Golden Star Ganesh: 'ಕೃಷ್ಣಂ ಪ್ರಣಯ ಸಖಿ' ಯಶಸ್ಸಿನ ಬೆನ್ನಲ್ಲೇ ಗೋಲ್ಡನ್ ಸ್ಟಾರ್ ಗಣೇಶ್ ಮನೆಗೆ ಹೊಸ ಅತಿಥಿ.!
Actor Golden Star Ganesh: ಸಾಮಾನ್ಯವಾಗಿ ಸೆಲೆಬ್ರೆಟಿಗಳು ಯಶಸ್ಸು ಕಾಣುತ್ತಾ ಹೋದಂತೆಲ್ಲ ಅವರು ತಮ್ಮ ಜೀವನ ಶೈಲಿಯಲ್ಲೂ ಬದಲಾವಣೆಗಳನ್ನು ಬಯಸುತ್ತಾರೆ. ಅಲ್ಲದೆ, ದೊಡ್ಡ ಮೊತ್ತದ ವಾಹನಗಳನ್ನು ಕೊಳ್ಳುವ ಮೂಲಕ ಸುದ್ದಿಯಾಗಿಬಿಡುತ್ತಾರೆ. ಹಾಗೆಯೇ ಇದೀಗ ಗೋಲ್ಡಲ್ ಸ್ಟಾರ್ ಗಣೇಶ್ ಕೂಡ ದುಬಾರಿ ಕಾರು ಖರೀದಿ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ.
ಇತ್ತೀಗಷ್ಟೇ ಬಿಡುಗಡೆಯಾದ ಕೃಷ್ಣಂ ಪ್ರಣಯ ಸಖಿ ಸಿನಿಮಾ ಈಗಾಗಲೇ 50 ದಿನಗಳನ್ನು ಪೂರೈಸುವ ಮೂಲಕ ಯಶಸ್ಸು ಕಂಡಿದೆ. ಇನ್ನು ಇದೀಗ ಸಿನಿಮಾ ಸಖತ್ ಹಿಟ್ ಆದ ಬೆನ್ನಲ್ಲೇ ನಟ ಗೋಲ್ಟನ್ ಸ್ಟಾರ್ ಗಣೇಶ್ ಅವರು ದುಬಾರಿ ಕಾರು ಖರೀದಿ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ಹಾಗಾದರೆ ಈ ಕಾರಿನ ದರ, ವಿಶೇಷತೆಗಳೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಗಣೇಶ್ ನಟನೆಯ 'ಕೃಷ್ಣಂ ಪ್ರಣಯ ಸಖಿ' ಸಿನಿಮಾ ಬಿಡುಗಡೆಯಾಗಿ ಒಂದು ವಾರದಲ್ಲೇ ಸೂಪರ್ ಹಿಟ್ ಅನಿಸಿಕೊಂಡಿತು. ಅದರಲ್ಲೂ "ಜೇನ ಧನಿಯೋಳೆ, ಮೀನ ಕಣ್ಣೋಳೆ," ಹಾಡು ದೇಶದ ವಿದೇಶಗಳಲ್ಲಿ ಇನ್ನೂ ಕೂಡ ಸದ್ದು ಮಾಡುತ್ತಿದೆ. ಚಿಕ್ಕವಯಸ್ಸಿನ ಮಕ್ಕಳಿಂದ ಹಿಡಿದು ವೃದ್ಧರೂ ಕೂಡ ಈ ಹಾಡಿಗೆ ರೀಲ್ಸ್ ಮಾಡುತ್ತಿದ್ದಾರೆ. ಅಷ್ಟರ ಮಟ್ಟಿಗೆ ಈ ಹಾಡು ಸಿನಿಮಾ ರಿಲೀಸ್‌ಗೂ ಮುಂಚೆ ಟ್ರೆಂಟ್ ಆಗಿತ್ತು. ಈಗಲೂ ಕೂಡ ಭಾರೀ ಸದ್ದು ಮಾಡುತ್ತಲೇ ಇದೆ.
ಈ ಮೂಲಕ ಕೃಷ್ಣಂ ಪ್ರಣಯ ಸಖಿ ಕೌಟುಂಬಿಕ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತಂದ ಸಿನಿಮಾ ಎನಿಸಿಕೊಂಡಿತು. ಇದೇ ಖುಷಿಯಲ್ಲಿ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ರೇಂಜ್ ರೋವರ್ ಕಾರನ್ನು ಖರೀದಿ ಮಾಡಿದ್ದಾರೆ. ಗಣೇಶ್, ತಮ್ಮ ಇಬ್ಬರು ಮಕ್ಕಳೊಂದಿಗೆ ಬಂದು ಹೊಸ ಕಾರು ಖರೀದಿಸಿರುವ ವಿಡಿಯೋ ಇದೀಗ ಎಲ್ಲೆಡೆ ಭಾರೀ ವೈರಲ್ ಆಗುತ್ತಿದೆ.
