ನಟ ಡಾರ್ಲಿಂಗ್‌ ಕೃಷ್ಣ-ಮಿಲನಾ ದಾಂಪತ್ಯದಲ್ಲಿ ಬಿರುಕು? ದಿಢೀರ್‌ ಫ್ಯಾಮಿಲಿ ಕೋರ್ಟ್‌ ಮೆಟ್ಟಿಲೇರಿದ್ದೇಕೆ?

ಕನ್ನಡ ಚಿತ್ರರಂಗದಲ್ಲಿ ಸೆಲೆಬ್ರಿಟಿಗಳ ಡಿವೋರ್ಸ್‌ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಹತ್ತಾರು ವರ್ಷ ಕೂಡ ಬಾಳಿದ ದಾಂಪತ್ಯ ದಿಢೀರನೆ ಮುರಿದು ಬೀಳುತ್ತಿವೆ. ಕೆಲ ದಿನಗಳ ಹಿಂದೆಯಷ್ಟೇ ಸ್ಯಾಂಡಲ್‌ವುಡ್‌ ನಟ ಅಜಯ್‌ ರಾವ್‌ ಅವರ ದಾಂಪತ್ಯದಲ್ಲಿ ಬಿರುಕು ಮೂಡಿ, ಡಿವೋರ್ಸ್‌ಗೆ ಮುಂದಾಗಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ಮತ್ತೊಬ್ಬ ನಟ ಡಿವೋರ್ಸ್‌ ಪ್ರಕರಣಗಳಿಗೆ ಸಾಕ್ಷಿಯಾಗುವ ಫ್ಯಾಮಿಲಿ ಕೋರ್ಟ್‌ ಮೆಟ್ಟಿಲೇರಿರುವುದು ಸಂಚಲನ ಸೃಷ್ಟಿಸಿದೆ. ನಟ ಡಾರ್ಲಿಂಗ್‌ ಕೃಷ್ಣ ಫ್ಯಾಮಿಲಿ ಕೋರ್ಟ್‌ನಲ್ಲಿ ಕಾಣಿಸಿಕೊಂಡಿರುವ ಫೋಟೋ ಸಖತ್‌ ವೈರಲ್‌ ಆಗಿದೆ. ಇದರ ಬೆನ್ನಲ್ಲೇ ಡಿವೋರ್ಸ್‌ ವಿಚಾರದ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.

ಫ್ಯಾಮಿಲಿ ಕೋರ್ಟ್‌ ಅಂದಾಕ್ಷಣ ಬಹುತೇಕರಿಗೆ ನೆನೆಪಾಗುವುದೇ ಡಿವೋರ್ಸ್‌. ಹೀಗಾಗಿ ನಟ ಡಾರ್ಲಿಂಗ್‌ ಕೃಷ್ಣ ದಿಢೀರ್‌ ಇಲ್ಲಿ ಪ್ರತ್ಯಕ್ಷವಾಗಿರುವುದು ಶಾಕ್‌ ನೀಡಿದೆ. ಮತ್ತೊಂದೆಡೆ ಡಾರ್ಲಿಂಗ್‌ ಕೃಷ್ಣ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಕೃಷ್ಣ ಅವರ ಅಭಿಮಾನಿಗಳು ಕೂಡ ಈ ವಿಚಾರ ತಿಳಿದು ಶಾಕ್‌ಗೆ ಒಳಗಾಗಿದ್ದಾರೆ. ಇದಕ್ಕೆ ಕಾರಣವಾಗಿದ್ದು ಆ ವೈರಲ್‌ ಫೋಟೋ.

Actor Darling Krishna Reaches Family Court Fans Shocked By Viral Photo

ಇನ್ನು ನಟ ಡಾರ್ಲಿಂಗ್‌ ಕೃಷ್ಣ ಹಾಗೂ ನಟಿ ಮಿಲನಾ ನಾಗರಾಜ್‌ ಅವರು ಪ್ರೀತಿಸಿ ಮದುವೆಯಾಗಿದ್ದರು. ಸ್ಯಾಂಡಲ್‌ವುಡ್‌ನ ಸೆಲೆಬ್ರಿಟಿ ಜೋಡಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. ಕೃಷ್ಣ ಅವರು ನಟಿ ಮಿಲನಾ ನಾಗರಾಜ್ ಅವರನ್ನ ನಮ್ ದುನಿಯಾ ನಮ್ ಸ್ಟೈಲ್ ಚಿತ್ರದ ಸೆಟ್‌ನಲ್ಲಿ ಭೇಟಿಯಾದರು. 2015ರಿಂದಲೇ ಡೇಟಿಂಗ್ ಶುರು ಮಾಡಿದ್ದರು. 2021ರಲ್ಲಿ ಇವರ ಮದುವೆ ನೆರವೇರಿತ್ತು. ಕಳೆದ ಸೆಪ್ಟೆಂಬರ್‌ನಲ್ಲಿ ಈ ದಂಪತಿ ಪರಿ ಎನ್ನುವ ಹೆಣ್ಣುಮಗುವನ್ನು ಬರಮಾಡಿಕೊಂಡಿದ್ದರು.

