Darshan Thoogudeepa: ರೆಗ್ಯೂಲರ್‌ ಜಾಮೀನು ಸಿಕ್ಕ ಬಳಿಕ ಮೊದಲಿಗೆ ನಟ ದರ್ಶನ್ ಭೇಟಿಯಾಗೋದು ಇವ್ರನ್ನೇ..

Darshan Thoogudeepa: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್‌ಗೆ ಬೆನ್ನು ನೋವು ಹೆಚ್ಚಾದ ಹಿನ್ನೆಲೆ ಚಿಕಿತ್ಸೆಗೆಂದು ಹೈಕೋರ್ಟ್‌ ಮಧ್ಯಂತರ ಜಾಮೀನು ನೀಡಿದೆ. ಇದೀಗ ದರ್ಶನ್‌ ಬಿಜಿಎಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಒಂದು ವೇಳೆ ದರ್ಶನ್‌ಗೆ ರೆಗ್ಯೂಲರ್‌ ಜಾಮೀನು ಸಿಕ್ಕ ಬಳಿಕ ಮೊದಲಿಗೆ ಯಾರನ್ನೆಲ್ಲಾ ಭೇಟಿಯಾಗಲಿದ್ದಾರೆ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ.

ರೇಣುಕಾದ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದ ನಟ ದರ್ಶನ್‌ ಬನ್ನು ನೋವು ಆಗಿದೆ ಅವರೊಗೆ ಜಾಮೀನು ಕೊಡಬೇಕೆಂದು ಕೋರ್ಟ್‌ನಲ್ಲಿ ದರ್ಶನ್‌ ಪರ ವಕೀಲರು ಮನವಿ ಮಾಡಿದ್ದರು. ಈ ಮನವಿ ಪುರಸ್ಕರಿಸಿದ್ದ ಹೈಕೋರ್ಟ್‌ನ ಏಕಸದಸ್ಯ ಪೀಠ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿತ್ತು. ನಟ ದರ್ಶನ್‌ ಪರಪ್ಪನ ಅಗ್ರಹಾರದಲ್ಲಿ 62 ದಿನ, ಬಳ್ಳಾರಿ ಸೆಂಟ್ರಲ್‌ ಜೈಲಿನಲ್ಲಿ 69 ದಿನ ಒಟ್ಟು 130 ದಿನ ಜೈಲಿನಲ್ಲಿ ಕಳೆದಿದ್ದಾರೆ.

Actor Darshan s first will Meet Sudeep after bail

ಇನ್ನೂ ಮಧ್ಯಂತರ ಜಾಮೀನು ಸಿಕ್ಕ ದಿನದಂದೇ ರಾತ್ರಿ ದರ್ಶನ್‌ ಬಿಡುಗಡೆಯಾಗಿ ಪತ್ನಿ ವಿಜಯಲಕ್ಷ್ಮಿ ಕಾರಿನಲ್ಲಿ ಬೆಂಗಳೂರಿಗೆ ತೆರಳಿದ್ದರು. ಇನ್ನೂ ಇದೀಗ ಚಿಕಿತ್ಸೆಗೆಂದು ಪತಿ ದರ್ಶನ್‌ ಹಾಗೂ ಪತ್ನಿ ವಿಜಯಲಕ್ಷ್ಮಿ ಒಂದೇ ಸೀಟ್‌ನಲ್ಲಿ ಕುಳಿತು ಬಿಜಿಎಸ್‌ ಆಸ್ಪತ್ರೆಗೆ ತೆರಳಿದ್ದಾರೆ. ಇದನ್ನು ಗಮನಿಸಿದರೆ, ನಟ ದರ್ಶನ್‌ ಇನ್ಮುಂದೆ ಖಂಡಿತವಾಗಿಯೂ 100% ಬದಲಾಗುತ್ತಾರೆ ಎನ್ನಲಾಗುತ್ತಿದೆ.