ಗಣೇಶ್ ಖರೀದಿ ಮಾಡಿರುವುದು ರೇಂಜ್ ರೋವರ್ ವೋಗ್ ಕಾರು ಎನ್ನುವ ಮಾಹಿತಿ ಲಭ್ಯವಾಗಿದೆ. ನಟ ಗಣೇಶ್ ಅವರು ಬೆಂಗಳೂರಿನ ಮಾರ್ಕ್ಲ್ಯಾಂಡ್ ಏಜೆನ್ಸಿ ಕಡೆಯವರಿಂದ ಕಾರನ್ನು ಖರೀದಿಸಿದ್ದಾರೆ. ಬಳಿಕ ಕಾರಿಗೆ ಪೂಜೆ ಮಾಡಿಸಿ, ಅದರಲ್ಲಿ ಮಕ್ಕಳು, ಪತ್ನಿಯನ್ನು ಕೂರಿಸಿಕೊಂಡು ಒಂದು ಜಾಲಿ ರೈಡ್ ಹೋಗಿದ್ದರು ಎಂದು ತಿಳಿದುಬಂದಿದೆ.
ಕಾರಿನ ದರ ಎಷ್ಟು?: ಇನ್ನು ರೇಂಜ್ ರೋವತರ್ನ ಕಡಿಮೆ ಬೆಲೆಯ ಕಾರಿನ ಬೆಲೆಯೇ ಸುಮಾರು 90,00,000 ರೂಪಾಯಿ ಆಗಿದೆ. ಗಣೇಶ್ ಖರೀದಿ ಮಾಡಿರುವುದು ರೇಂಜ್ ರೋವರ್ ವೋಗ್ ಕಾರು ಆಗಿದ್ದು, ಈ ಕಾರಿನ ಬೆಲೆ ಬೆಂಗಳೂರಿನಲ್ಲಿ ಸುಮಾರು 3,00,00,000 ರೂಪಾ ಇದೆ ಎನ್ನಲಾಗುತ್ತಿದೆ. ಗಣೇಶ್ ಕುಟುಂಬ ಕಾರನ್ನು ಡೆಲಿವರಿ ತೆಗೆದುಕೊಳ್ಳುತ್ತಿರುವ ವಿಡಿಯೋವನ್ನು ಕಾರ್ ಏಜೆನ್ಸಿಯವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಗಣೇಶ್ ಪುತ್ರನಿಗೆ ಹಾರ, ಪೇಟ ಹಾಕಿ, ಹೂಗುಚ್ಛ ನೀಡಿ ಕಾರನ್ನು ಡೆಲಿವರಿ ನೀಡಲಾಗಿದೆ.
ಇನ್ನು ಗಣೇಶ್ ದಂಪತಿಗಳು ಕೇಕ್ ಕತ್ತರಿಸಿ, ಎಲ್ಲರಿಗೂ ಸಿಹಿ ನೀಡಿ, ಹೊಸ ಕಾರು ಖರೀದಿ ಮಾಡಿದ್ದನ್ನು ಸಂಭ್ರಮಿಸಿದ್ದಾರೆ. ಗಣೇಶ್ ನಟನೆಯ ಈ 'ಕೃಷ್ಣಂ ಪ್ರಣಯ ಸಖಿ' ಸೂಪರ್ ಹಿಟ್ ಆಗಿದ್ದು, ಇದೀಗ ಅವರು ಹೊಸ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. 'ಯುವರ್ ಸಿನ್ಸಿಯರ್ಲಿ ರಾಮ್' ಹೆಸರಿನ ಸಿನಿಮಾ ಸೆಟ್ಟೇರಿದೆ. ಸಿನಿಮಾದಲ್ಲಿ ರಮೇಶ್ ಅರವಿಂದ್ ಸಹ ಇದ್ದು, ಇದರ ಹೊರತಾಗಿ ಇನ್ನೂ ಎರಡು ಸಿನಿಮಾಗಳು ಪ್ರಸ್ತುತ ಗಣೇಶ್ ಕೈಯಲ್ಲಿವೆ ಎನ್ನುವ ಮಾಹಿತಿ ಇದೆ.












Click it and Unblock the Notifications