'ನಮ್ಮ ಅಮ್ಮ-ಹೆಂಡತಿಯನ್ನು ಸುಲಭವಾಗಿ ಬೀದಿಗೆ ತಂದು ನಿಲ್ಲಿಸ್ತಾರೆ'
'ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಹಾಕುವವರು ಬಡವರ ಮಕ್ಕಳನ್ನು ಬೆಳೆಸಿ ಎನ್ನುತ್ತಾರೆ. ಆದರೆ ನೀವೇ ಬಡವರ ಮಕ್ಕಳನ್ನು ತುಳಿಯುತ್ತಿದ್ದೀರಾ. ಕಲಾವಿದರ ಅಮ್ಮ, ಅಕ್ಕ ಇವರಿಗೆ ಬಹಳ ಸುಲಭವಾದ ವಿಚಾರ. ಇವರ ಅಮ್ಮಂದಿರೆಲ್ಲಾ ಬಹಳ ಒಳ್ಳೆಯವರು. ಆದರೆ ನಮ್ಮ ಅಮ್ಮಂದಿರನ್ನು ಸುಲಭವಾಗಿ ಬೀದಿಗೆ ತಂದು ನಿಲ್ಲಿಸುತ್ತಾರೆ' ಎಂದು ಮಜಾಭಾರತ ಖ್ಯಾತಿಯ ನಟ ಜಗ್ಗಪ್ಪ ಕೆಟ್ಟ ಕಮೆಂಟ್‌ಗಳಿಂದ ಆಗುವ ನೋವಿನ ಬಗ್ಗೆ ಮಾತನಾಡಿದ್ದಾರೆ.
ಆ್ಯಂಕರ್ ಅನುಶ್ರೀ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಜಗ್ಗಪ್ಪ, 'ನಮ್ಮ ಅಪ್ಪ ಒಂದು ದಿನ ಹೇಳೇ ಬಿಟ್ಟರು, ನನ್ನ ಹೆಂಡತಿನಾ ನಾನು ಒಂದು ಹಾಲು ತರಲು ಸಹ ಹೊರಗೆ ಕಳಿಸಲ್ಲ, ಅದ್ಯಾವನೋ ಕೈಯಲ್ಲಿ ನಿಮ್ಮ ಅಮ್ಮನ್ನು ಬೀದಿಗೆ ತಂದು ನಿಲ್ಲಿಸೆದ್ಯಾಲ್ಲಾ ಅಂತಾ ಕೇಳಿಯೇ ಬಿಟ್ಟರು.

ಅದನ್ನು ಕೇಳಿ ಯಾಕೆ ಈ ಕೆಲಸಗಳನ್ನು ಒಪ್ಪಿಕೊಂಡೆ ಅನಿಸಿಬಿಡ್ತು. ನನ್ನ ತಂಗಿನ ನನ್ನ ಅಮ್ಮನ್ನು ಒಂದು ಹಾಲು ತರಲು ಸಹ ಆಚೆ ಕಳಿಸಲ್ಲ ನಾವು. ಬಿಡಮ್ಮಾ ನೀವು ಆರಾಮಾಗಿ ಮನೆಯಲ್ಲಿರಿ ನಾನು ಹೋಗಿ ತಂದು ಕೋಡುತ್ತೇನೆ ಅಂತಾ ನಾವೇ ಎಲ್ಲವನ್ನೂ ನೋಡಿಕೊಳ್ಳುತ್ತೇವೆ' ಎಂದರು.
'ಯಾರೋ ಕೆಲಸಕ್ಕೆ ಬಾರದವನು ನನ್ನ ಅಮ್ಮನನ್ನು ತಂದು ಬೀದಿಗೆ ನಿಲ್ಲಿಸುತ್ತಾನೆ. ನನ್ನ ತಂಗಿಯನ್ನು ತಂದು ಬೀದಿಗೆ ನಿಲ್ಲಿಸುತ್ತಾನೆ. ನನ್ನ ಹೆಂಡತಿಯನ್ನು ಬೀದಿಗೆ ನಿಲ್ಲಿಸುತ್ತಾನೆ. ಥೂ ಇದೊಂದು ಕೆಲಸನಾ ಅನಿಸಿಬಿಡ್ತು. ನಾನು ರಾತ್ರಿಯೆಲ್ಲಾ ಕಷ್ಟಪಟ್ಟು ಪ್ರಾಕ್ಟೀಸ್ ಮಾಡಿ, ಸ್ಟೇಜ್‌ಗೆ ಬಂದು ಆ್ಯಕ್ಟ್ ಮಾಡಿ ನಿಮ್ಮನ್ನೆಲ್ಲಾ ನಗಿಸುವುದಲ್ಲದೇ, ಮನೆಯವರೆನೆಲ್ಲಾ ಬೀದಿಗೆ ಯಾಕೆ ತರಬೇಕು' ಎಂದು ಪ್ರಶ್ನಿಸಿದರು.

'ಕಲಾವಿದರ ಸಮಸ್ಯೆಯನ್ನು ಯಾರೂ ಕೇಳುವುದಿಲ್ಲ. ಬಾಯಿ ಬಿಟ್ಟರೆ ಅವನಿಗೇನು ಅಂತಾ ಅಮ್ಮ, ಅಕ್ಕನ ಬಗ್ಗೆ ಮಾತನಾಡುತ್ತಾರೆ. ಅಂದರೆ ಅವರಿಗೆ ಕಲಾವಿದರು ಅಂದ್ರೆ ಅಷ್ಟು ಸುಲಭವಾಗಿ ಸಿಗುವವರು. ಅವರು ಒಂಥರಾ ಬೀದಿಯಲ್ಲಿ ಇದ್ದವರ ರೀತಿ. ಅದೇ ನನಗೆ ಬೇಜಾರುವುದು.
ಏನಾದರೂ ತಪ್ಪು ಮಾಡಿದ್ದರೆ ಬೈದು ಬಿಡಿ. ನಮಗೆ ಯಾರೋ ಸ್ಟ್ರಿಪ್ಟ್ ಬರೆದುಕೊಡುತ್ತಾರೆ ನಾವು ನಟನೆ ಮಾಡುತ್ತೇವೆ. ಅದರಲ್ಲಿ ನಮ್ಮ ಅಮ್ಮ ಏನು ಮಾಡಿದ್ದರು. ಅವರೇನು ತಪ್ಪು ಮಾಡಿದ್ದಾರೆ. ಇಂತಹ ತಪ್ಪು ಮಾಡಿದ್ದೀಯಾ ಅಂತಾ ನನಗೆ ಬಂದು ಚಪ್ಪಲಿಯಲ್ಲಿ ಹೊಡೆಯಿರಿ. ನಾನು ಆಗ ಸರಿ ಮಾಡಿಕೊಳ್ಳುತ್ತೇನೆ' ಎಂದು ನಟ ಜಗ್ಗಪ್ಪ ಕೆಟ್ಟ ಕಮೆಂಟ್ ಮಾಡುವವರ ಬಗ್ಗೆ ಬಹಳ ಬೇಸರ ವ್ಯಕ್ತಪಡಿಸಿದ್ದಾರೆ.












Click it and Unblock the Notifications