ಬಾಲಿವುಡ್ ಸ್ಟಾರ್ ನಟ ಆಮೀರ್ ಖಾನ್ ಕಣ್ಣೀರು ಹಾಕಿದ್ದೇಕೆ?
ಮನುಷ್ಯ ಅಂದಮೇಲೆ ಅಳುವುದು & ನಗುವುದು ಕಾಮನ್ ಬಿಡಿ. ಆದರೆ ಕೆಲವರು ನಗೋದು ಇಲ್ಲ, ಅಳೋದು ಇಲ್ಲ. ಅಂತಹವರಿಗೆ ಭಾವನೆ ಇಲ್ಲದವರು ಅನ್ನೋ ಆರೋಪವು ಕೂಡ ಇರುತ್ತದೆ. ಆದರೆ ಈಗ ದಿಢೀರ್ ಬಾಲಿವುಡ್ ಸ್ಟಾರ್ ಆಮೀರ್ ಖಾನ್ ಕಣ್ಣೀರು ಹಾಕಿದ್ದಾರೆ. ಲಗಾನ್, ದಂಗಲ್, ಪಿಕೆ, 3 ಇಡಿಯಟ್ಸ್ ರೀತಿಯ ಇಂಡಸ್ಟ್ರಿ ಹಿಟ್ ಸಿನಿಮಾಗಳನ್ನ ನೀಡಿ, ಜನರ ಮನಸ್ಸು ಗೆದ್ದ ನಟ ಆಮೀರ್ ಖಾನ್‌ಗೆ ಅಳು ಬಂದಿದ್ದು ಏಕೆ ಗೊತ್ತಾ?
ಆಮೀರ್ ಖಾನ್ ಸಿನಿಮಾಗಳಲ್ಲಿ ಎಮೋಷನಲ್ ಸೀನ್ಸ್ ಇದ್ದೇ ಇರುತ್ತೆ. ಹೀಗೆ ತಮ್ಮ ಪ್ರತಿ ಸಿನಿಮಾದಲ್ಲೂ ಏನಾದರೂ ಒಂದು ವಿಶೇಷತೆ ಇಟ್ಟುಕೊಂಡೇ, ನಟ ಆಮೀರ್ ಖಾನ್ ಅವರು ಸಿನಿಮಾ ಮಾಡ್ತಾರೆ. ಆದರೆ ಕಳೆದ 4 ರಿಂದ 5 ವರ್ಷಗಳ ಕಾಲ ಸಾಲು ಸಾಲು ಸೋಲುಗಳನ್ನು ಅನುಭವಿಸಿದ್ದಾರೆ ನಟ ಆಮೀರ್ ಖಾನ್. ಅದ್ರಲ್ಲೂ ಅವರ 'ಲಾಲ್ ಸಿಂಗ್ ಚಡ್ಡಾ' ಸಿನಿಮಾ, ಸಾಕಷ್ಟು ನಿರೀಕ್ಷೆ ನಡುವೆ ರಿಲೀಸ್ ಆಗಿದ್ದರೂ ಭಾರಿ ನಿರಾಸೆ ಅನುಭವಿಸಿತ್ತು. ಹೀಗಿದ್ದಾಗ ಬಾಲಿವುಡ್ ಸ್ಟಾರ್ ನಟ ಆಮೀರ್ ಖಾನ್ ಕಣ್ಣೀರು ಹಾಕಿರುವುದು ಏಕೆ ಗೊತ್ತಾ?

