Anchor Anushree: ಆಂಕರ್ ಅನುಶ್ರೀ ಲವ್ ಮಾಡ್ತಿದ್ದಾರಂತೆ ಈ ನಟನ ಸಹೋದರ; ಯಾರು ಈ ರಾಮಚಂದ್ರ?

ಕನ್ನಡದ ನಟಿ ಹಾಗೂ ನಿರೂಪಕಿ ಅನುಶ್ರೀ ಅವರ ಮದುವೆ ವಿಚಾರ ಸಾಕಷ್ಟು ಚರ್ಚೆಯಾಗುತ್ತಿರುತ್ತದೆ. ಮದುವೆ ಯಾವಾಗ ಎಂಬ ಪ್ರಶ್ನೆಗೆ ಉತ್ತರ ಹೇಳದೇ ಇಷ್ಟು ದಿನ ಅನುಶ್ರೀ ಅವರು ಜಾರಿಕೊಳ್ಳುತ್ತಿದ್ದರು. ಇದೀಗ ಕನ್ನಡದ ನಿರೂಪಕಿ ಅನುಶ್ರೀ ಅವರು ಮದುವೆ ಆಗುವ ಬಗ್ಗೆ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ.

ಇಷ್ಟು ದಿನಗಳ ಕಾಲ ಮದುವೆಯ ಬಗ್ಗೆ ನಿರಾಸಕ್ತಿ ತೋರಿದ್ದ ಅನುಶ್ರೀ ಕೊನೆಗೂ ನಾನು ಮದುವೆ ಆಗಲಿದ್ದೇನೆ. ನನ್ನ ತಂದೆ-ತಾಯಿಯ ದಾಂಪತ್ಯದ ಕಹಿ ಅನುಭವವನ್ನು ಕಣ್ಣಾರೆ ಕಂಡಿದ್ದ ನನಗೆ ಮದುವೆ ಎಂದರೆ ನೋವು ತರುವ ಸಂಗತಿಯಾಗಿತ್ತು.

Actor Jaggesh Second Brother Ramachandra Doing Love To Anchor Anushre

ನಾನು ನನ್ನ ಮದುವೆ ಬಗ್ಗೆ ಯೋಚಿಸಿದಾಗಲೆಲ್ಲಾ ನನಗೆ ಮದುವೆ-ದಾಂಪತ್ಯ ಇವೆಲ್ಲಾ ನನಗೆ ಬೇಡವೇ ಬೇಡ. ನನ್ನ ಅಮ್ಮ-ಅಪ್ಪನ ಸಂಸಾರದ ಸುಖದ ಹಣೆಬರಹವನ್ನು ನೋಡಿದ್ದಾಗಿದೆ, ಸಾಕು' ಎನಿಸುತ್ತಿತ್ತು ಎಂದು ಹೇಳಿದ್ದಾರೆ. ಆದರೆ, ಈಗ ಮದುವೆಗೆ ಗ್ರೀನ್‌ ಸಿಗ್ನಲ್‌ ನೀಡಿದ್ದಾರೆ. ಅನುಶ್ರೀ ಮದುವೆ ಆಗಲು ಗ್ರೀನ್‌ ಸಿಗ್ನಲ್‌ ನೀಡುತ್ತಿದ್ದಂತೆ ನಾನು ಅನುಶ್ರೀ ಇಷ್ಟಪಡುತ್ತಿರುವುದಾಗಿ ರಾಮಚಂದ್ರ ಅವರು ಹೇಳಿಕೊಂಡಿದ್ದಾರೆ.

ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಶೋನಲ್ಲಿ ಫ್ಯಾಮಿಲಿ ರೌಂಡ್‌ ವೇಳೆ ಕೆಂಟೆಸ್ಟೆಂಟ್‌ಗಳು ತಮ್ಮ ಶೋ ಪ್ರದರ್ಶನದ ನಂತರ ಮಾತನಾಡಿದ ನಟ ಜಗ್ಗೇಶ್ ಸಹೋದರ ರಾಮಚಂದ್ರನ ಬಗ್ಗೆ ಮಾತನಾಡಿದ್ದಾರೆ. ಈ ವೇಳೆಯೇ ರಾಮಚಂದ್ರ ಅವರು ವೇದಿಕೆ ಮೇಲೆ ಬಂದಿದ್ದಾರೆ. ಇದನ್ನು ನೋಡಿ ಗಾಬರಿಯಾದ ನಟ ಜಗ್ಗೇಶ್ ಲೇ.., ನೀನೆಲ್ಲಿಂದ ಬಂದ್ಲಾ..? ಎಂದು ಕೇಳುತ್ತಾರೆ. ಆಗ ನಾನು ವೇದಿಕೆ ಹಿಂದೆಯೇ ಇದ್ದೆ, ನೀನು ಮಾತನಾಡುವುದನ್ನು ಕೇಳಿ ಬಂದೆ ಎಂದು ಹೇಳುತ್ತಾರೆ. ಜೀ ಕನ್ನಡ ವೇದಿಕೆ ಅವರೇ ನನ್ನನ್ನು ಇಲ್ಲಿಗೆ ಕರೆಸಿಕೊಂಡಿದ್ದಾರೆ ಎಂದು ಕೈ ಸನ್ನೆಯ ಮೂಲಕವೇ ತಿಳಿಸಿದ್ದಾರೆ. ಯಾವನೋ ನೋಡು ಕರೆಕ್ಟಾಗಿ ನನ್ನ ತಮ್ಮನನ್ನು ಇಲ್ಲಿಗೆ ಕಳಿಸಿಬಿಟ್ಟಿದ್ದಾರೆ ಎಂದು ಜಗ್ಗೇಶ್‌ ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಶೋ ವೇದಿಕೆ ಮೇಲೆ ದಿಢೀರನೇ ಕಾಣಿಸಿಕೊಂಡ ನಟ ಜಗ್ಗೇಶ್ ಅವರ ಎರಡನೇ ಸಹೋದರ ರಾಮಚಂದ್ರ, ನಾನು ಅನುಶ್ರೀ ಇಷ್ಟಪಡುತ್ತಿರುವುದಾಗಿ ಹೇಳಿದ್ದಾರೆ. ಇದನ್ನು ಕೇಳಿ ಜಗ್ಗೇಶ್ ಹಾಗೂ ಅನುಶ್ರೀ ಇಬ್ಬರೂ ಗಾಬರಿಯಾಗಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಶೋನ ಜಡ್ಜ್‌ ಆಗಿ ಜಗ್ಗೇಶ್ ಕಾರ್ಯ ನಿರ್ಹಿಸುತ್ತಿದ್ದಾರೆ. ಕಾಮಿಡಿ ಕಿಲಾಡಿಗಳು ಶೋನಲ್ಲಿ ಒಂದು ತಂಡ ಮಾಲೀಕರಾಗಿರುವ ಆಂಕರ್ ಅನುಶ್ರೀ ಮೇಲೆ ನನಗೆ ಲವ್ವಾಗಿದೆ ಎಂದು ನಟ ಜಗ್ಗೇಶ್ ಅವರ ಸಹೋದರ ರಾಮಚಂದ್ರ ಹೇಳಿಕೊಂಡಿದ್ದಾರೆ.

ಈ ಕಾರ್ಯಕ್ರಮದ ವೇದಿಕೆಯಲ್ಲಿ ತಮ್ಮನ ಬಗ್ಗೆ ಮಾತನಾಡುತ್ತಾ ಒಂದು ಕುಟುಂಬದಲ್ಲಿ ಯಾರಾದರೂ ಪ್ರಪಂಚ ಜ್ಞಾನ ಇಲ್ಲದವರು ಇದ್ದರೆ ಅವರ ಪ್ರತಿ 3ನೇ ತಲೆಮಾರಿಗೆ ಒಬ್ಬರಂತೆ ಹೀಗೆ ಪ್ರನಪಂಚ ಜ್ಞಾ ಇಲ್ಲದವರ ಜನಿಸುತ್ತಾರೆ. ನಮ್ಮ ತಾತ ಅವರ ತಂದೆ ಪ್ರಪಂಚದ ಜ್ಞಾನ ಇಲ್ಲದವರು ಜನಿಸುತ್ತಾರಂತೆ. ಅದೇ ರೀತಿ ನಮ್ಮ ಎರಡನೇ ತಮ್ಮ ರಾಮಚಂದ್ರ ಅವರಿಗೂ ಪ್ರಪಂಚ ಜ್ಞಾನದ ಪರಿಕಲ್ಪನೆ ಕಡಿಮೆಯಿದೆ. ಅವರಿಗೆ ಮಾತನಾಡಲು ಬರುವುದಿಲ್ಲ.

