Darshan Thoogudeepa: ಕೊನೆಗೂ ಹೊರಬಿತ್ತು ನಟ ದರ್ಶನ್‌ಗೆ ಆಪರೇಷನ್‌ ಆಗದಿರಲು ಕಾರಣ..!

ರೇಣುಕಾಸ್ವಾಮಿ ಕೊಲೆ ಕೇಸ್‌ ಆರೋಪಿಯಾಗಿರುವ ನಟ ದರ್ಶನ್‌ ತೂಗುದೀಪ ಅವರು ಚಿಕಿತ್ಸೆಯ ಕಾರಣದಿಂದ ಜಾಮೀನಿನ ಮೇರೆಗೆ ಜೈಲಿನಿಂದ ಹೊರಬಂದಿದ್ದಾರೆ. ಮತ್ತೊಂದೆಡೆ ದರ್ಶನ್‌ ಅವರ ಜಾಮೀನು ಅರ್ಜಿ ವಿಚಾರಣೆ ಕೋರ್ಟ್‌ನಲ್ಲಿ ನಡೆಯುತ್ತಿದ್ದು, ವಿಚಾರಣೆ ಇಂದು ಕೂಡ ಮುಂದುವರಿಯಲಿದೆ. ಇನ್ನು ದರ್ಶನ್‌ ಅವರಿಗೆ ಈವರೆಗೆ ಆಪರೇಷನ್‌ ಆಗೇ ಇಲ್ಲ ಎನ್ನುವ ಆರೋಪ ಕೇಳಿಬಂದಿದೆ. ಇದಕ್ಕೆ ಕಾರಣವನ್ನು ಖುದ್ದು ದರ್ಶನ್‌ ಪರ ವಕೀಲರು ಕೋರ್ಟ್‌ನಲ್ಲಿ ಬಿಚ್ಚಿಟ್ಟಿದ್ದಾರೆ ಎನ್ನಲಾಗಿದೆ.

ನಿನ್ನೆ ಕೋರ್ಟ್‌ನಲ್ಲಿ ದರ್ಶನ್‌ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ಈ ವೇಳೆ ನ್ಯಾಯಾಧೀಶರ್‌ ದರ್ಶನ್‌ ಅವರ ಆರೋಗ್ಯ ಸ್ಥಿತಿಯ ಬಗ್ಗೆ ವಕೀಲರ ಬಳಿ ಮಾಹಿತಿ ಕೇಳಿದ್ದರು. ಆಗ ದರ್ಶನ್‌ ಪರ ವಕೀಲರಾದ ಸಿ.ವಿ.ನಾಗೇಶ್‌ ಅವರು ಆಪರೇಷನ್‌ ವಿಳಂಬ ಆಗಿರುವುದಕ್ಕೆ ಬಲವಾದ ಕಾರಣವೊಂದನ್ನು ನೀಡಿದ್ದಾರೆ ಎನ್ನಲಾಗಿದೆ. ದರ್ಶನ್‌ ಅವರಿಗೆ ರಕ್ತದೊತ್ತಡ (ಬಿಪಿ) ಏರುಪೇರಾಗುತ್ತಿರುವ ಕಾರಣ ಅವರಿಗೆ ಇನ್ನೂ ಆಪರೇಷನ್‌ ಸಾಧ್ಯವಾಗುತ್ತಿಲ್ಲ ಎಂದು ವಕೀಲರು ಹೇಳಿದ್ದಾರಂತೆ.

Actor Darshan Thoogudeepa Lawyer Has Given Reasons For Delaying The Operation

ಈ ಕಾರಣದಿಂದಲೇ ವೈದ್ಯರು ದರ್ಶನ್ ಅವರಿಗೆ ಆಪರೇಷನ್‌ ಮಾಡಲು ಮುಂದಾಗಿಲ್ಲ. ನನ್ನ ಕಕ್ಷಿದಾರರಾದ ದರ್ಶನ್‌ ಅವರಿಗೆ ದರ್ಶನ್‌ಗೆ ಮತ್ತೊಮ್ಮೆ ಎಂಆರ್‌ಐ ಸ್ಕ್ಯಾನಿಂಗ್‌ ನಡೆದಿದೆ. ಸದ್ಯಕ್ಕೆ ಅವರಿಗೆ ಆಪರೇಷನ್‌ ಮಾಡುವ ಕುರಿತಾಗಿ ವೈದ್ಯರು ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.

ದರ್ಶನ್‌ ಅವರಿಗೆ ರಕ್ತದೊತ್ತಡ ಕಡಿಮೆಯಾಗದಿದ್ದರೆ ಯಾವುದೇ ಆಪರೇಷನ್‌ ಮಾಡಲು ಸಾಧ್ಯವಾಗೋದಿಲ್ಲ. ಹಾಗಾಗಿ ಅವರಿಗೆ ಯಾವಾಗ ಆಪರೇಷನ್‌ ಮಾಡಬೇಕು ಎಂದು ವೈದ್ಯರು ನಿರ್ಧರಿಸಲಿದ್ದಾರೆ ಎಂದು ವಕೀಲರು ಕೋರ್ಟ್‌ನಲ್ಲಿ ವಾದ ಮಂಡಿಸಿದ್ದಾರೆ.

