Actor Nani: ಅಭಿಮಾನಿಗಳಿಗೆ ‘ದಸರಾ’ ಉಡುಗೊರೆ ಕೊಟ್ಟ ನಟ ನಾನಿ!
ತಮ್ಮ ವಿಭಿನ್ನ ಶೈಲಿ ನಟನೆ ಮೂಲಕ 'ನ್ಯಾಚುರಲ್ ಸ್ಟಾರ್' ಎಂಬ ಬಿರುದು ಪಡೆದಿರುವ ನಟ ನಾನಿ, ಒಂದು ಚಿತ್ರದಿಂದ ಮತ್ತೊಂದು ಚಿತ್ರಕ್ಕೆ ವಿಭಿನ್ನ ಕಥೆಗಳನ್ನು ಸೆಲೆಕ್ಟ್ ಮಾಡಿ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಡ್ತಾರೆ. ಈಗಲೂ ಅಷ್ಟೇ ಅಭಿಮಾನಿಗಳಿಗೆ ಗುಡ್ ನ್ಯೂಸ್‌ನ ಕೊಟ್ಟಿದ್ದಾರೆ ನ್ಯಾಚುರಲ್ ಸ್ಟಾರ್ ನಾನಿ. ಹಾಗಾದರೆ ಹಬ್ಬದ ದಿನವೇ, ನಟ ನಾನಿ ಕೊಟ್ಟ ಆ ಉಡುಗೊರೆ ಏನು? ಅಭಿಮಾನಿಗಳು ಥ್ರಿಲ್ ಆಗಿರುವುದು ಏಕೆ ಗೊತ್ತಾ?
ನಟ ನಾನಿಗೆ ದಕ್ಷಿಣ ಭಾರತದಲ್ಲಿ ಭಾರಿ ಡಿಮ್ಯಾಂಡ್ ಇದ್ದು ಸಾಲು ಸಾಲು ಸಿನಿಮಾದಲ್ಲಿ ಈಗ ನಾನಿ ಸಖತ್ ಬ್ಯುಸಿ. ದಸರಾ ಸಿನಿಮಾ ಗೆದ್ದ ಬಳಿಕ, ಹಲವಾರು ಚಿತ್ರಗಳಿಗೆ ನಾನಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಮಧ್ಯೆ ನಾನಿಯ 31ನೇ ಸಿನಿಮಾ ಅನೌನ್ಸ್ ಆಗಿ, ಫ್ಯಾನ್ಸ್ ಸಖತ್ ಥ್ರಿಲ್ ಆಗಿದ್ದಾರೆ. ಈ ಹಿಂದೆ ಕಾಮಿಡಿ ಕಥಾಹಂದರ ಇದ್ದ 'ಅಂಟೆ ಸುಂದರಾನಿಕಿ' ಸಿನಿಮಾ ನಿರ್ದೇಶನ ಮಾಡಿದ್ದ ವಿವೇಕ್ ಆತ್ರೇಯಾ ಮತ್ತೆ ನಾನಿ ಜೊತೆ ಕೈ ಜೋಡಿಸಿದ್ದಾರೆ. ಹಾಗಾದರೆ ಈ ಸಿನಿಮಾಗೆ ಬಂಡವಾಳ ಹೂಡುತ್ತಿರುವುದು ಯಾರು? ಇಲ್ಲೂ ಒಂದು ಸರ್ಪ್ರೈಸ್ ಇದೆ, ಮುಂದೆ ಓದಿ.

RRR ಜೊತೆಗೂ ನಂಟು!
