́'ಎಕ್ಕ' ಚಿತ್ರತಂಡದಿಂದ ಕಾರು ಅಪಘಾತ, ಮಹಿಳೆ ಸ್ಥಿತಿ ಗಂಭೀರ: ಅಸಲಿಗೆ ಆಗಿದ್ದೇನು?
ನಟ ಯುವರಾಜ್‌ಕುಮಾರ್ ನಟನೆಯ ಎಕ್ಕ ಸಿನಿಮಾದ ಹಾಡುಗಳು ಫುಲ್ ಟ್ರೆಂಡಿಂಗ್‌ನಲ್ಲಿವೆ. ಇತ್ತೀಚೆಗಷ್ಟೇ ಈ ಸಿನಿಮಾದ ಬ್ಯಾಂಗಲ್ ಬಂಗಾರಿ ಹಾಡು ರಿಲೀಸ್ ಆಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಈ ಹಾಡಿಗೆ ಎಲ್ಲರೂ ರೀಲ್ಸ್ ಮಾಡುತ್ತಿದ್ದು, ಇದೇ ಹೊತ್ತಲ್ಲಿ ಎಕ್ಕ ಚಿತ್ರತಂಡದ ಮೇಲೆ ಗಂಭೀರ ಆರೋಪ ಕೇಳಿಬಂದಿದೆ. ಈ ಸಿನಿಮಾ ರಿಲೀಸ್ ಹೊತ್ತಲ್ಲೇ ಮಹಿಳೆಯೊಬ್ಬರು ಚಿತ್ರತಂಡದ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇಷ್ಟಕ್ಕೂ ಆಗಿದ್ದೇನು? ಎಂಬ ಮಾಹಿತಿ ಇಲ್ಲಿದೆ..
ನಟ ಯುವರಾಜ್‌ಕುಮಾರ್ ಸೇರಿದಂತೆ ಇಡೀ ಎಕ್ಕ ಚಿತ್ರತಂಡವು ತುಮಕೂರಿನ ಪ್ರಸಿದ್ಧ ಕ್ಷೇತ್ರ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿತ್ತು. ಈ ವೇಳೆ ಬೌನ್ಸರ್‌ಗಳಿದ್ದ ಕಾರು ಮಹಿಳೆಯೊಬ್ಬರಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಈ ಘಟನೆಯಲ್ಲಿ ಮಹಿಳೆ ಕಾಲಿಗೆ ಗಂಭೀರ ಗಾಯವಾಗಿದೆ. ಆದರೂ ಮಹಿಳೆಯನ್ನು ಆಸ್ಪತ್ರೆಗೂ ದಾಖಲಿಸದೇ ಚಿತ್ರತಂಡ ಅಮಾನವೀಯವಾಗಿ ವರ್ತಿಸಿದೆ ಎಂಬ ಆರೋಪ ಕೇಳಿಬಂದಿದೆ.

ಚಿತ್ರತಂಡವು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ವೇಳೆ ಈ ಅಪಘಾತ ನಡೆದಿದೆ. ಆ ಮಹಿಳೆಯು ಸಿದ್ಧಗಂಗಾ ಮಠದ ಶಾಲೆಗೆ ಮಗುವನ್ನು ಬಿಟ್ಟು ಹೋಗಲು ಬಂದಿದ್ದರು. ಬಳಿಕ ವಾಪಸ್ ಆಗುತ್ತಿದ್ದಾಗ ಬೌನ್ಸರ್‌ಗಳ ಕಾರು ಮಹಿಳೆಗೆ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆದಿದ್ದರಿಂದ ಮಹಿಳೆಯ ಕಾಲಿಗೆ ಗಂಭೀರ ಪೆಟ್ಟಾಗಿದೆ. ಗಾಯಗೊಂಡ ಮಹಿಳೆ ಬಳ್ಳಾರಿ ಮೂಲದವರು ಎಂದು ತಿಳಿದುಬಂದಿದೆ.
