'ನಂಗೆ ಯಾವ ಹುಡುಗಿಯ ಮೇಲೂ ಈವರೆಗೂ ಲವ್‌ ಆಗಿಲ್ಲ..ಯಾಕಂದ್ರೆ'

ಕೆಲವೊಂದು ವಿಷಯಗಳಿಂದ, ಕೆಲವೊಂದು ಆಗಬಾರದೆ ಇರುವ ಘಟನೆಗಳಿಂದ ತಮ್ಮ ಕುಟುಂಬದಲ್ಲಿ ಒಂದಿಷ್ಟು ಸಮಸ್ಯೆ ಆಯ್ತು. ನನ್ನ ಅಕ್ಕನ ಮದುವೆ ಆಯ್ತು. ಅವರು ಲವ್‌ ಮ್ಯಾರೇಜ್‌ ಆದರು. ಜೊತೆಗೆ ಹಣಕಾಸಿನ ವಿಚಾರಕ್ಕೂ ತುಂಬಾ ಸಮಸ್ಯೆ ಆಯ್ತು. ಅಕ್ಕ ಮದುವೆಯಾಗಾದ ಮನೆಯಲ್ಲಿ ಒಪ್ಪಿಕೊಂಡಿರಲಿಲ್ಲ. ಅವಳೇ ಹೋಗಿ ಮದುವೆಯಾದಳು ಎಂದು ಮಜಾಭಾರತ ಖ್ಯಾತಿಯ ರಾಘವೇಂದ್ರ ತಮ್ಮ ಮನಸಿನಲ್ಲಿ ಕೊರೆಯುತ್ತಿರುವ ನೋವನ್ನು ಹೊರ ಹಾಕಿದ್ದಾರೆ.

ರಾಜೇಶ್‌ ಗೌಡ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ಅವರು, ಅಕ್ಕ ಮದುವೆಯಾಗಿ ನಾನು ಮಜಾಭಾರತಕ್ಕೆ ಬರುವ ತನಕ ನಾನು ಅವರೊಂದಿಗೆ ಮಾತನಾಡುತ್ತಿರಲಿಲ್ಲ. ನಾಲ್ಕು ವರ್ಷ ಅಕ್ಕನ ಜೊತೆ ಮಾತನಾಡಿರಲಿಲ್ಲ. ಅಕ್ಕನನ್ನು ನೋಡಿಯೇ ಇರಲಿಲ್ಲ. ಆಮೇಲೆ ಅಕ್ಕನಿಗೆ ಮಗುವಾಯ್ತು, ಮಗು ಚಿಕ್ಕವಳಿರುವಾಗ ಹೋಗಿ ಮಾತನಾಡಿಸಿದೆ ಎಂದರು.

Actor Raghavendra Talks About Why He Has Not Loved Any Girl Till Now

ನಮ್ಮ ಅಕ್ಕ ತಂದೆ ಅವರಲ್ಲಿ ಮದುವೆ ಮಾಡಿಕೊಡಿ ಎಂದು ಕೇಳಿದ್ದರು. ಆದರೆ ನಮ್ಮ ತಂದೆ ಒಪ್ಪಿರಲಿಲ್ಲ. ತಂದೆಗೆ ಅವರದೇ ಆದ ಕನಸಿರುತ್ತದೆ. ನನ್ನ ಮಗಳನ್ನು ಹೀಗೆ ನೋಡಿಕೊಳ್ಳಬೇಕು ಎನ್ನುವ ಆಸೆ ಇರುತ್ತದೆ. ಹಾಗಂತ ನಮ್ಮ ಅಕ್ಕನ ಆಸೆ, ನಿರ್ಧಾರವನ್ನು ತಪ್ಪು ಎನ್ನಲು ಆಗುವುದಿಲ್ಲ. ಈಗ ಅವಳಿಗೆ ಅವರೇ ಸರಿ ಎನಿಸುತ್ತದೆ. ಆದರೆ ಆ ಸಮಯದಲ್ಲಿ ಸಂದರ್ಭ ಬೇರೆ ಇತ್ತು. ಕೆಲವು ಸಂಬಂಧಿಕರೇ ನಮಗೆ ಆಗಲಿಲ್ಲ ಎಂದು ಹೇಳಿದರು.

ನಾನು, ಅಪ್ಪ, ಅಮ್ಮ ಒಂದು ಕಡೆ ನಿಂತಾಗ ಕೆಲವು ಸಂಬಂಧಿಕರೇ ನಮಗೆ ಆಗಲಿಲ್ಲ. ಅವರು ಅಕ್ಕನ ಜೊತೆ ಚೆನ್ನಾಗಿದ್ದರು. ಅದು ನಮ್ಮ ತಂದೆ ಮನಸ್ಸಿಗೆ ಹೇಗಾಯ್ತು ಅಂದರೆ ಅವಳೇ ಸರಿ..ನಾನು ಮಾಡಿದ್ದೇ ತಪ್ಪಾ ಅನಿಸುತ್ತಿತ್ತು.

Actor Raghavendra Talks About Why He Has Not Loved Any Girl Till Now

ಅಂತಹ ಸಮಯದಲ್ಲಿ ನನಗೆ ನನ್ನ ತಂದೆ ತಾಯಿನೇ ಮುಖ್ಯ ಆಗಿದ್ದರು. ನನ್ನ ತಂದೆ ದಿನ ಅಳುತ್ತಿದ್ದರು. ಮಗುವಿನಂತೆ ಬಿಕ್ಕಳಿಸಿ ಅಳುತ್ತಿದ್ದರು. ಅತ್ತು ಅತ್ತು ಕಣ್ಣೀರು ಒರೆಸಿ ಒರೆಸಿ ಅವರಿಗೆ ಚರ್ಮ ಕಿತ್ತು ಹೋಗಿತ್ತು ಎಂದು ರಾಘವೇಂದ್ರ ತಮ್ಮ ನೋವನ್ನು ಹೊರಹಾಕಿದರು.

ನನಗೆ ಈಗ ಇಪ್ಪತೈದು ವರ್ಷ ಆದರೂ ನನಗೆ ಯಾರ ಮೇಲೂ ಪ್ರೀತಿ ಆಗಿಲ್ಲ ಯಾಕೆಂದರೆ ಈ ಘಟನೆಯೇ ಕಾರಣ, ಯಾಕೆಂದರೆ ನಮ್ಮ ತಂದೆ ಮಗು ತರ ಅತ್ತಿದ್ದನ್ನು ನೋಡಿದ್ದೇನೆ. ಆ ಸದ್ದು ಈಗಲೂ ನನ್ನ ಕಿವಿಯಲ್ಲಿ ಗುಸುಗುಡುತ್ತದೆ.

ಆ ಕಷ್ಟದ ದಿನಗಳನ್ನು ನೋಡಿದ್ದೇನಲ್ಲಾ ಹಾಗಾಗಿ ಪ್ರೀತಿ ಬಗ್ಗೆ ಗಮನ ಇಲ್ಲ. ಈಗ ಮನೆಯಲ್ಲಿ ಎಲ್ಲದಕ್ಕೂ ಒಕೆ ಆದರೆ ನನ್ನ ತಲೆಯಲ್ಲೇ ಲವ್‌ ಎನ್ನುವುದು ಇಲ್ಲ ಎಂದು ತಾವು ಯಾಕೆ ಈವರೆಗೂ ಯಾವ ಹುಡುಗಿಯನ್ನೂ ಪ್ರೀತಿಸಿಲ್ಲ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+