ಹೌದು ದಸರಾ ಹಬ್ಬ ಹಿನ್ನೆಲೆ ಹೈದರಾಬಾದ್‌ನಲ್ಲಿ'ಸೂರ್ಯನ ಶನಿವಾರ' ಚಿತ್ರ ಸೆಟ್ಟೇರಿದೆ. ನಿರ್ಮಾಪಕ ಡಿವಿವಿ ದಾನಯ್ಯ ಚಿತ್ರಕಥೆಯನ್ನ ನಿರ್ದೇಶಕರಿಗೆ ಹಸ್ತಾಂತರಿಸಿದ್ರು. ನಿರ್ಮಾಪಕ ದಿಲ್ ರಾಜು ಕ್ಯಾಮೆರಾಗೆ ಚಾಲನೆ ನೀಡಿದರೆ ಮತ್ತೆ ವಿವಿ ವಿನಾಯಕ್ ಕ್ಲಾಪ್ ಮಾಡಿದ್ರು. ನಟ ಎಸ್.ಜೆ.ಸೂರ್ಯ ಸೇರಿ ಇಡೀ ಚಿತ್ರತಂಡವೇ ಮುಹೂರ್ತದ ಸಮಾರಂಭದಲ್ಲಿ ಉಪಸ್ಥಿತರಿದ್ದು ಸಂಭ್ರಮ ಹಂಚಿಕೊಂಡರು. ಅಲ್ಲದೆ ಮತ್ತೊಂದು ಕಡೆ RRR ಸಿನಿಮಾಗೂ, ಈ ಸಿನಿಮಾಗು ನಂಟು ಇದೆ ಗೊತ್ತಾ?
RRR ನಿರ್ಮಾಪಕರ ಸಾಥ್!
ಅಂದಹಾಗೆ 'ಸೂರ್ಯನ ಶನಿವಾರ' ಮಾಸ್ ಆಗಿರಲಿದ್ದು, ಈ ಸಿನಿಮಾದ ಕಥೆ & ಪಾತ್ರಕ್ಕಾಗಿ ನಟ ನಾನಿ ಸಾಕಷ್ಟು ವರ್ಕೌಟ್ ಮಾಡಿದ್ದಾರೆ ಹಾಗೂ ಮಾಡುತ್ತಿದ್ದಾರೆ. ಪ್ರಿಯಾಂಕಾ ಅರುಳ್ ಮೋಹನ್ ನಾಯಕಿಯಾಗಿದ್ದು, ತಮಿಳು ಸ್ಟಾರ್ ಎಸ್‌ಜೆ ಸೂರ್ಯ ಇಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. RRR ಸೇರಿದಂತೆ ಹಲವಾರು ಸೂಪರ್ ಹಿಟ್ ಚಿತ್ರ ಕೊಟ್ಟಿರುವ ಡಿಡಿವಿ ಎಂಟರ್ ಟೈನರ್ ಬ್ಯಾನರ್ ಅಡಿ ದಾನಯ್ಯ ಮತ್ತು ಕಲ್ಯಾಣ್ ದಾಸರಿ 'ಸೂರ್ಯನ ಶನಿವಾರ' ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
ಹಾಗೇ ಟೈಟಲ್ ಮೂಲಕವೇ ಇದೀಗ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ನಟ ನಾನಿ ಅವರ ಮುಂದಿನ ಚಿತ್ರಕ್ಕೆ ಜೇಕ್ಸ್ ಬಿಜಾಯ್ ಮ್ಯೂಸಿಕ್ ಇದೆ. ಮುರಳಿ ಕ್ಯಾಮೆರಾ ವರ್ಕ್ ಸೇರಿದಂತೆ ಹಲವು ಘಟಾನುಘಟಿ ನಟರು ಸಾಥ್ ಕೊಡಲಿದ್ದಾರಂತೆ. ಹಾಗೇ ಈ ಸೂರ್ಯನ ಶನಿವಾರ ಸಿನಿಮಾ ಪ್ಯಾನ್ ಇಂಡಿಯಾ ಆಗಿರಲಿದ್ದು, ಕನ್ನಡವೂ ಸೇರಿದಂತೆ ತೆಲುಗು, ತಮಿಳು ಮತ್ತು ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ತೆರೆಕಾಣಲಿದೆ.












Click it and Unblock the Notifications