Darshan Thoogudeepa: ಫಿಕ್ಸ್ ಆಯ್ತು ನಟ ದರ್ಶನ್ ಆಪರೇಷನ್ ಡೇಟ್!
ಅಂತೂ ಇಂತೂ ದರ್ಶನ್ ತೂಗುದೀಪ ಸರ್ಜರಿ ಮಾಡಿಸಿಕೊಳ್ಳುವ ದಿನಾಂಕ ಫಿಕ್ಸ್ ಆಗಿದೆ. ಕೊನೆಗೂ ದರ್ಶನ್ ಆಪರೇಷನ್ ಮಾಡಿಸಿಕೊಳ್ಳಲು ಒಪ್ಪಿಗೆ ಸೂಚಿಸಿದ್ದಾರೆ. ಅವರ ಮಧ್ಯಂತರ ಜಾಮೀನು ಅವಧಿ ಇನ್ನೇನು ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳುತ್ತಿದ್ದು ಅಷ್ಟರೊಳಗೆ ಸರ್ಜರಿ ಮಾಡಿಸುವ ದಿನಾಂಕ ಕೂಡ ಫಿಕ್ಸ್ ಆಗಿದೆ. ದರ್ಶನ್ ಸರ್ಜರಿ ಮಾಡಿಸಿಕೊಂಡರೆ ಮಧ್ಯಂತರ ಜಾಮೀನು ಅವಧಿ ವಿಸ್ತರಣೆಯಾಗಲಿದೆ.
ಹೌದು... ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿ ಇದ್ದ ನಟ ದರ್ಶನ್ ತೂಗುದೀಪ ಅವರಿಗೆ ಬೆನ್ನು ನೋವು ಹೆಚ್ಚಾಗಿ ಕೂಡಲೆ ಸರ್ಜರಿ ಮಾಡಿಸಲೇಬೇಕು ಇಲ್ಲವಾದಲ್ಲಿ ಲಕ್ವ ಹೊಡೆಯುವ ಸಾಧ್ಯತೆ ಇದೆ ಎಂದು ವೈದ್ಯರು ಸಲಹೆ ನೀಡಿದ್ದರಿಂದ ಕೋರ್ಟ್ ಅವರಿಗೆ ಆರು ವಾರಗಳ ಮಧ್ಯಂತರ ಜಾಮೀನು ನೀಡಿತ್ತು. ಡಿಸೆಂಬರ್ 11ಕ್ಕೆ ದರ್ಶನ್ ಮಧ್ಯಂತರ ಜಾಮೀನು ಅವಧಿ ಅಂತ್ಯಗೊಳ್ಳುತ್ತದೆ. ಆದರೆ ಇನ್ನೂ ಕೂಡ ದರ್ಶನ್ ಅವರು ಸರ್ಜರಿ ಮಾಡಿಸಿಕೊಂಡಿಲ್ಲ. ಅವರಿಗೆ ಬಿಪಿ ಹೆಚ್ಚಾಗಿದೆ, ಹೀಗಾಗಿ ಸರ್ಜರಿ ಮಾಡಿಸಲು ಆಗಿಲ್ಲ ಎಂದು ಅವರ ಪರ ವಕೀಲರು ಕೋರ್ಟ್‌ಗೆ ತಿಳಿಸುತ್ತಲೇ ಬಂದಿದ್ದಾರೆ.

ದರ್ಶನ್ ಪರ ವಕೀಲ ಸಿವಿ ನಾಗೇಶ್ ವಾದ ಮಂಡಿಸಿ ದರ್ಶನ್ ಅವರಿಗೆ ಬಿಪಿ ಏರಿಳಿತವಾಗಿದ್ದರಿಂದ ಆಪರೇಷನ್ ಮಾಡಲು ಆಗಿಲ್ಲ ಎನ್ನುವ ಕಾರಣ ನೀಡಿದ್ದಾರೆ. ಇದಕ್ಕೆ ವಕೀಲ ಪ್ರಸನ್ನ ಕುಮಾರ್ ಅವರು ತೀವ್ರ ಆಕ್ಷೆಪ ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ ಯಾರೇ ಆಸ್ಪತ್ರೆಗೆ ಬಂದರೂ ಕೂಡ ಅವರಿಗೆ ಮಾತ್ರೆ ಕೊಟ್ಟು ಬಿಪಿ ಕಂಟ್ರೋಲ್ ಮಾಡಿ ಆಪರೇಷನ್ ಮಾಡ್ತಾರೆ. ಹೀಗಿರುವಾಗ ದರ್ಶನ್ ಅವರ ವಿಚಾರದಲ್ಲಿ ಯಾಕೆ ಇದು ಸಾಧ್ಯವಾಗುತ್ತಿಲ್ಲ. ದರ್ಶನ್ ಅವರನ್ನು ತಲೆ ಬಾಚ್ಕೊಳಿ, ಪೌಡರ್ ಹಾಕ್ಕೊಳ್ಳಿ ಅಂತ ಆಪರೇಷನ್‌ಗೆ ಸಿದ್ಧ ಮಾಡ್ತಾಯಿದ್ದಾರಾ ಎಂದು ವ್ಯಂಗ್ಯವಾಗಿ ಪ್ರಶ್ನೆ ಮಾಡಿದ್ದಾರೆ.