ಕಾರು ಡಿಕ್ಕಿ ಹೊಡೆದಿದ್ದರಿಂದ ಮಹಿಳೆ ನರಳಾಡುತ್ತಿದ್ದರು. ಆಸ್ಪತ್ರೆಗೆ ಕರೆದೊಯ್ಯುವಂತೆ ಬೇಡಿಕೊಂಡರೂ ಅದನ್ನು ಚಿತ್ರತಂಡ ಕ್ಯಾರೇ ಎನ್ನದೆ ಅಲ್ಲಿಂದ ಹೊರಟಿದೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆ ನಡೆದಾಗ ಚಿತ್ರತಂಡದ ಜತೆ ನಟ ಯುವರಾಜ್ ಕುಮಾರ್ ಕೂಡ ಇದ್ದರು ಎನ್ನಲಾಗಿದೆ. ಈ ಘಟನೆ ಸಂಬಂಧ ಕ್ಯಾತಸಂದ್ರ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಅಪಘಾತ ಮಾಡಿ ಗಾಯಾಳು ಆರೋಗ್ಯವನ್ನು ಚಿತ್ರತಂಡ ವಿಚಾರಿಸಿಲ್ಲ. ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಿಳೆಯ ಕಾಲು ಮೂಳೆ ಮುರಿತವಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದುವರೆಗೂ ಚಿತ್ರತಂಡ ಮಹಿಳೆಯನ್ನ ಭೇಟಿಯಾಗಲು ಬರಲೇ ಇಲ್ಲ. ಬದಲಿಗೆ ತಮ್ಮ ಪ್ರಮೋಷನ್‌ನಲ್ಲೇ ಬ್ಯುಸಿಯಾಗಿದೆ ಎಂದು ಮಹಿಳೆಯ ಕುಟುಂಬಸ್ಥರು ಆಕ್ರೋಶ ಹೊರಹಾಕುತ್ತಿದ್ದಾರೆ. ಹೀಗಾಗಿ ಚಿತ್ರತಂಡದ ವಿರುದ್ಧ ದೂರು ಕೊಡಲು ಮುಂದಾಗಿದ್ದಾರೆ.
ಇಷ್ಟಾದರೂ ನಿಂಗಮ್ಮ ಆರೋಗ್ಯವನ್ನು ಎಕ್ಕ ತಂಡ ವಿಚಾರಿಸಿಲ್ಲ. ಇದರ ಮೇಲೂ ಸಿನಿಮಾ ಪ್ರಮೋಷನ್‌ನಲ್ಲಿ ಚಿತ್ರ ತಂಡ ತೊಡಗಿಸಿಕೊಂಡಿದೆ. ಖಾಸಗಿ ಕಾಲೇಜಿನಲ್ಲಿ ಚಿತ್ರ ತಂಡ ಪ್ರಮೋಷನ್ ಮಾಡುತ್ತಿದೆ. ನಿಂಗಮ್ಮ ಬಳ್ಳಾರಿ ಜಿಲ್ಲೆ ತಕ್ಕಲಕೋಟೆ ಗ್ರಾಮದವರಾಗಿದ್ದಾರೆ. ಮಗನನ್ನ ಮಠದ ಶಾಲೆಗೆ ದಾಖಲಿಸಲು ಬಂದಿದ್ದರು. ಭಾನುವಾರವಾದ್ದರಿಂದ ಮಠದಲ್ಲಿ ಜನದಟ್ಟಣೆ ಇತ್ತು. ಸದ್ಯ ಚಿತ್ರತಂಡದ ವಿರುದ್ದ ದೂರು ನೀಡಲು ನಿರ್ಧಾರ ಮಾಡಿದ್ದಾರೆ.
ಗಾಯಾಳು ಮಹಿಳೆಯನ್ನು ಚಿತ್ರತಂಡ ಸೌಜನಕ್ಕೂ ಮಾತನಾಡಿಸಲಿಲ್ಲ. ಬದಲಿಗೆ ತಮ್ಮ ಸಿನಿಮಾ ಪ್ರಚಾರದಲ್ಲೇ ಮುಂದುವರಿದಿದ್ದಾರೆ. ಸದ್ಯ ಹಲವೆಡೆ ಸಿನಿಮಾ ತಂಡ ಪ್ರಮೋಷನ್ ಮಾಡುತ್ತಿದೆ. ಗಾಯಗೊಂಡ ಮಹಿಳೆ ಬಳ್ಳಾರಿ ಜಿಲ್ಲೆ ತಕ್ಕಲಕೋಟೆ ಗ್ರಾಮದವರು ಎಂದು ಹೇಳಲಾಗುತ್ತಿದೆ. ತಮ್ಮ ಪುತ್ರನನ್ನ ಸಿದ್ಧಗಂಗಾ ಮಠದ ಶಾಲೆಗೆ ಅಡ್ಮಿಷನ್ ಮಾಡಿಸಲು ಬಂದಿದ್ದಾಗ ಈ ಘಟನೆಯಿಂದ ಗಾಯಗೊಂಡಿದ್ದಾರೆ. ಈ ಹಿನ್ನೆಲೆ ಎಕ್ಕ ಚಿತ್ರತಂಡ ಮಾನವೀಯತೆ ಮರೆತಿದೆ ಎಂದು ಸಾರ್ವಜನಿಕರಿಂದಲೂ ಆಕ್ರೋಶ ವ್ಯಕ್ತವಾಗುತ್ತಿದೆ.












Click it and Unblock the Notifications