Dr.Rajkumar: ಅಂದಿನ ಕಾಲದಲ್ಲಿ 75 ಲಕ್ಷ ಕೊಟ್ಟರೂ ತೆಲುಗು ರೀಮೆಕ್ ಮೂವಿ ಮಾಡಿರಲಿಲ್ಲ ಡಾ.ರಾಜ್ ಕುಮಾರ್!
Dr.Rajkumar: ವರನಟ ಹಾಗೂ ನಟ ಸಾರ್ವಭೌಮ.. ಕನ್ನಡಿಗರ ಕಣ್ಮಣಿ ಡಾ. ರಾಜ್ ಕುಮಾರ್ ಅವರು ಅದೊಂದು ಕಾರಣಕ್ಕೆ ಲಕ್ಷ.. ಲಕ್ಷ ರೂಪಾಯಿ ಕೊಡುತ್ತೇವೆ ಎಂದರೂ ಅದೊಂದು ರಿಮೇಕ್ ಸಿನಿಮಾ ಮಾಡಿರಲಿಲ್ಲ. ಹೌದು ನಟ ಡಾ. ರಾಜ್ ಕುಮಾರ್ ಅವರು ಕನ್ನಡದಲ್ಲಿ ಬರೋಬ್ಬರಿ 200ಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡಿದ್ದಾರೆ. ಅವರ ಒಂದೊಂದು ಸಿನಿಮಾವನ್ನು ಕನ್ನಡಿಗರು ಇಂದಿಗೂ ನನೆಪಿಸಿಕೊಳ್ಳುವುದು ಇದೆ. ಕನ್ನಡ ಚಿತ್ರರಂಗದಲ್ಲಿ ಡಾ. ರಾಜ್ ಕುಮಾರ್ ಅವರ ಇತಿಹಾಸವನ್ನು ಮರು ಸೃಷ್ಟಿ ಮಾಡುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಗಾಯಕರಾಗಿ - ನಟರಾಗಿ ಡಾ. ರಾಜ್ ಕುಮಾರ್ ಅವರು ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.
ಅವರು ಅವರ ಸಿನಿಮಾ ವೃತ್ತಿಯಲ್ಲಿ ರಿಮೇಕ್ ಸಿನಿಮಾಗಳನ್ನು ಮಾಡಿದ್ದು ತುಂಬಾನೆ ಕಡಿಮೆ. ಆದರೆ ಯಾವುದೇ ಸಿನಿಮಾಗಳನ್ನು ಮಾಡಿದರೂ ಅದರಲ್ಲೊಂದು ಪರಿಪೂರ್ಣತೆ ಇರುತ್ತಿತ್ತು. ನಟ ಡಾ.ರಾಜ್ ಕುಮಾರ್ ಅವರಂತೆ ಐತಿಹಾಸಿಕ, ಪೌರಾಣಿಕ ಹಾಗೂ ಸಮಕಾಲಿನ ಸಿನಿಮಾವೂ ಸೇರಿದಂತೆ ಎಲ್ಲಾ ಮಾದರಿಯ ಸಿನಿಮಾಗಳನ್ನು ಮಾಡಿರುವ ನಟರು ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ಭಾರತೀಯ ಚಿತ್ರರಂಗದಲ್ಲೂ ತೀರ ವಿರಳ ಅಂತಲೇ ಹೇಳಬಹುದು.

ಯಾಕೆಂದರೆ ಎಲ್ಲಾ ಮಾದರಿಯ ಸಿನಿಮಾಗಳಲ್ಲೂ ಅಣ್ಣಾವ್ರದ್ದು ಎತ್ತಿದ ಕೈ ಅಂತಲೇ ಹೇಳಬಹುದು. ಸಹಜ ಹಾಗೂ ಮನೋಜ್ಞ ಅಭಿನಯ ಡಾ. ರಾಜ್ ಕುಮಾರ್ ಅವರದ್ದು. ಇಷ್ಟೆಲ್ಲ ಖ್ಯಾತಿ ಹಾಗೂ ಮನ್ನಣೆಯನ್ನು ಗಳಿಸಿರುವ ಅಣ್ಣಾವ್ರು ಅದೊಂದು ಸಿನಿಮಾವನ್ನು ನೀವು ಲಕ್ಷ.. ಲಕ್ಷ ರೂಪಾಯಿ ಕೊಟ್ಟರೂ ನಾನು ಮಾಡುವುದಿಲ್ಲ ಎಂದಿದ್ದರು.
