ದರ್ಶನ್ ತೂಗುದೀಪ ಜೊತೆ ಸೇರಿದವನ ಗತಿ ಏನಾಯ್ತು ಗೊತ್ತಾ?

ದರ್ಶನ್ ವಿರುದ್ಧ ಕೇಳಿಬಂದ ಕೊಲೆ ಆರೋಪ ಪ್ರಕರಣ ಈಗ ದೊಡ್ಡ ತಿರುವು ಪಡೆಯುತ್ತಿದ್ದು, ಸಂಚಲನ ಸೃಷ್ಟಿ ಮಾಡಿದೆ. ದರ್ಶನ್ ಅಟ್ಟಹಾಸ ಮೆರೆದು ಕ್ಷುಲ್ಲಕ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಮಾಡಿದ್ದಾನೆ ಎಂಬ ಆರೋಪ ಕನ್ನಡಿಗರನ್ನ ಕೆರಳಿಸಿದೆ. ಇಷ್ಟು ದಿನಗಳ ಕಾಲ ಎಲ್ಲವನ್ನೂ ಸಹಿಸಿಕೊಂಡು ಇದ್ದ ಕನ್ನಡಿಗರಿಗೆ ಇದೀಗ ನಟ ದರ್ಶನ್ ವಿರುದ್ಧ ಕೋಪವು ಡಬಲ್ ಆಗಿದೆ. ಹೀಗಿದ್ದಾಗಲೇ ದರ್ಶನ್ ನಾಯ್ಡು ಜೊತೆಗೆ ಸೇರಿದ್ದವನ ಗತಿ ಈಗ ಏನಾಗಿದೆ ಗೊತ್ತಾ?

ತನ್ನ ಪ್ರೇಯಸಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ್ದ ರೇಣುಕಾಸ್ವಾಮಿ ಎಂಬಾತನ ವಿರುದ್ಧ ಭೀಕರವಾಗಿ ಹಲ್ಲೆ ಮಾಡಿ, ವಿಕೃತವಾಗಿ ಹತ್ಯೆ ಮಾಡಿದ ಆರೋಪ ದರ್ಶನ್ ನಾಯ್ಡು & ಗ್ಯಾಂಗ್ ವಿರುದ್ಧ ಕೇಳಿಬರುತ್ತಿದೆ. ಅದ್ರಲ್ಲೂ ಈ ಕೇಸ್‌ನಲ್ಲಿ ಒಬ್ಬೊಬ್ಬರೇ ಲಾಕ್ ಆಗುತ್ತಿದ್ದಾರೆ. ಮೊದಲಿಗೆ 13 ಕೊಲೆ ಆರೋಪಿಗಳು ಈ ಕೇಸ್‌ನಲ್ಲಿ ಇದ್ದರೆ, ಇದೀಗ ಅದರ ಸಂಖ್ಯೆ 17 ಆಗಿದೆ. ಸೋ ಕಾಲ್ಡ್ ಡಿ-ಬಾಸ್ ಅಲಿಯಾಸ್ ದರ್ಶನ್ ನಾಯ್ಡು ನಂಬಿ ಬಂದಿದ್ದ ಹಲವು ಬಡ ಯುವಕರ ಬದುಕು ಇದೀಗ ಜೈಲು ಕಂಬಿ ಹಿಂದೆ ಬೀಳುವಂತೆ ಆಗಿದೆ. ಹೀಗಿದ್ದಾಗಲೇ ದರ್ಶನ್ ಸಹವಾಸ ಮಾಡಿದಕ್ಕೆ ಈಗ, ಬಡವರ ಮನೆ ಹುಡುಗ ತನ್ನ ತಂದೆಯ ಶವ ನೋಡುವುದಕ್ಕೆ ಕೂಡ ಸಾಧ್ಯವಾಗುತ್ತಿಲ್ಲ.\

