ಇಂಡಸ್ಟ್ರಿಯಲ್ಲಿ ಅವರವರೇ ಸಾಯ್ತಾರೆ: ನಟ ರವಿಚಂದ್ರನ್‌ ಹೇಳಿದ್ದು ಯಾರ ಬಗ್ಗೆ?

ಕನ್ನಡ ಚಿತ್ರರಂಗದಲ್ಲೂ ಸ್ಟಾರ್‌ ವಾರ್‌ ಅನ್ನೋದು ಬೂದಿಮುಚ್ಚಿದ ಕೆಂಡದಂತೆ. ಸೋಶಿಯಲ್‌ ಮೀಡಿಯಾಗಳಲ್ಲಿ ಕೆಲ ಅಭಿಮಾನಿಗಳು ಶುರು ಮಾಡುವ ಈ ಹುಚ್ಚು ಕೆಲಸ ಕೊನೆಗೆ ನಟರ ನಡುವೆ ಭಿನ್ನಾಭಿಪ್ರಾಯಕ್ಕೂ ಕಾರಣವಾಗಬಹುದು. ಇತ್ತೀಚೆಗೆ ನಡೆದ ಬೆಳವಣಿಗೆಗಳಲ್ಲಿ ಹಲವು ನಟರು ಪರಸ್ಪರ ಮಾತು ಬಿಟ್ಟಿರುವ ಉದಾಹರಣೆಗಳಿವೆ. ಇದಕ್ಕೆ ವೈಯಕ್ತಿಕ ಕಾರಣಗಳೂ ಇರಬಹುದು. ಆದರೆ ಸ್ಯಾಂಡಲ್‌ವುಡ್‌ನ ಹಿರಿಯ ನಟರಾದ ಕ್ರೇಜಿಸ್ಟಾರ್‌ ವಿ.ರವಿಚಂದ್ರನ್‌ ಅವರು ವೇದಿಕೆ ಮೇಲೆಯೇ ಶಾಕಿಂಗ್‌ ಹೇಳಿಕೆ ನೀಡಿದ್ದಾರೆ. ರವಿಚಂದ್ರನ್‌ ಅವರು ತಮ್ಮದೇ ಶೈಲಿಯಲ್ಲಿ ಸ್ಯಾಂಡಲ್‌ವುಡ್‌ ನಡೆಯುತ್ತಿರುವ ಒಂದು ವಿಚಾರದ ನಗುತ್ತಲೇ ಹೇಳಿದ್ದಾರೆ.

ಚಂದನ್‌ ಶೆಟ್ಟಿ ನಟನೆಯ ಸೂತ್ರಧಾರಿ ಸಿನಿಮಾದ ಕಾರ್ಯಕ್ರಮದಲ್ಲಿ ರವಿಚಂದ್ರನ್‌ ಅವರು ಮಾತುಗಳು ಶಾಕ್‌ ನೀಡಿವೆ. ಮೊದಲಿಗೆ ಸಿನಿಮಾ ಬಗ್ಗೆ ಮಾತನಾಡಿರುವ ಅವರು, ಸಿನಿಮಾ ಎಲ್ಲಿ ಸೆಳೆಯುತ್ತೆ ಅಂದ್ರೆ, ಒಂದು ಟ್ರೇಲರ್‌ ಹಾಕ್ತೀವಿ, ಟ್ರೇಲರ್‌ ನೋಡಿದ ತಕ್ಷಣ ಏನೋ ಇದೆ ಎಂದು ಅನಿಸುತ್ತೆ. ಆದ್ರೆ ಏನು ಅನ್ನೋದು ಗೊತ್ತಾಗಲ್ಲ. ನನ್ನ ಪ್ರಕಾರ ನೀವು ಟ್ರೈಲರ್‌ನಲ್ಲೇ ಅವರವರೇ ಸಾಯ್ತೀರಿ ಎಂದು ಹೇಳಿದ್ದೀರಿ ಅನಿಸುತ್ತೆ. ಅದೇ ಈಗ ಇಂಡಸ್ಟ್ರಿಯಲ್ಲೂ ಆಗ್ತಿದೆ. ನೀವು ಅದನ್ನು ಸಿನಿಮಾ ಮಾಡಿ ಹೇಳ್ತಿದ್ದೀರಿ ಎಂದು ರವಿಚಂದ್ರನ್‌ ಪರೋಕ್ಷವಾಗಿ ಕನ್ನಡ ಚಿತ್ರರಂಗವನ್ನು ಉಲ್ಲೇಖಿಸಿ ಈ ಹೇಳಿಕೆ ನೀಡಿದ್ದಾರೆ.

Actor Crazy Star Ravichandran Makes Shocking Statement About Sandalwood

ನಾನು-ಶಿವಣ್ಣ ವಾರ್‌ ಮಾಡದೆ ಇರುವವರು!

