Get Updates
Get notified of breaking news, exclusive insights, and must-see stories!

71ನೇ ರಾಷ್ಟ್ರೀಯ ಪ್ರಶಸ್ತಿ: ಮಿಕ್ಕಿರುವುದನ್ನು ಕೊಟ್ಟರೆ ತಗೋಬೇಕಾ ಎಂದ ನಟಿ ಊರ್ವಶಿ!

71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಈ ಬಾರಿ ವಿವಾದ ಸ್ವರೂಪವನ್ನು ಪಡೆದುಕೊಂಡಿದೆ. ಅದರಲ್ಲೂ ಮುಖ್ಯವಾಗಿ ಈ ಬಾರಿಯ ರಾಷ್ಟ್ರೀಯ ಪ್ರಶಸ್ತಿಗೆ ಕೇರಳ ರಾಜ್ಯದಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ರಾಜಕೀಯ ಅಜೆಂಡಾ ಹೊಂದಿತ್ತು ಎನ್ನಲಾದ ಕೇರಳ ಸ್ಟೋರಿ ಸಿನಿಮಾಗೆ ಪ್ರಶಸ್ತಿ ಕೊಟ್ಟಿರುವುದು ಹಾಗೂ ವರ್ಷಗಳ ಕಾಲ ಶ್ರಮವಹಿಸಿ ಚಿತ್ರೀಕರಿಸಿದ ಆಡು ಜೀವಿತಂಗೆ ಯಾವುದೇ ಪ್ರಶಸ್ತಿಯನ್ನು ನೀಡಿದೆ ಇರುವುದು ವಿವಾದ ಸ್ವರೂಪವನ್ನು ಪಡೆದುಕೊಂಡಿದೆ. ಇದೇ ಸಂದರ್ಭದಲ್ಲಿ ಬಹುಭಾಷಾ ನಟಿ ಊರ್ವಶಿ ಅವರು ರಾಷ್ಟ್ರೀಯ ಪ್ರಶಸ್ತಿ ಬಗ್ಗೆ ಅಸಮಾಧಾನ ಹೊರಹಾಕಿದ್ದು. ರಾಷ್ಟ್ರೀಯ ಪ್ರಶಸ್ತಿ ಎನ್ನುವುದು ಪಿಂಚಣಿ ಹಣವಲ್ಲ. ಇರುವುದನ್ನು ಕೊಡುತ್ತೇವೆ ತಗೋಳಿ ಅಂದರೆ ತೆಗೆದುಕೊಳ್ಳಲು ಆಗಲ್ಲ ಅಂತಾ ಹೇಳಿದ್ದಾರೆ. ಅದರ ಸಂಪೂರ್ಣ ವಿವರ ಇಲ್ಲಿದೆ.

71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗಳಲ್ಲಿ ಮಲಯಾಳಂನ 'ಉಲ್ಲೋಳುಕ್ಕು' ಚಿತ್ರಕ್ಕಾಗಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಹಿರಿಯ ನಟಿ ಊರ್ವಶಿ ಅವರಿಗೆ ನೀಡಲಾಗಿದೆ. ರಾಷ್ಟ್ರೀಯ ಪ್ರಶಸ್ತಿಯಲ್ಲಿ ನಡೆಯುತ್ತಿದೆ ಎನ್ನುವ ರಾಜಕೀಯ ಹಾಗೂ ಪ್ರಶಸ್ತಿ ತಾರತಮ್ಯದ ಬಗ್ಗೆ ನಟಿ ಊರ್ವಶಿ ಅವರು ಮಾತನಾಡಿದ್ದಾರೆ. ರಾಷ್ಟ್ರೀಯ ಪ್ರಶಸ್ತಿಯ ತೀರ್ಪುಗಾರರ ನಿರ್ಧಾರವನ್ನು ಊರ್ವಶಿ ಪ್ರಶ್ನೆ ಮಾಡಿದ್ದಾರೆ.

71st National Awards Actress Urvashi questions whether should accept remaining awards what given

ಈ ಸಿನಿಮಾದಲ್ಲಿ ಊರ್ವಶಿ ಅವರದ್ದು ಮುಖ್ಯ ಪಾತ್ರವಾಗಿದೆ. ಆದರೆ ಪ್ರಶಸ್ತಿಯಲ್ಲಿ ಪೋಷಕ ಪಾತ್ರ ಎಂದು ಗುರುತಿಸಿ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಊರ್ವಶಿ ಅವರು ತಮ್ಮ ಪಾತ್ರವನ್ನು ಪೋಷಕ ಪಾತ್ರ ಎಂದು ವರ್ಗೀಕರಿಸುವುದರ ಹಿಂದಿನ ಉದ್ದೇಶವೇನು ಎಂದು ಪ್ರಶ್ನೆ ಮಾಡಿದ್ದಾರೆ. ನಟನೆಗೆ ಯಾವುದೇ ಪ್ರಮಾಣಿತ ಮಾನದಂಡವಿದೆಯೇ ಅಥವಾ ಒಂದು ನಿರ್ದಿಷ್ಟ ವಯಸ್ಸಿನ ನಂತರ, ನಿಮಗೆ ಸಿಗುವುದು ಇಷ್ಟೇನಾ ಎಂದು ಅವರು ಸ್ಪಷ್ಟವಾಗಿ ಕೇಳಿದ್ದಾರೆ. ಈ ಬಗ್ಗೆ ಮನೋರಮಾ ನ್ಯೂಸ್ ವರದಿ ಮಾಡಿದೆ.