Actor Darshan Thoogudeepa Incident Taking Very Big Turns

ದರ್ಶನ್ ಸಹವಾಸದಿಂದ ತಂದೆ ಕಳೆದುಕೊಂಡ

ಅಂದಹಾಗೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಎಸ್ಕೇಪ್ ಆಗಿದ್ದ, ಚಿತ್ರದುರ್ಗದ ಅನುಕುಮಾರ್​ ಅಲಿಯಾಸ್​ ಅನು ಈಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಹೀಗೆ ತನ್ನ ಮಗ ಕೊಲೆ ಆರೋಪಿಯಾಗಿ ಪೊಲೀಸರ ಬಲೆಗೆ ಬಿದ್ದ ನಂತರ, ಆರೋಪಿ ಅನುಕುಮಾರ್ ಅಲಿಯಾಸ್ ಅನು ತಂದೆ ಚಂದ್ರಣ್ಣ ಅವರಿಗೆ ಹೃದಯಾಘಾತ ಆಗಿದೆ ಎಂದು ಆರೋಪ ಮಾಡಲಾಗಿದೆ. ಹೃದಯಾಘಾತದ ಕಾರಣಕ್ಕೆ, ಇದೀಗ ಅನುಕುಮಾರ್ ಅಲಿಯಾಸ್ ಅನು ಅವರ ತಂದೆ ಚಂದ್ರಣ್ಣ ಮೃತಪಟ್ಟಿದ್ದಾರೆ. ಹೀಗಿದ್ದಾಗ ಕೊಲೆ ಆರೋಪಿಗೆ ತನ್ನ ತಂದೆಯ ಮುಖ ಕೊನೆಯ ಬಾರಿಗೆ ನೋಡುವ ಭಾಗ್ಯ ಕೂಡ ಸಿಕ್ಕಿಲ್ಲ. ದರ್ಶನ್ ಸಹವಾಸ ಮಾಡಿದ್ದಕ್ಕೆ ಅನುಕುಮಾರ್ ನರಳುವಂತಾಗಿದೆ ಎಂಬ ಆರೋಪ ಕೇಳಿಬಂದಿದೆ.

ಬಡವರ ಮನೆ ಸದಸ್ಯರ ಕಣ್ಣೀರು...

ಈ ಘಟನೆಯ ಕುರಿತಂತೆ ಅನು ಕುಟುಂಬದವರು ಪ್ರತಿಕ್ರಿಯೆ ನೀಡಿ, 'ಮಗ ಅರೆಸ್ಟ್​ ಆಗಿದ್ದಕ್ಕೆ ತಂದೆಗೆ ಹಾರ್ಟ್ ಅಟ್ಯಾಕ್ ಆಗಿದೆ. ಇದು ಕುಟುಂಬದ ಸದಸ್ಯರನ್ನ ಆಘಾತಕ್ಕೆ ಒಳಗಾಗುವವಂತೆ ಮಾಡಿದೆ. ಹೀಗಾಗಿ ಮಗನನ್ನು ಕರೆಸಬೇಕು, ಅವನು ಇಲ್ಲದೇ ಅವರ ತಂದೆಯ ಶವ ಸಂಸ್ಕಾರ ಕೂಡ ಆಗಲ್ಲ. ಎಷ್ಟೇ ದಿನ ಆದರೂ ಶವವನ್ನ ಇಲ್ಲೇ ಇಡುತ್ತೇವೆ. ಅನು ಬರುವವರೆಗೂ ಶವ ಎತ್ತಲ್ಲ, ಇಷ್ಟು ದಿನ ಜೊತೆಗಿದ್ದ ತಂದೆ ಶವ ಆತ ನೋಡದೇ ಇರೋಕೆ ಆಗಲ್ಲ' ಅನ್ನುತ್ತಾ ತಮ್ಮ ಆಕ್ರೋಶ ಹೊರಗಡೆ ಹಾಕಿದ್ದಾರೆ ಅನುಕುಮಾರ್ ಅಲಿಯಾಸ್ ಅನು ಮನೆಯವರು. ಹಾಗೇ ದರ್ಶನ್ ನಾಯ್ಡು ವಿರುದ್ಧ ಕೂಡ ಸಿಟ್ಟು ಹೊರಹಾಕಿ, ದರ್ಶನ್ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+