ಒಂದೇ ತಿಂಗಳಿನಲ್ಲಿ 35 ಲಕ್ಷ ಸಂಪಾದನೆ ಮಾಡಿದ 22 ವರ್ಷದ ಬೆಂಗಳೂರಿನ ಯುವಕ!

ಬೆಂಗಳೂರು, ಜುಲೈ 19: ಬೆಂಗಳೂರಿನಲ್ಲಿ ಉತ್ತಮ ಗುಣಮಟ್ಟದ ಜೀವನ ನಡೆಸುವುದು ಅಷ್ಟು ಸುಲಭವಲ್ಲ. ಈ ಬೃಹತ್‌ ನಗರಕ್ಕೆ ದೇಶದ ಮೂಲೆ ಮೂಲೆಯಿಂದ ಜನ ಬಂದು ಉದ್ಯೋಗ ಮಾಡುತ್ತಿರುತ್ತಾರೆ. ಜನ ಸಂಖ್ಯೆ ಹೆಚ್ಚಿರುವ ಕಾರಣ ಉದ್ಯೋಗಕ್ಕೆ ಭಾರೀ ಬೇಡಿಕೆಯಿದ್ದು, ಸಾಮಾನ್ಯವಾಗಿ ಸಂಬಳ ಕಡಿಮೆ ಇರುತ್ತದೆ. ಇದು ಪ್ರತಿಯೊಬ್ಬ ಉದ್ಯೋಗ್ತಸರ ಸಮಸ್ಯೆಯಾಗಿದೆ. ಆದರೆ ಇಲ್ಲೊಬ್ಬ ಬೆಂಗಳೂರಿನ 22 ವರ್ಷದ ಯುವಕ ತಿಂಗಳಲ್ಲಿ 35 ಲಕ್ಷ ರೂಪಾಯಿ ಗಳಿಸುತ್ತಿದ್ದಾನೆ. ಅಚ್ಚರಿ ಎಂದರೆ ಈ ಯುವಕನಿಗೆ ಇದು ಕಡಿಮೆ ಮೊತ್ತವಂತೆ.

22 ವರ್ಷದ ಯೂಟ್ಯೂಬರ್ ಇಶಾನ್ ಶರ್ಮಾ ಅವರು ಒಂದು ತಿಂಗಳಲ್ಲಿ ₹35 ಲಕ್ಷ ಗಳಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. 2022ರಲ್ಲಿ BITS ಪಿಲಾನಿಯಿಂದ ಹೊರಬಂದ ಇಶಾನ್ ಶರ್ಮಾ ತಮ್ಮ ಕಾಲೇಜಿನ ರೂಮ್‌ ಮೇಟ್ ಸರನ್ಸ್ ಆನಂದ್ ಜೊತೆ ಸೇರಿ ರಿಮೋಟ್ ಮಾರ್ಕೆಟಿಂಗ್ ಏಜೆನ್ಸಿ ಮಾರ್ಕಿಟ್ಅಪ್ ಯೂಟ್ಯೂಬ್‌ ಆರಂಭಿಸಿದರು.

22-Year-Old Bengaluru Native Youth Earned 35 Lakhs In A Month

ಸಾಮಾಜಿಕ ಜಾಲತಾಣದಲ್ಲಿ ಸುಮಾರು 2 ಮಿಲಿಯನ್ ಫಾಲೋವರ್ಸ್‌ ಹೊಂದಿರುವ ಇಶಾನ್ ಶರ್ಮಾ, ತಮ್ಮ ವಿಡಿಯೋಗಳಲ್ಲಿ ವೃತ್ತಿ ಮತ್ತು ವ್ಯಾಪಾರದ ಬಗ್ಗೆ ಮಾತನಾಡುತ್ತಾರೆ. ವ್ಯಾಪಾರ, ಉದ್ಯೋಗ ಮತ್ತು ಬ್ಯುಸಿನೆಸ್‌ ಬಗ್ಗೆ ನಿಖರವಾದ ಮಾಹಿತಿ ನೀಡುವ ಇಶಾನ್ ಶರ್ಮಾ ಅವರ ಪಾಡ್‌ಕಾಸ್ಟ್‌ಗಳು ನಿಖಿಲ್ ಕಾಮತ್, ನಿತಿನ್ ಕಾಮತ್‌ ಮತ್ತು ಅಶೀರ್ ಗೋವರ್ ಅವರಂತಹ ಅತಿಥಿಗಳು ಭಾಗವಹಿಸುತ್ತಾರೆ.

