Ajay Rao: ಯುದ್ಧಕಾಂಡ ಚಾಪ್ಟರ್ - 2 ಬಗ್ಗೆ ನಟ ಅಜಯ್ ರಾವ್ ಅಚ್ಚರಿಯ ಹೇಳಿಕೆ!
Ajay Rao: ನಟ ,ನಿರ್ದೇಶಕ ಅಜಯ್ ರಾವ್ ಅವರು ಯುದ್ಧಕಾಂಡ ಚಾಪ್ಟರ್ - 2 ಸಿನಿಮಾದ ಸಕ್ಸಸ್ ಬಗ್ಗೆ ಅಚ್ಚರಿಯ ಹೇಳಿಕೆಯನ್ನು ಕೊಟ್ಟಿದ್ದಾರೆ. ಯುದ್ಧಕಾಂಡ ಸಿನಿಮಾ ಈಚೆಗೆ ರಿಲೀಸ್ ಆಗಿದ್ದು. ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಸಿನಿಮಾದ ಬಗ್ಗೆ ಮಾತನಾಡಿರುವ ಅವರು ಇದೊಂದು ಬಹು ನೀರಿಕ್ಷಿತ ಚಿತ್ರ ಆಗಿತ್ತು ಅಂತ ಹೇಳಿದ್ದಾರೆ. ಈ ಸಿನಿಮಾ ಕೋರ್ಟ್ ರೂಮ್ ಡ್ರಾಮಾ ಶೈಲಿಯದ್ದಾಗಿತ್ತು. ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಹಾಗೂ ದಕ್ಷಿಣ ಭಾರತದಲ್ಲಿ ಈ ಮಾದರಿಯ ಸಿನಿಮಾಗಳು ಬಂದಿವೆ. ಆದರೆ, ಕನ್ನಡದಲ್ಲಿ ಈ ರೀತಿಯ ಸಿನಿಮಾಗಳು ಬಿಡುಗಡೆಯಾಗಿದ್ದು ವಿರಳ. ಅಜಯ್ ರಾವ್ ಅವರು ತುಂಬಾ ಸಾಲ ಮಾಡಿಕೊಂಡು ಯುದ್ಧಕಾಂಡ ಸಾಹಸಕ್ಕೆ ಕೈ ಹಾಕಿದ್ದರು.
ಚಿತ್ರದ ಯಶಸ್ಸು ಹಾಗೂ ಹುಬ್ಬಳ್ಳಿಯ ಘಟನೆಗೆ ಸಂಬಂಧಿಸಿದಂತೆ ಅಜಯ್ ರಾವ್ ಅವರು ಮಾತನಾಡಿದ್ದಾರೆ. ಈ ಸಿನಿಮಾ ಯಶಸ್ವಿಯಾಗಿದೆ ಎಂದು ಅವರು ಹೇಳಿದ್ದಾರೆ. ಈ ವಿಷಯವಾಗಿ ನಾನು ಅಭಿಮಾನಿಗಳಗೆ ಅಭಿನಂದನೆ ಸಲ್ಲಿಸುತ್ತೇನೆ ಅಂತಲೂ ಅವರು ಹೇಳಿದ್ದಾರೆ. ಒಂದು ಸಾಮಾಜಕ್ಕೆ ಒಳ್ಳೆಯ ಸಂದೇಶ ರವಾನಿಸುವುದು ಈ ಸಿನಿಮಾದ ಉದ್ದೇಶವಾಗಿತ್ತು. ಸಂದೇಶ ರವಾನೆಯಾಗಿದೆ ಎಂದು ಹೇಳಿದ್ದಾರೆ. ಮುಂದುವರಿದು ಹೆಣ್ಣು ಮಕ್ಕಳಿಗೆ ಹೇಗೆ ಗೌರವ ಕೊಡಬೇಕು. ಹೆಣ್ಣು ಮಕ್ಕಳನ್ನ ಯಾವ ರೀತಿ ನಡೆಸಿಕೊಳ್ಳಬೇಕು ಎಂಬುದು ಚಿತ್ರದ ಉದ್ದೇಶ ಆಗಿದೆ ಅಂತ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಹುಬ್ಬಳ್ಳಿಯಲ್ಲಿ ಬಾಲಕಿ ಮೇಲೆ ಅತ್ಯಾಚಾ* ಪ್ರಕರಣದ ಬಗ್ಗೆಯೂ ಅವರು ಮಾತನಾಡಿದ್ದಾರೆ. ಇಂತಹ ಅಮಾನುಷ ಘಟನೆ ನಡೆಯಬಾರದು. ನಿಜಕ್ಕೂ ಇದೊಂದು ದೊಡ್ಡ ದುರಂತ. ಬಾಲಕಿ ಮನೆಗೆ ನಾನು ಹೋಗಲ್ಲ. ಹೋಗದೇ ಬಾಲಕಿ ಕುಟುಂಬಕ್ಕೆ ಧೈರ್ಯ ಹೇಳುವೆ. ಗಂಡು ಮಕ್ಕಳು ಯುದ್ಧಕಾಂಡ ನೋಡಿ ಬಹಳ ಕಲಿಯುವುದಿದೆ. ಇದನ್ನ ಮೊದಲು ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ಸಿನಿಮಾದ ಹಿನ್ನೆಲೆ ಏನು ?