ನಟ ಡಾರ್ಲಿಂಗ್‌ ಕೃಷ್ಣ ಅವರು ಲವ್‌ ಮಾಕ್ಟೇಲ್‌ ಸಿನಿಮಾ ಹಿಟ್‌ ಆದ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಡಾರ್ಲಿಂಗ್ ಕೃಷ್ಣ 2020ರಲ್ಲಿ ತಮ್ಮದೇ ಆದ ನಿರ್ಮಾಣ ಸಂಸ್ಥೆ "ಕೃಷ್ಣ ಟಾಕೀಸ್" ಪ್ರಾರಂಭಿಸಿ ಲವ್ ಮಾಕ್‌ಟೇಲ್ ಮತ್ತು ಲವ್ ಮಾಕ್‌ಟೇಲ್-2 ನಿರ್ಮಿಸಿದ್ದರು. ಆದರೆ ಇದೀಗ ಫ್ಯಾಮಿಲಿ ಕೋರ್ಟ್‌ನಲ್ಲಿ ಕೃಷ್ಣ ಕಾಣಿಸಿಕೊಂಡಿರುವುದು ಸಂಚಲನ ಸೃಷ್ಟಿಸಿದೆ.

ಕೋರ್ಟ್‌ಗೆ ಹೋಗಿದ್ದೇಕೆ?

ನಟ, ನಿರ್ದೇಶಕರಾಗಿರುವ ಡಾರ್ಲಿಂಗ್‌ ಕೃಷ್ಣ ಅವರು ಫ್ಯಾಮಿಲಿ ಕೋರ್ಟ್‌ನಲ್ಲಿ ಕಾಣಿಸಿಕೊಂಡಿರುವ ಫೋಟೋ ವೈರಲ್‌ ಆಗಿದೆ. ಸೆಲೆಬ್ರಿಟಿ ಆದ ಕಾರಣ ಕೃಷ್ಣ ತಮ್ಮ ಮುಖಕ್ಕೆ ಮಾಸ್ಕ್‌ ಧರಿಸಿ ಕೋರ್ಟ್‌ ಆವರಣದಲ್ಲಿ ಕಾಣಿಸಿಕೊಂಡಿದ್ದು, ಈ ಫೋಟೋ ನೋಡಿ ಅಭಿಮಾನಿಗಳು ಆಘಾತಕ್ಕೆ ಒಳಗಾಗಿದ್ದಾರೆ. ಮತ್ತೊಂದೆಡೆ ಕೃಷ್ಣ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಈ ಕಾರಣಕ್ಕೆ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂದು ವದಂತಿಯೂ ಹಬ್ಬಿದೆ. ಇದಕ್ಕೆ ಸ್ಪಷ್ಟನೆಯೂ ಸಿಕ್ಕಿದೆ.

ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಇಬ್ಬರೂ ಫ್ಯಾಮಿಲಿ ಕೋರ್ಟ್‌ಗೆ ಹೋಗಿದ್ದು, ಇದು ವೈಯಕ್ತಿಕ ವಿಚಾರಕ್ಕೆ ಅಲ್ಲ ಎಂದು ಹೇಳಲಾಗುತ್ತಿದೆ. ಡಾರ್ಲಿಂಗ್‌ ಕೃಷ್ಣ ಅವರು ಮುಂದಿನ ಸಿನಿಮಾಗಾಗಿ ತಯಾರಿ ನಡೆಸುತ್ತಿದ್ದಾರೆ. ಲವ್ ಮಾಕ್ಟೇಲ್-3 ಸಿನಿಮಾದಲ್ಲಿ ಫ್ಯಾಮಿಲಿ ಕೋರ್ಟ್‌ನ ದೃಶ್ಯಗಳಿರುವ ಸಾಧ್ಯತೆ ಇದ್ದು, ಇದೇ ಕಾರಣಕ್ಕೆ ತಮ್ಮ ಸಿನಿಮಾ ಕಥೆಗಾಗಿ ಅವರು ಕೋರ್ಟ್‌ ಕಲಾಪಗಳನ್ನು ವೀಕ್ಷಿಸಲು ತೆರಳಿದ್ದರು ಎನ್ನಲಾಗಿದೆ. ಹಾಗಾಗಿ ಡಿವೋರ್ಸ್‌ಗಾಗಿ ದಂಪತಿ ಕೋರ್ಟ್‌ ಮೊರೆ ಹೋಗಿಲ್ಲ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+