ಇತ್ತೀಚಿಗೆ ಅಶ್ನೀರ್ ಗ್ರೋವರ್, ಆಶಿಶ್ ಮೊಹಾಪಾತ್ರ, ಸಾರ್ಥಕ್ ಅಹುಜಾ ಮತ್ತು ಸಂಜೀವ್ ಬಿಖ್‌ಚಂದಾನಿ ಅವರೊಂದಿಗಿನ ಕಾರ್ಯಕ್ರಮದಲ್ಲಿ ಇಶಾನ್ ಶರ್ಮಾ ಕಳೆದ ತಿಂಗಳು 35 ಲಕ್ಷ ರೂಪಾಯಿ ಗಳಿಸಿದ್ದನ್ನು ಬಹಿರಂಗಪಡಿಸಿದ್ದಾರೆ. ಈ ಒಂದು ಕ್ಲಿಪ್ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇಶಾನ್ ಯುಟ್ಯೂಬ್‌ ಹಾಗೂ ಸಾಮಾಜಿಕ ಜಾಲತಾಣದಲ್ಲಿ ತಿಂಗಳಲ್ಲಿ ₹35 ಲಕ್ಷ ಗಳಿಸಿದ್ದಾರೆ ಎಂದು ವರದಿಯಾಗಿದೆ.

ಇಶಾನ್ ಶರ್ಮಾ ಯಾರು..?

ಇಶಾನ್ ಶರ್ಮಾ ಭಾರತದ ಪ್ರಸಿದ್ಧ ಯೂಟ್ಯೂಬರ್ ಮತ್ತು ಉದ್ಯಮಿ. ಚಿಕ್ಕ ವಯಸ್ಸಿನಿಂದಲೂ ತಂತ್ರಜ್ಞಾನದಲ್ಲಿ ಆಸಕ್ತಿ ಹೊಂದಿದ್ದ ಇಶಾನ್ ಎಂಜಿನಿಯರ್ ಆಗಲು ಬಯಸಿದ್ದರು. 12ನೇ ಬೋರ್ಡ್ ಪರೀಕ್ಷೆಗಳನ್ನು ಉತ್ತಮ ಅಂಕಗಳೊಂದಿಗೆ ಪಾಸಾದ ಇಶಾನ್ ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶ ಪರೀಕ್ಷೆಗಳನ್ನು ಕ್ಲಿಯರ್ ಮಾಡುವಲ್ಲಿ ವಿಫಲರಾದರು.

ಬಳಿಕ ಇಶಾನ್‌ ಇಂಜಿನಿಯರಿಂಗ್ ಪದವಿಗಾಗಿ ಬಿಟ್ಸ್ ಪಿಲಾನಿಗೆ ಸೇರಿದರು. ಕಾಲೇಜಿನ ಸಮಯದಲ್ಲಿ, ಇಶಾನ್ ಅವರು ಕೋಡಿಂಗ್, ಡೇಟಾ ಸೈನ್ಸ್ ಮತ್ತು ಸಾಮಾಜಿಕ ಮಾಧ್ಯಮ ಮಾರ್ಕೆಟಿಂಗ್‌ನಂತಹ ವಿವಿಧ ಕ್ಷೇತ್ರಗಳ ಬಗ್ಗೆ ಅಭ್ಯಾಸ ನಡೆಸುತ್ತಿದ್ದರು. ಕಲಿಕೆಯೊಂದಿಗೆ ಗಳಿಕೆ ಮಾಡಲು 2020ರಲ್ಲಿ ತಮ್ಮ ಯುಟ್ಯೂಬ್‌ ಚಾನಲ್ ಅನ್ನು ಪ್ರಾರಂಭಿಸಿದರು. ಒಂದು ವರ್ಷದೊಳಗೆ ಈ ಚಾನಲ್ ಉತ್ತಮ ಆದಾಯ ತಂದುಕೊಡುತ್ತಿದ್ದು, ಇಶಾನ್ BITS ಪಿಲಾನಿಯಿಂದ ಹೊರಬಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+