ನಟ ಡಾಲಿ ಧನಂಜಯ್ ಮದುವೆಯ ನಿಶ್ಚಿತಾರ್ಥ; ವೈರಲ್
Actor Dhananjay Engagement: ನಟ ಡಾಲಿ ಧನಂಜಯ್ ಅವರ ಮದುವೆಗೆ ಈಗಾಗಲೇ ದಿನಾಂಕ ನಿಗದಿಯಾಗಿದೆ. ಇದೀಗ ಧನಂಜಯ ಅವರ ಅರಸೀಕೆರೆಯ ಕಾಳೇನಹಳ್ಳಿಯಲ್ಲಿರುವ ಮನೆಯಲ್ಲಿ ಮದುವೆ ಶಾಸ್ತ್ರಗಳು ಅದ್ಧೂರಿಯಾಗಿ ನಡೆಯುತ್ತಿದ್ದು, ಈ ಮುದ್ದಾದ ಜೋಡಿಯ ಪೋಟೋಗಳು ಸಾಮಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿವೆ.
2025ರ ಫೆಬ್ರವರಿ 16ರಂದು ಮೈಸೂರಿನ ಎಕ್ಸಿಬಿಷನ್ ಗ್ರೌಂಡ್‌ನಲ್ಲಿ ಡಾಲಿ ಮತ್ತು ಧನ್ಯತಾ ವಿವಾಹ ಅದ್ಧೂರಿಯಾಗಿ ನಡೆಯಲಿದ್ದು, ಸಮಾರಂಭದಲ್ಲಿ ಸಿನಿಮಾರಂಗ, ರಾಜಕೀಯ ಸೇರಿದಂತೆ ಹಲವು ಕ್ಷೇತ್ರಗಳ ಗಣ್ಯರು ಭಾಗಿಯಾಗಿ ಶುಭಹಾರೈಸಲಿದ್ದಾರೆ. ಇನ್ನು ಇದೀಗ ನಟ ಡಾಲಿ ಧನಂಜಯ್ ಮನೆಯಲ್ಲಿ ನಿಶ್ಚಿತಾರ್ಥ ಸಂಭ್ರಮ ಮನೆ ಮಾಡಿದ್ದು, ಪರಸ್ಪರ ಈ ಜೊಡಿಗಳು ಉಂಗುರ ಬದಲಸಿಕೊಂಡಿದ್ದಾರೆ. ಈ ಪೋಟೋಗಳು ಭಾರೀ ವೈರಲ್ ಆಗುತ್ತಿದೆ.

ದಾಂಪತ್ಯ ಜೀವನಕ್ಕೆ ಜೀವನಕ್ಕೆ ಕಾಲಿಡುತ್ತಿರುವ ಡಾಲಿ ಧನಂಜಯ್ ಹಾಗೂ ಧನ್ಯತಾ ಇದೀಗ ಮದುವೆ ಶಾಸ್ತ್ರದಲ್ಲಿ ಭಾಗಿಯಾಗಿದ್ದಾರೆ. ಧನಂಜಯ ಅವರ ಮನೆಯಲ್ಲಿ ನಿಶ್ಚಿತಾರ್ಥ ಸಂಭ್ರಮ ಹಾಗೂ ಲಗ್ನಪತ್ರಿಕೆ ಬರೆಸುವ ಶಾಸ್ತ್ರ ನಡೆದಿದೆ. ಇನ್ನು ಈ ಬಗ್ಗೆ ಮಾತನಾಡಿರುವ ಡಾಲಿ ಧನಂಜಯ್, ನಮ್ಮ ಅಜ್ಜಿ ಬದುಕಿದ್ದಾಗ ಅವರಿಗೆ ನಾನು ವಿವಾಹ ಆಗುವ ಹುಡುಗಿಯನ್ನು ಪರಿಚಯಿಸಿದ್ದೆ. ನಮ್ಮ ಮದುವೆಗೆ ನನ್ನ ಅಜ್ಜಿಯ ಆಶಿರ್ವಾದ ಇದೆ. ಮದುವೇ ಆಗುತ್ತಿದ್ದೇನೆ ಎಂದರು.
ಇನ್ನು ಎಲ್ಲಾ ಅಭಿಮಾನಿಗಳಿಗೂ ಕೂಡ ಊಟ ಹಾಕಿಸಬೇಕು. ಶಿವಣ್ಣ ನನ್ನ ಮದುವೆ ವಿಚಾರ ತಿಳಿದು ತುಂಬಾ ಸಂತೋಷ ಪಟ್ಟರು. ಅಲ್ಲದೆ, ಅವರು ಉತ್ತಮ ನಿರ್ಧಾರ ಅಂತಲೂ ಹೇಳಿ ಶುಭಹಾರೈಸಿದರು ಎಂದು ಈ ಹಿಂದೆ ಹೇಳಿದ್ದರು. ಇತ್ತೀಚೆಗಷ್ಟೇ ಡಾಲಿ ಧನಂಜಯ್ ಜೀ ಕುಟುಂಬ ಅವಾರ್ಡ್ ಕಾರ್ಯಕ್ರಮದಲ್ಲಿ ತಮ್ಮ ಮದುವೆಯ ವಿಚಾರವನ್ನು ಪ್ರಸ್ತಾಪ ಮಾಡಿದ್ದರು.
ಅದೇ ರೀತಿಯಲ್ಲಿ ರಾಜ್ಯೋತ್ಸವ ದಿನದಂದು ತಮ್ಮ ಬಾಳ ಸಂಗಾತಿಯನ್ನು ಪರಿಚಯ ಮಾಡಿಸಿದ್ದರು. ಇನ್ನು ವಿವಾಹ ಆಗುತ್ತಿರುವ ಧನು ಮತ್ತು ಧನ್ಯತಾ ಮೈಸೂರಿನಲ್ಲಿಯೇ ವಿದ್ಯಾಭ್ಯಾಸ ಮಾಡಿದವರಾಗಿದ್ದಾರೆ. ಇಲ್ಲಿಯೇ ಇವರಿಬ್ಬರ ನಡುವೆ ಸ್ನೇಹ ಆಗಿದ್ದು, ಇದೀಗ ಈ ಜೊಡಿ ಮೈಸೂರಿನಲ್ಲಿಯೇ ವಿವಾಹ ಆಗುತ್ತಿದ್ದಾರೆ. ಇನ್ನು ಧಜಂಜಯ್ ಅವರು ಟಗರು ಸಿನಿಮಾದಿಂದ ಡಾಲಿ ಅಂತಲೇ ಪ್ರಸಿದ್ಧಿಯಾದರು. ಬಳಿಕ ಹಲವು ಸಿನಿಮಾನಗಳನ್ನು ಮಾಡುವ ಮೂಲಕ ಮಿಂಚುತ್ತಾ ಬಂದಿದ್ದಾರೆ.
ಇದೇ ನವೆಂಬರ್ 22ರಂದು ಜೀಬ್ರಾ ಕನ್ನಡ, ತೆಲುಗಿನಲ್ಲಿ ಬಿಗಡೆಯಾಗುತ್ತಿದೆ. ಡೇರ್ ಡೆವಿಲ್ ಮುಸ್ತಾಫಾ ತಂಡವೇ ಈ ಚಿತ್ರದ ಕನ್ನಡ ಡಬ್ಬಿಂಗ್ ಕೆಲಸ ಮಾಡಿದೆ.












Click it and Unblock the Notifications