Darshan Thoogudeepa Bail: ಮಂಗಳವಾರ ನಟ ದರ್ಶನ್‌ಗೆ ಸಿಗುತ್ತಾ ಜಾಮೂನು.?-ಅಭಿಮಾನಿಗಳು ಹೇಳೋದೇನು?
Actor Darshan Thoogudeepa Bail: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ & ಪಟಲಾಂ ಗ್ಯಾಂಗ್ ಸೇರಿದೆ. ಈಗಾಗಲೇ ಬೆಂಗಳೂರಿನ 57ನೇ ಸಿಸಿಎಚ್ ಕೋರ್ಟ್ ಅಕ್ಟೋಬರ್ 14ರಂದು ನಟ ದರ್ಶನ್ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಬಳಿಕ ಕಾನೂನು ಸಮರಕ್ಕೆ ಮುಂದಾದ ದರ್ಶನ್ ಹೈಕೋರ್ಟ್ ಮೆಟ್ಟಿಲೇರಿದ್ದು, ಅಕ್ಟೋಬರ್ 22ಕ್ಕೆ ಬೇಲ್ ಸಿಗುವ ಭರವಸೆಯಲ್ಲಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿ ನಟ ದರ್ಶನ್ ಅಕ್ಟೋಬರ್ 14ರಂದೇ ಜಾಮೀನು ಸಿಗಲಿದೆ ಎನ್ನುವ ಭರವಸೆಯಲ್ಲಿದ್ದರು. ಅಭಿಮಾನಿಗಳು ಕೂಡ ದರ್ಶನ್ ಬಿಡುಗಡೆಯಾಗಲಿದ್ದಾರೆ ಎನ್ನುವ ಭರವಸೆಯಲ್ಲಿ ಬಳ್ಳಾರಿ ಜೈಲಿನ ಮುಂದೆ ನೆರೆದಿದ್ದರು. ಆದರೆ ಸೆಷನ್ ಕಾರ್ಟ್ ದರ್ಶನ್ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿತು. ಈ ತೀರ್ಪು ಕೇಳುತ್ತಿದ್ದಂತೆ ದರ್ಶನ್ ಮುಖ ಬಾಡಿಹೋಯಿತು ಮತ್ತೊಂದೆಡೆ ಅಭಿಮಾನಿಗಳ ನಿರೀಕ್ಷೆ ಹುಸಿಯಾಯಿತು.

ಇನ್ನು ಅಕ್ಟೋಬರ್ 22ರಂದು ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಸಲು ಹೈಕೋರ್ಟ್ ಒಪ್ಪಿಗೆ ನೀಡಿದೆ. ಅಂದು ಮಂಗಳವಾದ್ದರಿಂದ ಹೈಕೋರ್ಟ್‌ನಲ್ಲಿ ಬಾಸ್‌ಗೆ ಜಾಮೀನು ಪಕ್ಕಾ ಸಿಗಲಿದೆ ಎಂದು ಅಭಿಮಾನಿಗಳ ಭರವಸೆಯಾಗಿದೆ. ಒಂದು ವೇಳೆ ಸಿಕ್ಕರೆ ಜಾಮೂನು ಹಂಚಲು ರೆಡಿ ಅಂತಲೂ ಹೇಳುತ್ತಿದ್ದಾರೆ. ಆದರೆ ಕೋರ್ಟ್ ಆದೇಶ ಏನು ಬರಲಿದೆ ಎಂದು ಕಾದುನೋಡಬೇಕಿದೆ. ಹೈಕೋರ್ಟ್‌ನಲ್ಲಿ ದರ್ಶನ್ ಪರ ವಾದ ಮಂಡನೆ ಮಾಡಲಿರುವ ವಕೀಲ ಎಸ್.ಸುನೀಲ್ ಅವರು, ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಪೀಠಕ್ಕೆ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದಾರೆ.
