ಡಿ ಬಾಸ್ ಎಂದು ಕೂಗ್ಬೇಡಿ ಎಂದಿದಕ್ಕೆ ಚಾಕು ಹಾಕ್ಬಿಟ್ರು ಅಂಧಾಭಿಮಾನಿಗಳು-ಎಲ್ಲಿ?
Darshan Thoogudeepa: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ & ಗ್ಯಾಂಗ್ ಜೈಲು ಸೇರಿದೆ. ಮತ್ತೊಂದೆಡೆ ಅಭಿಮಾನಿಗಳ ಅಟ್ಟಹಾಸ ದಿನದಿಂದ ದಿನಕ್ಕೆ ಹದ್ದು ಮೀರುತ್ತಿದೆ. ಇದೀಗ ಡಿ ಎಂದು ಕೂಗಬೇಡಿ ಎಂದಿದ್ದಕ್ಕೆ ಅಂಧಾಭಿನಿಗಳ ಗುಂಪೊಂದು ವ್ಯಕ್ತಿಯೋರ್ವನಿಗೆ ಚಾಕು ಹಿರಿದು ಪುಂಡಾಟ ಮೆರೆದಿರುವ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಹೊರತರಲು ಪತ್ನಿ ವಿಜಯಲಕ್ಷ್ಮಿ ಹಾಗೂ ಕುಟುಂಬಸ್ಥರು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇನ್ನು ನಾಳೆ (ಸೋಮವಾರ, ಸೆಪ್ಟೆಂಬರ್ 30) ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಇದರ ನಡುವೆಯೇ ಇಂತಹದೊದ್ದು ಘಟನೆ ನಡೆದಿದೆ.

ನಟ ದರ್ಶನ್ ಅಭಿಮಾನಿಗಳು ಗಾರೆ ಕೆಲಸಗಾರರಿಬ್ಬರು ಮೇಸ್ತ್ರಿ ಕುತ್ತಿಗೆಗೆ ಚಾಕು ಇರಿದು ಗಾಯಗೊಳಿಸಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಕೆಂಗೇರಿ ಹೋಬಳಿ ಸೂಲಿಕೆರೆ ಪಾಳ್ಯದ ಲೇಬರ್‌ಶೆಡ್‌ನಲ್ಲಿ ನಡೆದಿದೆ. ರಾಮನಗರ ತಾಲೂಕಿನ ಕಸಬಾ ಹೋಬಳಿ ದೊಡ್ಡಮಣ್ಣುಗುಡ್ಡೆ ಗ್ರಾಮದ ನಿವಾಸಿ ವೆಂಕಟಸ್ವಾಮಿ ಎಂಬುವರರು ಗಾಯಗೊಂಡಿದ್ದು, ಐಜೂರು ಬಡಾವಣೆ ನಿವಾಸಿಗಳಾದ ಕಿರಣ್, ಮಹದೇವ ಎಂಬುವವರು ಚಾಕು ಇರಿದವರು ಎಂದು ತಿಳಿದಿಬಂದಿದೆ.
ವೆಂಕಟಸ್ವಾಮಿಯು ಗ್ರಾಮದ ಸುರೇಶ್ ಎನ್ನುವವರ ಬಳಿ ಗುತ್ತಿಗೆ ತೆಗೆದುಕೊಂಡಿದ್ದ ಜಾಗದಲ್ಲಿ ಮೇಸ್ತ್ರಿ ಕೆಲಸ ಮಾಡಲು ಕಾಳಯ್ಯ ಅವರೊಂದಿಗೆ ಕೆಂಗೇರಿ ಹೋಬಳಿ ಸೂಲಿಕೆರೆ ಪಾಳ್ಯಕ್ಕೆ ತೆರಳಿದ್ದಾರೆ. ಅವರ ಜೊತೆಯಲ್ಲಿ ಕಿರಣ್ ಹಾಗೂ ಮಹದೇವ ಅವರನ್ನು ಕೆಲಸಕ್ಕಾಗಿ ಕರೆದುಕೊಂಡು ಹೋಗಿದ್ದಾರೆ. ಆ ಸ್ಥಳದಲ್ಲಿಯೇ ಶೆಡ್ ನಿರ್ಮಾಣ ಮಾಡಿಕೊಂಡು ಎಲ್ಲರೂ ವಾಸವುದ್ದರು.
ಸೆಪ್ಟೆಂಬರ್ 26ರಂದು ರಾತ್ರಿ ಶೆಡ್‌ನಲ್ಲಿ ಕಿರಣ್ ಮತ್ತು ಮಹದೇವ್ ಪಾನಮತ್ತರಾಗಿ ನಟ ದರ್ಶನ್ ವಿಚಾರವಾಗಿ ಮಾತನಾಡುತ್ತಾ ಡಿ ಬಾಸ್.. ಡಿ ಬಾಸ್.. ಎಂದು ಕೂಗಾಡಲು ಪ್ರಾರಂಭಿಸಿದ್ದಾರೆ. ಇದಕ್ಕೆ ವೆಂಕಟಸ್ವಾಮಿ ಅಕ್ಕಪಕ್ಕದಲ್ಲಿ ಮನೆಗಳಿವೆ ಕೂಗಾಡಬೇಡಿ ಎಂದು ಬೈದು ಬುದ್ಧಿ ಹೇಳಿದ್ದಾರೆ. ಆಗ ಈ ಘಟನೆ ನಡೆದಿದೆ.
ನಮ್ಮ ಡಿ ಬಾಸ್ ಬಗ್ಗೆ ನಿನಗೇನು ಗೊತ್ತಿದೆ. ನಿನ್ನನ್ನು ಕೊಲೆ ಮಾಡದೆ ಬಿಡುವುದಿಲ್ಲ ಎಂದು ಇಬ್ಬರು ವೆಂಕಟಸ್ವಾಮಿ ಜೊತೆ ಜಗಳಕ್ಕಿಳಿದು ಚಾಕುವಿನಿಂದ ಕುತ್ತಿಗೆಗೆ ಇರಿದಿದ್ದಾರೆ. ಆಗ ಸ್ಥಳಕ್ಕೆ ಬಂದ ಕಾಳಯ್ಯ ಜಗಳ ಬಿಡಿಸಿ ವೆಂಕಟಸ್ವಾಮಿ ಅವರನ್ನು ಚಿಕಿತ್ಸೆಗೆಂದು ರಾಮೋಹಳ್ಳಿ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಸಂಬಂಧ ವೆಂಕಟ ಸ್ವಾಮಿ ಪತ್ನಿ ಶಾಂತ ಅವರು ಕಿರಣ್ ಮತ್ತು ಮಹದೇವ ವಿರುದ್ಧ ಕುಂಬಳ ಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications