Darshan Attack: ಕೊಲೆ ಬಳಿಕ 'ನಿನ್ನಿಂದಲೇ ಇದೆಲ್ಲ ಆಯ್ತು': ಪವಿತ್ರಾ ಗೌಡ ಮೇಲೆ ದರ್ಶನ್ ಹಲ್ಲೆ, ಡಿಸ್ಚಾರ್ಜ್

ಬೆಂಗಳೂರು, ಜೂನ್ 11: ಚಿತ್ರದುರ್ಗ ಮೂಲಕ ರೇಣುಕಾಸ್ವಾಮಿ ಕೊಲೆ ಬಳಿಕ ನಟ ದರ್ಶನ್ ಹಲ್ಲೆ ತಮ್ಮ ಮೇಲೆ ಸಹ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ಪವಿತ್ರಾಗೌಡ ಅವರು ತಿಳಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಹೌದು, ದರ್ಶನ್ ಪ್ರೇಯಸಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೆಜ್ ಮಾಡಿದ್ದ ವ್ಯಕ್ತಿ ರೇಣುಕಾಸ್ವಾಮಿ ಅವರನ್ನು ಹತ್ಯೆ ಮಾಡಲಾಗಿದೆ. ಬಳಿಕ ಇದೆಲ್ಲವು ಆಗಿದ್ದ ನಿನ್ನಿಂದಲೇ ಎಂದು ನಟ ದರ್ಶನ್ ಪವಿತ್ರಾ ಗೌಡ ಮೇಲೆ ಹಲ್ಲೆ ಮಾಡಿದ್ದರು ಎನ್ನಲಾಗಿದೆ.

Actor Darshan Attack on Pavitra Gowda after Renuka Swami Murder

ದರ್ಶನ್ ನಿಂದ ಹಲ್ಲೆಗೆ ಒಳಗಾದ ಪವಿತ್ರಾ ಗೌಡ ಅವರು ನೆನ್ನೆ ಸೋಮವಾರ ವಷ್ಟೇ ಬೆಂಗಳೂರಿನ ರಾಜ ರಾಜೇಶ್ವರಿ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಚಿಕಿತ್ಸೆ ಬಳಿಕ ಅವರು ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದರು. ಇದೆಲ್ಲ ಅಂಶಗಳು ಇದೀಗ ನಟ ದರ್ಶನ್ ಗೆ ಸಂಬಂಧಿಸಿದ ಕೊಲೆ ಪ್ರಕರಣ ಮತ್ತಷ್ಟು ಉರುಳು ತರಲಿವೆ.

ನಟ ದರ್ಶನ್ ಒಂದು ಕಡೆ ನಾನು ಕೊಲೆ ಮಾಡಲು ಹೇಳಿಲ್ಲ ಎನ್ನುತ್ತಿದ್ದಾರೆ. ಕೊಲೆ ನಡೆದಿರುವುದು ನಟನಿಗೆ ಗೊತ್ತಾದ ಬಳಿಕವೇ 'ನಿನ್ನಿಂದ ಇದೆಲ್ಲ ಆಗಿದೆ' ಎಂದು ಮನಬಂದಂತೆ ಬೈದಿದ್ದಾರೆ. ನಂತರ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಇದೆಲ್ಲವನ್ನು ಅವರು ಪೊಲೀಸರ ಮುಂದೆ ತಿಳಿಸಿದ್ದಾರೆ ಎನ್ನಲಾಗಿದೆ.

ಸದ್ಯ ನಟ ದರ್ಶನ್ ಅನ್ನುಪೂರ್ಣೆಶ್ವರಿ ನಗರದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಅದರ ಬೆನ್ನಲ್ಲೆ ಅವರ ಪ್ರೇಯಸಿ ಪವಿತ್ರಾ ಗೌಡ ಅವರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಸದ್ಯ ಕೂಲಂಕುಷವಾಗಿ ದರ್ಶನ್ ಹಾಗೂ ಪವಿತ್ರಾ ರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ನಟ ದರ್ಶನ್ ಮೇಲೆ ಕೊಲೆ ಆರೋಪದ ಜೊತೆಗೆ ಹನಿಟ್ರ್ಯಾಪ್, ಕಿಡ್ನಾಪ್ ಆರೋಪಗಳು ಕೇಳಿ ಬಂದಿವೆ. ದರ್ಶನ್ ಹಾಗೂ ಪವಿತ್ರಾ ಗೌಡರ ವಿಚಾರಣೆ ಪೂರ್ಣಗೊಂಡಿದೆ. ಇವರಿಬ್ಬರು ಸೇರಿದಂತೆ ಎಲ್ಲ 13 ಬಂಧಿತ ಆರೋಪಿಗಳನ್ನು ಸಂಜೆ ನ್ಯಾಯಾಲಯದ ಮುಂದೆ ಪೊಲೀಸರ ಹಾಜರುಪಡಿಸಿದ್ಲಿದಾರೆ.

ದರ್ಶನ್ ಪ್ರೇಯಸಿ ಈ ಕೊಲೆ ಪ್ರಕರಣದಲ್ಲಿ A1ಆರೋಪಿಯನ್ನಾಗಿ ಮಾಡಲಾಗಿದೆ. ದರ್ಶನ್ A2 ಆರೋಪಿಯಾದರೆ, A3 ಆಗಿ ಚಿತ್ರದುರ್ಗ ದರ್ಶನ್ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ರಾಘವಂದ್ರ ಅಲಿಯಾಸ್ ರಘು ದರ್ಶನ್‌ನನ್ನು ಮಾಡಲಾಗಿದೆ. ಉಳಿದಂತೆ ಇಬ್ಬರು ಆಪ್ತರು ಹಾಗೂ ಕೊಲೆಗಾರರನ್ನು ನಂತರದ ಹತ್ತು ಆರೋಪಿಗಳ ಲಿಸ್ಟ್‌ ಗೆ ಸೇರಿಸಲಾಗಿದೆ.

ಸದ್ಯ ಪ್ರಕರಣದಲ್ಲಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮುಂದಿನ ಆರು ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+