ಹೊಸಕೆರೆಹಳ್ಳಿಯ ವಿಜಯಲಕ್ಷ್ಮಿ ದರ್ಶನ್ ಮನೆ ಮುಂದೆ ದಾಂಗುಡಿ ಇಟ್ಟ ಫ್ಯಾನ್ಸ್: ಮನೆಗೆ ಹೋಗಿ ಎಂದು ಕೈಮುಗಿದ ಬಾಸ್ ಮಗ ವಿನೀಶ್
Vineesh Thoogudeepa: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್ ಗೆ ಬುಧವಾರ (ಅಕ್ಟೋಬರ್ 30) ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಬಳಿಕ ಸಂಜೆ ವೇಳೆಗೆ ಹೊರಬಂದ ನಟ ದರ್ಶನ್ ಅಲ್ಲಿಂದ ನೇರವಾಗಿ ಆರ್‌ಆರ್ ನಗರ ನಿವಾಸಕ್ಕೆ ತೆರಳದೆ, ನೇರವಾಗಿ ಹೊಸಕೆರೆಹಳ್ಳಿಯಲ್ಲಿರುವ ವಿಜಯಲಕ್ಷ್ಮಿ ನಿವಾಸಕ್ಕೆ ಬಂದಿದ್ದಾರೆ. ಆಗ ಅಲ್ಲಿ ನೆರೆದಿದ್ದ ಅಭಿಮಾನಿಗಳಿಗೆ ವಿನೀಶ್ ತೂಗುದೀಪ ವಿಶೇಷ ಮನವಿ ಮಾಡಿಕೊಂಡಿದ್ದಾರೆ.
ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆ ಚಿಕಿತ್ಸೆಗಾಗಿ 6 ವಾರಗಳ ಕಾಲ ದರ್ಶನ್‌ಗೆ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿ ಆದೇಶ ಹೊರಡಿಸಿದ್ದು, ಬಳಿಕ ಬಿಡುಗಡೆಯಾದ ನಟ ದರ್ಶನ್ ಬಳ್ಳಾರಿ ಜೈಲಿನಿಂದ ನೇರವಾಗಿ ಹೊಸಕೆರೆ ಹಳ್ಳಿಯಲ್ಲಿರುವ ಪತ್ನಿ ವಿಜಯಲಕ್ಷ್ಮಿ ನಿವಾಸಕ್ಕೆ ತೆರಳಿದ್ದಾರೆ.

ಈ ವೇಳೆ ನಟ ದರ್ಶನ್ ನೋಡಲು ಮನೆ ಮುಂದೆ ಅಭಿಮಾನಿಗಳ ಸಾಗರವೇ ನೆರೆದಿತ್ತು. ಆಗ ಬಂದತಹ ದರ್ಶನ್ ಮಗ ವಿನೀಶ್ ಅಭಿಮಾನಿಗಳಿಗೆ ಕೈಮುಗಿಯುವ ಮೂಲಕ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಪರಪ್ಪನ ಅಗ್ರಹಾರದಲ್ಲಿ 62 ದಿನ, ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ 69 ದಿನ ಕಳೆದ ನಟ ದರ್ಶನ್‌ಗೆ ನಿನ್ನೆ ಮಧ್ಯಂತರ ಜಾಮೀನು ಸಿಕ್ಕಿದೆ. ಒಟ್ಟು ಎರಡು ಸೆಂಟ್ರಲ್ ಜೈಲುಗಳಲ್ಲೂ ನಟ ದರ್ಶನ್ ಇದುವರೆಗೂ ಕಳೆದಿದ್ದು ಒಟ್ಟು 131 ದಿನ. ಅವರು ಬಿಡುಗಡೆಯಾಗಿ ಮನೆಗೆ ಬಂದ ಸುದ್ದಿ ಕೇಳುತ್ತಿದ್ದಂತೆ ಹೊರಕೆರೆಹಳ್ಳಿಯಲ್ಲಿರುವ ವಿಜಯಲಕ್ಷ್ಮಿ ಮನೆ ಮುಂದೆ ಅಭಿಮಾನಿಗಳ ಸಾಗರವೇ ನೆರೆದಿತ್ತು.
ಅಭಿಮಾನಿಗಳಿಗೆ ವಿನೀಶ್ ಮನವಿ ಏನು.?: ನಟ ದರ್ಶನ್ ದೀಪಾವಳಿ ಹಬ್ಬದ ಸಮಯದಲ್ಲೇ ಹೊರಬಂದಿದ್ದು, ಅದರಲ್ಲೂ ವಿಶೇಷವಾಗಿ ಮಗ ವಿನೀಶ್ ಅವರ ಹುಟ್ಟುಹಬ್ಬದಂದೇ ನಟ ದರ್ಶನ್ ಬಿಡುಗಡೆಯಾಗಿ ಪತ್ನಿ ಜೊತೆ ಮನೆಗೆ ಆಗಮಿಸಿದ್ದಾರೆ. ಈ ವೇಳೆ ಅಭಿಮಾನಿಗಳೂ ನಿವಾಸದ ಬಳಿ ಜಮಾಯಿಸಿದ್ದು, ಅವರನ್ನು ನಿಯಂತ್ರಿಸಲು ಸೆಕ್ಯೂರಿಟಿ ಗಾರ್ಡ್ ಹರಸಾಹಸವನ್ನೇ ಪಟ್ಟರೂ ನಿಯಂತ್ರಣ ಮಾಡಲು ಸಾಧ್ಯ ಆಗಲಿಲ್ಲ.
ಬಳಿಕ ಮನೆಯಿಂದ ಹೊರಡೆ ಬಂದತಹ ನಟ ದರ್ಶನ್ ಮಗ ವಿನೀಶ್ ಅವರು, ಅಭಿಮಾನಿಗಳಿಗೆ ಕೈ ಮುಗಿದು, "ದಯವಿಟ್ಟು ಎಲ್ಲರೂ ಹೋಗಿ, ಕೋರ್ಟ್‌ನಿಂದ ಆದೇಶವಿದೆ, ನಾವೇನು ಮಾತನಾಡುವಂತಿಲ್ಲ. ದಯವಿಟ್ಟು ಎಲ್ಲರೂ ಹೋಗಿ ಅಣ್ಣ, ಯಾರೂ ಗಲಾಟೆ ಮಾಡಬೇಡಿ. ನಾವೆಲ್ಲಾರೂ ಚೆನ್ನಾಗಿದ್ದೀವಿ," ಎಂದು ಕೈಮುಗಿದು ಕೇಳಿಕೊಂಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.












Click it and Unblock the Notifications