ಅರ್ಜುನ್ ಜನ್ಯ ಹುಚ್ಚ ಎಂದ ನಟ ರಾಜ್ ಬಿ.ಶೆಟ್ಟಿ, ಕಾರಣವೇನು?
ಸ್ಯಾಂಡಲ್‌ವುಡ್‌ನ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಅವರು ಡೈರೆಕ್ಟರ್ ಆಗಿ ಬಡ್ತಿ ಪಡೆದಿದ್ದಾರೆ. ತಮ್ಮ ಸಂಗೀತದ ಮೂಲಕ ಮೋಡಿ ಮಾಡುತ್ತಿದ್ದ ಅವರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅರ್ಜುನ್ ಜನ್ಯ ಅವರ ಚೊಚ್ಚಲ ನಿರ್ದೇಶನದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ತಾರಾಗಣದ "45" ಸಿನಿಮಾ ಮೂಡಿಬರುತ್ತಿದೆ. ಈಗಾಗಲೇ ಈ ಸಿನಿಮಾದ ಟೀಸರ್ ಬಿಡುಗಡೆಯಾಗಿ ಸಖತ್ ಸದ್ದು ಮಾಡುತ್ತಿದೆ. ಆದರೆ, ಅತ್ಯುತ್ತಮ ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯಾ ಅವರನ್ನು ರಾಜ್ ಬಿ.ಶೆಟ್ಟಿ ಹುಚ್ಚ ಎಂದು ಕರೆದಿದ್ದಾರೆ.
ಹೌದು 45 ಸಿನಿಮಾ ಕಾರ್ಯಕ್ರಮದ ವೇದಿಕೆಯಲ್ಲೇ ಅವರು ಜನ್ಯ ಅವರನ್ನು ಹುಚ್ಚ ಎಂದು ಕರೆದಿದ್ದಾರೆ. ಇದನ್ನು ಕೇಳಿ ವೇದಿಕೆಯಲ್ಲಿದ್ದ ಉಪ್ಪಿ ಕೂಡ ಶಾಕ್ ಆಗಿದ್ದಾರೆ. ಈ ಸಿನಿಮಾದ ಬಗ್ಗೆ ಮಾತನಾಡುತ್ತಿದ್ದ ರಾಜ್ ಬಿ ಶೆಟ್ಟಿ ಅವರು ಅರ್ಜುನ್ ಜನ್ಯ ಅವರ ಬಗ್ಗೆ ಉಲ್ಲೇಖಿಸಿ ಈ ರೀತಿ ಮಾತನಾಡಿದ್ದಾರೆ. ಅರ್ಜುನ್ ಜನ್ಯ ಅವರಲ್ಲಿ ನಾನು ಒಬ್ಬ ಶ್ರೇಷ್ಠ ನಿರ್ದೇಶಕನನ್ನ ನೋಡಿದ್ದೀನಿ. ಒಂದು ಸಿನಿಮಾದಲ್ಲಿ ಅರವತ್ತು ಪಾತ್ರ ಇದ್ದರೆ, ಅಷ್ಟೂ ಪಾತ್ರಕ್ಕೂ ಡಬ್ ಮಾಡಿ, ಅದನ್ನ ಫೈನಲ್ ಮಾಡಿ, ಡಿಟಿಎಸ್ ಮಾಡಿ ಅದನ್ನ ಬೇರೆಯವರಿಗೆ ತೋರಿಸುವ ಒಬ್ಬ ಹುಚ್ಚ ಭೂಮಿ ಮೇಲಿದ್ರೆ ಅದು ಅರ್ಜುನ್ ಜನ್ಯ ಮಾತ್ರ ಎಂದು ರಾಜ್ ಶೆಟ್ಟಿ ಮೆಚ್ಚುಗೆಯ ಮಾತನ್ನಾಡಿದ್ದಾರೆ.

