Darshan Thoogudeepa: ಜೈಲಿಗೆ ಹೋದರೂ ಬುದ್ಧಿ ಕಲಿಯದ ದರ್ಶನ್ ತೂಗುದೀಪ್?

ದರ್ಶನ್ ತೂಗುದೀಪ್ ಕೊಲೆ ಆರೋಪದಲ್ಲಿ ಜೈಲು ಸೇರಿದ್ದು, ಕಂಬಿ ಎಣಿಸುತ್ತಾ ಮುದ್ದೆ ನುಂಗುತ್ತಿದ್ದಾರೆ. ಹೀಗೆ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದ ರೇಣುಕಾಸ್ವಾಮಿ ಎಂಬ ಯುವಕನ ಕೊಲೆ ಕೇಸ್‌ನಲ್ಲಿ ಜೈಲು ಸೇರಿರುವ ನಟ ದರ್ಶನ್ ತೂಗುದೀಪ್‌ಗೆ ಇನ್ನು ಬುದ್ಧಿ ಬಂದಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹಾಗಾದರೆ ನಟ ದರ್ಶನ್ ತೂಗುದೀಪ್ ಪರಪ್ಪನ ಅಗ್ರಹಾರ ಜೈಲಲ್ಲಿ ಮಾಡಿದ ತಪ್ಪಾದರೂ ಏನು? ಬನ್ನಿ ಮುಂದೆ ತಿಳಿಯೋಣ.

ದರ್ಶನ್ ತೂಗುದೀಪ್ ಕೋಟಿ ಕೋಟಿ ಅಭಿಮಾನಿಗಳನ್ನ ಗಳಿಸಿದ್ದರು. ಇದೇ ಕಾರಣಕ್ಕೆ ಈ ನಟ ಒಂದೊಂದು ಸಿನಿಮಾಗು ಹತ್ತಾರು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು ಎಂಬ ಮಾತು ಗಾಂಧಿನಗರದ ಗಲ್ಲಿ ಗಲ್ಲಿಯಲ್ಲಿ ಓಡಾಡುತ್ತಿವೆ. ಹೀಗಿದ್ದಾಗ ಯುವಕನ ಕೊಲೆ ಆರೋಪದಲ್ಲಿ ದರ್ಶನ್ ಜೈಲು ಸೇರಿದ್ದು, ಈಗಲಾದರೂ ಅವರು ಬದಲಾಗಿ ಹೊರ ಬರುತ್ತಾರೆ ಅಂತಾ ಕಾಯುತ್ತಿದ್ದವರಿಗೆ ಈಗ ಆಘಾತ ಎದುರಾಗಿದೆ. ಅದು ಏನಂದ್ರೆ ಜೈಲಿನಲ್ಲಿಯು ಕೂಡ ದರ್ಶನ್ ತಮ್ಮ ಹಳೆಯ ಬುದ್ಧಿ ತೋರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ! ಹಾಗಾದ್ರೆ ದರ್ಶನ್ ಮಾಡಿದ ಆ ಘೋರ ತಪ್ಪು ಏನು?

Actor Darshan Thoogudeepa Did This In Parappana Agrahara

ದರ್ಶನ್ ತೂಗುದೀಪ್ ಮಾಡಿದ ತಪ್ಪು ಏನು?

ಕೊಲೆ ಆರೋಪದಲ್ಲಿ ದರ್ಶನ್ ತೂಗುದೀಪ್ ಜೈಲು ಸೇರಿದ ನಂತರ ಅವರ ಮನಸ್ಸು ಈಗ ಬದಲಾಗಿದೆ. ಜೈಲಿನಿಂದ ಹೊರಗಡೆ ಬಂದ ನಂತರ ಅವರು ಬದಲಾಗಿ ಬದುಕುತ್ತಾರೆ ಎಂಬ ನಿರೀಕ್ಷೆ ದರ್ಶನ್ ಅವರ ಅಭಿಮಾನಿಗಳಲ್ಲಿ ಇತ್ತು. ಆದರೆ ಪರಪ್ಪನ ಅಗ್ರಹಾರ ಜೈಲಿನಿಂದ ಬೇರೆಯದ್ದೇ ಸುದ್ದಿ ಹೊರಬಿದ್ದಿದ್ದು, ದರ್ಶನ್ ವಿರುದ್ಧ ಮತ್ತೊಂದು ಗಂಭೀರ ಆರೋಪವು ಕೂಡ ಓಡಾಡುತ್ತಿದೆ. ಹಾಗಾದರೆ ಏನಿದು ಹೊಸ ಆರೋಪ? ಮುಂದೆ ಓದಿ.

ದರ್ಶನ್ ಗ್ಯಾಂಗ್‌ನಲ್ಲಿ ವಾರ್ ಶುರು?