ಕಾರ್ಯಕ್ರಮಕ್ಕೆ ಶಿವಣ್ಣ ಬಂದಿದ್ದು ನನಗೆ ತುಂಬಾ ಖುಷಿ ನೀಡಿದೆ. ಇದನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ಇದು ಇಬ್ಬರಿಗೂ ಸರ್‌ಪ್ರೈಸ್‌ ಎಂದು ರವಿಚಂದ್ರನ್‌ ಹೇಳಿದ್ದಾರೆ. ಸಾಮಾನ್ಯವಾಗಿ ಶಿವಣ್ಣ ಇದ್ರೆ ನಾನ್‌ ಬರಲ್ಲ, ನಾನಿದ್ರೆ ಶಿವಣ್ಣ ಬರಲ್ಲ, ನಾವಿಬ್ಬರೂ ಆ ರೀತಿ ಹೊಂದಾಣಿಕೆಯಲ್ಲೇ ಇದ್ದೇವೆ. ನಾವು ಒಬ್ಬರ ಪರವಾಗಿ ಮಾತನಾಡಿದ್ರೆ ಮುಗೀತು ಎಂದು ಭಾವಿಸುತ್ತೇವೆ. ಆ ಸ್ನೇಹವನ್ನು ನಾವು ಇವತ್ತಿನವರೆಗೂ ಉಳಿಸಿಕೊಂಡಿದ್ದೇವೆ. ಇಂಡಸ್ಟ್ರಿಯಲ್ಲಿ ಇಲ್ಲಿವರೆಗೆ ವಾರ್‌ ಮಾಡದೆ ಬಂದವರು ಅಂದ್ರೆ ಅದು ನಾವೇ ಎಂದು ಹೇಳಿದ್ದಾರೆ.

Take a Poll

ನಾವಿಬ್ಬರೂ ಒಬ್ಬರ ಸಿನಿಮಾಗೆ ಮತ್ತೊಬ್ಬರು ಸಾಥ್‌ ಕೊಡುತ್ತೇವೆ. ಯಾರ ಸಿನಿಮಾ ಬಂದ್ರೂ ಒಳ್ಳೆಯದಾಗಲಿ ಎನ್ನುತ್ತೇವೆ. ಇಬ್ಬರ ಸಿನಿಮಾ ಒಂದೇ ಸಲ ರಿಲೀಸ್‌ ಆದರೂ ನಮ್ಮಿಬ್ಬರ ಭಾವನೆ ಹೀಗೇ ಇರುತ್ತೆ. ನಮ್ಮ ಎರಡು ಕುಟುಂಬಗಳು ಹಾಗೂ ನಮ್ಮಿಬ್ಬರ ಸ್ನೇಹ ಕೂಡ ಮೊದಲಿನಿಂದ ಇಲ್ಲಿವರೆಗೂ ಹೀಗೆಯೇ ನಡೆದುಕೊಂಡು ಬಂದಿದೆ ಎಂದು ರವಿಚಂದ್ರನ್‌ ಸಂತಸ ವ್ಯಕ್ತಪಡಿಸಿದ್ದಾರೆ. ಶಿವ ಎಂದು ಹೆಸರಿಟ್ಟುಕೊಂಡಿದ್ದಾರೆ. ನನಗೆ ಶಿವ ಎಂದರೆ ಪ್ರೀತಿ, ಅಭಿಮಾನ ಜಾಸ್ತಿ ಎಂದಿದ್ದಾರೆ.

ಚಂದನ್‌ ಶೆಟ್ಟಿ ಯಾವಾಗಲೂ ಏನೋ ಕಳೆದುಕೊಂಡಂತೆ ಕಾಣಿಸ್ತಾನೆ. ನೀನು ಯೂಟ್ಯೂಬ್‌ನಲ್ಲಿ ಜಾಸ್ತಿ ಪಾಪುಲರ್.‌ ಆದರೆ ಇನ್ಸ್‌ಸ್ಟಾಗ್ರಾಂ, ವಾಟ್ಸಾಪ್‌ ಎಲ್ಲ ದುಡ್ಡಿಗೆ ಬರೋದಿಲ್ಲ. ಈಗ ನೀನು ಸಿನಿಮಾ ಹಿಟ್‌ ಆಗೋಕೆ ಏನು ಮಾಡಬೇಕು ಅನ್ನೋದನ್ನ ಯೋಚಿಸಬೇಕು. ಪ್ರೇಕ್ಷಕರನ್ನು ಥಿಯೇಟರ್‌ಗಳಿಗೆ ಕರೆಸೋದು ಹೇಗೆ ಎಂಬುದು ಈಗ ಬಹಳ ಮುಖ್ಯ ಎಂದು ಚಂದನ್‌ ಶೆಟ್ಟಿಗೆ ಕಿವಿಮಾತು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+