ಅತಿಥಿಗಳನ್ನು ತಬ್ಬಿಕೊಂಡು ಆಮೀರ್ ಕಣ್ಣೀರು?
ಹೌದು, ನಟ ಆಮೀರ್ ಖಾನ್ ಅವರು ಕಣ್ಣೀರು ಹಾಕಲು ಬಲವಾದ ಕಾರಣ ಇದೆ. ಅದು ಸಿನಿಮಾ ಕಾರಣಕ್ಕೆ ಅಲ್ಲ, ಬದಲಾಗಿ ಮದುವೆ ಆಗುತ್ತಿರುವ ಮಗಳ ಕಾರಣಕ್ಕೆ. ಅಂದಹಾಗೆ ನಟ ಆಮೀರ್ ಖಾನ್ ಅವರ ಪುತ್ರಿ ಇರಾ ಖಾನ್ ಮತ್ತು ನೂಪುರ್ ಶಿಖರೆ ಮದುವೆ, ನೆರೆಯ ರಾಜ್ಯ ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ನೆರವೇರಿದೆ. ಈ ವೇಳೆ ಆಮೀರ್ ಖಾನ್ ಅತ್ಯಂತ ಭಾವುಕರಾಗಿದ್ದಾರೆ.
ಆಮೀರ್ ಖಾನ್ ವಿಡಿಯೋ ವೈರಲ್
ಮಗಳ ಮದುವೆ ಮಾಡಿ ಕಳಿಸುವುದು ಎಲ್ಲಾ ಪೋಷಕರ ಮನಸ್ಸಿಗೂ ಭಾರವಾದ ಸಂಗತಿ. ಅದೇ ರೀತಿ ಆಮೀರ್ ಖಾನ್ ಅವರು ಕೂಡ ಕಣ್ಣೀರು ಹಾಕಿ ಮಗಳನ್ನು ಮದುವೆ ಮಾಡಿ ಕಳುಹಿಸಿದ್ದಾರೆ. ಅಳಿಯನನ್ನು ಸ್ವಾಗತಿಸುವ ಸಮಯದಲ್ಲಿ ಆಮೀರ್ ಖಾನ್ ಅವರು ತಬ್ಬಿ ಹಿಡಿದು ಕಣ್ಣೀರು ಹಾಕಿದ್ದಾರೆ. ಈ ಮೂಲಕ ಆಮೀರ್ ಖಾನ್ ಭಾವುಕರಾಗಿ, ಕಣ್ಣು ಒದ್ದೆ ಮಾಡಿಕೊಂಡ ವಿಡಿಯೋ ಈಗ ವೈರಲ್ ಆಗುತ್ತಿದೆ.

ಆಮೀರ್ ಮಗಳ ಲವ್ ಮ್ಯಾರೇಜ್!
ಅಷ್ಟಕ್ಕೂ ಆಮೀರ್ ಖಾನ್ ಅವರ ಪುತ್ರಿಯು ನೂಪುರ್ ಶಿಖರೆ ಅವರನ್ನ ಹಲವು ವರ್ಷಗಳ ಕಾಲ ಪ್ರೀತಿ ಮಾಡಿದ್ದರು. ಹಾಗೇ ಇಬ್ಬರೂ ಮದುವೆ ಆಗಬೇಕು ಎಂದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಆಮೀರ್ ಖಾನ್ ಅವರ ಒಪ್ಪಿಗೆಯನ್ನ ಕೂಡ ಪಡೆದುಕೊಂಡರು. ಕೊನೆಗೆ, ಈ ಶುಭಕಾರ್ಯ ಈಗ ಅದ್ಧೂರಿಯಾಗಿ ನೆರವೇರಿದೆ. ನಟ ಆಮೀರ್ ಖಾನ್ ತಮ್ಮ ಮುದ್ದಿನ ಮಗಳಾದ ಇರಾ ಖಾನ್ ಅವರನ್ನು ಮದುವೆ ಮಾಡಿ, ಗಂಡನ ಮನೆಗೆ ಕಳುಹಿಸಿದ್ದಾರೆ.
ಅಭಿಮಾನಿಗಳು ಹೇಳಿದ್ದು ಏನು?
ನಟ ಆಮೀರ್ ಖಾನ್ ಭಾರತದ ಜೊತೆಗೆ ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನ ಹೊಂದಿದ್ದಾರೆ. ಹೀಗಾಗಿ ತಮ್ಮ ನೆಚ್ಚಿನ ನಟ ಕಣ್ಣೀರು ಹಾಕಿರುವ ವಿಚಾರ ತಿಳಿದು ಅವರ ಅಭಿಮಾನಿಗಳು ಕೂಡ ಭಾವುಕರಾಗಿದ್ದಾರೆ. ಇನ್ನು ಮದುವೆಗೆ ಮೊದಲೇ ಆಮೀರ್ ಖಾನ್ ಕಣ್ಣೀರು ಹಾಕುವ ವಿಚಾರ ಚರ್ಚೆಯಾಗಿತ್ತು. ಯಾಕಂದ್ರೆ ಸ್ವತಃ ಆಮೀರ್ ಖಾನ್ ತಾವು, ಭಾವುಕ ಎಂದು ಹೇಳಿಕೊಂಡಿದ್ದರು. ಹೀಗೆ ಅವರ ಮಗಳ ಮದುವೆಯಲ್ಲಿ ಆಮೀರ್ ತೀವ್ರ ಭಾವುಕರಾಗುತ್ತಾರೆ ಅಂತಾ ಸ್ವತಃ ಅವರ ಕುಟುಂಬ ಸದಸ್ಯರೇ ಮಾತನಾಡಿದ್ದರಂತೆ. ಇದೀಗ ಬಾಲಿವುಡ್ ಸ್ಟಾರ್ ಒಬ್ಬರು ತಮ್ಮ ಅಳಿಯನ ತಬ್ಬಿಕೊಂಡು ಕಣ್ಣೀರು ಹಾಕಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.












Click it and Unblock the Notifications