47,00,00,000 ಕೋಟಿ ಒಡತಿ ನಟಿ ಸಾಯಿ ಪಲ್ಲವಿ ಬಗ್ಗೆ 5 ಇಂಟ್ರಸ್ಟಿಂಗ್ ಮಾಹಿತಿ!
Sai Pallavi: ಸಾಯಿ ಪಲ್ಲವಿ ದಕ್ಷಿಣ ಭಾರತದ ಫೇಮಸ್ ನಟಿ. ಸಾಯಿ ಪಲ್ಲವಿಗೆ ಇಂದು 33ನೇ ವರ್ಷದ ಸಂಭ್ರಮ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳ ಮೂಲಕ ಫೇಮಸ್ ಆಗಿದ್ದಾರೆ. ಈಗ ಅವರು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಟಿಸುವುದಕ್ಕೆ ಶುರು ಮಾಡಿಕೊಂಡಿದ್ದಾರೆ. ಕಡಿಮೆ ಅವಧಿಯಲ್ಲಿ ಸಿನಿಮಾ ರಂಗದ ಮಿಂಚಿರುವ ಅವರು ನಟಿ ಮಾತ್ರವಲ್ಲ ಡಾಕ್ಟರ್ ಕೂಡ ಹೌದು. ನಟಿ ಸಾಯಿ ಪಲ್ಲವಿ ಅವರು ಇದೀಗ ಬಾಲಿವುಡ್‌ಗೂ ಎಂಟ್ರಿ ಕೊಟ್ಟಿದ್ದು ರಾಮಾಯಣ ಚಿತ್ರದಲ್ಲಿ ಸೀತೆ ಪಾತ್ರವನ್ನು ಮಾಡುತ್ತಿದ್ದಾರೆ. ಮನೆ ಮಗಳಂತೆ ನಟಿಸುವ ಈ ನಟಿಯ ಬಗ್ಗೆ ಕೆಲವೊಂದು ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ. ಇನ್ನೊಂದು ವಿಶೇಷವೆಂದರೆ ಸಾಯಿ ಪಲ್ಲವಿ ಅವರ ಗಾರ್ಗಿ ಸಿನಿಮಾ ಕನ್ನಡದಲ್ಲೂ ರಿಲೀಸ್ ಆಗಿತ್ತು. ಈ ಸಿನಿಮಾದ ಕನ್ನಡ ವರ್ಶನ್‌ಗೆ ಸಾಯಿ ಪಲ್ಲವಿ ಅವರೇ ಧ್ವನಿ ನೀಡಿದ್ದರು.
ಕನ್ನಡದ ಬಗ್ಗೆ ಹಾಗೂ ನಟ. ದಿವಂಗತ ಶಂಕರ್ ನಾಗ್ ಅವರ ಬಗ್ಗೆ ಸಾಯಿ ಪಲ್ಲವಿ ಅವರು ಮಾತನಾಡಿದ್ದ ವಿಡಿಯೋಗಳು ಕನ್ನಡಿಗರ ಮನಸ್ಸು ಗೆದ್ದಿತ್ತು. ಹೆಚ್ಚು ಆಡಂಬರವಿಲ್ಲದೆ. ಸರಳ ಸುಂದರಿ ಈಗ ದಕ್ಷಿಣದಿಂದ ಉತ್ತರ ಭಾರತಕ್ಕೆ ಜಿಗಿದಿದ್ದಾರೆ. ದಕ್ಷಿಣ ಭಾರತದ ಪ್ರತಿ ಭಾಷೆಯಲ್ಲೂ ಅವರೇ ಡಬ್ಬಿಂಗ್ ಮಾಡುತ್ತಿದ್ದು ತೆಲುಗಿನ ಫಿದಾ ಮೂವಿಯಲ್ಲಿ ತೆಲಂಗಾಣದ ಸ್ಲ್ಯಾಂಗ್‌ನಲ್ಲಿ ಮಾತನಾಡಿರುವುದು ಭಾರೀ ಫೇಮಸ್ ಆಗಿತ್ತು. ಇನ್ನು ಮಲಯಾಳಂನಲ್ಲಿ ಪ್ರೇಮಂ ಸಿನಿಮಾದ ಮೂಲಕ ಕೇರಳದಲ್ಲಿ ಮಲರ್ ಟೀಚರ್ ಅಂತಲೇ ಸಾಯಿ ಪಲ್ಲವಿ ಫೇಮಸ್. ತಮಿಳುನಾಡಿನ ಕೊಯಿಮತ್ತೂರಿನಲ್ಲಿ ಸಾಯಿ ಪಲ್ಲವಿ ಜನಿಸಿದರು. ಕನ್ನಡ ಮತ್ತು ತಮಿಳು ಮಿಶ್ರಿತ ಬಡಗ ಭಾಷೆ ಇವರ ಮನೆ ಮಾತು. ಜಾರ್ಜಿಯಾ ವಿಶ್ವ ವಿದ್ಯಾಲಯದಲ್ಲಿ ಅವರು ವೈದ್ಯಕೀಯ ಶಿಕ್ಷಣ ಪಡೆದ್ದಾರಾದರೂ ಅವರು ಮೆಡಿಕಲ್ ಪ್ರ್ಯಾಕ್ಟಿಸ್ ಮುಗಿಸಿಲ್ಲ.