ದರ್ಶನ್‌ಗೆ ಸರ್ಜರಿ ಯಾವಾಗ?
ವಾದ ವಿವಾದವನ್ನು ಆಲಿಸಿದ ಕೋರ್ಟ್ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ. ಹೀಗಾಗಿ ಇಂದು ಅಥವಾ ನಾಳೆ ದರ್ಶನ್ ಆಪರೇಷನ್ ಮಾಡಿಸಿಕೊಳ್ಳುವ ಪ್ಲ್ಯಾನ್ ಆಗಿದೆ. ದರ್ಶನ್ ಆಪರೇಷನ್ ಮಾಡಿಸಿಕೊಂಡರೆ ಜೈಲಿಗೆ ಕಳುಹಿಸಲು ಆಗುವುದಿಲ್ಲ. ಹೀಗಾಗಿ ಕೋರ್ಟ್ ಜಾಮೀನು ವಿಸ್ತರಣೆ ಮಾಡಬಹುದು. ಈ ಮೂಲಕ ಮಧ್ಯಂತರ ಜಾಮೀನು ವಿಸ್ತರಣೆ ಮಾಡಿಸಿಕೊಳ್ಳಬಹುದು ಎಂದು ದರ್ಶನ್ ಯೋಚನೆ ಮಾಡಿದಂತೆ ಕಾಣಿಸುತ್ತಿದೆ.
ಒಂದು ವೇಳೆ ಸರ್ಜರಿ ಆಗದೇ ಇದ್ದರೆ ಕೋರ್ಟ್ ಪದೇ ಪದೇ ದರ್ಶನ್ ಪರ ವಕೀಲರು ಹೇಳುವ ಮಾತನ್ನು ಕೇಳುವುದು ಕಷ್ಟ ಇದೆ. ಮಧ್ಯಂತರ ಜಾಮೀನು ವಜಾ ಮಾಡಬಹುದು. ಹೀಗಾಗಿ ಆಪರೇಷನ್ ಮಾಡಿಸಿಕೊಳ್ಳುವ ಅನಿವಾರ್ಯತೆ ದರ್ಶನ್‌ಗೆ ಎದುರಾಗಿದೆ.
ದರ್ಶನ್ ಜೈಲಿನಿಂದ ಹೊರ ಬಂದ ಬಳಿಕ ಹಲವಾರು ಬಾರಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಆದರೆ ಕೋರ್ಟ್ ಮಾತ್ರ ಜಾಮೀನು ಮಂಜೂರು ಮಾಡಿಲ್ಲ. ದರ್ಶನ್ ಯಾವುದೇ ಕಾರಣ ಕೊಟ್ಟರೂ ಕೋರ್ಟ್ ಅದನ್ನು ತಿರಸ್ಕರಿಸಿದೆ. ಹೀಗಾಗಿ ದರ್ಶನ್ ಜೈಲಿಗೆ ಹೋಗುವುದು ಫಿಕ್ಸ್ ಆಗಿದೆ. ಮಧ್ಯಂತರ ಜಾಮೀನು ಅವಧಿ ಪೂರ್ಣಗೊಂಡ ಬಳಿಕ ದರ್ಶನ್ ಜೈಲಿಗೆ ವಾಪಸ್ ಹೋಗಲೇಬೇಕು. ಆದರೆ ದರ್ಶನ್ ಜೈಲಿಗೆ ಹೋಗುವುದನ್ನ ತಪ್ಪಿಸಲು ಏನೆಲ್ಲಾ ಮಾಡಬೇಕೋ ಆ ಕೆಲಸಗಳನ್ನೆಲ್ಲಾ ಮಾಡುತ್ತಲೇ ಇದ್ದಾರೆ.
ತಮಗೆ ಜಾಮೀನು ಸಿಗುವುದು ಕಷ್ಟವಾದಾಗ ಸರ್ಜರಿಗೆ ಒಪ್ಪಿಕೊಂಡಿದ್ದಾರೆ. ಇದರಿಂದಲಾದರೂ ತಾವು ಜೈಲಿನಿಂದ ಕೆಲ ದಿನಗಳ ಕಾಲ ಹೊರಗುಳಿಯುವ ಪ್ಲ್ಯಾನ್ ಕೂಡ ಇದಾಗಿರಬಹುದು ಎನ್ನಲಾಗುತ್ತಿದೆ. ಒಟ್ಟಿನಲ್ಲಿ ದರ್ಶನ್‌ಗೆ ಜೈಲು- ಸರ್ಜರಿ ಈ ಎರಡು ಆಯ್ಕೆ ಬಿಟ್ಟರೆ ಸದ್ಯಕ್ಕೆ ಯಾವುದೂ ಕೂಡ ಕೈಯಲ್ಲಿ ಇಲ್ಲ ಅನ್ನೋದು ಮಾತ್ರ ನಿಜ. ಇದರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಅನ್ನೋದು ಇನ್ನೆರಡು ದಿನದಲ್ಲಿ ಸ್ಪಷ್ಟವಾಗಿ ಗೊತ್ತಾಗಲಿದೆ.












Click it and Unblock the Notifications