ಇದು ಪಿಂಚಣಿ ಹಣವಲ್ಲ: ಇನ್ನು ಈ ಪ್ರಶಸ್ತಿಯ ಬಗ್ಗೆ ತಮ್ಮ ಅಸಮಾಧಾನವನ್ನು ಹೊರ ಹಾಕಿರುವ ಅವರು, ಇದು ಮೌನವಾಗಿ ಸ್ವೀಕರಿಸಬೇಕಾದ ಪಿಂಚಣಿ ಹಣವೇನು ಅಲ್ಲ. ಪ್ರಶಸ್ತಿಗಳನ್ನು ನಾವು ಹೆಮ್ಮೆಯಿಂದ ಸ್ವೀಕರಿಸುವಂತೆ ಇರಬೇಕಾದ ವಿಯಷವಾಗಿದೆ. ನಾವು ಕೊಡುವುದು ಇದನ್ನೇ ನೀವು ಬೇಕಾದರೆ ಸ್ವೀಕರಿಸಿ ಎನ್ನುವಂತಿದ್ದರೆ ಹೇಗೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಅಲ್ಲದೇ ಪ್ರತಿ ಬಾರಿಯೂ ರಾಷ್ಟ್ರೀಯ ಪ್ರಶಸ್ತಿ ನೀಡುವಾಗ ಅತ್ಯುತ್ತಮ ನಟಿ ಎನ್ನುವ ಪ್ರಶಸ್ತಿಯನ್ನು ನೀಡಲಾಗುತ್ತಿತ್ತು. ಆದರೆ, ಈ ಬಾರಿ ಯಾಕೆ ಇಲ್ಲ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ನಟ ವಿಜಯರಾಘವನ್ ಅವರಿಗೆ ಪ್ರಶಸ್ತಿ ಸಿಗದೆ ಇರುವುದನ್ನೂ ಅವರು ಪ್ರಶ್ನೆ ಮಾಡಿದ್ದಾರೆ. ಈ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳಲಾಗುತ್ತದೆ, ಯಾವ ಮಾನದಂಡಗಳನ್ನು ಅನುಸರಿಸಲಾಗುತ್ತದೆ ಎಂದು ನಟಿ ಉರ್ವಶಿ ಅವರು ಸಂಸ್ಕೃತಿ ರಾಜ್ಯ ಸಚಿವ ಮತ್ತು ನಟ ಸುರೇಶ್ ಗೋಪಿ ಅವರನ್ನು ಪ್ರಶ್ನಿಸಿದ್ದು, ರಾಷ್ಟ್ರೀಯ ಗೌರವಗಳಲ್ಲಿ ಮಲಯಾಳಂ ಸಿನಿಮಾದ ಸರಿಯಾದ ಸ್ಥಾನವನ್ನು ಪ್ರತಿಪಾದಿಸುವಂತೆ ಒತ್ತಾಯಿಸಿದ್ದಾರೆ. ಇದೇ ಸಂದರ್ಭದಲ್ಲಿ ನಾನು ಯಾವುದೇ ಲಾಬಿ ಮಾಡಿಲ್ಲ. ಒತ್ತಡವನ್ನೂ ಹೇರಿಲ್ಲ ಎಂದಿದ್ದಾರೆ.

ಕೇರದಾದ್ಯಂತ ಬೆಂಬಲ: ಇನ್ನು ನಟಿ ಊರ್ವಶಿ ಅವರು ಪ್ರಸ್ತಾಪಿಸಿರುವ ವಿಷಯಕ್ಕೆ ಕೇರಳದಾದ್ಯಂತ ಭಾರೀ ಬೆಂಬಲ ವ್ಯಕ್ತವಾಗಿದೆ. ಕೇರಳದ ಮಲಯಾಳಂ ಸಿನಿಮಾಗಳನ್ನು ಕಡೆಗಣಿಸಲಾಗುತ್ತಿದೆ ಎನ್ನುವ ಆರೋಪದ ನಡುವೆ ಊರ್ವಶಿ ಅವರೂ ಸಹ ವಿಷಯ ಪ್ರಸ್ತಾಪಿಸಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ಸಾರಾಂಶ: ರಾಷ್ಟ್ರೀಯ ಪ್ರಶಸ್ತಿಯು ಈ ಬಾರಿ ವಿವಾದಕ್ಕೆ ಕಾರಣವಾಗಿದೆ. ಆಡು ಜೀವಿತಂಗೆ ಯಾವುದೇ ಪ್ರಶಸ್ತಿ ಕೊಡದೆ ಅಜೆಂಡಾ ಇರುವ ಕೇರಳ ಸ್ಟೋರಿಗೆ ಪ್ರಶಸ್ತಿ ಕೊಡಲಾಗಿದೆ ಎನ್ನುವುದು ಮತ್ತೊಂದು ಅಸಮಾಧಾನಕ್ಕೆ ಕಾರಣವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+