ತಮಿಳು ಚಿತ್ರರಂಗದಲ್ಲಿ ಮಾರಿ -2ನಲ್ಲಿ ರೋಡಿ ಬೇಬಿ.. ಎನ್ನುವ ಸಾಂಗ್ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಸಿನಿಮಾಗಳಲ್ಲಿ ನಟಿಸುವುದಕ್ಕೂ ಮುಂಚೆ ಸಾಯಿ ಪಲ್ಲವಿ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರು. ಡ್ಯಾನ್ಸ್ ರಿಯಾಲಿಟಿ ಶೋಗಳಿಂದಲೇ ಫೇಮಸ್ ಆಗಿದ್ದ ಸಾಯಿ ಪಲ್ಲವಿಗೆ ರಿಯಾಲಿಟಿ ಶೋಗಳಲ್ಲಿ ಗೆಲ್ಲುವಂತಹ ಅವಕಾಶಗಳು ಸಿಗಲಿಲ್ಲ. ಆದರೆ, ಸಾಯಿ ಪಲ್ಲವಿ ಸಿನಿಮಾಗೆ ಬರುವುದಕ್ಕೆ ರಿಯಾಲಿಟಿ ಶೋಗಳೇ ಕಾರಣವಾದವೂ. ಇತ್ತೀಚಿನ ವರ್ಷಗಳಲ್ಲಿ ನಟರಿಗೆ ಟಾಂಗ್ ಕೊಡುವಷ್ಟು ಅದ್ಭುತವಾಗಿವೆ ಸಾಯಿ ಪಲ್ಲವಿ ಅವರ ಡ್ಯಾನ್ಸ್.
ಸಾಯಿ ಪಲ್ಲವಿ ಸಹಜ ಸೌಂದರ್ಯ. ತೆರೆಯಾಚಿನ ಬದ್ಧತೆ ಹಾಗೂ ಸರಳತೆ ಜನರಿಗೆ ಇಷ್ಟವಾಗಿದೆ. ಸದಾ ಸೀರೆಯಲ್ಲಿ ಕಾಣಿಸಿಕೊಳ್ಳುವ ಪಲ್ಲವಿ ಅವರು ಸಿನಿಮಾ ಆಯ್ಕೆಯ ವಿಚಾರದಲ್ಲೂ ಜಾಣೆ. ಹಲವು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿವೆ. ಅವುಗಳಲ್ಲಿ ಸೈಮಾ ಅವಾರ್ಡ್ಸ್ ಹಾಗೂ ಫಿಲ್ಮ್ಫೇರ್ ಅವಾರ್ಡ್ಗಳು ಪ್ರಮುಖವಾಗಿವೆ.

ನಟಿ ಸಾಯಿ ಪಲ್ಲವಿ ಆಸ್ತಿ ಎಷ್ಟು ?
