ವಿಷ್ಣುವರ್ಧನ್ ಸಮಾಧಿ ತೆರವು: ನಟ ಅನಿರುದ್ಧ ಹೇಳಿದ್ದೇನು? ಇವರೆಲ್ಲ ಅಭಿಮಾನಿಗಳೇ ಅಲ್ಲ...

ಬೆಂಗಳೂರು, ಆಗಸ್ಟ್ 09: ಕುಟುಂಬದವರ ಮೇಲೆ ಆರೋಪ ಮಾಡುವವರು ವಿಷ್ಣು ಅಭಿಮಾನಿಗಳೇ ಅಲ್ಲ. ಕುಟುಂಬದವರು ವೈಯಕ್ತಿಕ ಕಾರಣಕ್ಕೆ ಮಾಡಿದ್ದಾರೆ ಎಂಬ ಅರೋಪ ತಳ್ಳಿ ಹಾಕಿದರು. ಅಪ್ಪಾಜಿ ಅವರನ್ನೆ ಮೆರೆಸಲು ಕಾರ್ಯಕ್ರಮ ಮಾಡ್ತಿರಾ ಮಾಡಿ. ಆದರೆ ಎಲ್ಲ ಕಾರ್ಯಕ್ರಮಗಳಿಗೆ ಬರಲು ಆಗಿರುವುದಿಲ್ಲ. ಕಾರ್ಯಕ್ರಮ ಮಾಡಿದರೆ ನಮ್ಮ ಅಭ್ಯಂತರ ಇಲ್ಲ. ಅಪ್ಪಾ ಅವರೇ ಮೆರೆಸಿದರೆ ಪರಂಪರೆ ಮೆರೆಸಿದಂತೆ ಎಂದರು. ಕುಟುಂಬದವರ ಮೇಲೆ ಆರೋಪಿ ಹೊರಿಸಿದವರು ಅಭಿಮಾನಿಗಳೇ ಅಲ್ಲ ಎಂದು ಡಾ.ವಿಷ್ಣುವರ್ಧನ್ ಅಳಿಯ ನಟ ಅನಿರುದ್ಧ ಅವರು ತಿಳಿಸಿದರು.

ಮೈಸೂರಲ್ಲಿ ನೆನ್ನೆ ನಡೆದ ಮೇರುನಟರಲ್ಲಿ ಒಬ್ಬರಾದ ಸಾಹಸಿಂಹ ಡಾ.ವಿಷ್ಣುವರ್ಧನ್ ಅವರ ಸಮಾಧಿ ನೆಲಸಮ ಬಳಿಕ ವಿಷ್ಣು ಕುಟುಂಬಸ್ಥರ ಪೈಕಿ ಅವರ ಅಳಿಯ ಅನಿರುದ್ಧ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಮೊದಲಿಗೆ ಘಟನೆ ಖಂಡಿಸಿದ ಅವರು, ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ವಿಷ್ಣು ಅವರ ಕುರಿತು ಕಾರ್ಯಕ್ರಮ ಮಾಡಲು ಹೊರಟಾಗ ಕುಟುಂಬದವರು ಅನುಮತಿ ಕೊಟ್ಟಿಲ್ಲ ಎಂದು ಆರೋಪಿಸಿದ್ದಾರೆ. ಈ ಆರೋಪವನ್ನು ಅವರು ನಿರಾಕರಿಸಿದರು.

Actor Aniruddha s reaction to the demolition of Dr Vishnuvardhan s Tomb in Mysuru Abiman Studio

ಡಾ.ವಿಷ್ಣುವರ್ಧನ್ ಅವರ ಮೈಸೂರು ಸಮಾಧಿ ಸ್ಥಳಕ್ಕೆ ನಾವು ಆಗಾಗ ಭೇಟಿ ನೀಡುತ್ತಲೇ ಇದ್ದೇವೆ. ಬೇರೆಯವರು ನಮ್ಮನ್ನು ಕೇಳಿ ಕಾರ್ಯಕ್ರಮ ಮಾಡುವ ಅಗತ್ಯವೇ ಇಲ್ಲ. ಮಾಡಿದರೆ ಎಲ್ಲರು ಅಭಿಮಾನಿಗಳು ಎಲ್ಲರು ಸೇರಿಕೊಳ್ಳುತ್ತಾರೆ. ಕೆಲವರು ಹೀಗೆ ಕುಟುಂಬದ ಮೇಲೆ ಆರೋಪ ಮಾಡಿರಬಹುದು ಎಂದು ಹೆಸರು ಹೇಳದೇ ಬೇಸರ ವ್ಯಕ್ತಪಡಿಸಿದರು.

ಆರೋಪಿ ಹೊರಿಸುವ ಅಭಿಮಾನಿಗಳನ್ನು ಕರೆದಿದ್ದೇನೆ. ಅವರೇ ಮಾತನಾಡಲು ಬಂದಿಲ್ಲ. ನಾನೇನು ಗಾಡ್ಸ್ ಇಟ್ಟುಕೊಂಡು ಓಡಾಡಲ್ಲ. ಅಪ್ಪ ವಿಷ್ಣುವರ್ಧನ್ ಅವರು ಸಹ ಹಾಗಿರಲಿಲ್ಲ. ಅವರೇ ನಮಗೆ ಆದರ್ಶ. ನನ್ನ ಭೇಟಿ ಮಾಡಬಹುದು. ಕಾರ್ಯಕ್ರಮ ಬಗ್ಗೆ ಚರ್ಚಿಸಬಹುದು ಎಂದರು.

ಸದ್ಯ ವಿಷ್ಣು ಅವರ ಸಮಾಧಿ ತೆರವುಗೊಳಿಸಲಾಗಿದೆ. ವಿಷ್ಣು ಸಮಾಧಿ ವಿಚಾರವಾಗಿ ಈಗಾಗಲೇ ಸಾಕಷ್ಟು ವಿವಾದಗಳು ಚಾಲ್ತಿಯಲ್ಲಿದ್ದವು. ಇದೀಗ ಬಾಲಣ್ಣ ಕುಟುಂಬಸ್ಥರು ಮೈಸೂರಿನ ಅಭಿಮಾನ್ ಸ್ಟುಡಿಯೋನಲ್ಲಿದ್ದ ವಿಷ್ಣುವರ್ಧನ್ ಸಮಾಧಿಯನ್ನು ನೆಲಸಮಗೊಳಿಸಿದ್ದಾರೆ. ಇದರಿಂದ ವಿಷ್ಣು ಅಭಿಮಾನಿಗಳಿಗೆ ತೀವ್ರ ನೋವುಂಟಾಗಿದೆ. ಇದೇ ವಿಚಾರವಾಗಿ ಕಿಚ್ಚ ಸುದೀಪ್, ನಟ ಧ್ರವ ಸರ್ಜಾರ ಗೀತಾ ಬಾಲಕೃಷ್ಣ ಅನೇಕರು ಪ್ರತಿಕ್ರಿಯಿಸಿದ್ದಾರೆ. ಈ ಘಟನೆ ಬಗ್ಗೆ ನಟರು ಸೇರಿದಂತೆ ಅಭಿಮಾನಿಗಳ ಸಂಘ, ಸಂಘಗಳ ಮುಖ್ಯಸ್ಥರು ವ್ಯಾಪಕ ಬೇಸರ ಹೊರ ಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+