ಆರೋಪಿ ದರ್ಶನ್, ರೇಣುಕಸ್ವಾಮಿ ಹಲ್ಲೆ ಹಾಗೂ ಹತ್ಯೆ ವೇಳೆ ಘಟನಾ ಸ್ಥಳದಲ್ಲಿದ್ದರು ಎಂಬುದಕ್ಕೆ ಸಿಡಿಆರ್ ಸಾಕ್ಷ್ಯ ಇದೆ. ದರ್ಶನ್ ಡಿಎನ್‌ಎ ಪರೀಕ್ಷೆಯಿಂದ ಘಟನಾ ಸ್ಥಳದಲ್ಲಿದ್ದರು ಎಂಬುದು ಪತ್ತೆಯಾಗಿದ್ದು, ಸಾಕ್ಷ್ಯ ನಾಶಪಡಿಸುವ ಸಾಧ್ಯತೆಯಿದೆ. ಆದ್ದರಿಂದ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಬಾರದೆಂದು ಸರ್ಕಾರಿ ಪರ ವಕೀಲ ಎಸ್‌ಪಿಪಿ ಪ್ರಸನ್ನ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದರು. ಇನ್ನು ವಾದ-ಪ್ರತಿವಾದವನ್ನು ಆಲಿಸಿದ್ದ 57ನೇ ಸಿಸಿಎಂ ಕೋರ್ಟ್ ನಟ ದರ್ಶನ್ & ಪವಿತ್ರಾ ಗೌಡ ಇಬ್ಬರ ಜಾಮೀನು ಅರ್ಜಿಯನ್ನು ವಜಾ ಮಾಡಿತ್ತು.
ದರ್ಶನ್ ಪರ ವಕೀಲರ ವಾದ: ದರ್ಶನ್ ಸಿಮ್ ಹೇಮಂತ್ ಹೆಸರಿನಲ್ಲಿತ್ತು. ಹಾಗಾದರೆ ದರ್ಶನ್ ಫೋಟೋ ಹೇಗೆ ಬಂತು? ದರ್ಶನ್ ಪೋಟೋ ತೆಗೆದುಕೊಂಡು ಎಡಿಟ್ ಮಾಡಿ ತೋರಿಸಲಾಗಿದೆ. ರೇಣುಕಾಸ್ವಾಮಿ ದೇಹದ ಮೇಲೆ 1 ಸೆಂಟಿ ಮೀಟರ್ ಗಾಯ ಇತ್ತು. ದೇಹದ ಮೇಲೆ 39 ಗಾಯಗಳಿದ್ದವು ಎಂದು ವೈದ್ಯರು ಹೇಳಿದ್ದಾರೆ. ತಲೆಗೆ ಬಲವಾಗಿ ಹೊಡೆದರೆ ರಕ್ತ ಧಾರಕಾರವಾಗಿ ಸುರಿಯಲ್ಲ, ಚಿಮ್ಮುತ್ತದೆ ಎಂದು ಸಿ.ವಿ.ನಾಗೇಶ್ ವಾದ ಮಂಡಿಸಿದ್ದರು.
ಪ್ರಸನ್ನ ಕುಮಾರ್ ಕೌಂಟರ್: ತನಿಖಾಧಿಕಾರಿ ಯಾವುದೇ ಸಾಕ್ಷಿಗಳನ್ನ ಸೃಷ್ಟಿಸಿಲ್ಲ. ಕೇವಲ ಐಪಿ ಅಡ್ರೆಸ್‌ನಿಂದ ಈ ವರದಿ ಸಿದ್ಧಪಡಿಸಿಲ್ಲ. ಜಿಪಿಎಸ್ ಲ್ಯಾಂಗಿಟ್ಯೂಡ್ ಲಾಟಿಟ್ಯೂಡ್ ಆಧರಿಸಿ ವರದಿ ಸಿದ್ಧವಾಗಿದೆ. ದರ್ಶನ್ ಸಿಮ್ ಹೇಮಂತ್‌ಗೆ ಸೇರಿದ್ದು ಅಂತಾ ಸಿ.ವಿ.ನಾಗೇಶ್ ಹೇಳುತ್ತಾರೆ. 'ಮಿಸ್ ಯೂ ಹೆಂಡ್ತಿ, ಯೂ ಆರ್ ಮೋಸ್ಟ್ ಇಂಪಾರ್ಟೆಂಟ್ ಇನ್ ಮೈ ಲೈಫ್ ಸುಬ್ಬಿ' ಎನ್ನುವಂತಹ ಮೆಸೇಜ್‌ಗಳನ್ನು ಹೇಮಂತ್ ಮಾಡಿದ್ದಾ? ದರ್ಶನ್ ಮಾಡಿದ್ದಾ? ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಕ್ಕೆ ರೇಣುಕಾಸ್ವಾಮಿ ಕೊಲೆಯಾಗಿದೆ. ಸಂಚು ರೂಪಿಸಿ ಕೊಲೆ ಮಾಡಿದ ಹಿನ್ನೆಲೆ ದರ್ಶನ್ ಬಂಧನವಾಗಿದೆ ಎಂದು ಎಸ್‌ಪಿಪಿ ಪ್ರಸನ್ನಕುಮಾರ್ ವಾದ ಮಂಡನೆ ಮಾಡಿದರು.












Click it and Unblock the Notifications