Actor Dharmendra: ಪತಿ ಧರ್ಮೇಂದ್ರ ಆರೋಗ್ಯ ಸ್ಥಿರ: ನಿ*ನ ವದಂತಿ ವಿರುದ್ಧ ಪತ್ನಿ, ಪುತ್ರಿ ಅಸಮಾಧಾನ
Dharmendra Health Updates: ಬಾಲಿವುಡ್ ಹಿರಿಯ ನಟ ಧರ್ಮೇಂದ್ರ (Actor Dharmendra) ಅವರು ನಿಧನರಾದರು ಎಂಬ ಸುದ್ದಿ ನೆನ್ನೆ ಸೋಮವಾರ ರಾತ್ರಿಯಿಂದಲೇ ಪ್ರಕಟಗೊಂಡಿದೆ. ಈ ಸುದ್ದಿ ನಿಜವೆಂದು ಭಾವಿಸಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಂತಾಪ ಸೂಚಿಸಿದ್ದರು. ಬಳಿಕ ಅವರ ಮಗಳಿಂದ ಆರೋಗ್ಯ ಸ್ಥಿರವಾಗಿದ್ದ ಬಗ್ಗೆ ಸ್ಪಷ್ಟನೆ ಸಿಕ್ಕ ಬಳಿಕ ಡಿಲೀಟ್ ಮಾಡಿದ್ದಾರೆ. ಕರ್ನಾಟಕದಲ್ಲಿ ಸಂಸದ ಪಿಸಿ ಮೋಹನ್ ಅವರು ಸಹ ಸಂತಾಪ ಸೂಚಿಸಿದ್ದಾರೆ. ನಿಧನ ಸುದ್ದಿ ಸುಳ್ಳು ಎಂದು ಧರ್ಮೇಂದ್ರ (89) ಅವರ ಪುತ್ರಿ ಇಶಾ ಡಿಯೋಲ್ ಮತ್ತು ಪತ್ನಿ ಹೇಮಾ ಮಾಲಿನಿ ಅವರು ಸ್ಪಷ್ಟಪಡಿಸಿದ್ದಾರೆ. ಮಾಧ್ಯಮಗಳ ಮೇಲೆ ಕಿಡಿ ಕಾರಿದ್ದಾರೆ.
ನಟ ಧರ್ಮೇಂದ್ರ ಅವರ ನಿಧನ ಸುದ್ದಿಯನ್ನು ಅವರ ಕುಟುಂಬಸ್ಥರು ತಳ್ಳಿ ಹಾಕಿದ್ದಾರೆ, ಒಪ್ಪಿಲ್ಲ. ಇಂಥಹ ಸುಳ್ಳು ಸುದ್ದಿಯನ್ನು ಹಬ್ಬಿಸಬೇಡಿ ಎಂದು ಮಾಧ್ಯಮಗಳ ಮೇಲೆ ಅಸಮಾಧಾನ ಹೊರ ಹಾಕಿದ್ದಾರೆ. ಸಾಮಾಜಿಕ ಜಾಲತಾಣ ಸಕ್ರಿಯವಾದ ಬಳಿಕ ಇಂತಹ ಸುದ್ದಿಗಳು ಹೆಚ್ಚಾಗಿವೆ ಎಂದರೆ ತಪ್ಪಾಗಲಾದರು.

ಪುತ್ರಿ ಇಶಾ ಡಿಯೋಲ್ ಅವರು ತಂದೆ ನಿಧನ ವದಂತಿ ಬಗ್ಗೆ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ. 'ಮಾಧ್ಯಮಗಳು ಸುಳ್ಳು ಸಿದ್ದಿಯನ್ನು ಪ್ರಕಟಿಸಿವೆ. ಅಪ್ಪನಿಗೆ ಉಸಿರಾಟ ತೊಂದರೆ ಆಗಿದ್ದರಿಂದ ಆಸ್ಪತ್ರೆಗೆ ಸೇರಿಸಲಾಗಿತ್ತು. ಅವರ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ನಮ್ಮ ಕುಟುಂಬದ ಗೌಪ್ಯತೆಯನ್ನು ಗೌರವಿಸಬೇಕು ಎಂದು ಅವರು ಕೋರಿದ್ದಾರೆ'. ಕುಟುಂಬಸ್ಥರಿಂದಲೇ ಈ ಸ್ಪಷ್ಟನೆ ಸಿಗುತ್ತಿದ್ದಂತೆ ಸಂತಾಪ ಸೂಚಕ ಪೋಸ್ಟ್‌ಗಳಲ್ಲಿ ಕೆಲವು ಡಿಲೀಟ್ ಆಗಿವೆ. ಮತ್ತೆ ಕೆಲವು ಹಾಗೆಯೇ ಇವೆ.
