಶ್ರೀನಿವಾಸ್ ಗೌಡರ ಹಾಗೂ ನಟ ರಾಕೇಶ್‌ ಅಡಿಗ ಬಿಗ್‌ಬಾಸ್‌ ಒಟಿಟಿ ಸೀಜನ್‌ 1ರ ಸ್ಪರ್ಧಿಗಳಾಗಿದ್ದರು. ಶೋ ಸಮಯದಲ್ಲಿ ಇವರಿಬ್ಬರು ಬೆಸ್ಟ್‌ ಫ್ರೆಂಡ್ಸ್‌ ಆಗಿದ್ದರು. ಬಿಗ್‌ಬಾಸ್‌ ಮನೆಯಿಂದ ಹೊರ ಬಂದ ಬಳಿವೂ ಇವರಿಬ್ಬರು ಪಾರ್ಟಿ, ಕಾರ್ಯಕ್ರಮದಲ್ಲಿ ಪರಸ್ಪರ ಭೇಟಿಯಾಗುತ್ತಿದ್ದರು. ಇದೀಗ ಸಂಕಷ್ಟದಲ್ಲಿರುವ ಗೆಳತಿಯನ್ನು ಭೇಟಿಯಾಗಲು ರಾಕೇಶ್‌ ಅಡಿಗ ಜೈಲಿಗೆ ಧಾವಿಸಿದ್ದಾರೆ.

Actor Rakesh Adiga Meets Sonu Srinivas gowda In Jail

ಸೋನು ಶ್ರೀನಿವಾಸ್‌ ಗೌಡ ಭೇಟಿಯಾಗಿರುವ ರಾಕೇಶ್‌ ಅಡಿಗ ಆಕೆಗೆ ಧೈರ್ಯ ಹೇಳಿದ್ದಾರೆ. ಸೋನು ಭೇಟಿ ಬಳಿಕ ಜೈಲಿನಲ್ಲಿರುವ ಆಕೆ ಮನಸ್ಥಿತಿ ಬಗ್ಗೆ ರಾಕೇಶ್‌ ಅಡಿಗ ವಿವರಿಸಿದ್ದಾರೆ. "ಸೋನು ಜೈಲಿನಲ್ಲಿ ತುಂಬಾ ಅಳುತ್ತಿದ್ದಾಳೆ. ನಾನು ಹೋಗಿ ನೋಡಿದಾಗ ಅವಳಲ್ಲಿ ತುಂಬಾ ಗೊಂದಲ ಇತ್ತು. ಏನು ನಡೆಯುತ್ತಿದೆ ಅಂತಾನೇ ಗೊತ್ತಾಗುತ್ತಿಲ್ಲ ಅವಳಿಗೆ. ನಾನು ಏನು ತಪ್ಪು ಮಾಡಿದ್ದೇನೆ ಅಂತಾ ಇಲ್ಲಿಗೆ ಬಂದಿದ್ದೇನೆ ಎಂದು ಪ್ರಶ್ನಿಸುತ್ತಿದ್ದಾಳೆ".

"ನಾನು ಆ ಮಗುವಿಗೆ ಒಳ್ಳೆಯದೇ ಬಯಸಿದ್ದೆ. ನಾನು ಅವಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದೆ. ಅವಳಿಗೆ ಯಾವುದೇ ತೊಂದರೆ ಕೊಟ್ಟಿಲ್ಲ ನಾವು. ವಿಡಿಯೋ ಮಾಡುತ್ತಿದ್ದೇವು ಜೊತೆಗೆ ಆದರೆ ರೀಲ್ಸ್‌ ಎಲ್ಲಾ ಆಕೆ ಕೈಯಲ್ಲಿ ಮಾಡಿಸಿಲ್ಲ. ನಾನು ಒಳ್ಳೆಯದು ಮಾಡಿದರೂ ಹೀಗೆ ಆಯ್ತಲ್ಲ ಎನ್ನುವ ಮನಸ್ಥಿತಿ ಆಕೆಗಿದೆ" ಎಂದು ರಾಕೇಶ್‌ ಅಡಿಗ ವಿವರಿಸಿದ್ದಾರೆ.

ಇನ್ನು ನನಗೆ ನ್ಯಾಯ ಸಿಕ್ಕೇ ಸಿಗುತ್ತದೆ. ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗೇ ಆಗುತ್ತದೆ ಎನ್ನುವ ಭರವಸೆಯಲ್ಲಿ ಸೋನು ಶ್ರೀನಿವಾಸ್‌ ಗೌಡ ಇದ್ದಾರೆ ಎನ್ನುವ ವಿಚಾರವನ್ನು ರಾಕೇಶ್‌ ಅಡಿಗ ಹೇಳಿದ್ದಾರೆ.

ಸೋನು ಶ್ರೀನಿವಾಸ್ ಗೌಡ ಬಂಧನ ಯಾಕೆ..?

ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸರು ಸೋನು ಶ್ರೀನಿವಾಸ್ ಗೌಡ ಬಂಧಿಸಿದ್ದರು. ಮಗು ದತ್ತು ಪಡೆದಿರುವುದಾಗಿ ಸೋನು ಗೌಡ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು. ಏಳು ವರ್ಷದ ಮಗುವನ್ನು ಕಾನೂನು ಬಾಹಿರವಾಗಿ ಅವರು ದತ್ತು ಪಡೆದಿದ್ದರು ಎನ್ನುವ ಆರೋಪವಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೀತಾ ದೂರು ನೀಡಿದ್ದರು. ಜೆ.ಜೆ.ಆ್ಯಕ್ಟ್ ಅಡಿ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಿಸಿಕೊಂಡು ಬಂಧಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+