ಹೌದು, ಜೈಲಿಗೆ ಸೇರಿದ ಕೋಪದಲ್ಲಿ ಇರುವ ನಟ ದರ್ಶನ್ ತೂಗುದೀಪ್ ಇದೀಗ ತನ್ನದೇ ಗ್ಯಾಂಗ್‌ನ ಸದಸ್ಯರ ವಿರುದ್ಧ ರೊಚ್ಚಿಗೆದ್ದಿರುವ ಆರೋಪ ಕೇಳಿಬಂದಿದೆ. ಅದರಲ್ಲೂ ಹೀಗೆ ನಾನು ಜೈಲಿಗೆ ಬರಲು ನೀನೇ ಕಾರಣ ಅಂತಾ, A14 ಆರೋಪಿ ಆಗಿರುವ ಪ್ರದೋಷ್ ಬಗ್ಗೆ ಅಸಮಾಧಾನ ಹೊರ ಹಾಕಿರುವ ನಟ ದರ್ಶನ್ ರೊಚ್ಚಿಗೆದ್ದಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ. ಅಲ್ಲದೆ ಇದೇ ವಿಚಾರವಾಗಿ ತೀವ್ರ ಆಕ್ರೋಶ ಹೊರಹಾಕಿ, ಮತ್ತೆ ಮೊದಲಿನ ರೀತಿಯಲ್ಲೇ ಸಿಟ್ಟು ಹೊರಹಾಕಿದ್ದಾರೆ ಎನ್ನಲಾಗಿದೆ. ಹೀಗಾಗಿ ನಟ ದರ್ಶನ್ ತೂಗುದೀಪ್, ಬದಲಾಗಿ ಜೈಲಿನಿಂದ ಹೊರಗೆ ಬರ್ತಾರೆ ಅನ್ನೋ ನಿರೀಕ್ಷೆ ಹುಸಿಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಇತರ ಆರೋಪಿಗಳು ಕೂಡ ದರ್ಶನ್ ವರ್ತನೆಗೆ ಅಸಮಾಧಾನ ಹೊರಹಾಕಿ ಬೇಸರಗೊಂಡಿದ್ದಾರೆ ಎನ್ನಲಾಗಿದೆ.

ದರ್ಶನ್ & ಜೊತೆಗಾರರಿಗೆ ಬಿರಿಯಾನಿ?

ಪರಪ್ಪನ ಅಗ್ರಹಾರ ಜೈಲಿನ ಅವ್ಯವಸ್ಥೆ ಬಗ್ಗೆ ಬಿಡಿಸಿ ಹೇಳಬೇಕಿಲ್ಲ, ಯಾಕಂದ್ರೆ ಈ ಹಿಂದೆ ಕೂಡ ಪರಪ್ಪನ ಅಗ್ರಹಾರ ಜೈಲಿನ ಮೇಲೆ ದಾಳಿ ನಡೆದಾಗ ಗಾಂಜಾ, ಸಿಗರೇಟ್, ಲಿಕ್ಕರ್ ಹೀಗೆ ಏನೇನು ವಸ್ತು ಸಿಗಬಾರದೋ ಅದೆಲ್ಲಾ ಸಿಕ್ಕಿತ್ತು. ಈಗಲೂ, ಪರಪ್ಪನ ಅಗ್ರಹಾರ ಜೈಲಲ್ಲಿ ಖೈದಿಗಳಿಗೆಲ್ಲಾ ಅಧಿಕಾರಿಗಳೇ ಸಹಾಯ ಮಾಡುತ್ತಾರೆ. ಅದರಲ್ಲೂ ಜೈಲಿನ ಒಳಗಡೆ ದುಡ್ಡು ಕೊಟ್ಟರೆ ಏನೇನು ವ್ಯವಸ್ಥೆ ಬೇಕೋ ಅದನ್ನೆಲ್ಲಾ ಜೈಲಿನ ಒಳಗೆ ಮಾಡ್ತಾರೆ ಎಂಬ ಆರೋಪದ ನಡುವೆ, ದರ್ಶನ್ & ಗ್ಯಾಂಗ್‌ಗೆ ಬಿರಿಯಾನಿ ಸಪ್ಲೈ ಮಾಡುತ್ತಿರುವ ಆರೋಪ ಕೂಡ ಕೇಳಿಬಂದಿತ್ತು. ಆದರೆ ಇದಕ್ಕೆಲ್ಲ ಸೂಕ್ತ ಸಾಕ್ಷ್ಯಗಳು ಲಭ್ಯವಾಗಿಲ್ಲ, ಹೀಗಾಗಿ ಇದು ಗಾಳಿ ಸುದ್ದಿ ಎನ್ನಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+