ಇನ್ನು, ನನ್ನ ತಮ್ಮ ರಾಮಚಂದ್ರ ಜನಿಸಿದ ನಂತರವೇ ನಮ್ಮಪ್ಪನಿಗೆ ಅದೃಷ್ಟ ಖುಲಾಯಿಸಿತು. ಅವನು ಹುಟ್ಟಿದ ನಂತರ ನಮ್ಮ ತಂದೆ ಮಾತ್ರವಲ್ಲದೇ ನಮ್ಮ ಇಡೀ ಕುಟುಂಬವೇ ಆರ್ಥಿಕ, ಸಾಮಾಜಿಕ, ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿಯೂ ಅಭಿವೃದ್ಧಿ ಉಂಟಾಯಿತು. ಅವನೊಬ್ಬ ದೇವರಿದ್ದಂತೆ ಎಂದು ಹೇಳಿದರು.

ರಾಮಚಂದ್ರನದ್ದು ಲವ್ ಮ್ಯಾರೇಜ್, ಅವನಿಗೆ ಒಟ್ಟು ಮೂರು ಜನರು ಹೆಂಡತಿಯರಿದ್ದಾರೆ. ಅವರು ಹೆಂಡತಿಯನ್ನು ಬಿಟ್ಟು ಇಬ್ಬರನ್ನು ಮೇಂಟೇನ್ ಮಾಡುತ್ತಿದ್ದಾನೆ. ಇನ್ನು ಬೆಂಗಳೂರಿನಲ್ಲಿಯೂ ಇಬ್ಬರನ್ನು ಇಷ್ಟ ಪಟ್ಟಿರುವುದಾಗಿ ಹೇಳಿದ್ದಾನೆ. ಅಲ್ಲಿ ಇಲ್ಲಿ ಹೋದ ಕಡೆಗಳಲ್ಲಿ ತನಗೆ ಇಷ್ಟವಾದವರನ್ನು ಪರಿಚಯ ಮಾಡಿಕೊಳ್ತಾನೆ, ಅದರಲ್ಲಿ ಸಲುಗೆ ಬೆಳೆದರೆ ಲವ್ ಮಾಡುತ್ತಾನೆ. ಈಗ ಕಾಮಿಡಿ ಕಿಲಾಡಿಗಳು ವೇದಿಕೆಗೆ ಬಂದಿದ್ದಾನೆ ಎಂದರೆ ಅವನಿಗೆ ಇಲ್ಲಿ ಯಾರಾದರೂ ಇಷ್ಟವಾಗಿರುತ್ತಾರೆ. ಲೇ ರಾಮಚಂದ್ರ ನಿಂಗೆ ಇಲ್ಲಿ ಯಾರು ಇಷ್ಟವಾದ್ರು? ಯಾರನ್ನು ಲವ್ ಮಾಡ್ತೀಯಾ? ಎಂದು ಕೇಳಿದ್ದಕ್ಕೆ ತೊದಲು ನುಡಿಯಲ್ಲಿಯೇ ಆಂಕರ್ ಅನುಶ್ರೀ ಎಂದು ಹೇಳಿದ್ದಾರೆ. ಇದನ್ನು ಕೇಳಿದ ಆಂಕರ್ ಅನುಶ್ರೀ ಶಾಕ್‌ ಆಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+