ಒಂದು ವೇಳೆ ರೆಗ್ಯೂಲರ್ ಜಾಮೀನು ಸಿಕ್ಕರೆ, ನಟ ದರ್ಶನ್‌ ಆಪ್ತರನ್ನು ಭೇಟಿ ಮಾಡಲಿದ್ದಾರೆ. ಯಾರನ್ನೆಲ್ಲ ಉತ್ತಮ ಸ್ನೇಹಿತರನ್ನು ದೂರ ಮಾಡಿದ್ದರೋ ಅವರನ್ನ ಮೊದಲಿಗೆ ಭೇಟಿ ಮಾಡಲಿದ್ದಾರೆ ಎನ್ನುವ ಚರ್ಚೆಗಳು ನಡೆಯುತ್ತಿವೆ. ಅಂದರೆ, ಈಗಿರುವ ಪಾರ್ಟಿ, ಪಬ್‌, ಜಾಲಿ ರೈಡ್‌ ಫ್ರೆಂಡ್‌ಶಿಪ್‌ ಅಲ್ಲ. ಮೊದಲಿಗೆ ಜೀವದ ಗೆಳೆಯ, ಕುಚುಕು ಕಿಚ್ಚ ಸುದೀಪ್‌ ಅವರನ್ನು ಭೇಟಿಯಾಗಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಈ ಮೊದಲು ಇವರಿಬ್ಬರ ನಡುವೆ ಪರಸ್ಪರ ಏನು ಮಾತುಕತೆ, ಗಲಾಟೆ ಆಗಿತ್ತೋ ಗೊತ್ತಿಲ್ಲ. ಆದರೆ ಇದೀಗ ದರ್ಶನ್‌ ಖುದ್ದಾಗಿ ತನ್ನ ಕುಚುಕು ಗೆಳೆಯನನ್ನು ಮತ್ತೆ ಭೇಟಿಯಾಗಲಿದ್ದಾರೆ ಎನ್ನುವ ಮಾಹಿತಿಯೊಂದು ಲಭ್ಯವಾಗಿದೆ. ಇವರೊಬ್ಬರು ಒಂದಾನೊಂಡು ಕಾಲದಲ್ಲಿ ಯಾವುದೇ ಕಾರ್ಯಕ್ರಮ, ಸ್ಪೋರ್ಟ್‌ ಲೀಗ್‌ನಲ್ಲಿ ಇಬ್ಬರು ಕುಚುಕುಗಳಂತೆ ಇದ್ದರು. ಇದನ್ನು ಮತ್ತೆ ಮರಳಿ ಪಡೆಯಲು ದರ್ಶನ್‌ ಹಂಬಲಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಅಂಬರೀಷ್‌, ವಿಷ್ಣುವರ್ಧನ್ ರೀತಿಯಲ್ಲಿ ನಟ ದರ್ಶನ್‌ ಹಾಗೂ ಸುದೀಪ್‌ ನಡುವೆ ಉತ್ತಮ ಗೆಳೆತನವಿತ್ತು. ಅದನ್ನೇ ಮತ್ತೆ ಪಡೆಯಲು ದರ್ಶನ್‌ ಕಾತರದಿಂದ ಕಾಯುತ್ತಿದ್ದಾರಂತೆ. ಅಲ್ಲದೆ, ಕಿರಿಕ್‌ ಮಾಡಿಕೊಂಡಿರುವ ಪ್ರೊಡ್ಯೂಸರ್‌ಗಳನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಅದರಲ್ಲೂ ಉಮಾಪತಿ ಶ್ರೀನಿವಾಸ್‌ ಗೌಡ, ಅನ್ನದಾತರನ್ನು ಮಾತನಾಡಿಸುವ ಸಾಧ್ಯತೆಯಿದೆ. ಅಷ್ಟೇ ಅಲ್ಲದೆ, ಮಾಧ್ಯಮಗಳ ಜೊತೆ ಸಂಬಂಧವನ್ನು ಸುಧಾರಿಸಿಕೊಳ್ಳುತ್ತಾರಾ ನಟ ದರ್ಶನ್‌ ಎನ್ನುವ ಪ್ರಶ್ನೆಗಳು ಕೇಳಿಬರುತ್ತಿವೆ.

ದರ್ಶನ್‌ ನಿಜವಾಗಲೂ ಬದಲಾಗಿದ್ದಾರೆ ಅಂದರೆ, ನಿಜವಾದ ಸ್ನೇಹಿತರನ್ನು ಗಳಿಸುತ್ತಾರೆ, ಮಾಧ್ಯಮಗಳ ಜೊತೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳುತ್ತಾರೆ. ಯಾರ ಜೊತೆಯಲ್ಲಿ ಕಿರಿಕ್‌ ಮಾಡಿಕೊಂಡಿದ್ದಾರೋ ಅವರ ಬಳಿ ಕ್ಷಮೆ ಕೇಳಬೇಕೆಂದು ಆಸ್ಪತ್ರೆಯಲ್ಲಿ ನೆನಪಿಸಿಕೊಳ್ಳುತ್ತಿದ್ದಾರಂತೆ. ಹೀಗೆ ಬದಲಾವಣೆಯಾಗುವ ಮೂಲಕ ಕನ್ನಡ ಇಂಡಸ್ಟ್ರಿಯನ್ನು ಎತ್ತರಕ್ಕೆ ಕೊಂಡೊಯ್ಯಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+