ರೇಣುಕಾಸ್ವಾಮಿ ಊಟ ಕೊಡಿ ಎಂದಿದ್ದ ದರ್ಶನ್‌!

ನನ್ನ ಕಕ್ಷಿದಾರರಾದ ದರ್ಶನ್‌ ಅವರ ಬಗ್ಗೆ ತುಂಬಾ ಕೆಟ್ಟದಾಗಿ ಆರೋಪಗಳನ್ನ ಮಾಡಲಾಗಿದೆ. ದರ್ಶನ್‌ ಅವರು ರೇಣುಕಾಸ್ವಾಮಿ ಕಪಾಳಕ್ಕೆ ಹೊಡೆದ್ರು, ಕಾಲಿಂದ ರೇಣುಕಾಸ್ವಾಮಿ ಖಾಸಗಿ ಭಾಗಕ್ಕೆ ಒದ್ದಿದ್ದರು ಎಂದೆಲ್ಲ ಕ್ರೂರವಾಗಿ ಆರೋಪಗಳನ್ನು ಮಾಡಲಾಗಿದೆ. ಆದರೆ ಈ ಬಗ್ಗೆ ನೀಡಲಾಗಿರುವ ಸಾಕ್ಷಿಗಳಲ್ಲಿ ಭಾರಿ ವ್ಯತ್ಯಾಸವಿದೆ. ದರ್ಶನ್‌ ಅವರು ರೇಣುಕಾಸ್ವಾಮಿ ಅವರಿಗೆ ಊಟ ಹಾಗೂ ನೀರು ತಂದು ಕೊಡುವಂತೆ ಹೇಳಿದ್ದಾರೆ. ದರ್ಶನ್‌ ಅವರಿಗೆ ನಿಜವಾಗಿಯೂ ರೇಣುಕಾಸ್ವಾಮಿಯನ್ನ ಕೊಲ್ಲುವ ಉದ್ದೇಶವಿದ್ದಿದ್ದರೆ, ಅವರಿಗೆ ಊಟ ನೀರು ತಂದು ಕೊಡಿ ಎಂದು ಹೇಳಲು ಸಾಧ್ಯವೇ? ಎಂದು ವಕೀಲರು ಪ್ರಶ್ನೆ ಮಾಡಿದ್ದಾರೆ.

Actor Darshan Thoogudeepa Lawyer Has Given Reasons For Delaying The Operation

ದರ್ಶನ್‌ ಅವರ ಜಾಮೀನಿನ ವಿಚಾರದ ಬಗ್ಗೆ ಮಾರನಾಡಿದ್ದ ಗೃಹ ಸಚಿವ ಜಿ.ಪರಮೇಶ್ವರ್‌, ದರ್ಶನ್‌ ಅವರು ಚಿಕಿತ್ಸೆ ಪಡೆದು ಮತ್ತೆ ಜೈಲಿಗೆ ಹೋಗಬೇಕು. ಈಗಾಗಲೇ ರೇಣುಕಾಸ್ವಾಮಿ ಕೊಲೆ ಕೇಸ್‌ ಸಂಬಂಧ ಹೆಚ್ಚುವರಿ ಸಾಕ್ಷಿಗಳನ್ನು ಸಂಗ್ರಹಿಸಲಾಗಿದ್ದು, ಇದರಿಂದಾಗಿ ಮತ್ತೊಂದು ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ. ಸುಪ್ರೀಂಕೋರ್ಟ್‌ನಲ್ಲಿ ಈ ಅಂಶಗಳನ್ನು ಉಲ್ಲೇಖಿಸಿ, ದರ್ಶನ್‌ ಅವರಿಗೆ ಜಾಮೀನು ರದ್ದು ಮಾಡುವಂತೆ ಮನವಿ ಮಾಡುವುದಾಗಿ ಹೇಳಿದ್ದಾರೆ.

ಇನ್ನು ರೇಣುಕಾಸ್ವಾಮಿ ಕೊಲೆ ಕೇಸ್‌ ಆರೋಪಿ ನಟ ದರ್ಶನ್‌ ತೂಗುದೀಪ ಅವರ ಜಾಮೀನು ಅರ್ಜಿ ವಿಚಾರಣೆ ಇಂದು ಹೈಕೋರ್ಟ್‌ನಲ್ಲಿ ನಡೆಯಲಿದೆ. ಒಂದು ವೇಳೆ ದರ್ಶನ್‌ ಅವರಿಗೆ ಇಂದು ಜಾಮೀನು ಸಿಕ್ಕರೆ ರಿಲೀಫ್‌ ಆಗಲಿದ್ದಾರೆ. ಜಾಮೀನು ನಿರಾಕರಣೆಯಾದರೆ, ಅವರ ಈ ಹಿಂದಿನ ಮಧ್ಯಂತರ ಜಾಮೀನು ಮುಗಿದ ಕೂಡಲೇ ಜೈಲಿಗೆ ವಾಪಸ್‌ ಆಗಬೇಕಾಗಬಹುದು ಎಂದು ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+