ನಟಿ ಸಾಯಿ ಪಲ್ಲವಿ ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಸೂಪರ್ ಡೂಪರ್ ಹಿಟ್ ನೀಡಿದ್ದಾರೆ. ಇದರಿಂದ ಇವರಿಗೆ ಸಿನಿಮಾಗಳಲ್ಲಿ ಡಿಮ್ಯಾಂಡ್ ಹೆಚ್ಚಳವಾಗಿದ್ದು ಈಗ ಅವರ ಆಸ್ತಿ 47 ಕೋಟಿ ರೂಪಾಯಿಗೂ ಅಧಿಕವಾಗಿದೆ (47,00,00,000 ಕೋಟಿ). ಕಡಿಮೆ ಅವಧಿಯಲ್ಲಿ ಸಿನಿಮಾ ರಂಗದಲ್ಲಿ ಫೇಮಸ್, ಜನರಿಗೆ ಇಷ್ಟವಾಗಿದ್ದು ಹಾಗೂ ಒಳ್ಳೆಯ ಆದಾಯವನ್ನೂ ಗಳಿಸಿದ ಕೀರ್ತಿ ಸಾಯಿ ಪಲ್ಲವಿ ಅವರದ್ದು. ಈ ರೀತಿ ಭಾರತೀಯ ಸಿನಿಮಾರಂಗದಲ್ಲಿ ಕೆಲವೇ ಕೆಲವು ನಟಿಯರಿಗೆ ಮಾತ್ರ ಈ ರೀತಿಯ ಅವಕಾಶ ಸಿಕ್ಕಿದೆ.
* ಸಿನಿಮಾ ರಿಜೆಕ್ಟ್: ಸಾಯಿ ಪಲ್ಲವಿ ಅವರು ತಮಗೆ ಇಷ್ಟವಿಲ್ಲದ ಹಾಗೂ ಸ್ಕ್ರಿಪ್ಟ್ ಚೆನ್ನಾಗಿಲ್ಲ ಅಂತ ಅನಿಸಿದರೆ ಆ ಸಿನಿಮಾಗಳನ್ನು ರಿಜೆಕ್ಟ್ ಮಾಡಿರುವುದು ಇದೆ. ಅವರು ಸಿನಿಮಾ ಸ್ಕ್ರಿಪ್ಟ್ ಕಾರಣಕ್ಕೆ ಕನ್ನುಮ್ ಕನ್ನುಮ್ ಕೊಲ್ಲೈಯಡಿತಾಲ್ ಮತ್ತು ಡಿಯರ್ ಕಾಮ್ರೇಡ್ ಸಿನಿಮಾಗಳನ್ನು ರಿಜೆಕ್ಟ್ ಮಾಡಿರುವುದು ಇದೆ.

* ಪೂರ್ಣ ಸಂಭಾವನೆ ಬೇಡ: ಸಾಯಿ ಪಲ್ಲವಿ ಅವರ ಕೆಲವು ಮೂವಿಗಳು ಮಕಾಡೆ ಮಲಗಿರುವುದೂ ಇದೆ. ಆ ರೀತಿಯ ಸಿನಿಮಾಗಳಲ್ಲಿ ಪಾಡಿ ಪಡಿ ಲೆಚೆ ಮನಸು ಸಿನಿಮಾವೂ ಒಂದು. ಈ ಸಿನಿಮಾ ಸೋತ ಮೇಲೆ ಅವರು ಸಿನಿಮಾದ ನಿರ್ಮಾಪಕರಿಂದ ಪೂರ್ಣ ಪ್ರಮಾಣದ ಹಣ ಸ್ವೀಕರಿಸಲಿಲ್ಲ.
* ಸೌಂದರ್ಯ ವರ್ಧಕ ಜಾಹೀರಾತು: ನಟಿ ಸೌಂದರ್ಯ ಅವರು ಹಲವು ಸೌಂದರ್ಯವರ್ಧಕ ಕಂಪನಿಗಳ ಜಾಹೀರಾತಿನಲ್ಲಿ ನಟಿಸುವುದಕ್ಕೆ ನಿರಾಕರಿಸಿದ್ದು ಇದೆ. ಸಹಜ ಸೌಂದರ್ಯವನ್ನು ಒಪ್ಪಿಕೊಳ್ಳಬೇಕು ಎನ್ನುವುದು ಅವರ ನಿಲುವು ಈ ಕಾರಣಕ್ಕೆ ಅವರು ಹಲವರಿಗೆ ಇಷ್ಟವಾಗಿದ್ದಾರೆ.
* ರಿಯಾಲಿ ಶೋ: ತಮಿಳು ಹಾಗೂ ತೆಲುಗು ಭಾಷೆಯ ಹಲವು ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಸಾಯಿ ಪಲ್ಲವಿ ಮಿಂಚಿದ್ದಾರೆ.












Click it and Unblock the Notifications