Darshan Thoogudeepa: ಜಾಮೀನಿನ ಸುಳಿವು ಕೊಡ್ತಾ ನಟ ದರ್ಶನ್ ಸ್ಮೈಲು..?
ನಟ ದರ್ಶನ್ ಅಭಿನಯದ ʼನವಗ್ರಹʼ ಸಿನಿಮಾದ ʼಸ್ಮೈಲೋರೆ ಸ್ಮೈಲು ಸ್ಮೈಲು ಬಾಸು...ಸ್ಮೈಲು ಇದ್ರೆ ಬಿಂದಾಸುʼ ಹಾಡು ಸಖತ್ ಫೇಮಸ್ಸು. ಸದ್ಯ ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ಕೂಡ ಥೇಟ್ ಇದೇ ಹಾಡಿಗೆ ಹೋಲುವಂತೆ ಸ್ಮೈಲ್ ಮಾಡಿದ್ದಾರೆ. ಇನ್ನೇನು ನಾಳೆ ಜಾಮೀನು ಅರ್ಜಿ ವಿಚಾರಣೆ ಇರುವ ಬೆನ್ನಲ್ಲೇ ದರ್ಶನ್ ಅವರ ಈ ನಗು ಸಾಕಷ್ಟು ಪ್ರಶ್ನೆಗಳನ್ನು ಮುಂದಿಟ್ಟಿದೆ.
ದರ್ಶನ್‌ಗೆ ನಾಳೆ ಜಾಮೀನು ಸಿಗುವ ವಿಶ್ವಾಸ ಹೆಚ್ಚಾಗಿದ್ದು, ಈ ಕಾರಣದಿಂದಲೇ ಅವರು ಜೈಲಿನಲ್ಲಿದ್ದರೂ ಬಿಂದಾಸ್ ಆಗಿ ಸ್ಮೈಲ್ ಮೂಲಕ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇಲ್ಲಿವರೆಗೆ ಫೀಲಿಂಗ್‌ನಲ್ಲಿ ಸೊರಗಿದ್ದರು ಎನ್ನಲಾದ ದರ್ಶನ್ ಅವರು ಇಂದು ಬಳ್ಳಾರಿ ಜೈಲಿನಲ್ಲಿ ನಗುತ್ತಾ ಕಾಣಿಸಿಕೊಂಡಿದ್ದಾರೆ.

ಅಲ್ಲದೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ಕೂಡ ಪತಿಯನ್ನು ಕಾಣಲು ಬಳ್ಳಾರಿಗೆ ಬಂದಿದ್ದರು. ಎರಡು ಮೂರು ಬ್ಯಾಗ್‌ಗಳಲ್ಲಿ ದರ್ಶನ್‌ಗೆ ಕೆಲವು ವಸ್ತುಗಳನ್ನು ಕೂಡ ಕೊಂಡೊಯ್ದಿದ್ದರು. ಇದಾದ ಬಳಿಕ ಪೊಲೀಸರೊಡನೆ ಕಾಣಿಸಿಕೊಂಡ ದರ್ಶನ್ ಅವರನ್ನು ಕಾಣಲು ಫ್ಯಾನ್ಸ್ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು.
ಈ ವೇಳೆ ದರ್ಶನ್ ಅವರನ್ನು ಕಂಡು ಜೋರಾಗಿ ಡಿಬಾಸ್...ಡಿಬಾಸ್ ಎಂದು ಫ್ಯಾನ್ ಕಿರುಚಾಡಿದರು. ಇದನ್ನು ಕಂಡ ದರ್ಶನ್ ತಮ್ಮದೇ ಸ್ಟೈಲಲ್ಲಿ ಸ್ಮೈಲ್ ಕೊಡುತ್ತಾ ಜೈಲಿನೊಳಗೆ ಹೋಗಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೇ ದರ್ಶನ್ ಅವರಿಗೆ ನಾಳೆ ಜಾಮೀನು ಸಿಗುವ ಮುನ್ಸೂಚನೆ ಸಿಕ್ಕಿದೆ ಎಂಬ ಮಾತುಗಳು ಜೋರಾಗಿ ಕೇಳಿಬರುತ್ತಿವೆ.
ಪತ್ನಿ ವಿಜಯಲಕ್ಷ್ಮಿ ಅವರ ಭೇಟಿ ಬಳಿಕ ದರ್ಶನ್ ಅವರು ಫುಲ್ ಖುಷಿಯಾಗಿ ಕಾಣಿಸಿಕೊಂಡಿದ್ದು, ನಾಳೆ ನಡೆಯುವ ಜಾಮೀನು ಅರ್ಜಿ ವಿಚಾರಣೆಯಲ್ಲಿ ದರ್ಶನ್ ಅವರಿಗೆ ಬೇಲ್ ಸಿಗುವುದು ಪಕ್ಕಾ ಎನ್ನಲಾಗಿದೆ. ಈ ವಿಚಾರವಾಗಿ ದರ್ಶನ್ ಅವರ ಪತ್ನಿ ಮಹತ್ವದ ಮಾಹಿತಿ ಹಂಚಿಕೊಂಡಿರಬಹುದು. ಇದೇ ಕಾರಣಕ್ಕೆ ದರ್ಶನ್ ಅವರು ಇಂದು ಜಾಲಿ ಮೂಡ್‌ನಲ್ಲಿದ್ದರು ಎಂದು ಹೇಳಲಾಗುತ್ತಿದೆ.