ಏಕೆಂದರೆ ಅದು ಸಾಧ್ಯವೇ ಇಲ್ಲ, ಇಂಪಾಸಿಬಲ್. ನಾವೆಲ್ಲ ಒಂದು ಪಾತ್ರಕ್ಕೆ ಡಬ್ ಮಾಡೋಕೆ ಸುಸ್ತಾಗ್ತೀವಿ. ನಾನು ಅವರ ಸ್ಟುಡಿಯೋಗೆ ಹೋಗಿ ನೋಡಿದ್ರೆ ಎಲ್ಲ ಸೀನ್‌ಗಳ, ಎಲ್ಲ ಪಾತ್ರಗಳ ಬಗ್ಗೆ ಯಾವ ರೀತಿ ಮಾತನಾಡಬೇಕು? ಯಾವ ಟೋನ್‌ನಲ್ಲಿರಬೇಕು ಅನ್ನೋ ಇಷ್ಟು ಹುಚ್ಚು ನಾನು ನೋಡಲೇ ಇಲ್ಲ ಎಂದಿದ್ದಾರೆ. ಇನ್ನು ಈ ಸಿನಿಮಾ ಆಗ್ತಾ ನನಗೆ ಭಯ ಕೂಡ ಶುರುವಾಯ್ತು. ಸಿನಿಮಾ ಹೋದ ವರ್ಷ ಮುಗಿದಿದೆ. ಆದ್ರೆ ಈ ವರ್ಷ ರಿಲೀಸ್ ಆಗ್ತಿದೆ. ಒಬ್ಬ ನಿರ್ದೇಶಕ ಇಷ್ಟು ತಾಳ್ಮೆ ತೆಗೆದುಕೊಳ್ಳುವುದು ಹಾಗೂ ಇದಕ್ಕೆ ನಿರ್ಮಾಪಕ ಬೆನ್ನೆಲುಬಾಗಿ ನಿಲ್ಲುವುದು ಅಂದ್ರೆ ಅದು ಜನ್ಯ ಹಾಗೂ ರಮೇಶ್ ರೆಡ್ಡಿ ಅವರು ಮಾತ್ರ ಎಂದಿದ್ದಾರೆ.

ಇನ್ನು ಈ ಸಿನಿಮಾದಲ್ಲಿ ನಾನು ನಟಿಸಿ ಹೊರಬಂದಾಗ ನಾನು ದೊಡ್ಡ ಸ್ಟಾರ್ ನಟರ ಜೊತೆ ನಟಿಸಿದೆ ಎಂದು ಅನಿಸಲೇ ಇಲ್ಲ. ಶಿವಣ್ಣ ಹಾಗು ಉಪ್ಪಿ ಸರ್ ಅವರಿಗೆ ಆ ಹಿರಿಮೆ ಇದ್ದರೂ ಆ ರೀತಿ ನಡೆದುಕೊಳ್ಳಲೇ ಇಲ್ಲ. ಆದರೆ ಸಾಮಾನ್ಯವಾಗಿ ಶಿವಣ್ಣ ಹಾಗೂ ಉಪೇಂದ್ರ ಅವರೊಂದಿಗೆ ನಟನೆ ಅಂದ್ರೆ ನಮಗೆ ಹೆದರಿಕೆ ಇರುತ್ತೆ. ಇವರಿಬ್ಬರೂ ಆ ರೀತಿ ನಡೆದುಕೊಳ್ಳಲಿಲ್ಲ. ಆದರೆ ಅವರು ನನಗೆ ತುಂಬಾ ಸಪೋರ್ಟ್ ಮಾಡಿದ್ರು. ಇವರಿಬ್ಬರೂ ಮಹಾನ್ ಕೆಲಸಗಾರರು ಎಂದು ರಾಜ್ ಬಿ ಶೆಟ್ಟಿ ಹೇಳಿದ್ದಾರೆ.












Click it and Unblock the Notifications