ಹೆಣ್ಣುಮಕ್ಕಳ ಮೇಲಿನ ಅತ್ಯಾಚಾ* ಹಾಗೂ ಮಕ್ಕಳ ದುರ್ಬಳಕೆಗೆ ಸಂಬಂಧಿಸಿದ ಸಿನಿಮಾ ಇದಾಗಿದೆ. ಏಪ್ರಿಲ್ 18ರಂದು ಈ ಸಿನಿಮಾ ಬಿಡುಗಡೆಯಾಗಿದ್ದು, ಕರ್ನಾಟಕದಾದ್ಯಂತ ಹಾಗೂ ಹೊರ ರಾಜ್ಯದ ಅಭಿಮಾನಿಗಳಿಂದಲೂ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದೆ. ಗಂಭೀರವಾದ ಸಿನಿಮಾ ಕಂಟೆಂಟ್ ಅನ್ನು ಈ ಸಿನಿಮಾ ಒಳಗೊಂಡಿದೆ.
ಈ ಸಿನಿಮಾ ಬಿಡುಗಡೆ ಆಗುವುದಕ್ಕಿಂತ ಮುಂಚೆಯೇ ರಾಕಿಂಗ್ ಸ್ಟಾರ್ ಯಶ್ ಅವರು ಈ ಸಿನಿಮಾವನ್ನು ನೋಡಿ, ಸಿನಿಮಾ ಚೆನ್ನಾಗಿದೆ ಅಂತ ಹೇಳಿದ್ದರು. ಹೀಗಾಗಿ, ಈ ಸಿನಿಮಾ ಚೆನ್ನಾಗಿ ಓಡುತ್ತದೆ ಎನ್ನುವ ಭರವಸೆ ಇತ್ತು ಅಂತ ಅಜಯ್ ಅವರು ಈಚೆಗೆ ಹೇಳಿಕೊಂಡಿದ್ದರು. ಅವರ ಇರಿಸಿದ್ದ ಭರವಸೆಯಂತೆಯೇ ಸಿನಿಮಾ ಸಕ್ಸಸ್ ಆಗಿದೆ.
ಕನ್ನಡದಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರಯೋಗಾತ್ಮಕ ಸಿನಿಮಾಗಳು ಬಿಡುಗಡೆಯಾಗುತ್ತಿದ್ದು.. ಪ್ರೇಕ್ಷಕರಿಂದಲೂ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಹೊಸ ಹಾಗೂ ಭಿನ್ನ ಕಥೆಗಳನ್ನು ಕನ್ನಡಿಗರು ಮೆಚ್ಚಿಕೊಳ್ಳುತ್ತಿದ್ದಾರೆ. ಯಶ್ ಅವರ ರೀತಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಸಹ ಈ ಸಿನಿಮಾ ನೋಡಿ ಖುಷಿಪಟ್ಟಿದ್ದರು. ನನಗೆ ಪರ್ಸನಲ್ ಆಗಿ ಮೆಸೇಜ್ ಮಾಡಿ ಖುಷಿ ಹಂಚಿಕೊಂಡಿದ್ದರು ಅಂತ ಸಂತೋಷಪಟ್ಟಿದ್ದಾರೆ.












Click it and Unblock the Notifications