ನಟ ರಾಜ್ ಕುಮಾರ್ ಅವರು ಪರಭಾಷಾ ಸಿನಿಮಾಗಳಲ್ಲಿ ನಟಿಸಿರಲಿಲ್ಲ. ಅಲ್ಲದೇ ಅವರು ರಿಮೇಕ್ ಸಿನಿಮಾಗಳನ್ನು ಒಪ್ಪಿಕೊಂಡಿದ್ದು ಸಹ ತುಂಬಾನೇ ಕಡಿಮೆ. 200ಕ್ಕೂ ಹೆಚ್ಚು ಮೂವಿಗಳಲ್ಲಿ ನಟಿಸಿದ್ದ ಅವರು ಕೆಲವೇ ಕೆಲವು ರಿಮೇಕ್ ಮೂವಿಗಳನ್ನಷ್ಟೇ ಮಾಡಿದ್ದರು. ಇದರ ನಡುವೆ 1993ರಲ್ಲಿ ಅದೊಂದು ತೆಲುಗು ಸಿನಿಮಾದ ರಿಮೇಕ್ ಆಫರ್ ಅಣ್ಣಾವ್ರಿಗೆ ಬಂದಿತ್ತು. ಆ ದಿನಗಳಲ್ಲೇ ಬರೋಬ್ಬರಿ 75 ಲಕ್ಷ ರೂಪಾಯಿ ಸಂಭಾವನೆ ಕೊಡುವುದಾಗಿಯೂ ಬಿಗ್ ಆಫರ್ ಕೂಡಲಾಗಿತ್ತು. ಆದರೆ ನಟ ಡಾ. ರಾಜ್‌ಕುಮಾರ್ ಅವರು ಈ ಸಿನಿಮಾ ಮಾಡುವುದಿಲ್ಲ ಅಂತಾ ಅತ್ಯಂತ ವಿನಯವಾಗಿ ಆ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದರು.
ತೆಲುಗಿನ ನಟ ಅಕ್ಕಿನೇನಿ ನಾಗೇಶ್ವರ ರಾವ್ ನಟಿಸಿದ್ದ ಕಾಲೇಜ್ ಬುಲ್ಲೋಡು ಸಿನಿಮಾವು 1992ರಲ್ಲಿ ಬಿಡುಗಡೆಯಾಗಿ ಭಾರೀ ಹಿಟ್ ಕಂಡಿತ್ತು. ಆ ಸಿನಿಮಾವನ್ನು ಡಾ. ರಾಜ್‌ಕುಮಾರ್ ಅವರು ರಿಮೇಕ್ ಮಾಡಬೇಕಿತ್ತು. ಇದಕ್ಕಾಗಿ 75 ಲಕ್ಷ ರೂಪಾಯಿಯ ಒಪ್ಪಂದವೂ ಆಗಿತ್ತು. ಕಾರಣಾಂತರಗಳಿಂದ ಈ ಸನಿಮಾದಲ್ಲಿ ನಟ ಡಾ. ರಾಜ್ ಕುಮಾರ್ ಅವರು ಈ ಸಿನಿಮಾದಲ್ಲಿ ನಟಿಸಿರಲಿಲ್ಲ. 1975ರಲ್ಲಿ ಪಾರ್ವತಮ್ಮ ಅವರು ಸ್ವಂತ ಬ್ಯಾನರ್ ಆರಂಭಿಸಿದ್ದರು. ನಿರ್ಮಾಣಕ್ಕೂ ಇಳಿದ ಮೇಲೆ ಡಾ. ರಾಜ್‌ಕುಮಾರ್ ಅವರು ಬೇರೆ ನಿರ್ಮಾಪಕರ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು ವಿರಳವಾಗಿತ್ತು.












Click it and Unblock the Notifications