ನಟ ಧರ್ಮೇಂದ್ರ ಪತ್ನಿ ಹೇಮಾ ಮಾಲೀನಿ ಅವರು ಸಹ ಮಂಗಳವಾರ ಬೆಳಗ್ಗೆ ಜಾಲತಾಣದಲ್ಲಿ ಪೋಸ್ಟ್ ಮಾಡಿ ವದಂತಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಹೇಮಾ ಮಾಲೀನಿ ಅವರು "ಸದ್ಯ ನಡೆಯುತ್ತಿರುವ ಘಟನೆಗಳು ಕ್ಷಮೆಗೆ ಅರ್ಹವಲ್ಲ. ಚಿಕಿತ್ಸೆಗೆ ಸ್ಪಂದಿಸುತ್ತಿರುವ ಮತ್ತು ಚೇತರಿಸಿಕೊಳ್ಳುತ್ತಿರುವ ವ್ಯಕ್ತಿಯ ಬಗ್ಗೆ ಜವಾಬ್ದಾರಿಯುತ ಸುದ್ದಿ ವಾಹಿನಿಗಳು ಹೇಗೆ ಸುಳ್ಳು ಸುದ್ದಿಗಳನ್ನು ಹರಡಬಹುದು? ಇದು ಬೇಜವಾಬ್ದಾರಿ ಮತ್ತು ಅಗೌರ ತೋರಿದಂತಿದೆ. ದಯವಿಟ್ಟು ನಮ್ಮ ಕುಟುಂಬ ಮತ್ತದರ ಗೌಪ್ಯತೆಗೆ ಗೌರವ ನೀಡುವಂತೆ' ಅವರು ಮನವಿ ಮಾಡಿದ್ದಾರೆ. ಬುದುಕಿರುವಾಗಲೇ ನಿಧನ ಹೊಂದಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
What is happening is unforgivable! How can responsible channels spread false news about a person who is responding to treatment and is recovering? This is being extremely disrespectful and irresponsible. Please give due respect to the family and its need for privacy.
— Hema Malini (@dreamgirlhema) November 11, 2025
ಧರ್ಮೇಂದ್ರ ಅವರಿಗೆ ಉಸಿರಾಟದ ತೊಂದರೆ ಕಾಣುತ್ತಿದ್ದಂತೆ ಆರೋಗ್ಯದಲ್ಲಿ ಏರು ಪೇರಾಗಿತ್ತು. ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ ಎಂದು ಆಸ್ಪತ್ರೆಗೆ ಭೇಟಿ ನೀಡಿ ತಂದೆಯ ಆರೋಗ್ಯ ವಿಚಾರಿಸಿದ ಬಳಿಕ ಧರ್ಮೇಂದ್ರ ಅವರ ಹಿರಿಯ ಮಗ ಸನ್ನಿ ಡಿಯೋಲ್ ತಿಳಿಸಿದ್ದಾರೆ. ಆಸ್ಪತ್ರೆಗೆ ಸನ್ನಿ ಡಿಯೋಲ್ ಜೊತೆಗೆ ಅವರ ಚಿತ್ರತಂಡ ಸಹ ಬಂದು ಆರೋಗ್ಯ ವಿಚಾರಿಸಿದೆ.
ಧರ್ಮೇಂದ್ರ ಅವರು ಆಸ್ಪತ್ರೆ ಸೇರಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆ ಅವರ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿತ್ತು. ಇದೀಗ ಪುತ್ರ, ಪುತ್ರಿ ಮತ್ತು ಪತ್ನಿ ಸೇರಿದಂತೆ ಕುಟುಂಬಸ್ಥರಿಂದ ಸಿಕ್ಕ ಸ್ಪಷ್ಟನೆ ಬಳಿಕ ಫ್ಯಾನ್ಸ್ ನಿರಾಳರಾಗಿದ್ದಾರೆ. ಶೀಘ್ರವೇ ಗುಣಮುಖರಾಗುವಂತೆ ಫ್ಯಾನ್ಸ್ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.
-
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
Duet Songs: ಆಶಾ ಭೋಸ್ಲೆ-ಲತಾ ಮಂಗೇಶ್ಕರ್ ಸಹೋದರಿಯರ ಕಂಠಸಿರಿಯಲ್ಲಿ ಅರಳಿದ ಮಾಧುರ್ಯ: ಒಟ್ಟಿಗೆ ಹಾಡಿದ ಹಿಟ್ ಹಾಡುಗಳಿವು -
Monalisa: ಕುಂಭಮೇಳ ವೈರಲ್ ಸುಂದರಿ ಮೊನಾಲಿಸಾ ದಂಪತಿಗೆ ಬಿಗ್ ರಿಲೀಫ್: ಬಂಧನಕ್ಕೆ ತಡೆ ನೀಡಿದ ಕೇರಳ ಹೈಕೋರ್ಟ್ -
Chandan Shetty: ವಯಸ್ಸಾದ್ಮೇಲೆ ಒಂಟಿತನ ಕಾಡುತ್ತೆ, ಆಗ ಕೊರಗುವ ಬದಲು ಈಗಲೇ ಒಳ್ಳೆಯ ಸಂಗಾತಿ ಹುಡುಕುವೆ: ಚಂದನ್ ಶೆಟ್ಟಿ -
Asha Bhosle: ಸಂಗೀತ ಜಗತ್ತಿಗೆ ಆಶಾ ಭೋಸ್ಲೆ ನೀಡಿದ ಕೊಡುಗೆ ಅಪಾರ: ಪ್ರಧಾನಿ ಮೋದಿ ಸೇರಿ ಗಣ್ಯರ ಸಂತಾಪ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್












Click it and Unblock the Notifications