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಇದರ ವಿಚಾರಣೆ ಪದೇ ಪದೇ ಮುಂದೂಡುತ್ತಲೇ ಇದೆ. ಇತ್ತೀಚೆಗೆ ವಿಚಾರಣೆ ನಡೆಸಿದ್ದ ಕೋರ್ಟ್, ಮತ್ತೆ ವಿಚಾರಣೆಯನ್ನು ಅಕ್ಟೋಬರ್ 8ಕ್ಕೆ (ಮಂಗಳವಾರ) ಮುಂದೂಡಿದೆ. ಶನಿವಾರವೇ ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ ನಟ ದರ್ಶನ್‌ಗೆ ತೀವ್ರ ನಿರಾಸೆ ಆಯಿತು. ಆದರೂ ಇತ್ತೀಚಿಗೆ ತಮ್ಮ ವಕೀಲರ ವಾದದಿಂದ ತನಗೆ ಜಾಮೀನು ಸಿಕ್ಕೇ ಸಿಗುತ್ತದೆ ಎನ್ನುವ ವಿಶ್ವಾಸ ದರ್ಶನ್ ಅವರಿಗೆ ಹೆಚ್ಚಾಗಿದೆ ಎನ್ನಲಾಗಿದೆ.
ಕೋರ್ಟ್ ವಿಚಾರಣೆ ವೇಳೆ ದರ್ಶನ್ ಪರ ವಾದ ಮಂಡಿಸಿದ್ದ ವಕೀಲರು, ತನಿಖಾಧಿಕಾರಿಗಳ ಬಗ್ಗೆ ಹಾಗೂ ಸಾಕ್ಷಿಗಳ ಬಗ್ಗೆ ಹಲವು ದಾಖಲೆಗಳ ಸಹಿತವಾಗಿ ಅನುಮಾನಗಳನ್ನು ವ್ಯಕ್ತಪಡಿಸಿ, ನ್ಯಾಯಾಧೀಶರ ಮುಂದೆ ಹತ್ತಾರು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರಂತೆ. ಇದು ದರ್ಶನ್ ಅವರಿಗೆ ಪ್ಲಸ್ ಆಗಲಿದ್ದು, ಇದರಿಂದಲೂ ಅವರಿಗೆ ಜಾಮೀನು ಸಿಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.
ಒಂದು ವೇಳೆ ಜಾಮೀನು ಸಿಗದೆ, ಮತ್ತೆ ನ್ಯಾಯಾಂಗ ಬಂಧನ ವಿಸ್ತರಣೆಯಾದರೆ ಅನಾರೋಗ್ಯದ ಕಾರಣ ನೀಡಿ ದರ್ಶನ್ ಅವರು ಬೆಂಗಳೂರಿಗೆ ಶಿಫ್ಟ್ ಮಾಡಿಸುವಂತೆ ನ್ಯಾಯಾಧೀಶರನ್ನು ಕೇಳಿಕೊಳ್ಳಲಿದ್ದಾರಂತೆ. ಹಾಗಾಗಿ ನಾಳೆ ಕೋರ್ಟ್‌ನಲ್ಲಿ ದರ್ಶನ್ ಅವರ ಭವಿಷ್ಯ ನಿರ್ಧಾರವಾಗಲಿದೆ.












Click it and Unblock the Notifications